ಕಣ್ಮನ ಸೆಳೆಯುವ ಚಿತ್ರಗಳು, ಬಂಗಾರದ ಬಣ್ಣಗಳೇ ಈ ಚಿತ್ರದ ಸರ್ವಸ್ವ. ಪ್ರತಿ ಚಿತ್ರಗಳಲ್ಲೂ ಬಂಗಾರದ ಹೊಳಪು! ಈ ಚಿತ್ರಗಳಲ್ಲಿ ಕಾಣಬಹುದಾದ ವಿಶೇಷತೆ. ಸಾಮಾನ್ಯವಾಗಿ ಚಿತ್ರಗಳೆಂದರೆ ತಟ್ಟನೆ ಕಣ್ಮುಂದೆ ಬರುವಂತದ್ದು ಬಣ್ಣಗಳು. ಅವಕ್ಕೆ ತಕ್ಕಂತೆ ಎಳೆದ ರೇಖೆಗಳು. ಬಣ್ಣಗಳನ್ನೇ ಎರಚಿ ಬಿಡಿಸುವಂತ ಕಣ್ಮನ ಸೆಳೆಯುವ ಚಿತ್ರಗಳು. ಅದ್ರಲ್ಲೂ ಅಪರೂಪದ ಈ ಬಂಗಾರದ ಚಿತ್ರಗಳು (Golden Painting's) ಅತ್ಯಂತ ಆಕರ್ಷಣೀಯ. ಕರ್ನಾಟಕದ ಚಿತ್ರಕಲಾ ಪರಿಷತ್ (Karnataka Chitrakala Parishat) ನಡೆಸ್ತಿರೋ ಅಪರೂಪದ ಚಿತ್ರಗಳನ್ನ ಮುನ್ನೆಲೆಗ ತರೋ ಪ್ರಯತ್ನಕ್ಕೆ ಆಳ್ವಾಸ್ನಲ್ಲಿ (Alva's College) ನಡೆಯುತ್ತಿರೋ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ (International Scout And Guide Cultural Jamboree) ಸಾಕ್ಷಿಯಾಯ್ತು.
ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಕುಸುರಿಯಿಂದ ರಚಿಸಲಾದ ಬಂಗಾರದ ಚಿತ್ರಗಳು ನೋಡುಗರ ಕಣ್ಮನ ಸೆಳೆದವು. ಯಾವುದೇ ಅಚ್ಚು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನ ಬಳಸದ ಈ ಕಲಾಕೃತಿಗಳು ಕಲಾರಸಿಕರನ್ನ ಮೈಸೂರು ಸಂಸ್ಥಾನಕ್ಕೆ ಎಳೆದೊಯ್ದವು! ಐವತ್ತು ಸಾವಿರದಿಂದ ಲಕ್ಷಕ್ಕೂ ಹೆಚ್ಚು ಹಣಕ್ಕೆ ಮಾರಾಟವಾಗೋ ಈ ಕಲಾಕೃತಿಗಳನ್ನ ರಚಿಸೋಕೆ ಬರೋಬ್ಬರಿ 3 ತಿಂಗಳಾದ್ರೂ ಬೇಕಂತೆ.
ಇದನ್ನೂ ಓದಿ: Yakshagana: ಯಕ್ಷಪ್ರೇಮಿಗಳೇ ಇಲ್ಲಿ ಕೇಳಿ, ಸುಪ್ರೀಂ ಕೋರ್ಟ್ ಆದೇಶಕ್ಕೂ ಸಿಕ್ತು ವಿನಾಯಿತಿ
ಮೈಸೂರಿನ ಬೊಂಬೆ ರಂಗಮಂದಿರದಿಂದಲೂ ಪ್ರದರ್ಶನ
ಕಾರ್ಟೂನ್, ಅನಿಮೇಟೆಡ್ ಚಿತ್ರಗಳಿಂದಾಗಿ ಮರೆತೇಹೋಗಿದ್ದ ತೊಗಲು ಬೊಂಬೆಗಳು, ಸೂತ್ರದ ಬೊಂಬೆಗಳೂ ಇಲ್ಲಿ ಪ್ರದರ್ಶನಕ್ಕಿದ್ದವು. ಮೈಸೂರಿನ ಬೊಂಬೆ ರಂಗಮಂದಿರದ ಸುಮಾರು ಇಪ್ಪತ್ತೆಂಟು ಬೊಂಬೆಗಳನ್ನ ಪ್ರದರ್ಶನಕ್ಕಿಟ್ಟಿದ್ದು ಆಧುನಿಕ ಜಗತ್ತಿನಲ್ಲಿ ಮರೆತೆಹೋದ ಕಲೆಯನ್ನು ಮತ್ತೆ ಪರಿಚಿಯಿಸುವ ಪ್ರಯತ್ನಕ್ಕೆ ಮುಂದಾಗಿತ್ತು.
ಇದನ್ನೂ ಓದಿ: Dakshina Kannada: ಭಾರತದಲ್ಲೇ ಮೊದಲ ಬಾರಿಗೆ ಆಳ್ವಾಸ್ನಲ್ಲಿ ಅಂತರಾಷ್ಟ್ರೀಯ ಜಾಂಬೂರಿ, ಇಲ್ಲಿದೆ ವಿವರ
ಆಳ್ವಾಸ್ ಜಾಂಬೂರಿಯ ಆಕರ್ಷಣೆಯೇ ಇದು!
ಒಟ್ಟಿನಲ್ಲಿ ಬೊಂಬೆಗಳ ಲೋಕ, ಬಂಗಾರದ ಚಿತ್ರಗಳು ಆಳ್ವಾಸ್ ಜಾಂಬೂರಿಯಲ್ಲಿ ಸ್ಥಾನ ಪಡೆದಿದೆ. ಜನಸಾಮಾನ್ಯರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯ್ತು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ