ಮಂಡ್ಯ: ಅದ್ಯಾವುದೋ ಕಲ್ಲಿನ ಸ್ಮಾರಕದಂತೆ ಕಾಣುವ ಇದು ಹಳೆಯದಾದ ಸೇತುವೆ. ಇಂದಿಗೂ ಗಟ್ಟಿಮುಟ್ಟಾಗಿರುವ ಸೇತುವೆ (Srirangapatna Bridge History) ಮೇಲೆ ಯಾವುದೇ ವಾಹನ (Bengaluru Mysuru Expressway Travellers) ಕೂಡಾ ಆರಾಮವಾಗಿ ಓಡಾಡಬಲ್ಲದು. ಇತ್ತೀಚೆಗೆ ಕಾಮಗಾರಿ ಆದ ಮರುದಿನ ಕಿತ್ತೋಗಿ ಬಿಡೋ ಈ ಸಮಯದಲ್ಲಿ ಈ ಸೇತುವೆಗೆ (Historical Bridge) ಎರಡು ಶತಮಾನಗಳು ಸಂದಿವೆ. ಆಗಿದ್ರೆ ಈ ಸೇತುವೆ ಎಲ್ಲಿದೆ ಅಂತೀರ? ಈ ಸ್ಟೋರಿ ನೋಡಿ.
ಯೆಸ್, ಇದು ಮಂಡ್ಯ ಜಿಲ್ಲೆಯ ಐತಿಹಾಸಿಕ ಪಟ್ಟಣ ಶ್ರೀರಂಗಪಟ್ಟಣದಲ್ಲಿರುವ 200 ವರ್ಷಗಳ ಹಳೆಯದಾದ ಸೇತುವೆ. ಆದ್ರೆ ಇಂದಿಗೂ ಅಷ್ಟೇ ಗಟ್ಟಿಮುಟ್ಟಾಗಿದ್ದು, ಒಂದಿನತೂ ಬಿರುಕು ಬಿಡದೇ ನಂಬಿಕೆಗೆ ಅರ್ಹವಾಗಿದೆ. ಹಾಗಾಗಿ ಜನರು ತಮ್ಮ ವಾಹನಗಳ ಮೂಲಕ ಇದರ ಮೇಲೆ ಆರಾಮವಾಗಿಯೇ ಸಂಚರಿಸುತ್ತಾರೆ. ಇದೀಗ ಈ ಸೇತುವೆಯನ್ನ ಪ್ರಾಚೀನ ಸ್ಮಾರಕ ಎಂದು ಘೋಷಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಪ್ರೇಕ್ಷಣೀಯ ಸ್ಥಳ
ಸದ್ಯ ಈ ಸೇತುವೆ ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಂದ ಕಾಣುವ ಸೂರ್ಯಾಸ್ತವನ್ನು ನೋಡಲು ಜನಸಾಗರವೇ ಹರಿದು ಬರುತ್ತವೆ.
ಇತಿಹಾಸ ಹೇಳುತ್ತೆ ಸೇತುವೆಯ ಕಥೆ!
ಅಂದಹಾಗೆ ಈ ಸೇತುವೆಯನ್ನು 1804 ರಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಡದಲ್ಲಿ ನಿರ್ಮಿಸಲಾಗಿದೆ. 4ನೇ ಆಂಗ್ಲೋ ಮೈಸೂರು ಯುದ್ದದ ಬಳಿಕ ಮೈಸೂರಿನ ದಿವಾನ್ ಪೂರ್ಣಯ್ಯ ನೇತೃತ್ವದಲ್ಲಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ವಿಶೇಷ ಅಂದ್ರೆ ಈ ಸೇತುವೆಯನ್ನ ಪ್ರಾಚೀನ ಕಲ್ಲುಗಳಿಂದ ನಿರ್ಮಿಸಲಾಗಿದ್ದು, 512 ಅಡಿ ಉದ್ದ ಹಾಗೂ 20 ಅಡಿ ಅಗಲವನ್ನ ಹೊಂದಿದೆ. ಅಂದಿನ ಕಾಲದಲ್ಲೆ 5.5 ಲಕ್ಷ ರೂಪಾಯಿಗಳನ್ನ ಈ ಸೇತುವೆ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗಿತ್ತು.
ಇದನ್ನೂ ಓದಿ:Mandya Viral Video: ನನಗೂ ಪ್ರಧಾನಿ ಮೋದಿಯವ್ರನ್ನ ನೋಡ್ಬೇಕು, ಮಂಡ್ಯದ ವೃದ್ಧೆ ವಿಡಿಯೋ ವೈರಲ್
ಇನ್ನು ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಹಲವು ಬಾರಿ ಈ ಸೇತುವೆ ಮುಳುಗಡೆ ಆದ್ರು ಕೂಡ ಇನ್ನು ಕೂಡ ಗಟ್ಟಿಯಾಗಿದೆ. ಪ್ರೇಕ್ಷಣೀಯ ಸ್ಥಳವೂ ಆಗಿದ್ದು, ಅಧ್ಯಯನಶೀಲರಿಗೆ ಇಲ್ಲಿನ ಸೇತುವೆಯ ಪ್ರತಿ ಕಲ್ಲುಗಳು ಸರಕನ್ನ ಒದಗಿಸುತ್ತೆ.
ಇದನ್ನೂ ಓದಿ:Mandya: ಬ್ರಹ್ಮಚಾರಿಗಳ ನಡೆ, ಮಾದಪ್ಪನ ಬೆಟ್ಟದ ಕಡೆ! ರೈತರಿಗೆ ವಧು ಸಿಗಲು ಅವಿವಾಹಿತರ ಪ್ರಾರ್ಥನೆ
ಒಟ್ಟಿನಲ್ಲಿ ಈ ಸೇತುವೆಯನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸುವ ಮೂಲಕ ಇದನ್ನ ಮುಂದಿನ ತಲೆಮಾರಿಗೂ ಉಳಿಸಿ ಬೆಳೆಸುವ ಈ ಭಾಗದ ಜನರ ಅಭಿಲಾಷೆ ಈಡೇರಲಿ ಎಂಬುವುದೇ ನಮ್ಮ ಆಶಯ ಕೂಡ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ