ಮಂಗಳೂರು: ಪಟ ಪಟ ಹಾರೋ ಗಾಳಿಪಟ ಹಾಡನ್ನ ನೀವು ಕೇಳಿರ್ತೀರ. ಗಾಳಿಯಲ್ಲಿ ತೇಲಾಡೋ ಚಿಕ್ಕ ಚಿಕ್ಕ ಬಾಂಗೋಚಿಗಳನ್ನ ನೋಡಿರ್ತೀರ. ಆದರೆ ಇಲ್ಲೊಬ್ಬರು ಬರೊಬ್ಬರಿ ಐವತ್ತು ಅಡಿ ಗಾಳಿಪಟ ತಯಾರ್ಸಿದಾರೆ! ಹೌದು, ಈ ಐವತ್ತು ಅಡಿ ಉದ್ದದ ಈ ಬಾಲಂಗೋಚಿಯನ್ನ ಒಂದಲ್ಲ ಎರಡಲ್ಲ, ಬರೋಬ್ಬರಿ ಮೂರು ತಿಂಗಳು ಕುಳಿತು ಮಂಗಳೂರಿನ (Mangaluru News) ದಿನೇಶ್ ಹೊಳ್ಳ (Dinesh Holla) ತಯಾರ್ಸಿದ್ದಾರೆ. ದೊಡ್ಡ ದೊಡ್ಡ ಗಾಳಿಪಟ ಡಿಸೈನ್ (Kite Design) ಮಾಡಿ ಫೇಮಸ್ ಆಗಿರೋ ಹೊಳ್ಳ ಅವರ ಈ ಗಾಳಿಪಟ ಈಗ ಆಕಾಶವನ್ನೇ ಬಾಚಿಕೊಂಡಿದೆ.
ಈ ಬೃಹತ್ ಗಾಳಿಪಟವನ್ನ ಆಳ್ವಾಸ್ ಜಾಂಬೂರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಆಳ್ವಾಸ್ ಕಾಲೇಜಿನ ಕಟ್ಟಡದ ಐದು ಅಂತಸ್ತುಗಳನ್ನೂ ಈ ಗಾಳಿಪಟ ಕವರ್ ಮಾಡುತ್ತೆ ಅನ್ನೋದು ವಿಶೇಷ. ಈ ಗಾಳಿಪಟ ಸಂಪೂರ್ಣ ಭಾರತೀಯ ಶೈಲಿಯಲ್ಲಿ ಮಾಡಲಾಗಿದ್ದು, ರಾಜಸ್ಥಾನದಿಂದ ಬಿದಿರುಗಳನ್ನ ತರಿಸಿಕೊಳ್ಳಲಾಗಿದೆಯಂತೆ!
ಇದನ್ನೂ ಓದಿ: Human Waste: ಹೊಲಸು ಎಂದು ಮೂಗು ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ಆದಾಯ ಗಳಿಸ್ತಿದೆ ದಕ್ಷಿಣ ಕನ್ನಡದ ಈ ಸಂಸ್ಥೆ!
ವಿವಿಧ ಸಂಸ್ಕೃತಿಗಳ ಅನಾವರಣ
ಈ ಗಾಳಿಪಟದಲ್ಲಿ, ತುಳುನಾಡಿನ ಸಂಸ್ಕೃತಿಗಳ ಪ್ರತೀಕವಾದ ನಾಗಬನ, ಯಕ್ಷಗಾನ, ಬೂತಕೋಲ, ಪಿಲಿನಲಿಕೆ ಸೇರಿದಂತೆ ಹನ್ನೊಂದು ಬಗೆಯ ಸಂಸ್ಕೃತಿಗಳನ್ನ ಚಿತ್ರಿಸಲಾಗಿದೆ. ಗಾಳಿಪಟ ತಯಾರಿಸೋಕೆ ಮಕ್ಕಳು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡದ್ದರಂತೆ.
ಐವತ್ತು ಸಾವಿರ ಮಕ್ಕಳ ಪ್ರತೀಕ
ಜಾಂಬೂರಿಯಲ್ಲಿ ಭಾಗವಹಿಸ್ತಿರೋ ಐವತ್ತು ಸಾವಿರ ಮಕ್ಕಳ ಸಾಂಕೇತಿಕವಾಗಿ ಐವತ್ತು ಅಡಿ ಗಾಳಿಪಟ ಮಾಡಿದ್ದೇವೆ ಎನ್ನುತ್ತಾರೆ ಗಾಳಿಪಟದ ಸೂತ್ರಧಾರ ದಿನೇಶ್ ಹೊಳ್ಳ.
ಇದನ್ನೂ ಓದಿ: Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ
ಒಟ್ಟಿನಲ್ಲಿ ಬಣ್ಣ ಬಣ್ಣದ, ಟ್ರೆಡಿಷನಲ್ ಗಾಳಿಪಟ, ಮಕ್ಕಳ ಮನದಲ್ಲಿ ಸೆನ್ಸೆಷನಲ್ ಹುಟ್ಟಿಸಿದ್ದಂತೂ ಸುಳ್ಳಲ್ಲ.
ವರದಿ: ನಾಗರಾಜ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ