ಮಣ್ಣಿನಡಿ ಪುರಾತನ ಶಿವಲಿಂಗ (Shiva Linga) ಪತ್ತೆಯಾದ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಬೆಳ್ತಂಗಡಿಯ ಉಜಿರೆ (Ujire) ಸಮೀಪದ ಪೆರ್ಲ ಎಂಬಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಈ ಶಿವಲಿಂಗ ಸುಮಾರು 1 ಸಾವಿರ ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಶಿವಲಿಂಗವಂತೆ. ಕೆಲವು ವರ್ಷಗಳಿಂದ ಯಾವುದೇ ಪೂಜೆ ಪುನಸ್ಕಾರ ಇಲ್ಲದ ದೇವಸ್ಥಾನವೊಂದರಲ್ಲಿ (Old Temple) ಶಿವಲಿಂಗ ಪತ್ತೆಯಾಗಿದೆ.
ಕಳೆದ ಕೆಲವು ಸಮಯದಿಂದ ಗ್ರಾಮಸ್ಥರಿಗೆ ಅನಾರೋಗ್ಯ ಮತ್ತು ಇತರ ಸಮಸ್ಯೆಗಳು ಎದುರಾದ ಅನುಭವ ಆಗ್ತಿತ್ತಂತೆ. ಹೀಗಾಗಿ ಗ್ರಾಮದ ಜನರು ದೈವಜ್ಞರ ಮೂಲಕ ಅಷ್ಟಮಂಗಲ ಪ್ರಶ್ನೆ ಇಟ್ಟಿದ್ದಾರೆ.
ಇದನ್ನೂ ಓದಿ: Jodukare Kambala: ರಣ ರೋಚಕ ಜೋಡುಕರೆ ಕಂಬಳ, ಕುದುರೆಗಳೂ ನಾಚುವಂತೆ ಓಡಿದ ಕೋಣಗಳು!
ಅಷ್ಟಮಂಗಲದಲ್ಲಿ ಸಿಕ್ತು ಅಚ್ಚರಿಯ ಉತ್ತರ!
ಅಷ್ಟಮಂಗಲದಲ್ಲಿ ಸಮೀಪದ ಪಾಳುಬಿದ್ದ ದೇವಾಲಯದ ಜಾಗದಲ್ಲಿ ಶಿವಲಿಂಗವಿದೆ. ಗ್ರಾಮಸ್ಥರಿಗೆ ಈ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು ಎಂಬ ಉತ್ತರ ಪ್ರಶ್ನೆಯಲ್ಲಿ ಸಿಕ್ಕಿದೆ.
ಇದನ್ನೂ ಓದಿ: Special Jaggery: ಆಲೆಮನೆಯೆಂಬ ಮಲೆನಾಡಿನ ಸವಿಮನೆ! ನೀವೂ ರುಚಿ ಸವಿದುನೋಡಿ
ಮಣ್ಣು ಅಗೆದಾಗ ಪತ್ತೆಯಾಯ್ತು ಅಚ್ಚರಿ!
ಗ್ರಾಮಸ್ಥರು ಅಷ್ಟಮಂಗಲದ ಪ್ರಕಾರ ಆ ಜಾಗಕ್ಕೆ ತೆರಳಿ ಆ ಜಾಗದ ಮಣ್ಣನ್ನು ಅಗೆದಿದ್ದಾರೆ. ಆಗಲೇ ಸಿಕ್ಕಿತು ನೋಡಿ ಪುರಾತನ ಶಿವಲಿಂಗ! ನೆರೆದಿದ್ದ ಜನರೆಲ್ಲರೂ ಭಕ್ತಿಯಿಂದ ಶಿವನಲಿಂಗವನ್ನು ನೋಡಿ ಕೈಮುಗಿದಿದ್ದಾರೆ. ಸದ್ಯ ಈ ಘಟನೆ ಸ್ಥಳಿಯರಲ್ಲಿ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ