ದಕ್ಷಿಣ ಕನ್ನಡ: ಇದೇನಪ್ಪ! ರಾತ್ರೋ ರಾತ್ರಿ ಸರ್ಜಿಕಲ್ ಸ್ಟ್ರೈಕ್ ಗೆ ಇಳಿದಿದ್ದಾರೆ ನಮ್ ಯೋಧರು! ಹೌದು, ಇದೊಂಥರಾ ಉರಗ ರಕ್ಷಕರ ಪಾಲಿನ ಸರ್ಜಿಕಲ್ ಸ್ಟ್ರೈಕೇ ಸರಿ. ಅದಾಗಲೇ ಕತ್ತಲು ಆವರಿಸಿದ್ರೂ ಬಾವಿಗೇನೆ ಬಲ್ಬ್ ಅಳವಡಿಸಿ ನಡೆಸಿದ್ರು ನೋಡಿ ಪೈಥಾನ್ ಆಪರೇಷನ್. ಅದು ಒಂದೆರಡು ಹೆಬ್ಬಾವು ಅಂದ್ಕೊಂಡ್ರಾ? ಅಲ್ವೇ ಅಲ್ಲ, ಜೋಡಿ ಜೋಡಿ ಹೆಬ್ಬಾವುಗಳು (Python) ಉರಗ ರಕ್ಷಕರ ಕಣ್ಣಿಗೆ ಕಾಣಬೇಕೇ? ಹಾಗಿದ್ರೆ ಈ ತಡರಾತ್ರಿ ಕಾರ್ಯಾಚರಣೆ ಹೇಗಿತ್ತು? ಆ ಭಯಂಕರ ಜೋಡಿ ಹೆಬ್ಬಾವುಗಳು (Python Operation) ಹೇಗಿದ್ವು ಅನ್ನೋದನ್ನ ಹೇಳ್ತೀವಿ ನೋಡಿ.
ಬಾವಿಯಲ್ಲಿ ಸಿಕ್ಕಾಕಿಕೊಂಡ ಪೈಥಾನ್
ಯೆಸ್, ಮಂಗಳೂರಿನ ಕೊಟ್ಟಾರ ಎಂಬಲ್ಲಿ ನಡೆದ ಇದು ಉರಗ ರಕ್ಷಕರ ತಂಡವೊಂದು ನಡೆಸಿದ ಪೈಥಾನ್ ಆಪರೇಷನ್ ಇದು. ಹೀಗೆ ರಾತ್ರೋ ರಾತ್ರಿ ಬಾವಿಗಿಳಿದು ಕಂಡೋರಿಗೆ ಕಣ್ಣಿಗೆ ಬಿದ್ದಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಹೆಬ್ಬಾವುಗಳು. ಹಾವುಗಳ ಮೇಟಿಂಗ್ ಸೀಸನ್ ಆಗಿದ್ರಿಂದ ಈ ಹೆಬ್ಬಾವುಗಳು ಪಾಳು ಬಾವಿ ಸೇರಿದ್ವು. ಆದ್ರೆ ಹೋಗೋದಕ್ಕೇನೋ ಹೋಗಿದೆ ಆದ್ರೆ ಪಾಳುಬಾವಿಯಿಂದ ಹೊರ ಬರಲಾಗದೆ ಪರದಾಡುವ ಪರಿಸ್ಥಿತಿ ಹೆಬ್ಬಾವುಗಳಿಗೆ ಎದುರಾಗಿತ್ತು.
ನೇಚರ್ ಲವರ್ಸ್ ತಂಡದ ಕಾರ್ಯಾಚರಣೆ
ಇದನ್ನ ಅರಿತ ಮಂಗಳೂರಿನ ನೇಚರ್ ಲವರ್ಸ್ ತಂಡದ ಸದಸ್ಯ ಭುವನ್, ತಂಡದ ಇನ್ನೋರ್ವ ಅನುಭವಿ ಸದಸ್ಯ ಅಜಯ್ ಅವರ ಸಮ್ಮುಖದಲ್ಲಿ ನೇರ ಕಾರ್ಯಾಚರಣೆಗೆ ಇಳಿದಿದ್ದಾರೆ.
ಜನರೇಟರ್ ತಂದು ಕೃತಕ ಬೆಳಕಿನ ವ್ಯವಸ್ಥೆಯ ಮೂಲಕ ಸತತ ಮೂರು ಗಂಟೆಗಳ ಕಾಲ ಬಾವಿಯೊಳಗೆ ಇಳಿದು ನಾಲ್ಕೂ ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಗುಂಪಿನಲ್ಲಿದ್ದ ನಾಲ್ಕು ಹಾವುಗಳಲ್ಲಿ ಹೆಣ್ಣು ಹೆಬ್ಬಾವು 8 ರಿಂದ 9 ಅಡಿ ಉದ್ದವಿದ್ದು, ಇಳಿದ ಹಾವುಗಳೂ 8 ಅಡಿ ಉದ್ದವಿತ್ತು.
ಹೀಗಿತ್ತು ಪೈಥಾನ್ ಆಪರೇಷನ್!
ಕತ್ತಲು ಆವರಿಸಿದ್ದರೂ ಏಣಿ ಮೂಲಕ ಬಾವಿಗಿಳಿದ ಹಾವು ರಕ್ಷಕರ ತಂಡ ಒಂದೊಂದೇ ಹಾವುಗಳನ್ನು ಗೋಣಿ ಚೀಲಗಳಲ್ಲಿ ಹಾಕಿ ಹಗ್ಗದ ಸಹಾಯದಲ್ಲಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಈ ಮೂಲಕ ಈ ಯುವಕರ ಕಾರ್ಯ ಸ್ಥಳೀಯ ಮೆಚ್ಚುಗೆಗೂ ಪಾತ್ರವಾಯಿತು. ಮೇಟಿಂಗ್ ಗೆ ಹೋಗಿ ಪೇಚಿಗೆ ಸಿಲುಕಿದ್ದ ಹೆಬ್ಬಾವುಗಳು ಕೊನೆಗೂ ಸೇಫ್ ಆಗಿ ಕಾಡು ಸೇರಿದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ