Charmadi Ghat: ರಸ್ತೆ ಬದಿಯೇ ಸಾಲುಸಾಲು ಜಲಪಾತ! ತಲೆಗೆ ತಾಗುವ ಮೋಡ! ಚಾರ್ಮಾಡಿ ಘಾಟ್ ವಿಡಿಯೋ ನೋಡಿ

ಉಜಿರೆ ದಾಟಿ ಮುಂದೆ ಘಟ್ಟ ಏರುವಾಗ ಸಿಗೋ ಚಾರ್ಮಾಡಿಯ ವೈಭವಕ್ಕೆ ಚಾರ್ಮಾಡಿ ಒಂದೇ ಸಾಟಿ ಅಂದರೂ ತಪ್ಪಾಗಲ್ಲ. ಬೇಕಾದರೆ ನೀವೇ ವಿಡಿಯೋ ನೋಡಿಬಿಡಿ.

ಚಾರ್ಮಾಡಿ

"ಚಾರ್ಮಾಡಿ"

 • Share this:
  aಚಾರ್ಮಾಡಿ..ಹೆಸರು ಕೇಳಿದರೇ ಸಾಕು ಈಗ್ಲೇ ಒಮ್ಮೆ ಹೋಗಿಬರೋಣ ಅನಿಸುತ್ತೆ. ಅದ್ರಲ್ಲೂ ಈ ಮಳೆಗಾಲದಲ್ಲಿ ಭೂಲೋಕದ ಸ್ವರ್ಗ ಅದು! ತಲೆಗೆ ತಾಗುವ ಮೋಡಗಳು..ರಸ್ತೆ ಪಕ್ಕದಲ್ಲೇ ಹರಿಯುವ ಹಾಲ್ನೊರೆಯಂತಹ ಝರಿಗಳು! ಮೈಯೆಲ್ಲ ತಣ್ಣಗೆ ಅನಿಸುವ ಹಿತವಾದ ಗಾಳಿ.. ರಸ್ತೆ ಬದಿ ಎತ್ತರದ ಕಲ್ಲುಗಳಿಂದ ಧುಮುಕೊ ಚಿಕ್ಕ ಚಿಕ್ಕ ಝರಿಗಳು..ಜುಳುಜುಳು ಹರಿಯೋ ನೀರಿನ ನಾದ. ರಸ್ತೆಯ ಇನ್ನೊಂದು ಬದಿ ನೋಡಿದಷ್ಟೂ ದೂರ ಮುಗಿಯದ ಆಕಾಶ.  ಚಾರ್ಮಾಡಿ ಘಾಟ್ ರಸ್ತೆಯಲ್ಲಿ (Charmadi Ghat) ಅಲ್ಲಲ್ಲಿ ನಿಂತು ಇದನ್ನೆಲ್ಲ ಸವಿಯೋ ಸವಾರರು. ಹಾಗಾದೆರ ಈಗ ಹೇಗಿದೆ ಚಾರ್ಮಾಡಿ ಘಾಟ್? ನೀವು ಈ ವಿಡಿಯೋ ನೋಡುತ್ತ ಒಮ್ಮೆ ಚಾರ್ಮಾಡಿ ಘಾಟ್​ನಲ್ಲಿ ಹೋಗಿಬನ್ನಿ.

  ಈಗ ಚಾರ್ಮಾಡಿ ಘಾಟಲ್ಲಿ ಪ್ರಯಾಣಿಸಿದರೆ ನೀವೂ ಈ ಸೌಂದರ್ಯವನ್ನು ಎಂಜಾಯ್ ಮಾಡಬಹುದು.

  ಇದನ್ನೂ ಓದಿ:  Coconut Pickle: ತೆಂಗಿನಕಾಯಿ ಉಪ್ಪಿನಕಾಯಿ ತಯಾರಿ! ರುಚಿ ಹೇಗಿರುತ್ತೆ? ತಯಾರಿಸೋದು ಹೇಗೆ? ಎಲ್ಲಿ ಸಿಗುತ್ತೆ?

  Charmadi Ghat
  ಚಾರ್ಮಾಡಿ ವ್ಯೂ ಪಾಯಿಂಟ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಮಂಗಳೂರಿನಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುತ್ತೆ ರಾಷ್ಟ್ರೀಯ ಹೆದ್ದಾರಿ 73. ಚಾರ್ಮಾಡಿ ಘಾಟ್ ಸಹ ಇದೇ ಹೆದ್ದಾರಿಯಲ್ಲೇ ಇರೋದು.

  ಇದನ್ನೂ ಓದಿ: Bhatkal Marikamba Fair: ಭಟ್ಕಳದ ಮಾರಿಜಾತ್ರೆಯ ವೈಭವ ನೋಡಿ; ದರ್ಶನ ಪಡೆದು ದೇವಿಗೆ ಕೈಮುಗಿಯಿರಿ!

  ಉಜಿರೆ ದಾಟಿ ಮುಂದೆ ಘಟ್ಟ ಏರುವಾಗ ಸಿಗೋ ಚಾರ್ಮಾಡಿಯ ವೈಭವಕ್ಕೆ ಚಾರ್ಮಾಡಿ ಒಂದೇ ಸಾಟಿ ಅಂದರೂ ತಪ್ಪಾಗಲ್ಲ.
  Published by:guruganesh bhat
  First published: