ಮಂಗಳೂರು: ʼಕಿಂಗ್ ಫಿಶ್ʼ ಎಂದೇ ಕರೆಯಲ್ಪಡುವ ʼಅಂಜಲ್ʼ ಕರಾವಳಿಗರ (Best Fish In Coastal Karnataka) ಪ್ರತಿಷ್ಠಿತ ಸಮುದ್ರ ಆಹಾರ. ಅತ್ಯಂತ ರುಚಿಕರವಾದ ಈ ಮೀನು (Anjal Fish) ಬಾಯಲ್ಲಿ ನೀರೂರಿಸುವ ತಾಕತ್ತು ಹೊಂದಿದೆ. ಹೆಚ್ಚಾಗಿ ಇದನ್ನು ತವಾ ಫ್ರೈ ಮೂಲಕ ಉಣಬಡಿಸುವ ಬಾಣಸಿಗರು ಇದಕ್ಕೆ ಹಾಕುವ ಮಸಾಲೆಯಿಂದ ಇನ್ನಷ್ಟು ಹಾಟ್ ಹಾಟ್ ಮಾಡಿ ನೀಡಿದ್ರಂತೂ ಸಖತ್ ಟೇಸ್ಟಿ ಸವಿಯಬಹುದು. ಕರಾವಳಿಯಲ್ಲಿ ಪ್ರತಿಷ್ಠಿತರ ಶುಭ ಕಾರ್ಯಕ್ರಮಗಳಲ್ಲಿ ಅಂಜಲ್ ಮೀನಿಗೆ (Anjal Fish Speciality) ವಿಶಿಷ್ಟ ಸ್ಥಾನಮಾನವಿದೆ.
ಕಿಂಗ್ ಫಿಶ್ ಕರಾವಳಿಯ ಮೀನುಗಳಲ್ಲೇ ರಾಜನ ಸ್ಥಾನಮಾನ ಪಡೆದಿದೆ. ಇತ್ತೀಚೆಗೆ ಉಡುಪಿಯ ಉಚ್ಚಿಲದಲ್ಲಿ ನಡೆದ ಮೀನುಗಾರರ ಜೊತೆಗಿನ ಸಂವಾದದ ಸಮಯದಲ್ಲಿ ಮೀನುಗಾರ ಮಹಿಳೆಯೋರ್ವರು ಅಂಜಲ್ ಮೀನನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ನೀಡುವ ಮೂಲಕ ಅಂಜಲ್ ಮೀನು ದೇಶದ ಗಮನಸೆಳೆದಿತ್ತು.
ಬಹುತೇಕ ಕರಾವಳಿ ತೀರ ಹೊಂದಿದ ಭಾರತದ ರಾಜ್ಯಗಳಲ್ಲಿ ಈ ಅಂಜಲ್ ಮೀನಿನ ದರ್ಶನವಾಗುತ್ತೆ. ಇದರ ವಿಶಿಷ್ಟತೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಂಜಲ್ ಟೇಸ್ಟಿಗೆ ಸರಿಸಾಟಿಯಿಲ್ಲ
ಮಾಂಜಿ, ಸಿಗಡಿ, ಬೊಲಿಂಜಿರ್ (ಸಿಲ್ವರ್ ಫಿಶ್) ಇದೆಲ್ಲಕ್ಕೂ ಹೋಲಿಸಿದರೆ ಅಂಜಲ್ ಟೇಸ್ಟೇ ಬೇರೆ. ಅದಕ್ಕೇ ನೋಡಿ ಅಂಜಲ್ ಟೇಸ್ಟಿ ಸವಿದವರಿಗೆ ಬೇರೆ ಯಾವ ಮೀನಿನ ರುಚಿ ಹತ್ತದು. ಭಾರೀ ರುಚಿಕರವಾದ ಅಂಜಲ್ ಅನ್ನು ಬಹುತೇಕ ಮಸಾಲೆ ಬೆರೆಸಿ ತವಾ ಫ್ರೈ ಮಾಡಿಯೇ ಸವಿಯುತ್ತಾರೆ.
ಸಣ್ಣಪುಟ್ಟ ಹೋಟೆಲ್ಗಳಲ್ಲಿ ಸಿಗಲ್ಲ ಕಣ್ರೀ!
ಹಾಗಾಗಿ ಅಂಜಲ್ ಟೇಸ್ಟಿ ಮಿಕ್ಕೆಲ್ಲ ಮೀನುಗಳಿಗಿಂತ ಹೆಚ್ಚು. ದೊಡ್ಡಗಾತ್ರದ ಅಂಜಲ್ ಅಂಗೈ ಗಾತ್ರದಲ್ಲಿ ಐಸ್ ಕ್ರೀಂನಂತೆ ತುಂಡರಿಸಿ ಮಸಾಲೆ ಬೆರೆಸುತ್ತಾರೆ. ಅಲ್ಲಿಂದ ಬಿಸಿ ಬಿಸಿ ತವಾದಲ್ಲಿ ಸ್ವಲ್ಪ ಎಣ್ಣೆ ಮುಟ್ಟಿಸಿ ಅದನ್ನ ಕಾಯಿಸುತ್ತಾರೆ. ಈ ಮೀನಿಗೆ ರೇಟು ತುಸು ಜಾಸ್ತಿಯಾದ್ರು ಟೇಸ್ಟ್ ಮುಂದೆ ಅದೆಂತಹ ರೇಟು ಅಂತಾನೇ ಮೀನುಪ್ರಿಯರು ಇದನ್ನು ಕೊಂಡೊಯ್ಯುತ್ತಾರೆ. ಇನ್ನು ಅಂಜಲ್ ಫಿಶ್ ಫ್ರೈಗಳೆಲ್ಲ ಸಣ್ಣ ಪುಟ್ಟ ಹೋಟೆಲ್ಗಳಲ್ಲಿ ಸಿಗದು. ಅದೇನಿದ್ರೂ ಸ್ಟಾರ್ ಹೊಟೇಲ್ ಗಳಲ್ಲೇ ಸಿಗುವ ಮೀನು ಖಾದ್ಯವಾಗಿದೆ.
ರೇಟು ಹೇಗಿರುತ್ತೆ? ವೇಟ್ ಎಷ್ಟಿರುತ್ತೆ?
ಸಾಮಾನ್ಯವಾಗಿ ಅಂಜಲ್ ರೇಟು ಅದರ ತೂಕದ ಮೇಲೆ ನಿರ್ಧರಿತವಾಗುತ್ತೆ. ಸಣ್ಣಪುಟ್ಟ ಅಂಜಲ್ ಇದ್ರೆ ರೇಟು ಕಡಿಮೆ ಇರುತ್ತೆ. ತೂಕ ಜಾಸ್ತಿಯಿದ್ರೆ ಅದ್ರ ರೇಟು ಡಬಲ್ ಇರುತ್ತೆ. ಪ್ರತೀ ಕೆಜಿ ಮೇಲೆ ಅದರ ರೇಟು ನಿರ್ಧರಿತವಾಗುತ್ತದೆ. ಆದರೂ ದೊಡ್ಡ ಗಾತ್ರದ ಮಿನುಗಳ ರೇಟು ಪ್ರತೀ ಕೆಜಿಗೂ ಹೆಚ್ಚಿರುತ್ತೆ. ಸಾಮಾನ್ಯವಾಗಿ ಅಂಜಲ್ ಸಣ್ಣ ಗಾತ್ರವೆಂದರೆ ಅರ್ಧದಿಂದ ಒಂದು ಕೆಜಿಯವರೆಗೆ ಸಿಕ್ಕರೆ, ದೊಡ್ಡ ಗಾತ್ರವೆಂದರೆ 10 ರಿಂದ 15 ಕೆಜಿ ವರೆಗೂ ತೂಗುತ್ತವೆ.
ಸಾಮಾನ್ಯವಾಗಿ ಇದನ್ನು ಮೀನುಗಾರಿಕೆ ಸಮಯದಲ್ಲಿ ಬಲೆ ಬೀಸಿದ ಸಮಯದಲ್ಲಿ ಮೀನುಗಾರರ ಬಲೆಗೆ ಬಿದ್ದು ಮಾರ್ಕೆಟ್ ಸೇರುತ್ತೆ. ಮಾರ್ಕೆಟ್ನಲ್ಲಿ ಉತ್ತಮ ರೇಟಿಗೆ ಬಿಕರಿಯಾಗುತ್ತೆ. ಇನ್ನುಳಿದಂತೆ ಅಂಜಲ್ ಸಿಕ್ಕರೆ ಬೋಟ್ ಮಾಲಿಕರು ಬೇರೆ ರಾಜ್ಯ, ವಿದೇಶಗಳಿಗೂ ರಫ್ತು ಮಾಡಲು ಹೆಚ್ಚುವ ಉತ್ಸುಕತೆ ತೋರಿಸುತ್ತಾರೆ.
ಇದನ್ನೂ ಓದಿ: Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!
ರೇಟು ಹೇಗಿರುತ್ತೆ?
ಅಂಜಲ್ ರೇಟು ಮೊದಲೇ ಹೇಳಿದ ಹಾಗೆ ಅದರ ತೂಕದ ಮೇಲೆ ನಿರ್ಧರಿತವಾಗುತ್ತೆ. ಹಾಲಿ ಮಾರುಕಟ್ಟೆ ದರದ ಪ್ರಕಾರ ಅಂಜಲ್ ಪ್ರತಿ ಕೆಜಿಗೆ 700 ರೂ. ಇದ್ದು, ಸೀಸನ್ನಲ್ಲಿ ಒಂದು ಸಾವಿರದವರೆಗೂ ಹೋಗುತ್ತವೆ. ಇನ್ನು ಸೀಸನ್ ಅಲ್ಲದೇ ಇರುವ ಟೈಂ ಅಲ್ಲಿ 500 ರೂ. ಗೂ ಇಳಿಕೆ ಕಾಣುತ್ತೆ. ಯಾವಾಗ ಅಂಜಲ್ ದರ ಕರಾವಳಿಯಲ್ಲಿ ಕುಸಿಯುತ್ತೋ ಆಗ ಎಲ್ಲಿ ಹೆಚ್ಚಿನ ರೇಟು ಸಿಗುತ್ತೆ ಅಲ್ಲಿಗೆ ಮಾರಾಟ ಮಾಡಲಾಗುತ್ತೆ. ನೆರೆಯ ರಾಜ್ಯದಲ್ಲಿ ಉತ್ತಮ ರೇಟು ಸಿಕ್ಕರೆ ಅದನ್ನು ಅಲ್ಲಿ ರಫ್ತು ಮಾಡಲಾಗುತ್ತೆ. ಇನ್ನು ಗಲ್ಫ್ ರಾಷ್ಟ್ರಗಳು ಸೇರಿದಂತೆ ಏಷ್ಯಾದ ಬಹುತೇಕ ರಾಷ್ಟ್ರಗಳಿಗೆ ಇಲ್ಲಿನ ಅಂಜಲ್ ರಫ್ತಾಗುವುದು ವಿಶೇಷ.
ಇದನ್ನೂ ಓದಿ: Kappa Rotti Recipe: ಬೆಳಗಿನ ತಿಂಡಿಗೆ ಮಣ್ಣಿನ ಹಂಚಿನ ಕಪ್ಪರೊಟ್ಟಿ ಮಾಡಿ, ರೆಸಿಪಿ ಇಲ್ಲಿದೆ
ಪ್ರತಿಷ್ಠಿತ ಮೀನು
ಅಂಜಲ್ ಅಥವಾ ಕಿಂಗ್ ಫಿಶ್ ಕರಾವಳಿಗರ ಪಾಲಿನ ಪ್ರತಿಷ್ಠಿತ ಮೀನು. ಅಂಜಲ್ ಇತ್ತು ಅಂದ್ರೆ ಅಂತಹ ಫಂಕ್ಷನ್ನಲ್ಲಿ ಚಿಕನ್, ಮಟನ್ ಲೆಕ್ಕಕ್ಕಿರದು! ಅಷ್ಟರ ಮಟ್ಟಿಗೆ ಅಂಜಲ್ ಕರಾವಳಿಯಲ್ಲಿ ಮೋಡಿ ಮಾಡಿದೆ.
ಆದರೆ ಸಾಮಾನ್ಯ ಹೋಟೆಲ್ಗಳಲ್ಲಿ ಈ ಅಂಜಲ್ ಟೇಸ್ಟ್ ನೋಡಲು ಸಿಗದು. ಹಾಗಾಗಿ ಮಂಗಳೂರು ಹಾಗೂ ಉಡುಪಿಯ ಪ್ರತಿಷ್ಠಿತ ಮೀನು ಊಟದ ಹೋಟೆಲ್ಗಳಿಗೆ ತೆರಳಿದರೆ ಅಂಜಲ್ ಟೇಸ್ಟ್ ನೋಡಬಹುದು. ಅಥವಾ ಸ್ಟಾರ್ ಹೊಟೇಲ್ ಗಳನ್ನ ಅರಸಿದರೆ ಅಷ್ಟೇ ಈ ಅಂಜಲ್ ರುಚಿ ಸವಿಯಬಹುದು. ಒಮ್ಮೆ ಅಂಜಲ್ ರುಚಿ ಸವಿದರೆ ಮಾತ್ರ ಅಂಜಲ್ ಯಾಕೆ ಅಷ್ಟೊಂದು ಫೇಮಸ್, ಅಷ್ಟೊಂದು ಕಾಸ್ಟ್ಲಿ ಅನ್ನೋದು ಗೊತ್ತಾಗುತ್ತೆ.
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ