• Home
  • »
  • News
  • »
  • mangaluru
  • »
  • Mangaluru News: ಕೋವಿಡ್ ಸೇವೆ ಸಲ್ಲಿಸಿದವರಿಗೆ ಕೆಲಸಕ್ಕೆ ಮೊದಲ ಆದ್ಯತೆ; ಎಲ್ಲಿ ಅಂತೀರಾ?

Mangaluru News: ಕೋವಿಡ್ ಸೇವೆ ಸಲ್ಲಿಸಿದವರಿಗೆ ಕೆಲಸಕ್ಕೆ ಮೊದಲ ಆದ್ಯತೆ; ಎಲ್ಲಿ ಅಂತೀರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಹಲವು ಸರಕಾರಿ ಆಸ್ಪತ್ರೆಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೋವಿಡ್ ಸಮಯದಲ್ಲಿಸೇವೆ ಸಲ್ಲಿಸಿದವರಿಗೆ ಆರೋಗ್ಯ ಇಲಾಖೆಯು ಮೊದಲ ಆದ್ಯತೆ ನೀಡಲಿದೆ. 

  • Share this:

    ಮಂಗಳೂರು: ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಅದೆಷ್ಟೋ ದಾದಿಯರು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿದ್ದಾರೆ. ಆದರೆ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಗಳು ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದು, ಕೋವಿಡ್ ಕ್ಷೀಣಿಸುತ್ತಿದ್ದಂತೆ ಮನೆ ಕಡೆ ಮುಖ ಮಾಡುವಂತೆ ಆಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಈ ಬಾರಿಯೂ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಿದೆ. ಆದರೆ, ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಹೆಚ್ಚಿನ  ಆದ್ಯತೆ ನೀಡುವುದಾಗಿ ಇಲಾಖೆಯು ತಿಳಿಸಿದೆ. 


    ಇಲ್ಲೆಲ್ಲ ಹುದ್ದೆಗಳ ಭರ್ತಿ

    ಸಂಸ್ಥೆಹುದ್ದೆಯ ಹೆಸರು
    ಜೆಪ್ಪು ಫಾರ್ಮಸಿಸ್ಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕಿರಿಯ ಮಹಿಳಾ ಆರೋಗ್ಯ ಸಹಾಯಕಿ
    ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕಿರಿಯ ಪುರುಷ ಆರೋಗ್ಯ ಸಹಾಯಕ
    ಕಸಬಾ ಬೇಂಗ್ರೆ ನಗರ ಪ್ರಾಥಮಿಕ ಆರೋಗ್ಯಕಿರಿಯ ಪುರುಷ ಆರೋಗ್ಯ ಸಹಾಯಕ
    ಆರ್.ಬಿ.ಎಸ್.ಕೆನೇತ್ರ ಸಹಾಯಕ
    ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರಶುಶ್ರೂಷಕಿ
    ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಎನ್.ಸಿ.ಡಿ ಘಟಕಶುಶ್ರೂಷಕಿ
    ಬೆಳ್ತಂಗಡಿ ತಾಲೂಕು ಆಸ್ಪತ್ರೆ - ಐ.ಸಿ.ಯು, ಎಚ್.ಡಿ.ಯು ಘಟಕಶುಶ್ರೂಷಕಿ
    ದಂತ ತಂತ್ರಜ್ಞಸರ್ಕಾರಿ ಲೇಡಿಗೋಶನ್ ಆಸ್ಪತ್ರೆಶುಶ್ರೂಷಕಿ
    ಎನ್.ಪಿ.ಪಿ.ಸಿ.ಡಿ ಘಟಕಮಕ್ಕಳಿಗೆ ಬೋಧಕ

    ಅರ್ಜಿ ಸಲ್ಲಿಕೆ ಹೇಗೆ?
    ಆಸಕ್ತರು ಇಲಾಖೆಯ ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಪಡೆದು, ಆ ನಂತರ ಅರ್ಜಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಸಲ್ಲಿಸಬೇಕು. ಅರ್ಜಿ ಪಡೆಯುವ ವೆಬ್ ಸೈಟ್ ಲಿಂಕ್​ಗೆ ಇಲ್ಲಿ ಕ್ಲಿಕ್ ಮಾಡಿ


    ಇದನ್ನೂ ಓದಿ:  Vijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ


    ಅರ್ಜಿ ಸಲ್ಲಿಸಬೇಕಿರುವ ವಿಳಾಸ ಹೀಗಿದೆ:
    ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಎರಡನೇ ಮಹಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ನೆಹರೂ ಮೈದಾನ ರಸ್ತೆ, ಮಂಗಳೂರು – 575001


    ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2424501 ಅನ್ನು ಸಂಪರ್ಕಿಸಬಹುದಾಗಿದೆ.


    ಇದನ್ನೂ ಓದಿ: Belagavi: ಈ ಸರ್ಕಾರಿ ಶಾಲೇಲಿ ಕಲಿಯಲು ಪುಣ್ಯ ಮಾಡಿರಬೇಕು! ಬೆಳಗಾವಿ ಶಾಲೆಯ ವಿಡಿಯೋ ನೋಡಿ


    ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ
    ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಹಲವು ಸರಕಾರಿ ಆಸ್ಪತ್ರೆಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೋವಿಡ್ ಸಮಯದಲ್ಲಿಸೇವೆ ಸಲ್ಲಿಸಿದವರಿಗೆ ಆರೋಗ್ಯ ಇಲಾಖೆಯು ಮೊದಲ ಆದ್ಯತೆ ನೀಡಲಿದೆ. ಆಸಕ್ತರು ಪಡೆದ ಅರ್ಜಿಯನ್ನು ದಾಖಲೆ ಸಮೇತ ಜುಲೈ 7ರ ಮಧ್ಯಾಹ್ನ 3 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ.

    Published by:guruganesh bhat
    First published: