Dakshina Kannada News: ಡಿಸಿ ‘ಗ್ರಾಮ ವಾಸ್ತವ್ಯ‘ ಪಂಜ ಗ್ರಾಮದಲ್ಲಿ; ನೀವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ಪ್ರತೀ ತಿಂಗಳ ಮೂರನೇ ಶನಿವಾರ ನಡೆಯುವ ಡಿಸಿ ‘ಗ್ರಾಮ ವಾಸ್ತವ್ಯ‘ ಈ ಬಾರಿ ಮುಲ್ಕಿ ತಾಲೂಕಿನ ಪಂಜ ಗ್ರಾಮದಲ್ಲಿ ನಡೆಯಲಿದೆ. ಸಾರ್ವಜನಿಕರು ಖುದ್ದು ಡಿಸಿ ಅವರ ಮೂಲಕ ತಮ್ಮ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿಕೊಳ್ಳಲು ಒಂದು ಅವಕಾಶ ದೊರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ

  • Share this:
    ಮಂಗಳೂರು: ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ದಕ್ಷಿಣ ಕನ್ನಡ (Dakshina Kannada News) ಜಿಲ್ಲಾಧಿಕಾರಿ ಅವರ ಈ ತಿಂಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮುಲ್ಕಿ ತಾಲೂಕಿನಲ್ಲಿ ನಡೆಯಲಿದೆ. ತಿಂಗಳ ಮೂರನೇ ಶನಿವಾರವಾದ ಜುಲೈ 16 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಮುಲ್ಕಿಯ (Dakshina Kannada DC Dr. Rajendra KV) ಪಂಜ ಗ್ರಾಮದ ವಿಠೋಭ ಭಜನಾ ಮಂದಿರದಲ್ಲಿ ಗ್ರಾಮ ವಾಸ್ತವ್ಯ (Grama Vastavya) ಹೂಡಲಿದ್ದಾರೆ. ಅಂದು ದಿನವಿಡೀ ಗ್ರಾಮಸ್ಥರ ಜೊತೆಗಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಹಲವಾರು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಿದ್ದಾರೆ. ಸಾರ್ವಜನಿಕರು ಮುಂಗಡವಾಗಿ ಅಹವಾಲು ಸಲ್ಲಿಸಬಹುದು. ಹೇಗೆ ಎಂಬ ವಿವರ ಇಲ್ಲಿದೆ. 

    ನೆರೆ ಎದುರಿಸಿದ್ದ ಪಂಜ ಗ್ರಾಮ
    ಜುಲೈ ತಿಂಗಳಲ್ಲಿ ಬಿರುಸು ಪಡೆದುಕೊಂಡಿದ್ದ ಮಳೆಯಿಂದಾಗಿ ನೆರೆ ಹಾನಿ ಎದುರಿಸಿದ ಗ್ರಾಮಗಳಲ್ಲಿ ಪಂಜವೂ ಒಂದು. ಹೀಗಾಗಿ ಡಿಸಿ ಅವರು ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಮುಂದಾಗಿರುವುದು ಗ್ರಾಮಸ್ಥರಲ್ಲೂ ಹೆಚ್ಚಿನ ಭರವಸೆ ತುಂಬಿದೆ.

    ಮುಂಗಡವಾಗಿ ಅಹವಾಲು ಸಲ್ಲಿಸಿ
    ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರತಿಯೊಂದು ಸರ್ವೇ ಮಾಡಿಸಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ. ಅದಾಗ್ಯೂ ಸಾರ್ವಜನಿಕರು ನೇರವಾಗಿ ತಮ್ಮ ಅಹವಾಲುಗಳನ್ನು ನೀಡಲು ಬಯಸಿದ್ದಲ್ಲೀ, ಪಂಜ ಗ್ರಾಮ ಪಂಚಾಯತ್ಗೆ ನೀಡಬಹುದಾಗಿದೆ.

    ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
    ಕಂದಾಯ ಇಲಾಖೆಯಡಿ ಅಂದರೆ ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್ ಕಚೇರಿಗಳಲ್ಲಿ ಆಗಬೇಕಿದ್ದ ಕೆಲಸ ಕಾರ್ಯಗಳು ಒಂದು ವೇಳೆ ಯಾವುದೋ ತೊಡಕಿನಿಂದ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಸುಲಭವಾಗಿ ಈ ಸಂದರ್ಭದಲ್ಲಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ಸ್ಥಳದಲ್ಲಿಯೇ ಪರಿಹಾರ ಸಿಗದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ದಿನಾಂಕ ನಿಗದಿಪಡಿಸಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ಡಿಸಿ ಅವರು ನೀಡಲಿದ್ದಾರೆ.

    ಇವರೆಲ್ಲ ಉಪಸ್ಥಿತಿ
    ಮುಲ್ಕಿ ತಾಲೂಕಿನ ತಹಶೀಲ್ದಾರ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆಯಲ್ಲಿದ್ದು, ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆ ಸ್ಥಳದಲ್ಲಿ ಬಗೆಹರಿಯದಿದ್ದಲ್ಲಿ ಮುಂದಿನ ಸೂಕ್ತವಾದ ದಿನವನ್ನು ನಿರ್ಧರಿಸಿ ಅದೇ ಗ್ರಾಮದಲ್ಲಿಯೇ ಮತ್ತೊಮ್ಮೆ ಗ್ರಾಮ ವಾಸ್ತವ್ಯ ನಡೆಸಲು ನಿರ್ಧರಿಸಲಿದ್ದಾರೆ.

    ಇದನ್ನೂ ಓದಿ: Kittur Rani Chennamma: ಕಿತ್ತೂರು ರಾಣಿ ಚೆನ್ನಮ್ಮ ಜನ್ಮಸ್ಥಳ ಪಾಳುಬಿದ್ದಿದೆ! ಇಲ್ಲಿದೆ ನೋಡಿ ವಿಡಿಯೋ

    ಡಿಸಿ ಜೊತೆ ಮುಖಾಮುಖಿಗೂ ಅವಕಾಶ
    ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಭೇಟಿ ಸುಲಭವಾಗಿ ಸಿಗುವುದಿಲ್ಲ. ಒಂದೊಮ್ಮೆ ರಜೆ, ಕಾರ್ಯಕ್ರಮದ ಒತ್ತಡಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರೂ ಅದೆಷ್ಟೋ ಜನರಿಗೆ ಡಿಸಿ ಭೇಟಿ ಸಾಧ್ಯವಾಗುವುದಿಲ್ಲ. ಆದರೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಹಳ್ಳಿಯ ನಾಗರಿಕನ ಅಹವಾಲಿಗೂ ಜಿಲ್ಲಾಧಿಕಾರಿಯವರು ಸ್ಪಂದಿಸಲಿದ್ದಾರೆ.

    ಇದನ್ನೂ ಓದಿ: Krishna River Origin Video: ಕೃಷ್ಣಾ ನದಿ ಉಗಮದ ಅಪರೂಪದ ವಿಡಿಯೋ ಇಲ್ಲಿದೆ, ಕಣ್ತುಂಬಿಸಿಕೊಳ್ಳಿ!

    ಪ್ರತೀ ತಿಂಗಳ ಮೂರನೇ ಶನಿವಾರ ನಡೆಯುವ ಡಿಸಿ ‘ಗ್ರಾಮ ವಾಸ್ತವ್ಯ‘ ಈ ಬಾರಿ ಮುಲ್ಕಿ ತಾಲೂಕಿನ ಪಂಜ ಗ್ರಾಮದಲ್ಲಿ ನಡೆಯಲಿದೆ. ಸಾರ್ವಜನಿಕರು ಖುದ್ದು ಡಿಸಿ ಅವರ ಮೂಲಕ ತಮ್ಮ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿಕೊಳ್ಳಲು ಒಂದು ಅವಕಾಶ ದೊರೆಯಲಿದೆ.
    Published by:guruganesh bhat
    First published: