ಮಂಡ್ಯ: ಸಾವಿರಾರು ಭಕ್ತರ ಜಯಘೋಷ, ಗೋವಿಂದ ಗೋವಿಂದ ಎಂಬ ಘೋಷಣೆ. ವಿಜೃಂಭಣೆಯಿಂದ ನಡೆಯಿತು ನೋಡಿ ವೈರಮುಡಿ ಉತ್ಸವ! (Melukote Vairamudi Utsav) ಮಂಡ್ಯ ಜಿಲ್ಲೆಯ (Mandya News) ಮೇಲುಕೋಟೆಯಲ್ಲಿ (Melukote) ವರ್ಷಕ್ಕೊಮ್ಮೆ ಆಗುವ ಉತ್ಸವ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಪ್ರಥಮ ಪೂಜೆ ಮಾಡಲಾಯಿತು. ನಂತರ ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆ ಪ್ರವೇಶಿಸಿದ ವೈರಮುಡಿ ಹಾಗೂ ರಾಜಮುಡಿಯನ್ನು ಭಕ್ತರು ಭಕ್ತಿಭಾವದಿಂದ ಪೂಜಿಸಿದರು.
ಇದನ್ನೂ ಓದಿ: Mandya: ಶತಮಾನಗಳ ಹಳೆಯ ಸೇತುವೆ ಇಂದಿಗೂ ಗಟ್ಟಿಮುಟ್ಟು!
ಆಭರಣಗಳು ಹಾಗೂ ವಜ್ರ ಖಚಿತ ಕಿರೀಟ ಧರಿಸಿ ಕಂಗೊಳಿಸಿದ ಚಲುವರಾಯಸ್ವಾಮಿಯನ್ನು ಭಕ್ತರು ಕಣ್ತುಂಬಿಕೊಂಡರು
.
ಇದನ್ನೂ ಓದಿ: KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ
ರತ್ನಖಚಿತ ವೈರಮುಡಿ ತೊಟ್ಟು ಗರುಢಾರೂಢನಾಗಿ ಭೂದೇವಿ, ಶ್ರೀದೇವಿ ನಡುವೆ ಕಂಗೊಳಿಸಿದ ಚೆಲುವನಾರಾಯಣಸ್ವಾಮಿಯನ್ನು ಕಂಡು ಭಕ್ತರು ಪುನೀತರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ