• Home
  • »
  • News
  • »
  • mangaluru
  • »
  • Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!

Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಡಿಕೆ ಬೆಳೆಗಾರರಿಗೆ ಇದೀಗ ಎಲೆಚುಕ್ಕಿ ರೋಗದ ಬಾಧೆ ಎದುರಾಗಿದೆ. ಅಡಿಕೆ ಗಿಡಗಳಿಗೆ ಮದ್ದು ಸಿಂಪಡಣೆ ಮಾಡಲು ಸರಿಯಾದ ಸಮಯದಲ್ಲಿ ಕಾರ್ಮಿಕರು ಸಿಗದ ಕಾರಣ ಬೆಳೆಗಾರ ದ್ರೋನ್​ ಮೊರೆ ಹೋಗಿದ್ದಾನೆ.

  • Share this:

    ಪುತ್ತೂರು: ವಿಶಾಲ ಅಡಿಕೆ ತೋಟ, ಹಸಿರು ಮರಗಳ ನಡುವೆ ಸುಯ್ ಅಂತ ಅತ್ತಿಂದಿತ್ತ ಹಾರಾಡ್ತಿರೋ ಡ್ರೋನ್! ಅರೇ,  ಏನಿದು ಅಡಿಕೆ ತೊಟದಲ್ಲಿ ಈ ಡ್ರೋನ್ (Arecanut Farmers Using Drone) ಮಾಡ್ತಿರೋದಾದ್ರೂ ಏನು ಅಂದ್ಕೊಂಡ್ರಾ? ಉತ್ರ ನಾವ್ ಹೇಳ್ತೀವಿ ನೋಡಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada News)  ಇದೀಗ ಅಡಿಕೆಗೆ ಎಲೆಚುಕ್ಕಿ ರೋಗ ಅಡಿಕೆ (Arecanut Farmers Problem) ಬೆಳೆಗಾರರನ್ನು ಕಂಗೆಡಿಸಿದೆ. ಚಿಕ್ಕ ಅಡಿಕೆ ಗಿಡಗಳಿಂದ ಹಿಡಿದು ದೊಡ್ಡ ಅಡಿಕೆ ಮರದವರೆಗೆ ಈ ಎಲೆಚುಕ್ಕಿ ರೋಗ ಆವರಿಸಿದೆ. ಅಡಿಕೆ ಕೃಷಿಕರು ಭಾರೀ ನಷ್ಟ ಅನುಭವಿಸ್ತಿದ್ದಾರೆ. ಮಾರಕ ಎಲೆಚುಕ್ಕಿ ರೋಗ ತಡೆಯೋಕೆ ಕೃಷಿಕರು ಕಂಡುಕೊಂಡ ಉಪಾಯವೇ ಈ ಡ್ರೋನ್!

    ಎಲೆಚುಕ್ಕಿ ರೋಗಕ್ಕೆ ಶಿಲೀಂದ್ರಗಳು ಕಾರಣವಾಗಿದ್ದು, ಶಿಲೀಂದ್ರ ನಾಶಕ ರಾಸಾಯನಿಕವನ್ನು ಸಿಂಪಡಿಸಲು ಕೃಷಿಕರು ಮುಂದಾಗಿದ್ದಾರೆ. ಕೃಷಿ ಕಾರ್ಮಿಕರ ಬದಲಿಗೆ ಡ್ರೋನ್ ಬಳಸಿ ಔಷಧ ಸಿಂಪಡಣೆ ಮಾಡಲಾಗ್ತಿದೆ.


    ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲೂ ಡ್ರೋನ್ ಬಳಕೆ
    ಈಗಾಗಲೇ ಸುಳ್ಯ ತಾಲೂಕಿನ ಕಳಂಜದ ಕೋಟೆಮುಂಡುಗಾರಿನಲ್ಲಿ ಮೊದಲ ಬಾರಿಗೆ ಔಷಧಿ ಸಿಂಪಡಣೆ ಕಾರ್ಯ ನಡೆದಿದೆ. ಅಡಿಕೆ ಎಲೆಚುಕ್ಕಿ ರೋಗಕ್ಕೆ ಔಷಧಿ ಸಿಂಪಡಣೆಗೆ ಕಾರ್ಮಿಕರ ಕೊರತೆಯಿಂದ ಈ ಭಾಗದ ಕೃಷಿಕರು ಡ್ರೋನ್ ಮೊರೆ ಹೋಗಿದ್ದಾರೆ. ಶೃಂಗೇರಿ, ತೀರ್ಥಹಳ್ಳಿ ಮೊದಲಾದ ಕಡೆಗಳಲ್ಲಿ ಕೂಡಾ ಎಲೆಚುಕ್ಕಿ ರೋಗಕ್ಕೆ ಡ್ರೋನ್ ಮೂಲಕ ಔಷಧ ಸಿಂಪಡಣೆ ಮಾಡಲಾಗ್ತಿದೆ.



    ಇದನ್ನೂ ಓದಿ: Dakshina Kannada: ಅಡಿಕೆ, ತೆಂಗು ಕೊಯ್ಯೋದು ಇನ್ಮೇಲೆ ಸುಲಭ, ಕೃಷಿ ಕಾರ್ಮಿಕರ ಕೊರತೆಗೆ ರೈತರಿಂದಲೇ ಪರಿಹಾರ!


    ಬೆಂಗಳೂರು ಮೂಲದ ಮಲ್ಟಿಪ್ಲೆಕ್ಸ್ .ಎಂ. ಡ್ರೋನ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಡಿಕೆ ಗಿಡಗಳಿಗೆ ಮದ್ದು ಸಿಂಪಡಿಸೋ ಕಾರ್ಯವನ್ನು ಮಾಡ್ತಿದೆ. ಕಾರ್ಮಿಕರು ಮಾಡಲು ಕಷ್ಟಸಾಧ್ಯವಾದ ಮರಗಳ ತುದಿಗೂ ಅನಾಯಾಸವಾಗಿ ಡ್ರೋನ್​ಗಳು ಮದ್ದು ಸಿಂಪಡಿಸುತ್ತಿರುವುದರಿಂದ ರೋಗಬಾಧಕ ಶಿಲೀಂದ್ರಗಳ ನಿಯಂತ್ರಣಕ್ಕೂ ಪರಿಣಾಮಕಾರಿಯಾಗಲಿದೆ.


    ಎಷ್ಟು ಚಾರ್ಜ್?
    ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಡ್ರೋನ್​ನ ಕಾರ್ಯಕ್ಷಮತೆಯನ್ನು ವೀಕ್ಷಿಸಿ ಖುಷಿಗೊಂಡಿದ್ದಾರೆ. ಹೆಚ್ಚಿನ ಕೃಷಿಕರು ಡ್ರೋನ್ ಮೂಲಕ ಮದ್ದು ಸಿಂಪಡಣೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಗಂಟೆಗೆ 700 ರೂಪಾಯಿಯಲ್ಲಿ, 1 ಎಕರೆ ಅಡಿಕೆ ತೋಟಕ್ಕೆ ಕೇವಲ 20 ನಿಮಿಷದಲ್ಲಿ ಮದ್ದು ಸಿಂಪಡಿಸಬಹುದಾಗಿದೆ.


    ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ


    ಒಟ್ಟಾರೆ ಅಡಿಕೆ ತೋಟಕ್ಕೆ ಡ್ರೋನ್​ ಎಂಟ್ರಿ ಲೇಟ್ ಆಗಿದ್ರೂ ಲೇಟೆಸ್ಟ್ ಆಗಿರೋದು ಕೃಷಿಕರ ಖುಷಿಗೆ ಕಾರಣವಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು