• Home
  • »
  • News
  • »
  • mangaluru
  • »
  • Dakshina Kannada: ಕರಾವಳಿಯ ಭಾರೀ ಫೇಮಸ್ ಬೊಂಬೆಯಾಟದ ಹಿಂದಿರುವ ಮಾಂತ್ರಿಕ ಇವರೇ!

Dakshina Kannada: ಕರಾವಳಿಯ ಭಾರೀ ಫೇಮಸ್ ಬೊಂಬೆಯಾಟದ ಹಿಂದಿರುವ ಮಾಂತ್ರಿಕ ಇವರೇ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

2 ನೇ ತರಗತಿಯಲ್ಲಿ ಆರಂಭವಾದ ಹವ್ಯಾಸವನ್ನೇ ಬದುಕಾಗಿಸಿಕೊಂಡಿರುವ ಇವರು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್, ಫೈಬರ್ ಸೇರಿದಂತೆ ವಿವಿಧ ರೀತಿಯ ವಿಧಾನಗಳನ್ನ ಬಳಸಿ ಗೊಂಬೆ ತಯಾರಿಸೋದರಲ್ಲಿ ನಿಸ್ಸೀಮರು.

  • Share this:

    ದಕ್ಷಿಣ ಕನ್ನಡ: ಏನಯ್ಯಾ ಇದು ಬೊಂಬೆಯಾಟ ಅನ್ಭೇಡಿ. ಇದುವೇ ಕಲಾವಿದರ ಬದುಕಿನ ಪಾಠ, ನೋಡುಗರ ಕಣ್ಣಿಗೆ ಖುಷಿ ಕೊಡೋ ನೋಟ! ಅಸುರರಿಂದ ಇಂದ್ರಾದಿ ದೇವತೆಗಳವರೆಗೂ ನಕ್ಕು ನಗಿಸೋ ಜೋಕರ್, ಕೀಲು ಕುದುರೆ ಹೀಗೆ ಕರಾವಳಿಯಲ್ಲಿ ಬೊಂಬೆಗಳು (Dolls) ಸಖತ್ ಫೇಮಸ್. ಪ್ರತಿಯೊಂದು ಶುಭ ಕಾರ್ಯಕ್ರಮಕ್ಕೆ ಇದು (Bombeyata) ನೀಡೋ ಮೆರುಗು ನಿಜಕ್ಕೂ ಅದ್ಭುತ. ಆದ್ರೆ ಅದರ ಹಿಂದಿರುವ ಕಲಾ ನೈಪುಣ್ಯತೆ (Art) ಎಂತದ್ದು ಅನ್ನೋದು ತಿಳಿಯಲೇಬೇಕಾದ ವಿಚಾರ. ಅದನ್ನೇ ನಾವ್ ತೋರಿಸ್ತೀವಿ ನೋಡಿ.


    ಕರಾವಳಿಯಲ್ಲಿ ಮದುವೆ ಮನೆ, ಜಾತ್ರೆ, ಉತ್ಸವ, ಯಾವುದೇ ಸಂಭ್ರಮದ ಮೆರವಣಿಗೆ ಇದ್ರೂ ಅಲ್ಲೆಲ್ಲ ಬೊಂಬೆವೇಷಗಳು ಕಾಣ ಸಿಗೋದು ಕಾಮನ್. ಅವುಗಳು ನೀಡುವ ಆಕರ್ಷಣೆಯೂ ವಿಭಿನ್ನ. ಬೊಂಬೆಯನ್ನ ತನ್ನ ತಲೆಯಲ್ಲಿ ಹೊತ್ತು ನಡೆಯೋ ಆ ವೇಷಧಾರಿಯದ್ದೂ ಜೀವನಕ್ಕಾಗಿ ಮಾಡುವ ಹರಸಾಹಸ. ಆದ್ರೆ ಅವರೆಲ್ಲರಿಗೂ ಅನ್ನ ನೀಡುವ ಕಲಾವಿದರದ್ದು ಇನ್ನೊಂದು ರೀತಿ ಬದುಕು.


    ಇವರೇ ಆ ಕಲಾವಿದ!
    ಇಡೀ ಕರಾವಳಿ ಹಾಗೂ ರಾಜ್ಯದ ಹಲವೆಡೆ ಕಾಣಸಿಗೋ ಈ ಬೊಂಬೆ ವೇಷದ ಹಿಂದಿರೋ ಆ ಮಾಂತ್ರಿಕ ಕಲಾವಿದರೇ ದಕ್ಷಿಣ ಕನ್ನಡದ ವಿಟ್ಲದ ಕಲಾರಸಿಕ ಸತೀಶ್ ಕುಲಾಲ್. ಹಲವು ವರ್ಷಗಳಿಂದ ಬೊಂಬೆ ತಯಾರಿಕೆಯಲ್ಲಿ ನಿರತರಾಗಿರುವ ಕುಲಾಲರು ಬೊಂಬೆ ವೇಷವನ್ನ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ಪರಿಚಯಿಸಿದ್ದಾರೆ.


    2ನೇ ಕ್ಲಾಸ್​ನಿಂದಲೇ ಆರ್ಟ್ ವರ್ಕ್
    ಕೀಲು ಕುದುರೆ, ಬಣ್ಣದ ಕೊಡೆ, ನಾಟಕದ ಮೇಕಪ್, ಯಕ್ಷಗಾನದ ವೇಷಭೂಷಣ, ಟ್ಯಾಬ್ಲೋಗಳು ಹೀಗೆ ಸತೀಶ್ ಕುಲಾಲರು ಮಾಡದ ಆರ್ಟ್ ವರ್ಕ್​​ಗಳೇ ಇಲ್ಲ.  2 ನೇ ತರಗತಿಯಲ್ಲಿ ಆರಂಭವಾದ ಹವ್ಯಾಸವನ್ನೇ ಬದುಕಾಗಿಸಿಕೊಂಡಿರುವ ಇವರು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್, ಫೈಬರ್ ಸೇರಿದಂತೆ ವಿವಿಧ ರೀತಿಯ ವಿಧಾನಗಳನ್ನ ಬಳಸಿ ಗೊಂಬೆ ತಯಾರಿಸೋದರಲ್ಲಿ ನಿಸ್ಸೀಮರು.




    ಇದನ್ನೂ ಓದಿ: Ganapati Temple: ಪ್ರಯಾಣಿಕರ ಜೀವ ಕಾಯುವ ಸುಳ್ಯ ಗಡಿಯ ಗಣಪ!


    ಕಲಾವಿದರ ಸತತ ಪರಿಶ್ರಮದ ಪ್ರತಿಫಲ
    ಹಾಗಂತ ನಮ್ಮನ್ನ ರಂಜಿಸಿ, ನಗಿಸೋ ಈ ಗೊಂಬೆಗಳನ್ನ ಮಾಡೋದು ಸುಲಭದ ಮಾತಲ್ಲ. ತಿಂಗಳುಗಳ ಕಾಲದ ಪರಿಶ್ರಮದಿಂದ ತಯಾರಾಗೋ ಈ ಗೊಂಬೆಗಳು ಕಲಾವಿದರ ಸತತ ಪರಿಶ್ರಮದ ಪ್ರತಿಫಲ ಅನ್ನೋದಂತೂ ಸತ್ಯ.


    ಇದನ್ನೂ ಓದಿ: Kumble Gopalakrishna Temple: ಸಿಡಿಮದ್ದು ಸಿಡಿಯೋದು ನೋಡೋಕೆ ದೇವರೇ ಬರ್ತಾರೆ! ಇದು ಗೋಪಾಲಕೃಷ್ಣ ದೇಗುಲದ 'ಕುಂಬ್ಳೆ ಬೆಡಿ'


    ಹೀಗೆ ತಯಾರಾದ ಗೊಂಬೆಗಳು ಅದೆಷ್ಟೋ ಸಂಭ್ರಮಗಳಿಗೆ ಮೆರುಗು ನೀಡುತ್ತವೆ. ಆದರೆ ಅದನ್ನ ಧರಿಸೋ ವೇಷಧಾರಿಗಾಗಲೀ ಅಥವಾ ಅದನ್ನ ರೂಪಿಸುವ ಸತೀಶ್ ಕುಲಾಲರಂತಹ ಕಲಾವಿದರ ಪ್ರತಿಭೆಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: