Mangaluru: ದೇವ್ರಿಗೆ ಹೂವಿಟ್ಟು ಪೂಜೆ ಮಾಡೋದು ಕಷ್ಟ! ಭಟ್ಕಳ, ಶಂಕರಪುರ ಮಲ್ಲಿಗೆ ರೇಟ್ ಕೇಳಿದ್ರಾ?

ಕರಾವಳಿ ಜನ ಮಲ್ಲಿಗೆ ರೇಟು ಕೇಳಿ ಹೌಹಾರಿದ್ದಾರೆ.. ಕರಾವಳಿಯಲ್ಲಿ ಶಂಕರಪುರ ಮಲ್ಲಿಗೆ ಅಂದ್ರೆ ತುಂಬಾ ಫೇಮಸ್ ಮಾರ್ರೆ.. ಆದ್ರೆ ಎಂತ ಮಾಡುದು ಹಬ್ಬ ಹತ್ತಿರ ಬರ್ತಿದ್ದಾಗೆ ರೇಟ್ ಮಾತ್ರ ಮಂಡೆ ಬಿಸಿ ಆಗುವಂತೆ ಮಾಡಿದೆ.

ಮಲ್ಲಿಗೆ

ಮಲ್ಲಿಗೆ

 • Share this:
  ಎಬಾ.. ಎಂತ ರೇಟು ಮಾರಾಯ್ರೇ.. ಹೀಗಾದ್ರೆ ನಾವು ದೇವ್ರಿಗೆ ಹೂ ಇಡ್ಲಿಕ್ಕೆ ಉಂಟಾ.. ಹೀಗಂತ ಕರಾವಳಿ ಜನ ಮಲ್ಲಿಗೆ ರೇಟು ಕೇಳಿ ಹೌಹಾರಿದ್ದಾರೆ.. ಕರಾವಳಿಯಲ್ಲಿ ಶಂಕರಪುರ ಮಲ್ಲಿಗೆ (Shankarpur Jasmine Price) ಅಂದ್ರೆ ತುಂಬಾ ಫೇಮಸ್ ಮಾರ್ರೆ.. ಆದ್ರೆ ಎಂತ ಮಾಡುದು ಹಬ್ಬ ಹತ್ತಿರ ಬರ್ತಿದ್ದಾಗೆ ರೇಟ್ ಮಾತ್ರ ಮಂಡೆ ಬಿಸಿ ಆಗುವಂತೆ ಮಾಡಿದೆ.. ಅಬ್ಬ.. ಇದೆಂತ ರೇಟು ಅಂತಾ ಜನ ಕೇಳುವಂತಾಗಿದೆ.. ನಮ್ ಕರಾವಳಿಯಲ್ಲಿ (Coastal Karnataka) ವರಮಹಾಲಕ್ಷ್ಮೀ ಹಬ್ಬನ ಅಷ್ಟೇನೂ ಗೌಜಿ ಮಾಡಲ್ಲರ್ರೀ.. ಆದ್ರೂ ದಿನಂಪ್ರತಿ ದೇವರಿಗೆ ಹೂ ಇಡೋರ ಸಂಖ್ಯೆ ಕಡಿಮೆಯದ್ದಲ್ಲ.. ಈ ಆಟಿ ತಿಂಗಳಲ್ಲಿ ಫಂಕ್ಷನ್ನೂ ಕಡಿಮೆ, ಆದ್ರೆ ಶಂಕರಪುರ ಮಲ್ಲಿಗೆ ಮಾತ್ರ ಭಯಂಕರವಾಗಿದೆ.. ಅದೇನು ರೇಟು ಅಂತಾ ಹೇಳ್ತೀರಿ.. ಅಟ್ಟೆಗೆ 2 ಸಾವಿರ ದಾಟಿದೆ..

  ಇನ್ನೊಂದು ಕಡೆ ಭಟ್ಕಳ (Bhatkal Jasmine) ಮಲ್ಲಿಗೆನೂ ಕಡಿಮೆಯದ್ದೇನಲ್ಲ.. ಮಾರ್ಕೆಟ್ ನಲ್ಲಿ ಹೂವಿನ ರೇಟ್ ಒಂದ್ಸಲ ನೀವ್ ನೋಡ್ಕೊಳ್ಳಿ..

  ರೇಟ್ ಹೀಗಿದೆ

  ಶಂಕರಪುರ ಮಲ್ಲಿಗೆ – (ಪ್ರತಿ ಅಟ್ಟೆಗೆ) ₹2000-2200
  ಭಟ್ಕಳ ಮಲ್ಲಿಗೆ – (ಪ್ರತಿ ಅಟ್ಟೆಗೆ) ₹1000-1600
  ಚೆಂಡು ಹೂ – (ಒಂದು ಕುಚ್ಚುಗೆ) ₹1,500

  ಇದನ್ನೂ ಓದಿ: Dakshina Kannada: ತುಳುನಾಡಲ್ಲಿ ನಡೆಯುತ್ತೆ ಪ್ರೇತಾತ್ಮಗಳ ಮದುವೆ! ಅಚ್ಚರಿ ಆದರೂ ಸತ್ಯವಿದು!

  ಯಾಕೆ ಇಷ್ಟು ದರ?
  ಸಾಮಾನ್ಯವಾಗಿ ಈ ಟೈಮಲ್ಲಿ ಬೆಳೆ ಕಡಿಮೆ, ಬೇಡಿಕೆ ಜಾಸ್ತಿ ಇರುತ್ತೆ. ಹಾಗಾಗಿ ಶಂಕರಪುರ ಮಲ್ಲಿಗೆ ರೇಟು ಗಗನಕ್ಕೇರಿದೆ. ಸಾಮಾನ್ಯ ದಿನಗಳಲ್ಲಿ ರೇಟ್ ಇದರ ಅರ್ಧದಷ್ಟು ಕಡಿಮೆ ಆಗುವುದೂ ಉಂಟು.. 2008ರಲ್ಲಿ ಜಿಐ ಟ್ಯಾಗ್ ಪಡೆದ ಶಂಕರಪುರ ಮಲ್ಲಿಗೆ ಬೆಳೆಯೋದೆ ಉಡುಪಿ ಜಿಲ್ಲೆಯಲ್ಲಿ.

  ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

  ಕರಾವಳಿ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ನಮ್ಮ ಶಂಕರಪುರ ಮಲ್ಲಿಗೆ ಕಂಪು ಬೀರಿದ್ದು ಉಂಟು.. ಹಾಗಾಗಿ ರೇಟು ಜಾಸ್ತಿ ಆದ್ರೂ ಪರ್ವಾಗಿಲ್ಲ, ಮಲ್ಲಿಗೆ ಕೊಂಡೋಗುವವರ ಸಂಖ್ಯೆ ಕಡಿಮೆ ಆಗಿಲ್ಲ.

  ವರದಿ: ಇರ್ಷಾದ್ ಕಿನ್ನಿಗೋಳಿ
  Published by:guruganesh bhat
  First published: