Bharat Mata Mandir Puttur: ಪುತ್ತೂರಿನಲ್ಲಿ ಭಾರತ ಮಾತೆಯ ಮಂದಿರ! ಹೆಚ್ಚಲಿದೆ ಇನ್ನಷ್ಟು ದೇಶಪ್ರೇಮ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸುಮಾರು 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಮಂದಿರವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

 • News18 Kannada
 • 3-MIN READ
 • Last Updated :
 • Puttur, India
 • Share this:

  ಪುತ್ತೂರು: ಸಿಂಹದ ಮೇಲೆ ಆಸೀನಳಾದ ದೇವಿ, ಪಕ್ಕದಲ್ಲೇ ಸೆಲ್ಯೂಟ್ ಹೊಡೆದು ನಿಂತ ಯೋಧ, ಶ್ರಮವಹಿಸಿ ದುಡಿಯೋ ಕೃಷಿಕ, ಇದು ದಕ್ಷಿಣ ಭಾರತದ 2ನೇ ಭಾರತದ ಮಾತೆಯ ದೇಗುಲ! ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಪುತ್ತೂರಿನ (Puttur News) ಈಶ್ವರಮಂಗಲದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ ಈ ವಿಶೇಷ ದೇವಸ್ಥಾನ. ಈ ಮಂದಿರದ (Bharat Mata Temple In Puttur)ಒಳಗೆ ಏನೆಲ್ಲಾ ಇದೆ ಅನ್ನೋದನ್ನು ಹೇಳ್ತೀವಿ ನೋಡಿ.


  ಧರ್ಮಶ್ರೀ ಪ್ರತಿಷ್ಠಾನ ಹನುಮಗಿರಿಯ ನೇತೃತ್ವದಲ್ಲಿ ದಕ್ಷಿಣ ಭಾರತದ 2ನೇ ಭಾರತ ಮಾತೆಯ ಮಂದಿರ ಈಶ್ವರಮಂಗಲದ ಅಮರಗಿರಿಯಲ್ಲಿ ನಿರ್ಮಾಣವಾಗಿದೆ. ಸುಮಾರು 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಮಂದಿರವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.


  ಕನ್ಯಾಕುಮಾರಿಯಲ್ಲಿ ಮೊದಲ ಮಂದಿರ
  ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಉದ್ಧೇಶವೇ ಈ ಮಂದಿರದ ಹಿಂದಿದೆ. ಕನ್ಯಾಕುಮಾರಿಯಲ್ಲಿರೋ ದಕ್ಷಿಣ ಭಾರತದ ಮೊದಲ ಭಾರತ ಮಾತೆಯ ಮಂದಿರದ ನಂತರ ಇದೇ ಮಂದಿರ ಕಣ್ಮನ ಸೆಳೆಯುವಂತಿದೆ.


  ವಂದೇ ಮಾತರಂ ಅನುರಣನ
  ಭಾರತ ಮಾತೆಯ ಮಂದಿರದ ಪ್ರವೇಶ ದ್ವಾರದಲ್ಲಿ ವಂದೇ ಮಾತರಂ ಹಾಡಿನ ಸಾಲುಗಳನ್ನು ಬರೆಯಲಾಗಿದೆ. ಪ್ರವೇಶ ದ್ವಾರ ದಾಟಿ ಮಂದಿರ ಕಡೆ ಹೋಗುವ ಎರಡೂ ಕಡೆಗಳಲ್ಲಿ ಆಕರ್ಷಕ ಹೂವುಗಳ ಗಿಡಗಳ ಉದ್ಯಾನವನ ಪ್ರವಾಸಿಗರನ್ನು ಆಕರ್ಷಿಸುಂತಿದೆ.


  ಉದ್ಯಾನವನದ ಮಧ್ಯದಲ್ಲಿರುವ ಸೈನಿಕನ ಶಿಲಾ ಹಸ್ತದಲ್ಲಿ ಭಾರತದ ಧ್ವಜವನ್ನು ಅಳವಡಿಸಲಾಗುತ್ತದೆ. ಮಂದಿರದ ಒಳಗೆ ಭಾರತ ಮಾತೆಯ ಅಮೃತ ಶಿಲೆಯ ಪ್ರತಿಮೆಯಿದ್ದು, ಅದರ ಬಲ ಮತ್ತು ಎಡ ಬದಿಯಲ್ಲಿ ರೈತ ಮತ್ತು ಸೈನಿಕನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.


  ಇದನ್ನೂ ಓದಿ: Puttur: ಕಾರ್ ಬಂಪರ್​ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ ನಾಯಿಯ ಮಡಿಲು ಸೇರಿದ ಮರಿಗಳು!


  ಮಂದಿರದ ಇನ್ನೊಂದು ಪಾರ್ಶ್ವದಲ್ಲಿ ಸೈನಿಕರ ಸ್ಮಾರಕವನ್ನೂ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳ ತೈಲ ಚಿತ್ರಗಳು ಮಂದಿರದ ತುಂಬೆಲ್ಲಾ ಅಳವಡಿಸಲಾಗಿದೆ.


  ಇದನ್ನೂ ಓದಿ: Mangaluru: ಬೀದಿಯಲ್ಲಿ ನಾಯಿ, ಬೆಕ್ಕು ಬಿಟ್ಟವರ ಹೆಂಡತಿ ಮಕ್ಕಳನ್ನ ನಾವು ಸಾಕ್ತೇವೆ! ಮಂಗಳೂರಿನಲ್ಲಿ ಎಚ್ಚರಿಕೆಯ ಬ್ಯಾನರ್


  ಪ್ರವೇಶ ಯಾವಾಗ?
  ಅಂದಹಾಗೆ ಸರ್ಕಾರಿ ರಜಾ ದಿನಗಳಲ್ಲಿ ಸಾರ್ವಜನಿಕರಿಗೆ ಈ ಮಂದಿರಕ್ಕೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಅಲ್ಲದೆ ಶಾಲಾ ಮಕ್ಕಳಿಗಾಗಿ ವಾರದ ಎಲ್ಲಾ ದಿನಗಳಲ್ಲೂ ಮಂದಿರವನ್ನು ತೆರೆದು ರಾಷ್ಟ್ರಪ್ರೇಮದ ಜಾಗೃತಿಯನ್ನು ಮಾಡಲು ತೀರ್ಮಾನಿಸಲಾಗಿದೆ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು