Mangaluru: ಹಿಜಾಬ್ ಗಲಾಟೆ ವೇಳೆ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದವ ಅರೆಸ್ಟ್! ಫೇಕ್‌ ಅಕೌಂಟ್ ಹಿಂದಿರೋದು ಇದೇ ಆರೋಪಿ

ತನಿಖೆಯ ದಿಕ್ಕು ತಪ್ಪಿಸಲು ವಿದೇಶಿ ಸಿಮ್ ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ.. ಈತ ಹಲವಾರು ಫೇಕ್ ಫೇಸ್ ಬುಕ್ ಅಕೌಂಟ್, ಟ್ವೀಟರ್ ಅಕೌಂಟ್ ಗಳನ್ನು ತೆರೆದು ಛತ್ರಪತಿ ಶಿವಾಜಿ  ಸೇರಿದಂತೆ ಮಹನೀಯರ ಫೋಟೋ ಗಳನ್ನು ತಿರುಚಿ ಅವಹೇಳನ ಮಾಡುತ್ತಿದ್ದ..

ಬಂಧಿತ ಆರೋಪಿ

ಬಂಧಿತ ಆರೋಪಿ

  • Share this:
ಮಂಗಳೂರು: ಹಿಜಾಬ್ ವಿವಾದದ (Hijab Controversy) ಗಲಾಟೆಯಲ್ಲಿ (Clash) ಮುಸ್ಲಿಂ (Mulsim) ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಮಂಗಳೂರಿನ ಕಾಲೇಜಿನ (Mangaluru College) ಎಬಿವಿಪಿ ವಿದ್ಯಾರ್ಥಿನಿಯನ್ನು (ABVP Student) ಶಿವಮೊಗ್ಗದ (Shivamogga) ಹರ್ಷ ಮಾದರಿಯಲ್ಲೇ ಹತ್ಯೆ (Murder) ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ಬೆದರಿಕೆ ಹಾಕಿದ್ದ ಯುವಕನನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Beltangady) ತಾಲೂಕಿನ ನಡ ಗ್ರಾಮದ ಹೊಕ್ಕಿಲ ಮನೆ ನಿವಾಸಿ 20ರ ಹರೆಯದ ಮಹಮ್ಮದ್ ಅಝ್ಮಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಗಲ್ಫ್ (Gulf) ರಾಷ್ಟ್ರದಿಂದ ಬಂದ ತನ್ನ  ಸಂಬಂಧಿಕನ ಮೊಬೈಲ್ ಸಿಮ್ (Mobile Sim) ಬಳಸಿ ಕೊಲೆ ಬೆದರಿಕೆ ಹಾಕಿರೋದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ

ಮಹಮ್ಮದ್ ಅಝ್ಮಲ್  20 ರ ಹರೆಯವನಾಗಿದ್ದು, ಮಂಗಳೂರಿನಲ್ಲಿ ಸೈಟ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ.. ಹಿಜಾಬ್ ಗಲಾಟೆಯಿಂದ ಕೋಮು ದ್ವೇಷವನ್ನು ಹೊಂದಿದ್ದ.. ಮಾರ್ಚ್ 4 ರಂದು ಮಂಗಳೂರಿನ ರಥಬೀದಿಯಲ್ಲಿರುವ ಡಾ.ಪಿ ದಯಾನಂದ ಪೈ,ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಐವರು ವಿದ್ಯಾರ್ಥಿನಿಯರು ಪ್ರತಿಭಟನೆಗಿಳಿದಿದ್ದರು.

ಈ ವೇಳೆ ಕಾಲೇಜಿನ ಎಬಿವಿಪಿ ವಿದ್ಯಾರ್ಥಿ ಸಾಯಿ ಸಂದೇಶ್ ಮತ್ತು ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಸಾಯಿ ಸಂದೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಮುಸ್ಲಿಂ ಯುವಕರಿಂದ ತೀವ್ರ ಆಕ್ಷೇಪಾರ್ಹ ಬರವಣಿಗೆಗಳು,ಕೊಲೆ ಬೆದರಿಕೆ ಪೋಸ್ಟ್ ಹಾಕಲಾಗಿತ್ತು..

ಸಾಯಿ ಸಂದೇಶ್‌ಗೆ ಅನೌನ್‌ ನಂಬರ್‌ನಿಂದ ಬೆದರಿಕೆ

ಇದಾದ ಬಳಿಕ ಸಾಯಿ ಸಂದೇಶ್ ಗೆ ಅನಾಮಧೇಯ ಕರೆಗಳು,ಮೆಸೇಜ್ ಗಳು ಬಂದಿತ್ತು.. ಶಿವಮೊಗ್ಗ ಹರ್ಷ ಮಾದರಿಯಲ್ಲೇ ಹತ್ಯೆ ಮಾಡಿ ಹೆಣವನ್ನು ಚರಂಡಿಯಲ್ಲಿ ಎಸೆಯುವ ಬಗ್ಗೆ ಪೋಸ್ಟ್ ಗಳನ್ನು ಹಾಕಲಾಗಿತ್ತು.. ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರಿನ ಸೆನ್ ಪೊಲೀಸರು ಸಂದೇಶ್ ಸಾಯಿ ಮೇಲೆ‌ ಕೊಲೆ ಬೆದರಿಕೆ ಹಾಕಿದ ಜಾಲವನ್ನು ಭೇಧಿಸಿದ್ದಾರೆ.

ಇದನ್ನೂ ಓದಿ: Siddalinga Swamy : ಮಸೀದಿಗಳಲ್ಲಿ ಮೈಕ್ ತೆರವು ಮಾಡದಿದ್ರೆ ಹನುಮಾನ್​ ಚಾಲೀಸಾ ಪಠಣೆ

ಸಂಬಂಧಿಕರ ನಂಬರ್‌ ಬಳಸಿ ಫೇಕ್ ಅಕೌಂಟ್

ಈ ಪ್ರಕರಣ ದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.. ಆರೋಪಿ ಮಹಮ್ಮದ್ ಅಝ್ಮಲ್ ವಿದೇಶದಲ್ಲಿದ್ದ ತನ್ನ ಸಂಬಂಧಿಕ ರೊಬ್ಬರ ಮೊಬೈಲ್ ಸಿಮ್ ಬಳಸಿ ಸಾಯಿ ಸಂದೇಶ್ ಗೆ ಕರೆ ಮಾಡಿ ಬೆದರಿಕೆ ನೀಡಿದ್ದ.. ಅಲ್ಲದೇ ನಾಲ್ಕು ಇನ್ಸ್ಟಾ ಗ್ರಾಮ್ ಫೇಕ್ ಅಕೌಂಟ್ ನ್ನು ತೆರೆದು ಧರ್ಮದ ಅವಹೇಳನ ಮಾಡಿದ್ದಾನೆ..

ತನಿಖೆಯ ದಿಕ್ಕು ತಪ್ಪಿಸಲು ವಿದೇಶಿ ಸಿಮ್ ಬಳಕೆ

ತನಿಖೆಯ ದಿಕ್ಕು ತಪ್ಪಿಸಲು ವಿದೇಶಿ ಸಿಮ್ ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ.. ಈತ ಹಲವಾರು ಫೇಕ್ ಫೇಸ್ ಬುಕ್ ಅಕೌಂಟ್, ಟ್ವೀಟರ್ ಅಕೌಂಟ್ ಗಳನ್ನು ತೆರೆದು ಛತ್ರಪತಿ ಶಿವಾಜಿ  ಸೇರಿದಂತೆ ಮಹನೀಯರ ಫೋಟೋ ಗಳನ್ನು ತಿರುಚಿ ಅವಹೇಳನ ಮಾಡುತ್ತಿದ್ದ.. ಸಾಕಷ್ಟು ವಾಟ್ಸಪ್ ಗ್ರೂಪ್ ಗಳಲ್ಲಿ ಸಕ್ರೀಯನಾಗಿ ಒಂದೂವರೆ ವರ್ಷಗಳಿಂದ ಧರ್ಮ ನಿಂದನೆಯ ಮೆಸೇಜ್ ಗಳನ್ನು ಕಳುಹಿಸುವ ಗೀಳು ಹೊಂದಿದ್ದ ಅಂತಾ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: B.C Nagesh: ಆಧಾರವಿಲ್ಲದ ಟಿಪ್ಪು ಸಂಗತಿಗಳಿಗೆ ಕೊಕ್; ಶಾಲಾ ಪಠ್ಯದಲ್ಲಿ ಭಗವದ್ಗೀತೆ, ಮಹಾಭಾರತ, ನೀತಿಪಾಠ ಅಳವಡಿಕೆ

ಹಿಂದೂಗಳ ಹೆಸರಿಟ್ಟುಕೊಂಡು ದಿಕ್ಕು ತಪ್ಪಿಸೋ ಯತ್ನ

ಈತ mari_gudi_5 ಎಂಬ ಇನ್ಸ್ಟಾ ಗ್ರಾಮ್ ಫೇಕ್ ಅಕೌಂಟ್ ತೆರೆದು ಹಿಂದೂ ಧರ್ಮ ನಿಂದನೆಯನ್ನು ಮಾಡುತ್ತಿದ್ದ..ಮಾರಿಗುಡಿ ಅಂತಾ ಹಿಂದೂ ಹೆಸರನ್ನಿಟ್ಟು ತನಿಖೆ ದಿಕ್ಕು ತಪ್ಪಿಸಲು ನೋಡಿದ್ದ..ಸಾಯಿ ಸಂದೇಶ್ ವಿರುದ್ಧ ಇದೇ ಅಕೌಂಟ್ ನಲ್ಲಿ ಅಸಭ್ಯವಾಗಿ ಚಿತ್ರಿಸಿ ಅವಹೇಳನ ಮಾಡಿದ್ದ ಅನ್ನೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Published by:Annappa Achari
First published: