ಮಂಡ್ಯ: ಮದುವೆಯಾಗೋಕೆ ಹೆಣ್ಣು ಸಿಗ್ತಿಲ್ಲ (Bride Problem) ಎಂಬ ಕೂಗು ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕೃಷಿ ಮಾಡುತ್ತಿರುವ (Bride Problem To Farmers) ಯುವಕರಿಗೆ ವಧುಗಳ ಕೊರತೆ ಉಂಟಾಗುತ್ತಿದೆ. ವಧುಗಳ ಕೊರತೆ ಅವಿವಾಹಿತ ಯುವಕರ ಮೇಲೆ ಮಾನಸಿಕವಾಗಿ ದುಷ್ಪರಿಣಾಮವನ್ನೂ ಬೀಡುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವಾಗಿ ಅವಿವಾಹಿತರ ಪಾದಯಾತ್ರೆಯೊಂದು (Padayatra By Unmarried Youths) ನಡೆಯಲಿದೆ.
ಹೌದು, ಮಂಡ್ಯ ಜಿಲ್ಲೆಯ ಸುಮಾರು 200 ಬ್ರಹ್ಮಚಾರಿಗಳು ಶೀಘ್ರದಲ್ಲೇ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ವಿಶಿಷ್ಟ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
200 ಅವಿವಾಹಿತ ಯುವಕರು ಭಾಗಿ
ಮಂಡ್ಯ ಜಲ್ಲೆಯ ಯುವಕರು, ಅದರಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ವಧುಗಳನ್ನು ಹುಡುಕಲು ಪರದಾಡುತ್ತಿದ್ದಾರೆ. 30 ವರ್ಷ ಮೇಲ್ಪಟ್ಟ ಸುಮಾರು 200 ಅವಿವಾಹಿತ ಯುವಕರು 'ಬ್ರಹ್ಮಚಾರಿಗಳ ಪಾದಯಾತ್ರೆ' ಎಂಬ ಹೆಸರಲ್ಲಿ ಈ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಈಗಾಗಲೇ 100 ಯುವಕರಿಂದ ನೋಂದಣಿ
ಪಾದಯಾತ್ರೆ ಘೋಷಣೆಯಾದ ಮೊದಲ 10 ದಿನಗಳಲ್ಲಿ ಸುಮಾರು 100 ಅವಿವಾಹಿತ ಪುರುಷರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಮೆರವಣಿಗೆಯ ಸಂಘಟಕರು ತಿಳಿಸಿದ್ದಾರೆ.
ಈ ಭಾಗದ ಯುವಕರಿಂದಲೂ ನೋಂದಣಿ
ಸ್ಥಳೀಯ ಯುವಕರಷ್ಟೇ ಅಲ್ಲದೇ, ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಪುರುಷರು ಸಹ ಈವರೆಗೆ ನೋಂದಾಯಿಸಿಕೊಂಡಿದ್ದಾರೆ.
ಮಾನಸಿಕ ಆಘಾತದಿಂದ ಹೊರತರುವ ಉದ್ದೇಶ
ಈ ಯಾತ್ರೆಯ ಹಿಂದಿನ ಉದ್ದೇಶ ಅವಿವಾಹಿತ ಪುರುಷರನ್ನು ಮಾನಸಿಕ ಆಘಾತದಿಂದ ಹೊರತರುವುದೇ ಆಗಿದೆ. ಫೆಬ್ರವರಿ 23ರಂದು ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಗ್ರಾಮದಿಂದ ಯಾತ್ರೆ ಆರಂಭವಾಗಲಿದೆ.
30 ವರ್ಷ ಮೇಲ್ಪಟ್ಟವರಿಗೆ ಅವಕಾಶ
ಮೂರು ದಿನಗಳಲ್ಲಿ ಪಾದಯಾತ್ರೆ 105 ಕಿಲೋ ಮೀಟರ್ ನಡೆದು ಫೆಬ್ರವರಿ 25 ರಂದು ಮಲೆಮಹದೇಶ್ವರ ಬೆಟ್ಟ ತಲುಪಲಿದೆ. ಯಾತ್ರಿಗಳಿಗೆ ಊಟ ಮತ್ತು ವಸತಿ ಒದಗಿಸಲಾಗುವುದು. 30 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಪುರುಷರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಸೂಕ್ತ ವಧು ಸಿಗದ ಯುವಕರಿಗೆ ಉತ್ಸಾಹ ನೀಡಲು ಈ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಪಾದಯಾತ್ರೆಯ ಆಯೋಜಕರಲ್ಲಿ ಒಬ್ಬರಾದ 34ರ ಹರೆಯದ ಶಿವಪ್ರಸಾದ್ ಕೆ.ಎಂ.
ಇದನ್ನೂ ಓದಿ: Mandya Viral Video: ನಾಯಿ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಂಡ್ಯದ ಬಾಲಕ!
ಸ್ತ್ರೀ ಭ್ರೂಣ ಹತ್ಯೆಯೇ ಕಾರಣ
ಈ ಹಿಂದೆ ಮಂಡ್ಯದಲ್ಲಿ ಸ್ತ್ರೀ ಭ್ರೂಣ ಹತ್ಯೆ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಇಂದು ಯುವಕರಿಗೆ ವಧುಗಳ ಕೊರತೆ ಉಂಟಾಗಿದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: British Garrison Cemetery: ಶ್ರೀರಂಗಪಟ್ಟಣದಲ್ಲಿ ಬ್ರಿಟೀಷರ 500 ಕ್ಕೂ ಹೆಚ್ಚು ಸಮಾಧಿ!
ಒಟ್ಟಾರೆ ವ್ಯವಸಾಯ ಮಾಡುವ ಯುವಕರು ಮತ್ತು ಹಳ್ಳಿಗಳಲ್ಲಿ ವಾಸಿಸುವ ಯುವಕರಿಗೆ ಮದುಮಗಳ ತೀವ್ರ ಕೊರತೆಗೆ ಸಾಕ್ಷಿಯಾಗಿರುವ ಮಂಡ್ಯ ಜಿಲ್ಲೆ ಈ ತಿಂಗಳು ಪಕ್ಕದ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಮಲೆಮಹದೇಶ್ವರ ದೇವಸ್ಥಾನಕ್ಕೆ ವಿಶಿಷ್ಟ ಪಾದಯಾತ್ರೆಗೆ ಸಾಕ್ಷಿಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ