Dakshina Kannada: ಈ ಗಣಪನಿಗೆ ಪ್ರಕೃತಿಯೇ ಮಾಡುತ್ತೆ ನಿತ್ಯ ನಿರಂತರ ಅಭಿಷೇಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ದೇವಸ್ಥಾನದ ತುಂಬೆಲ್ಲ ದೊಡ್ಡ ದೊಡ್ಡ ಬಂಡೆಗಳೇ ತುಂಬಿ ಹೋಗಿದ್ದು ಈ ಬಂಡೆಗಳನ್ನ ಸ್ಥಳೀಯರು ‘ಆನೆ ಬಂಡೆ‘ ಎಂದೇ ಕರೆಯುತ್ತಾರೆ.

  • News18 Kannada
  • 5-MIN READ
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಸುತ್ತಲೂ ಬಂಡೆಗಳ ಆಲಯ. ಸದಾ ಜಿನುಗುತ್ತಿರುವ ತೊರೆಯ ಕಳೆಗೆ ಪುಟ್ಟದಾದ ಗಣಪ. ಇಲ್ಲಿ ಪ್ರತಿದಿನವೂ ಪ್ರಥಮ ಪೂಜಿತನಿಗೆ (Ganapathi Temple) ನಿಸರ್ಗದ ಅಭಿಷೇಕ. ಬೇಡಿ ಬಂದ ಭಕ್ತರ ಇಷ್ಟಾರ್ಥ ಈಡೇರಿಸುವ ಈ ಕ್ಷೇತ್ರವಾದ್ರೂ (Aane Bande Ganapathi Temple) ಯಾವ್ದು ಅಂತೀರಾ? ಹೇಳ್ತೀವಿ ನೋಡಿ.


    ಪ್ರಕೃತಿಯ ಮಡಿಲಲ್ಲಿ ಸದಾ ಕಾಲ ಪ್ರಕೃತಿ ಮಾತೆಯಿಂದಲೇ ಅಭಿಷೇಕಗೊಳ್ಳುತ್ತಿರುವ ಗಣಪ, ಬಂಡೆ-ಕಲ್ಲುಗಳಿಗೆ ತಾಗಿಕೊಂಡಿರುವ ಸೋಮನಾಥನ ಮಂದಿರ. ಅಷ್ಟೇ ಅಲ್ಲ, ನಾಗ ಸಾನಿಧ್ಯವನ್ನೂ ಹೊಂದಿರುವ ಈ ಪುಣ್ಯಸ್ಥಳ ಇರೋದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶಿರ್ತಾಡಿ ಧರೆಗುಡ್ಡೆ ಎಂಬ ಪುಟ್ಟ ಪ್ರದೇಶದಲ್ಲಿ.


    ದಿನದ 24 ಗಂಟೆಯೂ ಗಣಪತಿಗೆ ನಿರಂತರ ಅಭಿಷೇಕ
    ಇಲ್ಲಿ ಹರಿಯುವ ತೊರೆ, ಬಂಡೆ-ಕಲ್ಲುಗಳ ಮಧ್ಯೆ ವಿಘ್ನ ವಿನಾಯಕನನ್ನ ಕಾಣಬಹುದಾಗಿದೆ. ಇಲ್ಲಿ ದಿನದ 24 ಗಂಟೆಯೂ ಗಣಪತಿ ವಿಗ್ರಹಕ್ಕೆ ಹರಿಯುವ ತೊರೆಯಿಂದ ನಿರಂತರ ಅಭಿಷೇಕ ನಡೆಯುತ್ತಿರುತ್ತದೆ. ಜೊತೆಗೆ ಸೋಮನಾಥ ದೇವರೂ ಇಲ್ಲಿದ್ದು, ನಾಗದೇವರೂ ಇವರೆಲ್ಲರ ಜೊತೆಗಿದ್ದಾನೆ.


    ಇದನ್ನೂ ಓದಿ: Koti Raj: 1,700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್!




    ಎಲ್ಲಿದೆ ಈ ದೇಗುಲ?
    ಶಿರ್ತಾಡಿಯಿಂದ ಬೆಳುವಾಯಿ ರೋಡಿನಲ್ಲಿ ಕೂಗಳತೆ ದೂರ ಸಾಗಿದರೆ ಸಾಕು, ಈ ಪುಟ್ಟದಾದ ದೇವಸ್ಥಾನ ಕಾಣಬಹುದು. ಸುತ್ತಲೂ ಬಂಡೆ-ಕಲ್ಲುಗಳೇ ಹಾಸು ಹೊಕ್ಕಾಗಿರುವ ಈ ಪ್ರದೇಶದಲ್ಲಿ ತೊರೆಯ ನಡುವೆ ಈ ದೇಗುಲ ಕಾಣುವುದೇ ಒಂದು ಚೆಂದ.‘


    ಇದನ್ನೂ ಓದಿ: Dakshina Kannada: ಇದಪ್ಪಾ ಡೇರಿಂಗ್ ಅಂದ್ರೆ! ಹಿಂದೆ ಮುಂದೆ ನೋಡದೆ ಬಾವಿಗಿಳಿದು ಚಿರತೆ ರಕ್ಷಿಸಿದ್ರು ಯುವ ವೈದ್ಯೆ!


    43M4+5M4 Etala Shri Somanatheshwara Devasthana, Daregudde, Karnataka 574213
    ಈ ದೇವಸ್ಥಾನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಈ ದೇವಸ್ಥಾನದ ತುಂಬೆಲ್ಲ ದೊಡ್ಡ ದೊಡ್ಡ ಬಂಡೆಗಳೇ ತುಂಬಿ ಹೋಗಿದ್ದು ಈ ಬಂಡೆಗಳನ್ನ ಸ್ಥಳೀಯರು ‘ಆನೆ ಬಂಡೆ‘ ಎಂದೇ ಕರೆಯುತ್ತಾರೆ. ಒಟ್ಟಿನಲ್ಲಿ ಪ್ರಕೃತಿ ಮಡಿಲಲ್ಲಿ ನೋಡುವ ಈ ಪುಟ್ಟದಾದ ದೇಗುಲವು ಕಂಡರೆ ಮನಸ್ಸು ಧನ್ಯೋಸ್ಮಿ ಅನ್ನೋದರಲ್ಲಿ ಅಚ್ಚರಿಯಿಲ್ಲ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: