ಕೆಲವರಿರ್ತಾರೆ ಯಾವುದೇ ಪ್ರಚಾರ (Promotion) ಬಯಸದೆ ಶಿಸ್ತಿನಿಂದ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡ್ತಿರ್ತಾರೆ. ಇನ್ನು ಕೆಲವರು ದೊಡ್ಡ ಪ್ರಚಾರವನ್ನ ಬಯಸಿ ಅಗಾಗ್ಗೆ ಸುದ್ದಿಯಾಗ್ತಾ ಇರ್ತಾರೆ. ಇಂತಹವರ ಮಧ್ಯೆ ಯಾವುದೇ ಪ್ರಚಾರವಿಲ್ಲದೆ ತಮ್ಮ ಬಳಿಗೆ ಬರುವ ಜನರ ಕಾಯಿಲೆಗಳಗೆ ನಾಟಿ ಮದ್ದು ನೀಡುವ ಮಳವಳ್ಳಿ ನಾಗಮ್ಮಜ್ಜಿಯ ಬಗ್ಗೆ ತಿಳಿಯಲೇಬೇಕಾದ ಇಂಟರೆಸ್ಟಿಂಗ್ ಕಥೆಗಳು ಹಲವಾರಿದೆ. ಎಲೆಮರೆ ಕಾಯಿಯಂತೆ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 90 ರ ವಯೋಮಾನದ ನಾಗಮ್ಮಜ್ಜಿ ಯಾವುದೇ ಸ್ವಾರ್ಥ ಇಲ್ಲದೆ ತಮ್ಮ ಬಳಿಗೆ ಬರುವ ರೋಗಿಗಳಿಗೆ ಉಚಿತವಾಗಿ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿ ನೀಡುತ್ತಾ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ .
ನಾಟಿಮದ್ದಿನ ನಾಗಮ್ಮಜ್ಜಿ ಫುಲ್ ಫೇಮಸ್
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ವಾಸವಾಗಿರುವ ನಾಗಮ್ಮ ಎಂಬ 90 ವರ್ಷದ ಅಜ್ಜಿ ಕಳೆದ ನಲವತ್ತು ವರ್ಷಗಳಿಂದ ಹರಸ್ಥಿ (ಕುರ), ಕೀಲುಬಾವು, ಕಾಮಾಲೆ ರೋಗಕ್ಕೆ ಗಿಡಮೂಲಿಕೆಯಿಂದ ತಯಾರಿಸಿದ ಔಷಧಿ ನೀಡುತ್ತಾ ಸಾವಿರಾರು ರೋಗಿಗಳನ್ನು ಗುಣಪಡಿಸಿದ್ದಾರೆ.
ಹೊಟ್ಟೆನೋವು, ಹೊಟ್ಟೆ ಉಬ್ಬರ ಮಾಯ
ಜನರಿಗೆ ಮತ್ತು ಗೋವುಗಳಿಗೆ ಹೊಟ್ಟೆ ಉಬ್ಬರ ಆದರೆ ನಾಗಮ್ಮಜ್ಜಿ ವಿಭೂತಿ ಉಂಡೆಯಿಂದ ಮಂತ್ರಿಸಿ ಕೊಟ್ಟರೆ ಹೊಟ್ಟೆ ಉಬ್ಬರ ಗುಣವಾಗುತ್ತದೆ. ವಿಭೂತಿ ಉಂಡೆಗೆ ಮೂರು ಸಲ ಉಗಿದು ಸ್ವಲ್ಪ ತಿಂದರೆ ಹೊಟ್ಟೆ ಉಬ್ಬರ, ಹೊಟ್ಟೆನೋವು ವಾಸಿಯಾಗುತ್ತದೆ. ಗೋವುಗಳಿಗೆ ಹೊಟ್ಟೆ ಉಬ್ಬರಿಸಿಕೊಂಡಾಗ ಒಣಹುಲ್ಲಿನ ಒಳಗೆ ವಿಭೂತಿ ಉಂಡೆಯನ್ನ ಹಾಕಿ ಕೊಟ್ಟರೆ ಹೊಟ್ಟೆ ಉಬ್ಬರ ಇಳಿಯುತ್ತದೆ. ಹಲವರು ತಮ್ಮ ಗೋವುಗಳನ್ನು ಇವರ ಬಳಿ ಕರೆತಂದು ಚಿಕಿತ್ಸೆ ಕೊಡಿಸಿ ಗುಣಮುಖ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Mangaluru: "ಪ್ರೀತ್ಸೆ" ಅಂತ ಪ್ರಾಣ ತಿಂದ, "ನೋ" ಎಂದಿದ್ದಕ್ಕೆ ಮೊಬೈಲ್ ಟವರ್ ಹತ್ತಿದ! ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಪೊಲೀಸರೇ ಸುಸ್ತು!
ಮಕ್ಕಳಿಗೆ ಸಮಸ್ಯೆಗಳಿಗೂ ಅಜ್ಜಿ ಕೊಡ್ತಾರೆ ಮದ್ದು
ಮಕ್ಕಳು ಬಿದ್ದು ಗಾಬರಿಗೊಂಡು ಭೇದಿ ಆಗುತ್ತಿದ್ದರೆ ಆ ಮಕ್ಕಳಿಗೆ ಬಿದ್ದಗೂಳು ಎಂಬ ವಿಶೇಷ ಪೂಜೆ ಮಾಡುತ್ತಾರೆ. ಅಂತಹ ಮಕ್ಕಳಿಗೆ ಗಿಡಮೂಲಿಕೆಯ ಔಷಧಿಯನ್ನು ಸೊಂಟಕ್ಕೆ ಕಟ್ಟಿ ಕೊಡುತ್ತಾರೆ ಆಗ ಒಂದೆರಡು ದಿನದಲ್ಲಿಯೇ ಮಕ್ಕಳು ಭಯದಿಂದ ವಿಮುಖರಾಗಿ, ಬೇಧಿ ಕೂಡ ನಿಲ್ಲುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಎಲ್ಲಾ ಸಮುದಾಯದ ಜನರು ಇವರ ಬಳಿ ಬಂದು ನಾಟಿ ಮದ್ದು ಪಡೆದು ಗುಣಮುಖರಾಗಿದ್ದಾರೆ. ಅಲ್ಲದೆ ಬರಿ ಮಳವಳ್ಳಿ ಅಲ್ಲದೆ ಮೈಸೂರು ಮತ್ತು ತುಮಕೂರು, ಚಾಮರಾಜನಗರ ಭಾಗದಿಂದ ಚಿಕಿತ್ಸೆಗಾಗಿ ನಾಗಮ್ಮಜ್ಜಿ ಬಳಿ ಆಗಮಿಸುತ್ತಿದ್ದಾರೆ.
ಸುತ್ತಮುತ್ತಲಿನ ಜನರಿಗೆ ಔಷಧಿ ವಿತರಣೆ
ಬಹಳಷ್ಟು ಹಿಂದೆ ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರೆದಿರಲಿಲ್ಲ. ಆಗ ತಮ್ಮ ಸಮುದಾಯದ ನೂರಾರು ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸಿದ ಖ್ಯಾತಿಯೂ ನಾಗಮ್ಮಜ್ಜಿಗಿದೆ. ತಮ್ಮ ತಾಯಿಯಿಂದ ನಾಟಿ ವೈದ್ಯ ಚಿಕಿತ್ಸೆ ಕಲಿತಿರುವ ನಾಗಮ್ಮಜ್ಜಿ ತಮ್ಮ ಮಗಳು ನಾಗರತ್ನ ಅವರಿಗೆ ಈ ನಾಟಿ ವೈದ್ಯವನ್ನು ಕಲಿಸಿದ್ದಾರೆ. ಅವರು ಮನೆ ಬಳಿ ಬಂದವರಿಗೆ ನಾಟಿ ಮದ್ದು ಕೊಡುತ್ತಾರೆ. ವೈದ್ಯರು, ಪಶುವೈದ್ಯರು ಇರುವ ಕಾಲದಲ್ಲಿ ನಾಗಮ್ಮಜ್ಜಿ ಬಳಿ ಬರುವವರ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ, ಬಂದವರಿಗೆ ನಾಟಿ ಮದ್ದು ಕೊಡುತ್ತಿದ್ದಾರೆ.
ಇದನ್ನೂ ಓದಿ: Kalaburagi: PSI ನೇಮಕಾತಿ ಅಕ್ರಮ ಪ್ರಕರಣ: ಬಿಜೆಪಿ ನಾಯಕಿಯ ಪತಿ ಅರೆಸ್ಟ್
ದೇಶದಲ್ಲಿ ವಿಜ್ಞಾನ ಎಷ್ಟೆ ಮುಂದುವರಿದ್ರೂ ವೈದ್ಯರು ಸಾವಿರಾರು ಆಸ್ಪತ್ರೆಗಳು ವೈದ್ಯರಿದ್ರು ಕೆಲವೊಂದು ಕಾಯಿಲೆಗಳನ್ನು ಗುಣಪಡಿಸಲು ಆಗಿಲ್ಲ. ಹೀಗಾಗಿ ಅನೇಕ ಜನರು ನಾಟಿ ಔಷಧಿಗಳ ಮೊರೆ ಹೋಗ್ತಿದ್ದಾರೆ. ಅನೇಕರು ಸಣ್ಣ-ಪುಟ್ಟ ಕಾಯಿಲೆಗಳಿಗೆ ಡಾಕ್ಟರ್ ಬಳಿ ಹೋದ್ರೆ, ದುಪ್ಪಟ್ಟು ಹಣ ಕೀಳ್ತಾರೆ, ಅಪರೇಷನ್ ಅಂತ ಭಯ ಪಡಿಸುತ್ತಾರೆ ಎಂದು ಎಷ್ಟೋ ಹಳ್ಳಿ ಜನರು ಆಸ್ಪತ್ರೆಗಳಿಗೆ ಹೋಗೋದಿಲ್ಲ. ನಾಟಿ ಔಷಧಿ ಪಡೆದು ಗುಣಮುಖರಾಗ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ