ದೊಡ್ಡದಾದ ಮನೆ, ಕೆಂಪು ಕಲ್ಲು ಹಾಸಿನ ಒಳಾಂಗಣ. ಕೆತ್ತನೆಯೊಂದಿಗೆ ಕಂಗೊಳಿಸೋ ಹಿರಿದಾದ ಕಂಬಗಳು. ವಿಶಿಷ್ಟ ಅನುಭವ ನೀಡುವ ವಾತಾವರಣ. ಹಾಗಿದ್ರೆ ಹಿಂದೆ ಈ ಕಟ್ಟಡ (Chowtara Aramane) ಏನಾಗಿತ್ತು ಅನ್ನೋ ಕುತೂಹಲ ಅಲ್ಲವೇ? ಯೆಸ್, ಹೇಳ್ತೀವಿ ನೋಡಿ. ಚೌಟ ಅರಸ ರಾಜ ಮನೆತನದ ಅರಮನೆ. ಮೂಡುಬಿದಿರೆಯನ್ನ (Moodbidri Palace) ರಾಜಧಾನಿಯನ್ನಾಗಿ, ಮಂಗಳೂರಿನ ಉಳ್ಳಾಲವನ್ನ ಉಪರಾಜಧಾನಿಯನ್ನಾಗಿ ಆಳಿದ ಚೌಟ ರಾಜವಂಶಸ್ಥರ ಅರಮನೆ (Chowtar Palace) ಈಗಲೂ ಅದೇ ಆಕರ್ಷಣೆ ಹೊಂದಿದೆ.
ಮೂಡುಬಿದಿರೆಯಲ್ಲಿರೋ ಚೌಟರ ಅರಮನೆ ನೋಡುವುದಕ್ಕೆ ಈಗಲೂ ಪ್ರವಾಸಿಗರು ಆಗಮಿಸುತ್ತಾರೆ. ಸುಮಾರು ಎಂಟು ಎಕರೆ ಕೋಟೆಯ ನಡುವೆ ಇದ್ದ ಅರಮನೆ ಇದೀಗ ರಾಜ ಪ್ರಾಂಗಣವನ್ನ ಮಾತ್ರ ಉಳಿಸಿಕೊಂಡಿದೆ. ಸಂಪೂರ್ಣವಾಗಿ ಕಾಷ್ಟಶಿಲ್ಪಗಳೇ ಕಾಣ ಸಿಕ್ಕುವ ಈ ಅರಮನೆಯಲ್ಲಿ ಸಪ್ತನಾರಿ ತುರಗ, ನವನಾರಿ ಕುಂಜರ ಎಂಬ ಎರಡು ಶಿಲ್ಪಗಳು ವಿಶೇಷವಾಗಿವೆ.
ಇದನ್ನೂ ಓದಿ: Vaikuntha Ekadashi: ಕರ್ನಾಟಕದ ತಿರುಪತಿಯಲ್ಲಿ ವೈಕುಂಠ ಏಕಾದಶಿ ಆಚರಣೆಯ ಮಹತ್ವ ನೋಡಿ
ಜನರನ್ನು ಆಕರ್ಷಿಸುವಂತಿದೆ ಅರಮನೆ
ಇತಿಹಾಸ ಪ್ರಕಾರ ಮೂಲತಃ ಪುತ್ತಿಗೆಯಲ್ಲಿದ್ದ ಅರಮನೆಯಲ್ಲಿ ಬೆಂಕಿ ಅನಾಹುತವಾದ ಮೇಲೆ ಕುಲದೇವರಾದ ಸೋಮನಾಥನ ಸಹಿತ ಮೂಡುಬಿದಿರೆಗೆ ಬಂದ ಚೌಟರು ತಮ್ಮದೇ ಆದ ವಿಸ್ತಾರವಾದ ಅರಮನೆ ಕಟ್ಟಿದರಂತೆ. ದಪ್ಪನೆಯ ಮರಗಳಿಂದ ತಯಾರಾದ ನೋಡಲು ಮನಸೂರೆಗೊಳಿಸುವ ಕೆತ್ತನೆಗಳು ಇಂದಿಗೂ ಜನರನ್ನ ಆಕರ್ಷಿಸುತ್ತದೆ.
ಚೂರೇ ಚೂರು ಗೆದ್ದಲಿಗೆ ಬಲಿಯಾಗಿಲ್ಲ
ಈ ಅರಮನೆಯಲ್ಲಿ ದಪ್ಪನೆಯ ಕಂಬದ ತುಂಬೆಲ್ಲ ಶೃಂಗಾರದ ಚಿತ್ರಗಳು ಕಾಣಸಿಗುತ್ತವೆ. ನೂರಾರು ವರ್ಷಗಳು ಕಳೆದರೂ ಕೂಡ ಚೂರೇ ಚೂರು ಭಾಗವನ್ನೂ ಗೆದ್ದಲು ಮುಟ್ಟಿಲ್ಲ.
ಇದನ್ನೂ ಓದಿ: Hanuman Temple: ಎಳನೀರು ಪ್ರಿಯ ಈ ಹನುಮ! ಸೀಯಾಳ ಅಭಿಷೇಕ ಮಾಡಿಸಿದ್ರೆ ಇಷ್ಟಾರ್ಥ ಪ್ರಾಪ್ತಿ
ಚೌಟರ ಅರಮನೆಗೆ ಹೀಗೆ ಬನ್ನಿ ( ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇತಿಹಾಸ ಪ್ರಿಯರ ನೆಚ್ಚಿನ ತಾಣ
ಅರಮನೆಯ ಎದುರು ವಿಶಾಲ ಕೋಟೆಯಿತ್ತೆಂದೂ ಆ ಕೋಟೆಯಲ್ಲಿ ಕೂತು ರಾಜ ಪ್ರಜೆಗಳ ಆಲಿಸುತ್ತಿದ್ದನೆಂದೂ ಹೇಳಲಾಗುತ್ತೆ. ಹೀಗೆ ಹತ್ತಾರು ವೈಶಿಷ್ಟ್ಯತೆಗಳನ್ನು ಹೊಂದಿರೋ ಚೌಟರ ಅರಮನೆ ಇಂದಿಗೂ ಇತಿಹಾಸ ಪ್ರಿಯರ ನೆಚ್ಚಿನ ತಾಣವಾಗಿ ಉಳಿದಿರುವುದು ವಿಶೇಷ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ