ಮಂಡ್ಯ: ಆಕಾಶದಗಲಕ್ಕೂ, ಭೂಮಿ ಉದ್ದಕ್ಕೂ ಒಂದೇ ಮಾತು ಅದು ಪ್ರೀತಿ.. ಪ್ರೀತಿ.. ಪ್ರೀತಿ! ಈ ಪ್ರೀತಿಗಾಗಿ ಕೇವಲ ಮಾನವ ಹೃದಯಗಳಷ್ಟೇ ಅಲ್ಲ, ನಿಸರ್ಗವೂ ಮಿಡಿಯುತ್ತಿದೆ. ಮನುಷ್ಯರು ವ್ಯಾಲೆಂಟೆನ್ಸ್ ಡೇ (Valentines Day 2023) ಅನ್ನು ಬಗೆ ಬಗೆಯಾಗಿ ಆಚರಿಸಿಕೊಂಡ್ರೆ, ಲವ್ ಬರ್ಡ್ಗಳ (Love Birds) ಪ್ರೇಮೋತ್ಸವಕ್ಕಂತೂ ಎಲ್ಲೆ ಇಲ್ಲದಂತಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಭೂಮಂಡಲದುದ್ದಕ್ಕೂ ಪ್ರೀತಿಗಾಗಿ ಅದೆಷ್ಟೋ ಹೃದಯಗಳು ಮಿಡಿಯುತ್ತಿವೆ. ಮೊಬೈಲ್ ಮೂಲಕ ಸಂದೇಶ, ಪರಸ್ಪರ ಭೇಟಿ, ಗ್ರೀಟಿಂಗ್ಸ್ಗಳ ವಿನಿಮಯ, ಪಾರ್ಕಿನಲ್ಲಿ ಸುತ್ತಾಟ. ಒಂದೇ ಎರಡೇ! ಹತ್ತು ಹಲವು ಮುಖಗಳಲ್ಲಿ ಪ್ರೀತಿ ಪುಳಕಿತಗೊಳ್ಳುತ್ತಿದೆ.
ಲವ್ ಬರ್ಡ್ಗಳ ಸ್ವಚ್ಚಂದ ಪ್ರೀತಿ, ಪ್ರೇಮ, ಪ್ರಣಯ
ಆದ್ರೆ ಮಂಡ್ಯದ ಶ್ರೀರಂಗಪಟ್ಟಣದ ರಂಗನತಿಟ್ಟಿನಲ್ಲಿ ಲವ್ ಬರ್ಡ್ಗಳ ಸ್ವಚ್ಚಂದ ಪ್ರೀತಿ, ಪ್ರೇಮ, ಪ್ರಣಯ ನಿಜಕ್ಕೂ ಮನಮೋಹಕ. ಕಾಕತಾಳಿಯ ಎಂಬಂತೆ ಫೆಬ್ರವರಿ ತಿಂಗಳ ಹವಾಮಾನ ಪಕ್ಷಿಗಳಿಗೆ ಹಿತಕರವಾಗಿರುವುದು ಹಾಗೂ ಇದೇ ವೇಳೆ ನಡೆಯುತ್ತಿರುವ ಪ್ರೇಮಿಗಳ ದಿನಾಚರಣೆಯಲ್ಲಿ ಪಕ್ಷಿಗಳ ಪ್ರೇಮೋತ್ಸವಕ್ಕೆ ಎಲ್ಲೆ ಇಲ್ಲದಂತಾಗಿದೆ.
ಇದನ್ನೂ ಓದಿ: Mandya Viral Video: ನಾಯಿ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಂಡ್ಯದ ಬಾಲಕ!
ಬೇರೆ ಪಕ್ಷಿಗಳ ಸ್ನೇಹ ಮಾಡಲ್ಲ!
ಇವುಗಳ ಇನ್ನೊಂದು ವಿಶೇಷತೆ ಅಂದ್ರೆ, ಈ ಲವ್ ಬರ್ಡ್ಗಳು ಸದಾ ಒಂದನ್ನೊಂದು ಬಿಟ್ಟು ಇರುವುದಿಲ್ಲ. ಎಲ್ಲೇ ಹೋದರೂ ಜೊತೆಯಾಗಿರುತ್ತವೆ. ಮನುಷ್ಯರಂತೆ ಯಾವುದೇ ಕಾರಣಕ್ಕೂ ಗಂಡಾಗಲಿ ಅಥವಾ ಹೆಣ್ಣಾಗಲಿ ಬೇರೊಂದು ಪಕ್ಷಿಗಳ ಸ್ನೇಹ ಮಾಡುವುದಿಲ್ಲ. ಈ ಬಾನಾಡಿಗಳ ಮನಮೋಹಕ ಪ್ರಣಯ ಕಂಡು ಪ್ರೇಮಿಗಳು ನಾಚಿ ಹೋಗಿದ್ದಾರೆ. ಮಾತ್ರವಲ್ಲ ಇನ್ನೂ ಹೆಚ್ಚು ಪ್ರೀತಿ ಮಾಡುವ ಸಂಕಲ್ಪ ಮಾಡಿದ್ದಾರೆ.
ಇದನ್ನೂ ಓದಿ: British Garrison Cemetery: ಶ್ರೀರಂಗಪಟ್ಟಣದಲ್ಲಿ ಬ್ರಿಟೀಷರ 500 ಕ್ಕೂ ಹೆಚ್ಚು ಸಮಾಧಿ!
ಸ್ವೇಚ್ಛೆ ಅನರ್ಥ ಭಾವಗಳಿಂದಾಗಿ ಪ್ರೀತಿ ಅರ್ಥ ಕಳೆದುಕೊಳ್ಳುತ್ತಿರುವಾಗ ಈ ಬಾನಾಡಿಗಳ ನೈಜ ಪ್ರೇಮ ನಿಜಕ್ಕೂ ಮೆಚ್ಚುವಂತದ್ದು. ವಿಷ್ ಯು ಹ್ಯಾಪಿ ವ್ಯಾಲೆಂಟೈನ್ಸ್ ಡೇ ಲವ್ ಬರ್ಡ್ಸ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ