• Home
  • »
  • News
  • »
  • mangaluru
  • »
  • Dakshina Kannada: ಕರಾವಳಿಯಲ್ಲಿ ಮಣ್ಣಿನ ಉತ್ಪನ್ನಗಳಿಗೆ ಬಹು ಬೇಡಿಕೆ

Dakshina Kannada: ಕರಾವಳಿಯಲ್ಲಿ ಮಣ್ಣಿನ ಉತ್ಪನ್ನಗಳಿಗೆ ಬಹು ಬೇಡಿಕೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಣ್ಣಿನಿಂದ ತಯಾರಾದ ಉತ್ಪನ್ನಗಳ ಈ ರಾಶಿ ಕಾಣಸಿಗುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೌಡಿಚ್ಚಾರಿನಲ್ಲಿ.

  • News18 Kannada
  • 4-MIN READ
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಮಣ್ಣಿನ ಟೀ ಕಪ್, ಫ್ಲವರ್ ವೇಸ್, ವಿಧವಿಧಧ ಪಾತ್ರೆ ಪಗಡೆಗಳು ಹೀಗೆ ಮಣ್ಣಿನ ತರಹೇವಾರಿ ಐಟಂಗಳು. ಇನ್ನೊಂದೆಡೆ ಕೈಯ್ಯಲ್ಲಿ ತಯಾರಿಸಿ ಚೆಂದದ ರೂಪ ನೀಡುತ್ತಿರುವ ಕುಂಬಾರರು. ಏಕಕಾಲಕ್ಕೆ ನಿಮ್ಮ ಆಯ್ಕೆಯ ಹತ್ತಾರು ಮಣ್ಣಿನ ಉತ್ಪನ್ನಗಳು ಸಿಗೋದು ಒಂದೇ ಪ್ಲೇಸ್​ನಲ್ಲಿ. ಹಾಗಿದ್ರೆ ಇದ್ಯಾವುದು ಈ ಶಾಪ್? ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಹೇಳ್ತೀವಿ ನೋಡಿ.


    ಮಣ್ಣಿನಿಂದ ತಯಾರಾದ ಉತ್ಪನ್ನಗಳ ಈ ರಾಶಿ ಕಾಣಸಿಗುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೌಡಿಚ್ಚಾರಿನಲ್ಲಿ. ಇಲ್ಲಿನ ಕುಂಬಾರರ ಸಹಕಾರಿ ಸಂಘದಲ್ಲಿ ನಾವು ದಿನನಿತ್ಯ ಬಳಸಬಹುದಾದ ಹತ್ತಾರು ಸ್ಟೀಲ್, ಅಲ್ಯುಮಿನಿಯಂನಂತಹ ಪಾತ್ರೆ ಪಗಡೆಗಳು ಇಲ್ಲಿ ಮಣ್ಣಿನ ರೂಪದಲ್ಲಿ ಸಿಗುತ್ತವೆ.


    ಮಣ್ಣಿ ಉತ್ಪನ್ನಗಳಿಗಿದೆ ಬಹು ಬೇಡಿಕೆ
    ಅದೂ ಬೇರೆ ಹೆಚ್ಚು ಗುಣಮಟ್ಟ ಹಾಗೂ ನೈಸರ್ಗಿಕವಾದುದು. ಹೀಗಾಗಿ ಅದೆಷ್ಟೇ ಸ್ಟೀಲ್, ಅಲ್ಯುಮಿನಿಯಂ ಐಟಂಗಳಿದ್ರೂ ಮಣ್ಣಿನ ಉತ್ಪನ್ನಗಳಿಗೆ ಇನ್ನೂ ಬೇಡಿಕೆ ಕುಂದಿಲ್ಲ. ಜೊತೆಗೆ ಕುಂಬಾರರು ತಾವೇ ಕೈಯ್ಯಲ್ಲಿ ತಯಾರಿಸಿದ ವಿವಿಧ ಮಣ್ಣಿನ ಪರಿಕರಗಳನ್ನು ಇಲ್ಲಿ ಕಾಣಬಹುದಾಗಿದೆ.


    ಕುಂಬಾರರ ನೆರವಿಗೆ ಸಂಘ
    ಮಣ್ಣಿನಿಂದ ತಯಾರಾದ ವಸ್ತುಗಳಿಗೆ ಬೇಡಿಕೆ ಕುಂದದೇ ಇರಬಹುದು. ಆದರೆ, ಅದರಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನ ಮನಗಂಡು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನೆರವಿಗೆ ನಿಂತಿದೆ. ಈ ಸಂಸ್ಥೆಯು ಮೂಲತಃ ಪುತ್ತೂರು ಮೂಲದ ಸಂಸ್ಥೆಯಾಗಿದ್ದು 1958 ರಲ್ಲಿ ಕುಂಬಾರರ ನೆರವಿಗಾಗಿ ಸ್ಥಾಪಿಸಲಾಗಿದೆ. ಈಗಲೂ ಈ ಸಂಸ್ಥೆ ಕುಂಬಾರರಿಗೆ ಬೇಕಾದ ಅಗತ್ಯ ಸಹಕಾರ, ಸಹಾಯ ನೀಡುತ್ತಾ ಬಂದಿದೆ. ಕುಂಬಾರಿಕೆ ಉಳಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸುತ್ತಿವೆ.




    ಇದನ್ನೂ ಓದಿ: Dakshina Kannada: ಗೋಪಾಲಕೃಷ್ಣ ದೇಗುಲದ ಪ್ರದಕ್ಷಿಣೆ ಹಾಕಿದ ಗರುಡ! ಇದು ದೇಗುಲ-ದೈವಸ್ಥಾನ ಎರಡೂ ಇರುವ ಕ್ಷೇತ್ರ


    ಸಾವಿರಾರು ರೂಪಾಯಿಗಳಿಗೆ ಸೇಲ್ ಆಗುತ್ತೆ
    ಇನ್ನು ಕೌಡಿಚ್ಚಾರಿನಲ್ಲಿರುವ ಗುಡಿ ಕೈಗಾರಿಕಾ ಉತ್ಪಾದನಾ ಕೇಂದ್ರದಲ್ಲಿ ತರಹೇವಾರಿ ಮಣ್ಣಿನ ಮೂರ್ತಿಗಳನ್ನ, ಮಡಿಕೆ, ಫ್ಲವರ್ ವಾಸ್ಗಳನ್ನ ತಯಾರಿಸಲಾಗುತ್ತೆ. ಮುನ್ನೂರು ರೂಪಾಯಿಯಿಂದ ಹಿಡಿದು ಹನ್ನೆರಡು ಸಾವಿರದವರೆಗೂ ಬೆಲೆ ಬಾಳುವ ಈ ಮಣ್ಣಿನ ಐಟಂಗಳಿಗೆ ಡಿಮ್ಯಾಂಡ್ ಸಖತ್ತಾಗೆ ಇದೆ. ರೆಸಾರ್ಟ್​ಗಳಲ್ಲಿ ಇಲ್ಲಿನ ಅಲಂಕಾರಿಕ ಫ್ಲವರ್ ವಾಸ್​ಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಸಾವಿರಾರು ರೂಪಾಯಿಗಳಿಗೆ ಸೇಲ್ ಆಗ್ತಿವೆ.


    ಇದನ್ನೂ ಓದಿ: Dakshina Kannada: ಮಳೆ ನೀರಿಂದಲೇ ವರ್ಷಾವಧಿ ಆದಾಯ! ಈ ಕೃಷಿಕರ ಸಕ್ಸಸ್ ಸ್ಟೋರಿ ಕೇಳಿ


    ಒಟ್ಟಿನಲ್ಲಿ ಮಣ್ಣು ಹದಮಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರು ವ್ಯರ್ಥವಾಗುವ ಈ ಕಷ್ಟದ ಕೆಲಸಕ್ಕೆ ಇತ್ತೇಚೆಗೆ ಮತ್ತೆ ಬೇಡಿಕೆ ಹೆಚ್ಚಿದೆಯಂತೆ. ಹೀಗಾಗಿ ಜನ ನೈಸರ್ಗಿಕದತ್ತ ಮಣ್ಣಿನ ಪರಿಕರಗಳ ಮೊರೆ ಹೋಗುತ್ತಿದ್ದಾರೆ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: