• Home
 • »
 • News
 • »
 • mangaluru
 • »
 • Auto Fare Hike: ನವೆಂಬರ್ 15ರಿಂದ ಆಟೋ ಪ್ರಯಾಣಕ್ಕೆ ಇಷ್ಟು ಹಣ ಕೊಡ್ಲೇಬೇಕು! ಹೊಸ ಪ್ರಯಾಣ ದರ ಜಾರಿ!

Auto Fare Hike: ನವೆಂಬರ್ 15ರಿಂದ ಆಟೋ ಪ್ರಯಾಣಕ್ಕೆ ಇಷ್ಟು ಹಣ ಕೊಡ್ಲೇಬೇಕು! ಹೊಸ ಪ್ರಯಾಣ ದರ ಜಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊದಲ 1. 5 ಕಿಲೋಮೀಟರ್ ಗೆ ಅದು ಗರಿಷ್ಠ ಮೂವರು ಪ್ರಯಾಣಿಕರಿಗೆ 35 ರೂ., ಅನಂತರ ಪ್ರತೀ ಕಿ.ಮೀ.ಗೆ 17 ರೂ. ನಿಗದಿಪಡಿಸಲಾಗಿದೆ.

 • News18 Kannada
 • Last Updated :
 • Mangalore, India
 • Share this:

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರೇ, ನವೆಂಬರ್ 15 ರ ನಂತರ ಆಟೋ‌ರಿಕ್ಷಾದಲ್ಲಿ ಓಡಾಡೋದಿದ್ರೆ ತುಸು ಜಾಸ್ತಿನೇ ಹಣ ಹೊಂದಿಸ್ಬೇಕು. ಲಗೇಜ್ ಹಿಡ್ಕೊಂಡ್ ಹೋಗ್ತೀರಿ ಅಂದ್ರೆ ಅದಕ್ಕೂ ಹೆಚ್ಚುವರಿ ಹಣ (Auto Fare Hike) ಕೊಡಬೇಕು. ಹೀಗಂತ ದಕ್ಷಿಣ ಕನ್ನಡ ಜಿಲ್ಲಾ (Dakshina Kannada News) ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ದರಗಳನ್ನು ಪರಿಷ್ಕರಿಸಿದೆ. ಹಾಗಿದ್ರೆ ಹೇಗಿರಲಿದೆ ಆಟೋ ಬಾಡಿಗೆ, ಕಾಯುವಿಕೆ (Waiting), ಲಗೇಜ್ ದರಗಳು ಅನ್ನೋ ಕುರಿತ ಡಿಟೇಲ್ ಇಲ್ಲಿದೆ.


  ಬಾಡಿಗೆ ದರ ಹೀಗಿರುತ್ತೆ ನೋಡಿ
  ನವೆಂಬರ್ 15 ರ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೇ ಓಡಾಡಿ ನಿರ್ದಿಷ್ಟ ದರಗಳಲ್ಲಿ ಏರಿಕೆಯಾಗಿರುವುದನ್ನು ಬಾಡಿಗೆ ರೂಪದಲ್ಲಿ ನೀಡಬೇಕಾಗುತ್ತದೆ. ಮೊದಲ 1. 5 ಕಿಲೋಮೀಟರ್ ಗೆ ಅದು ಗರಿಷ್ಠ ಮೂವರು ಪ್ರಯಾಣಿಕರಿಗೆ 35 ರೂ., ಅನಂತರ ಪ್ರತೀ ಕಿ.ಮೀ.ಗೆ 17 ರೂ. ನಿಗದಿಪಡಿಸಲಾಗಿದೆ.


  ಕಾಯುವಿಕೆ ದರ ಹೀಗಿರುತ್ತೆ
  ಆಟೋ ಬಾಡಿಗೆ ಕರೆದೊಯ್ದು ಎಲ್ಲಾದ್ರೂ ನಿಲ್ಸಿ ನೀವೇನಾದ್ರೂ ಪರ್ಚೇಸ್ ಗೆ ಅಂತಾ ಹೋದ್ರೆ ಮೊದಲ 15 ನಿಮಿಷಗಳ ಕಾಯುವಿಕೆ ಉಚಿತವಾಗಿರುತ್ತೆ. ನಂತರದ 15 ನಿಮಿಷಗಳಿಗೆ ತಲಾ 5 ರೂ. ನಂತೆ ಹೆಚ್ಚುವರಿ ಬಾಡಿಗೆ ತೆರಬೇಕಾಗುತ್ತದೆ.


  ಇದನ್ನೂ ಓದಿ: Gandhadagudi: ಮೈಮೇಲೆ ಮೂಡಿದ ಗಂಧದಗುಡಿ! ಇದು ಅಪ್ಪು ಅಭಿಮಾನ


  ಲಗೇಜ್ ಗೂ ಮಾಡ್ತಾರೆ ಚಾರ್ಜ್!
  ಸರಕು ಕೊಂಡೊಯ್ಯುವುದಿದ್ದಲ್ಲಿ ಕಡ್ಡಾಯವಾಗಿ ಸರಕಿನ ಜೊತೆ ಕನಿಷ್ಟ ಒಬ್ಬ ಪ್ರಯಾಣಿಕನಿರಬೇಕು‌. 20 ಕಿಲೋ ಗ್ರಾಂ ತೂಕದ ಲಗೇಜ್ ಗಳಿಗೆ ಉಚಿತವಾಗಿರುತ್ತೆ‌. ಅನಂತರದ 20 ಕಿಲೋ ಲಗೇಜ್ ಗೆ 5ರೂ‌. ನಂತೆ ಹೆಚ್ಚುವರಿ ನೀಡಬೇಕಾಗುತ್ತದೆ.


  ಇದನ್ನೂ ಓದಿ: Dharmasthala: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ 55 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಹೀಗಿತ್ತು


  'ಒನ್ ಟು ಡಬಲ್' ಯಾವಾಗ ಅನ್ವಯ?
  ಸಾಮಾನ್ಯವಾಗಿ ರಾತ್ರಿ ಓಡಾಟಕ್ಕೆ ಒನ್‌ ಟು ಡಬಲ್ ಬಾಡಿಗೆ ತಗೋತಾರೆ ಅನ್ನೋ ಮಾತಿದೆ. ದ.ಕ. ಜಿಲ್ಲಾಡಳಿತವು ಇದಕ್ಕೆ ಅವಕಾಶ ಕಲ್ಪಿಸಿದ್ದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಸಾಮಾನ್ಯ ಬಾಡಿಗೆ ದರದ ಒಂದೂವರೆ ಪಟ್ಟು ಬಾಡಿಗೆ ಪಡೆಯಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: