Coconut Pickle: ತೆಂಗಿನಕಾಯಿ ಉಪ್ಪಿನಕಾಯಿ ತಯಾರಿ! ರುಚಿ ಹೇಗಿರುತ್ತೆ? ತಯಾರಿಸೋದು ಹೇಗೆ? ಎಲ್ಲಿ ಸಿಗುತ್ತೆ?

ತೆಂಗಿನಕಾಯಿಯಿಂದ ಉಪ್ಪಿನಕಾಯನ್ನೂ ತಯಾರಿಸಬಹುದಾ? ಹೌದು ಅನ್ನುತ್ತೆ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ. ಹಾಗಾದಾರೆ ಈ ಉಪ್ಪಿನಕಾಯಿ ಎಲ್ಲಿ ಸಿಗುತ್ತೆ? ಎಲ್ಲ ವಿವರ ಇಲ್ಲಿದೆ ನೋಡಿ.

ಹೇಗಿರುತ್ತೆ ಈ ಉಪ್ಪಿನಕಾಯಿ ರುಚಿ?

"ಹೇಗಿರುತ್ತೆ ಈ ಉಪ್ಪಿನಕಾಯಿ ರುಚಿ?"

 • Share this:
  ಉಪ್ಪಿನಕಾಯಿ ಎಂದಾಗ ಸಾಮಾನ್ಯವಾಗಿ ನೆನಪಾಗೋದು ಮಾವು, ಲಿಂಬೆ, ಕ್ಯಾರೆಟ್ ಹಾಗೂ ಮಿಶ್ರ ತರಕಾರಿ. ಇನ್ಮುಂದೆ ಉಪ್ಪಿನಕಾಯಿ ಎಂದ್ರೆ ತೆಂಗಿನಕಾಯಿಯೂ (Coconut) ನೆನಪಾಗಲಿದೆ. ಹೌದು, ತೆಂಗಿನಕಾಯಿಯ ಉಪ್ಪಿನ ಕಾಯಿ ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ (South Canara Coconut Farmers Producers Company Limited) ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಈ ಮೂಲಕ ಉಪ್ಪಿನಕಾಯಿ (Coconut Pickle Recipe) ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಲು ಕೊಕೊನಟ್ ಪಿಕಲ್ ಸಜ್ಜಾಗಿದೆ..ಹಾಗಾದರೆ ತೆಂಗಿನಕಾಯಿ ಉಪ್ಪಿನಕಾಯಿ ಉಪ್ಪಿನಕಾಯಿ ಹೇಗೆ ತಯಾರಾಗುತ್ತೆ? ಎಲ್ಲಿ ಸಿಗುತ್ತೆ ಎಲ್ಲ ಮಾಹಿತಿ ಇಲ್ಲಿದೆ ನೋಡಿ. 

  ಸಾಮಾನ್ಯವಾಗಿ ತೆಂಗಿನಕಾಯಿ ಅನ್ನೋದು ಅತಿ ಬೇಗನೆ ಹಾಳಾಗುವ ಸರಕಾಗಿದೆ. ಹಾಗಾಗಿ ತೆಂಗು ರೈತ ಉತ್ಪಾದಕರ ಕಂಪೆನಿಯು ಬಲಿತ ತೆಂಗಿನಕಾಯಿಯನ್ನಷ್ಟೇ ಉಪ್ಪಿನಕಾಯಿಗೆ ಬಳಸುತ್ತಿದೆ. ಜೊತೆಗೆ ಅದಕ್ಕೆ ಬೇಕಾದ ಪರಿಕರಗಳು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅನ್ನೋದರ ಬಗ್ಗೆ ಪ್ರಯೋಗ ಕೂಡಾ ನಡೆಸಲಾಗಿದೆ.  ಬನ್ನಂಗಾಯಿ ಉಪ್ಪಿನಕಾಯಿ
  ಹೀಗೆ ಹಾಕಲಾದ ಬನ್ನಂಗಾಯಿ (ಬಲಿತ ತೆಂಗಿನಕಾಯಿ) ಉಪ್ಪಿನಕಾಯಿಯು ಆರು ತಿಂಗಳ ಕಾಲ ಕೆಡದೇ ಉಳಿಸಬಹುದು ಅನ್ನೋದನ್ನ ಕಂಡುಕೊಳ್ಳಲಾಗಿದೆ. ಸದ್ಯ 250 ಗ್ರಾಂ ಪೊಟ್ಟಣದ ಮೂಲಕ ಮಾರುಕಟ್ಟೆಗೆ ಕೊಕನೆಟ್ ಉಪ್ಪಿನಕಾಯಿ ಎಂಟ್ರಿ ಪಡೆದಿದೆ.

  ಬೆಲೆ ಎಷ್ಟು?
  250 ಗ್ರಾಂ ಉಪ್ಪಿನಕಾಯಿಗೆ ₹ 299

  ತೆಂಗಿನಕಾಯಿ ಉಪ್ಪಿನಕಾಯಿ ಖರೀದಿ ಮಾಡಲು ಇಲ್ಲಿದೆ ಸಂಪರ್ಕ ಸಂಖ್ಯೆ: +91 95917 02541

  ಬೆಳ್ಳುಳ್ಳಿ ಸಹಿತ ಹಾಗೂ ಬೆಳ್ಳುಳ್ಳಿ ರಹಿತ ಎರಡೂ ವಿಧ
  ಸದ್ಯ ಮಾರುಕಟ್ಟೆಗೆ ಬೆಳ್ಳುಳ್ಳಿ ಸಹಿತ ಹಾಗೂ ಬೆಳ್ಳುಳ್ಳಿ ರಹಿತ ಈ ರೀತಿ ಎರಡು ವಿಧಗಳಲ್ಲಿ ಉಪ್ಪಿನಕಾಯಿಗಳನ್ನು ಬಿಡಲಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆಯೂ ಸಿಕ್ಕಿದ್ದು, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಆಯ್ದ ರೈತರಿಂದ ತೆಂಗಿನಕಾಯಿಗಳನ್ನು ಖರೀದಿಸಿ ಸದ್ಯ ಬೆಂಗಳೂರಿನ ಸಂಶೋಧನಾ ಸಂಸ್ಥೆಯಲ್ಲಿ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತಿದೆ.

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ವಿದೇಶದಲ್ಲೂ ಮಾರುಕಟ್ಟೆ
  ಮುಂದೆ ದೇಶ ಮಾತ್ರವಲ್ಲದೇ, ವಿದೇಶದಲ್ಲೂ ಮಾರುಕಟ್ಟೆ ಮಾಡೋ ಯೋಜನೆಯೂ ಇದೆ. ಜೊತೆಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲೇ ಕೊಕನೆಟ್ ಪಿಕಲ್ ತಯಾರಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆದಿದೆ.

  South Canara Coconut Farmers Producers Company Limited ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ ಇಲ್ಲಿದೆ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]

  ಇದನ್ನೂ ಓದಿ: Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ

  ಕಲ್ಪವೃಕ್ಷದ ಕಾಯಿಯಿಂದ ಈ ಹಿಂದೆ ಎಣ್ಣೆ, ಹಾಲಿನಂತಹ ಪದಾರ್ಥಗಳನ್ನು ಪಡೆಯಲು ಬಳಸಲಾಗುತ್ತಿತ್ತು. ಇದೀಗ ಉಪ್ಪಿನಕಾಯಿಗೂ ಬಲಿತ ತೆಂಗಿನಕಾಯಿಗಳನ್ನು ಬಳಸುವ ಮೂಲಕ ತೆಂಗು ರೈತ ಉತ್ಪಾದಕರ ಕಂಪೆನಿಯು ತೆಂಗು ಬೆಳೆಗಾರರಲ್ಲೂ ಹೊಸ ಉತ್ಸಾಹ ಮೂಡಿಸಿದೆ.

  ವರದಿ: ಇರ್ಷಾದ್, ಕಿನ್ನಿಗೋಳಿ
  Published by:guruganesh bhat
  First published: