ಅಡುಗೆ ಕೋಣೆಯಲ್ಲಿ ಅವಿತು ಕೂತಿದ್ದ ಕಾಳಿಂಗ. ಉರಗತಜ್ಞರನ್ನ ನೋಡುತ್ತಲೇ ಶುರು ಮಾಡಿತ್ತು ಆಕ್ರಮಣ. ಹೆಂಗೋ ಕೊನೆಗೂ ಸೆರೆಯಾಗೇ ಬಿಡ್ತು ನೋಡಿ ಬ್ಲ್ಯಾಕ್ ಕೋಬ್ರಾ. ಹಾಗಿದ್ರೆ ಹೇಗಿತ್ತು ಕಾಳಿಂಗ ಆಪರೇಷನ್ ಅನ್ನೋದನ್ನ ನೋಡ್ಬಿಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Belthangady) ಪಶ್ಚಿಮ ಘಟ್ಟದ ತಪ್ಪಲಲ್ಲಿರೋ (Western Ghats) ಪ್ರದೇಶ. ಹಾಗಾಗಿ ಇಲ್ಲಿ ಆಗಾಗ ಅಪರೂಪದ ಹಾವುಗಳು(Snakes In Western Ghats) ಕಾಣಿಸಿಕೊಳ್ಳುತ್ತೆ. ಇಲ್ಲೂ ಹಾಗೆ ಆಯ್ತು ನೋಡಿ.
ಅಳದಂಗಡಿ ಗ್ರಾಮದ ಹಂಬಲಪಲ್ಕೆ ನಿವಾಸಿ ಸುಕೇಶ್ ಎಂಬವರ ಮನೆಯ ಅಡುಗೆ ಕೋಣೆಯಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಗ್ಯಾಸ್ ಸಿಲಿಂಡರ್ ನಡಿ ಅವಿತುಕೊಂಡಿತ್ತು. ಮನೆ ಮಂದಿ ಇನ್ನೇನು ಗ್ಯಾಸ್ ಸ್ಟವ್ ಮೇಲೆ ಒಲೆ ಉರಿಸೋಕೆ ಮುಂದಾಗ್ತಿದ್ರೆ, ಇತ್ತ ಕರಿ ಕಾಳಿಂಗ ಬುಸುಗುಡೋದಕ್ಕೆ ಶುರುಮಾಡಿತ್ತು.
ಹಾವು ರಕ್ಷಣೆಗೆ ಧಾವಿಸಿದ ಸ್ನೇಕ್ ಅಶೋಕ್
ಹಾವನ್ನು ನೋಡಿ ಮನೆ ಮಂದಿ ಬೆಚ್ಚಿ ಹೌಹಾರಿದ್ರು. ತಕ್ಷಣ ಅವ್ರಿಗೆಲ್ಲ ನೆನಪಾಗಿದ್ದೇ ಲಾಯಿಲದ ಸ್ನೇಕ್ ಅಶೋಕ್. ಹೀಗೆ ಸ್ಥಳಕ್ಕೆ ಬಂದ ಅಶೋಕ್ ಕಾಳಿಂಗನ ಜೊತೆ ಕೆಲ ಹೊತ್ತು ಸರಸವಾಡಿದರು. ಕೊನೆಗೂ ಗೋಣಿ ಚೀಲದಲ್ಲಿ ತುಂಬಿ ಕಾಡಿಗೆ ಕೊಂಡೊಯ್ದರು.
ಇದನ್ನೂ ಓದಿ: Chamarajanagar: ಹುಡುಗಿ ಹುಡುಕಿಕೊಡು ದೇವರೇ! ವಧುಗಳ ಕೊರತೆ ಬಟಾಬಯಲು
ಅಷ್ಟು ಸುಲಭವಾಗಿರಲಿಲ್ಲ ಕಾಳಿಂಗ ಆಪರೇಷನ್!
ಕಾಳಿಂಗ ಆಪರೇಷನ್ ಅಷ್ಟು ಸುಲಭವಾಗಿರಲಿಲ್ಲ. ಅಡುಗೆ ಕೋಣೆಯಲ್ಲಿದ್ದ ಬ್ಲ್ಯಾಕ್ ಕೋಬ್ರಾ ತಪ್ಪಿಸಿಕೊಂಡು ಹೋಗೋ ಪ್ರಯತ್ನ ಮಾಡಿತು. ಆದ್ರೆ ಸ್ನೇಕ್ ಅಶೋಕ್ ಅದ್ರ ಪ್ಲ್ಯಾನ್ ಫ್ಲಾಫ್ ಮಾಡಿದರು. ಕಾಳಿಂಗನ ತುದಿಬಾಲ ಎಳೆದು ಗಟ್ಟಿಯಾಗಿ ಹಿಡಿದುಕೊಂಡರು. ಆಗ್ಲೇ ಶುರುಮಾಡಿತು ನೋಡಿ ಸ್ನೇಕ್ ಅಶೋಕ್ ಮೇಲೆ ಆಕ್ರಮಣ ಮಾಡೋದಕ್ಕೆ.
ಇದನ್ನೂ ಓದಿ: Success Story: ಘಟ್ಟದ ಮೇಲೊಂದು ಫಲಪುಷ್ಪ ಲೋಕ, ಸಮಗ್ರ ಕೃಷಿ ಅಂದ್ರೆ ಇದೇ ನೋಡಿ!
ಒಂದೆರಡು ಬಾರಿ ನೆಲಕ್ಕೆ ಕಚ್ಚಿ ತನ್ನ ಆಕ್ರೋಶವನ್ನೂ ವ್ಯಕ್ತಪಡಿಸಿತು. ಆದ್ರೆ ಹಠ ಬಿಡದ ಅಶೋಕ್ ಕೊನೆಗೂ ಅದನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ್ರು. ಇದನ್ನ ನೋಡ್ತಾ ಗ್ರಾಮಸ್ಥರು ನಿಟ್ಟುಸಿರುಬಿಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ