• Home
  • »
  • News
  • »
  • mangaluru
  • »
  • Dakshina Kannada: ಅಡಿಕೆ, ತೆಂಗು ಕೊಯ್ಯೋದು ಇನ್ಮೇಲೆ ಸುಲಭ, ಕೃಷಿ ಕಾರ್ಮಿಕರ ಕೊರತೆಗೆ ರೈತರಿಂದಲೇ ಪರಿಹಾರ!

Dakshina Kannada: ಅಡಿಕೆ, ತೆಂಗು ಕೊಯ್ಯೋದು ಇನ್ಮೇಲೆ ಸುಲಭ, ಕೃಷಿ ಕಾರ್ಮಿಕರ ಕೊರತೆಗೆ ರೈತರಿಂದಲೇ ಪರಿಹಾರ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದಕ್ಷಿಣ ಕನ್ನಡ ಜಿಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಅಡಿಕೆ ಬೆಳೆಗಾರರ ಜೊತೆಗೆ ತೆಂಗು ಬೆಳೆಗಾರರ ನೆರವಿಗೂ ಸಿದ್ಧವಾಗಿದೆ.

  • Share this:

    ಪುತ್ತೂರು: ಪಟ್ ಪಟಾಂತ ತೆಂಗಿನ ಮರ ಏರ್ತಿರೋ ಯುವಕರು, ಅಡಿಕೆ ಮರ ಹತ್ತಿ ಕೊನೆ ಕೊಯ್ತಿರೋ ಇನ್ನಷ್ಟು ಮಂದಿ. ಕೃಷಿ ಕಾರ್ಮಿಕರ (Farmer's Problem) ಕೊರತೆ ಹೆಚ್ಚಾಗ್ತಿದೆ ಅನ್ನೋ ಕೂಗಿಗೆ ಇಲ್ಲಿ ಜಾಗವೇ ಇಲ್ಲ! ಅಡಿಕೆ, ತೆಂಗು ಕೊಯ್ಯುವ, ಮದ್ದು ಸಿಂಪಡಿಸುವ ಹತ್ತಾರು ಕೆಲಸಗಳಿಗೆ ಈ ಕಾರ್ಮಿಕರ ತಂಡ ಆಶಾಕಿರಣವಾಗಿ ನಿಂತಿದೆ. ಕಾಲ ಕಾಲಕ್ಕೆ ಈ ಕಾರ್ಮಿಕರು ಸಿಗದ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ  (Dakshina Kannada News) ಕೃಷಿಕರೇ ಸೇರಿಕೊಂಡು ಕಾರ್ಮಿಕರ ತಂಡವೊಂದನ್ನು (Labour Team) ಆರಂಭಿಸಿದ್ದಾರೆ. ಈ ತಂಡ ಅಚ್ಚುಕಟ್ಟಾಗಿ ಮಾಡಿ ಮುಗಿಸುವಂತಹ ತರಬೇತಿಯನ್ನೂ ಹೊಂದಿದೆ.


    ದಕ್ಷಿಣ ಕನ್ನಡ ಜಿಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಅಡಿಕೆ ಬೆಳೆಗಾರರ ಜೊತೆಗೆ ತೆಂಗು ಬೆಳೆಗಾರರ ನೆರವಿಗೂ ಸಿದ್ಧವಾಗಿದೆ. ಕರೆ ಬಂದಲ್ಲಿಗೆ ತೆರಳಿ ತೆಂಗು ಕೊಯ್ಲು ಮಾಡುವ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಜನವರಿ 2 ರಿಂದಲೇ ಈ ಕೆಲಸ ಆರಂಭವಾಗಿದೆ.


    ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಪ್ರಯತ್ನದ ಫಲ
    ಬಂಟ್ವಾಳ ತಾಲೂಕು ವಿಟ್ಲದಲ್ಲಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯು ಈಗಾಗಲೇ ವಿವಿಧ ಕಾರ್ಯಗಳ ಮೂಲಕ ಗಮನ ಸೆಳೆದಿದೆ. ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪಿಂಗಾರ ತಂಡವು ಈಗಾಗಲೇ ಅಡಿಕೆ ಕೊಯ್ಲು ತಂಡವನ್ನು ರಚಿಸಿದೆ. ಈ ಮೂಲಕ ಅನೇಕ ಕೃಷಿಕರಿಗೆ ನೆರವಾಗಿದೆ.


    10 ತಿಂಗಳಲ್ಲಿ ಸುಮಾರು 30 ಲಕ್ಷ ವ್ಯವಹಾರ
    ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ಬಹುಪಾಲು ಸಮಸ್ಯೆಯನ್ನು ನಿವಾರಣೆ ಮಾಡಿದೆ. ಕಳೆದ ವರ್ಷ ಈ ಸಂಸ್ಥೆ ಪೈಬರ್ ದೋಟಿಯ ಮೂಲಕ ಅಡಿಕೆ ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಮೂಲಕ 10 ತಿಂಗಳಲ್ಲಿ ಸುಮಾರು 30 ಲಕ್ಷ ವ್ಯವಹಾರ ನಡೆಸಿ ಇದೀಗ ತೆಂಗು ಬೆಳೆಗಾರರಿಗೂ ನೆರವಾಗುತ್ತಿದೆ.


    ಕರೆದಲ್ಲಿಗೇ ಹೋಗಿ ಸೇವೆ!
    ತೆಂಗು ಕೃಷಿಕರು ಕರೆದಲ್ಲಿಗೆ ಹೋಗಿ ತೆಂಗು ಕೊಯ್ಲು ಮಾಡುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕೇರಳದಲ್ಲಿ ಹಲೋ ನಾರಿಯಲ್ ತಂಡ ಈ ಮಾದರಿಯ ಕೆಲಸ ಮಾಡುತ್ತಿದ್ದು, ಈಚೆಗೆ ಕಾಸರಗೋಡು ಜಿಲ್ಲೆಯ ನೀರ್ಚಾಲಿನಲ್ಲೂ ಕೆಲಸ ಆರಂಭ ಮಾಡಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಂಗಾರ ಸಂಸ್ಥೆ ತೆಂಗು ಬೆಳೆಗಾರರಿಗೆ ನೆರವಾಗುತ್ತಿದೆ. ಈ ಪ್ರಯತ್ನ ರಾಜ್ಯದಲ್ಲೇ ಪ್ರಥಮ ಎನಿಸಿದೆ.


    ಪಿಂಗಾರ ಸಂಸ್ಥೆಗೆ ಕರೆ ಮಾಡಿ ರೈತರು ಕೊಯ್ಲಿಗೆ ದಿನ ನಿಗದಿ ಮಾಡಬೇಕು. ನಿಗದಿತ ದಿನದಂದು ನಾಲ್ವರು ಕಾರ್ಮಿಕರ ಜೊತೆ ಓರ್ವ ಮ್ಯಾನೇಜರ್ ಓಮ್ನಿ ವಾಹನದಲ್ಲಿ ತೋಟಕ್ಕೇ ಬಂದು ತೆಂಗಿನ ಕೊನೆಗಳನ್ನು ಕತ್ತಿಯಿಂದ ಕಡಿದು ಕೊಡುತ್ತಾರೆ.


    ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ


    ಒಂದು ಮರಕ್ಕೆ ಎಷ್ಟು ಸಂಬಳ ಕೊಡಬೇಕು?
    ಒಂದು ಮರದ ಕೊಯ್ಲಿಗೆ 50 ರೂ. ನಿಗದಿಪಡಿಸಲಾಗಿದೆ. ಕನಿಷ್ಠ, ಗರಿಷ್ಠ ಮರಗಳ ಸಂಖ್ಯೆಯ ಮಿತಿ ಇಲ್ಲ, ಕರೆ ಬಂದಲ್ಲಿಗೆ ತೆರಳಿ ವರ್ಷಪೂರ್ತಿ ತಂಡ ಕಾರ್ಯಾಚರಿಸಲಿದೆ ಎಂದು ಹೇಳುತ್ತಾರೆ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ.


    ಯಾರ್ ಬೇಕಾದ್ರೂ ಫೋನ್ ಮಾಡಬಹುದಾ?
    ರೈತ ಉತ್ಪಾದಕ ಕಂಪನಿಯಲ್ಲಿ 1000 ಮಂದಿ ರೈತರು ಸದಸ್ಯರಾಗಿದ್ದು, ಮೊದಲ ಆದ್ಯತೆಯನ್ನು ಈ ಸದಸ್ಯರಿಗೇ ನೀಡಲಾಗುತ್ತದೆ. 15 ಕಿಲೋಮೀಟರ್ ವ್ಯಾಪ್ತಿಯಲ್ಲೇ ಇರುವ ಈ ಸದಸ್ಯರ ತೋಟಗಳಲ್ಲಿ ಅಡಿಕೆ, ತೆಂಗು ತೆಗೆಯಲು ಪಿಂಗಾರ ತಂಡ ಹೋಗುವ ಜೊತೆಗೆ ಸದಸ್ಯರಲ್ಲದವರ ತೋಟದ ಮಾಲೀಕರಿಂದ ಕರೆ ಬಂದರೂ ತಮ್ಮ ಸಮಯವನ್ನು ನಿಗದಿಪಡಿಸಿ ಕೆಲಸಗಳನ್ನು ನಿರ್ವಹಿಸಲಾಗುತ್ತದೆ.


    ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ


    ತೆಂಗು ತೆಗೆಯುವ ತಂಡದಲ್ಲಿ ಹೊರ ರಾಜ್ಯದ ಕಾರ್ಮಿಕರಿದ್ದು, ಅವರಿಗೆ ತೆಂಗಿನ ಮರವೇರುವ ಮತ್ತು ತೆಂಗಿನಕಾಯಿ ಕೀಳುವ ಎಲ್ಲಾ ತರಭೇತಿಗಳನ್ನು ನೀಡಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: