ದಕ್ಷಿಣ ಕನ್ನಡ: ಇಡೀ ಸಭಾಂಗಣಕ್ಕೆ ಎರಡೇ ಎರಡು ಫ್ಯಾನು. ಹಾಗಂತ ಯಾವ್ ಸೆಕೆನೂ ಈ ಎರಡು ಫ್ಯಾನ್ (Fan) ಮುಂದೆ ಲೆಕ್ಕನೇ ಅಲ್ಲ. ಇನ್ನೇನಾದ್ರೂ ಈ ಫ್ಯಾನ್ ರೇಟ್ ಕೇಳಿದ್ರೆ ಮಾತ್ರ ಮೂಗಿನ ಮೇಲೆ ಬೆರಳಿಡ್ತೀರ! ಹಾಗಿದ್ರೆ ಈ ಫ್ಯಾನ್ಗಳ ರೇಟ್ ಏನು? ಇಷ್ಟು ದೊಡ್ಡ ಸಭಾಂಗಣಕ್ಕೆ ಈ ಪುಟ್ಟ ಫ್ಯಾನ್ ಸಾಕೇ? ಈ ಎಲ್ಲ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.
ಎಲ್ಲಿದೆ ಗೊತ್ತಾ ಈ ಫ್ಯಾನ್?
ಯೆಸ್, ನೂರಾರು ಜನ ಕೂರುವ ಇಷ್ಟೊಂದು ವಿಶಾಲವಾದ ಸಭಾಂಗಣಕ್ಕೆ ಪುಟ್ಟದಾದ ಎರಡೇ ಎರಡು ಫ್ಯಾನು ಹೊಂದಿರೋ ಈ ಸಭಾಂಗಣ ಇರೋದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ. ಆದ್ರೆ ಈ ಫ್ಯಾನ್ ರೇಟ್ ಕೇಳಿದ್ರೆ ಮಾತ್ರ ಮೈ ಬೆವರೋದು ಗ್ಯಾರಂಟಿ.
ಈ ಫ್ಯಾನ್ ಇದ್ರೆ ಸಾಕು, ತಂಪು ತಂಪು ಗಾಳಿ!
ನಿಜ, ಈ ಎರಡು ಫ್ಯಾನುಗಳು ನೊಡೋದಕ್ಕೆ ಪುಟ್ಟದಾದರೂ ಇದರ ರೇಟು ಮಾತ್ರ ಒಂದಕ್ಕೆ ಎಂಟು ಲಕ್ಷ ರೂಪಾಯಿ. ಆದ್ರೆ ಈ ಫ್ಯಾನ್ ಒಂದೇ ಇದ್ರೆ ಸಾಕು ಮಿಕ್ಕೆಲ್ಲ ಫ್ಯಾನ್ ಗಳನ್ನ ಮೀರಿಸಬಲ್ಲದು. ಇಡೀ ಸಭಾಂಗಣವನ್ನ ತಂಪು ತಂಪು ಮಾಡಬಲ್ಲದು.
ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಭವನದಲ್ಲಿ 1,200 ಆಸನದ ವ್ಯವಸ್ಥೆಯಿದೆ. ಅವರೆಲ್ಲರಿಗೂ ಈ ಪುಟ್ಟ ಫ್ಯಾನಿನಿಂದ ಬರೋ ಗಾಳಿ ಧಾರಾಳವಾಗಿ ಸಾಕಾಗುತ್ತಂತೆ.
ಇದನ್ನೂ ಓದಿ: Tree Bike In Dakshina Kannada: ಅಡಿಕೆ, ತೆಂಗು ಮಾತ್ರವಲ್ಲ, ಈ ಯಂತ್ರದಿಂದ ಸಲೀಸಾಗಿ ಎಲ್ಲಾ ಮರ ಏರಬಹುದು!
ಇಡೀ ಸಭಾಭವನದಲ್ಲಿ ಸುಯ್ ಅಂತ ಬೀಸುತ್ತೆ ಗಾಳಿ
ಈ ಫ್ಯಾನುಗಳು ಇಲ್ಲಿನ ಸೆಂಟರ್ ಆಫ್ ಅಟ್ರಾಕ್ಶನ್ ಆಗಿದ್ದು, ಎರಡು ಫ್ಯಾನ್ಗಳನ್ನ ಹಾಕಿದರೆ ಇಡೀ ಸಭೆ ತುಂಬಾ ಗಾಳಿಯೋ ಗಾಳಿ ಅನ್ನೋ ಹಾಗಾಗುತ್ತೆ. ರಾಜಕೀಯ ಮುತ್ಸದ್ದಿಯಾಗಿದ್ದ ಮಂಡ್ರುದೆ ಗುತ್ತಿನ ಅಮರನಾಥ್ ಶೆಟ್ಟಿ ಅವರ ನೆನಪಿನ ಕಟ್ಟಡವೂ ಇದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Dr Veerendra Heggade: ಪುಟ್ಟ ಬಾಲಕನ ಜೊತೆ ವೀರೇಂದ್ರ ಹೆಗ್ಗಡೆಯವರ ಕ್ರಿಕೆಟ್ ಆಟ! ವೈರಲ್ ವಿಡಿಯೋ ನೋಡಿ
ಒಟ್ಟಿನಲ್ಲಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೆ ಈ ಫ್ಯಾನ್ ಇದೆ ಅಂತಾರೆ ಸ್ಥಳೀಯರು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ