• Home
  • »
  • News
  • »
  • mangaluru
  • »
  • Mangaluru News: ಕರಾವಳಿ ಜನರಿಗೆ ಖುಷಿಸುದ್ದಿ; ಕಂಬಳಕ್ಕೆ ಮಣೆ ಹಾಕಿದ ಕೇಂದ್ರ

Mangaluru News: ಕರಾವಳಿ ಜನರಿಗೆ ಖುಷಿಸುದ್ದಿ; ಕಂಬಳಕ್ಕೆ ಮಣೆ ಹಾಕಿದ ಕೇಂದ್ರ

ಕಂಬಳದ ದೃಶ್ಯ

ಕಂಬಳದ ದೃಶ್ಯ

ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ಯೆಸ್ಸೋ ನಾಯಕ್‌ ಈ ಕುರಿತು ಉಳ್ಳಾಲದಲ್ಲಿ ಭರವಸೆ ನೀಡಿದ್ದಾರೆ. ಉಳ್ಳಾಲದಲ್ಲಿ ಕಂಬಳ ಗದ್ದೆಯೊಂದರ ಕಾಮಗಾರಿಯನ್ನು ವೀಕ್ಷಿಸಿದ ಅವರು ಈ ಮಾಹಿತಿ ನೀಡಿದ್ದಾರೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ಕರ್ನಾಟಕದ ಕರಾವಳಿಯ (Coastal Karnataka) ಪ್ರಮುಖ ಜಾನಪದ ಸಂಸ್ಕೃತಿ ಕಂಬಳಕ್ಕೆ (Kambala Culture) ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯುವ ಆಶಾಭಾವನೆ ದೊರೆತಿದೆ. ಕಂಬಳ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ನೀತಿಯ ಭಾಗವಾಗಿ ಸೇರ್ಪಡೆಗೊಳ್ಳಲು ಒಂದು ಹೆಜ್ಜೆ ಮುಂದಿಡಲಾಗಿದೆ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ನೀತಿಯಲ್ಲಿ ಕಂಬಳವನ್ನು ಸೇರಿಸಲು ಕ್ರಮ ಕೈಗೊಳ್ಳುವ ಕುರಿತು ಸ್ವತಃ ಕೇಂದ್ರ ಸಚಿವ ಶ್ರೀಪಾದ್ ನಾಯಕ್ (Central Minister Shripad Naik) ಭರವಸೆ ನೀಡಿದ್ದಾರೆ.


    ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ಯೆಸ್ಸೋ ನಾಯಕ್‌ ಈ ಕುರಿತು ಉಳ್ಳಾಲದಲ್ಲಿ ಭರವಸೆ ನೀಡಿದ್ದಾರೆ. ಉಳ್ಳಾಲದಲ್ಲಿ ಕಂಬಳ ಗದ್ದೆಯೊಂದರ ಕಾಮಗಾರಿಯನ್ನು ವೀಕ್ಷಿಸಿದ ಅವರು ಈ ಮಾಹಿತಿ ನೀಡಿದ್ದಾರೆ.


    ಕಂಬಳ ಎಂದರೇನು?
    ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಜೋಡಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಸ್ಪರ್ಧೆಗಿಳಿಸುವುದಾಗಿದೆ. ಹೊನಲು ಬೆಳಕಿನ ಈ ಸ್ಪರ್ಧೆಯನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಕನೆ ಹಲಗೆ, ಎರಡು ಜೋಡಿ ಕೋಣಗಳ ಓಟ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯು ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕಂಬಳ ಕ್ರೀಡೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.


    ಯಾವಾಗ ಆರಂಭ ಕಂಬಳ?
    ನವೆಂಬರ್ 26 ಕ್ಕೆ ಆರಂಭವಾಗಲಿರುವ ಕಂಬಳ ಕ್ರೀಡೆಯು ಎಪ್ರಿಲ್ 8 ರ ವರೆಗೆ ನಡೆಯಲಿದೆ.


    ಇದನ್ನೂ ಓದಿ: Kandla Forest Travel Plan: ಶರಾವತಿಯ ಮಡಿಲಲ್ಲಿ ಕಾಂಡ್ಲಾವನ, ಮ್ಯಾಂಗ್ರೋವ್ ಮರಗಳ ಜೊತೆ ನೀವೂ ಮಾತನಾಡಿ!


    ಕಂಬಳ ವೇಳಾಪಟ್ಟಿ ಹೀಗಿದೆ


    ನವೆಂಬರ್ 26 - ಕಕ್ಕೆಪದವು
    ಡಿಸೆಂಬರ್ 3 - ವೇಣೂರು
    ಡಿಸೆಂಬರ್ 10 - ಬಾರಾಡಿ ಬೀಡು


    ಡಿಸೆಂಬರ್ 13 - ಶಿರ್ವ


    ಡಿಸೆಂಬರ್ 17 - ಹೊಕ್ಕಾಡಿಗೋಳಿ


    ಡಿಸೆಂಬರ್ 24 - ಮೂಡಬಿದಿರೆ


    ಡಿಸೆಂಬರ್ 31 - ಮೂಲ್ಕಿ ಅರಸು ಕಂಬಳ (ಹಳೆಯಂಗಡಿ)


    2023 ರ ಕಂಬಳದ ವಿವರ ಹೀಗಿದೆ ನೋಡಿ


    ಜನವರಿ 7 - ಮಿಯಾರು


    ಜನವರಿ 14 - ಅಡ್ವೆ


    ಜನವರಿ 21 - ಮಂಗಳೂರು


    ಜನವರಿ 28 - ಐಕಳ ಬಾವ


    ಫೆಬ್ರವರಿ 04 - ಪುತ್ತೂರು


    ಫೆಬ್ರವರಿ 11 - ಕಟಪಾಡಿ


    ಫೆಬ್ರವರಿ 18 - ವಾಮಂಜೂರು


    ಫೆಬ್ರವರಿ 25 - ಜಪ್ಪಿನಮೊಗರು


    ಮಾರ್ಚ್ 04 - ಬಂಟ್ವಾಳ


    ಮಾರ್ಚ್ 11 - ಉಪ್ಪಿನಂಗಡಿ


    ಮಾರ್ಚ್ 18 - ಬಂಗಾಡಿ


    ಮಾರ್ಚ್ 25 - ಪೈವಳಿಕೆ


    ಏಪ್ರಿಲ್ 01 - ಸುರತ್ಕಲ್


    ಏಪ್ರಿಲ್ 08 - ಪಣಪಿಲ


    ಇದನ್ನೂ ಓದಿ: Dharmasthala Lakshadeepotsava: 5 ದಿನಗಳ ಕಾಲ ಧರ್ಮಸ್ಥಳ ಲಕ್ಷದೀಪೋತ್ಸವ; ಇಲ್ಲಿದೆ ಪ್ರತಿದಿನದ ಕಾರ್ಯಕ್ರಮ ವಿವರ


    ಒಟ್ಟಾರೆ ಕಾಂತಾರ ಸಿನಿಮಾದ ಹವಾದಿಂದ ಈ ಬಾರಿ ಕಂಬಳ ಇನ್ನಷ್ಟು ಗರ್ದಿ ಗಮ್ಮತ್ತಿನಿಂದ ಕೂಡಿರಲಿದೆ ಎಂದೇ ಹೇಳಳಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಂದಲೂ ಕಂಬಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ನಿರೀಕ್ಷೆಗಳಿವೆ.

    Published by:ಗುರುಗಣೇಶ ಡಬ್ಗುಳಿ
    First published: