• Home
  • »
  • News
  • »
  • mandya
  • »
  • Puneeth Rajkumar: ಕುಂಭಮೇಳದ ಆಕಾಶದಲ್ಲಿ ಅಪ್ಪು ಪ್ರತ್ಯಕ್ಷ!

Puneeth Rajkumar: ಕುಂಭಮೇಳದ ಆಕಾಶದಲ್ಲಿ ಅಪ್ಪು ಪ್ರತ್ಯಕ್ಷ!

ಕುಂಭಮೇಳದಲ್ಲಿ ಅಪ್ಪು ವಿಡಿಯೋ ನೋಡಿ

"ಕುಂಭಮೇಳದಲ್ಲಿ ಅಪ್ಪು ವಿಡಿಯೋ ನೋಡಿ"

ಪುನೀತ್ ನಟನೆಯ ರಾಜಕುಮಾರ ಚಿತ್ರದ ನೀನೇ ರಾಜಕುಮಾರ ಹಾಡಿಗೆ ನೀರು- ಬೆಳಕಿನ ಮಿಶ್ರಣದಲ್ಲಿ ಮೂಡಿಬಂದ ಪುನೀತ್​ ರಾಜ್​ಕುಮಾರ್ ಅವರನ್ನ ಕಂಡು ಅಭಿಮಾನಿಗಳು ಪುಳಕಿತರಾದರು.

  • Share this:

    ಮಂಡ್ಯ: ಅಪ್ಪು ಅಪ್ಪು ಅಪ್ಪು..ಅಭಿಮಾನಿಗಳ ದೇವರು ನಮ್ಮ ಪುನೀತ್ ರಾಜ್ಕುಮಾರ್ ಆಕಾಶದಲ್ಲಿ ಪ್ರತ್ಯಕ್ಷರಾಗಿದ್ರು! ಅರೇ, ಇದೇನು ವಿಷ್ಯ ಅಂದ್ಕೊಂಡ್ರಾ? ನಿಜಾ ಕಣ್ರೀ. ಮಹಾ ಕುಂಭಮೇಳದ ಲೇಸರ್ ಶೋದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಆಕಾಶದಲ್ಲಿ ಕಾಣಿಸಿಕೊಂಡಿದ್ರು! ಮಂಡ್ಯದ ಕೆ ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ  (Triveni Sangam) ನಡೆಯುತ್ತಿರೋ ಕುಂಭಮೇಳದಲ್ಲೂ (Mandya KR Pet Maha Kumbh Mela) ಅಪ್ಪು ಅಭಿಮಾನಿಗಳನ್ನು ರಂಜಿಸಿದರು.


    ಪುನೀತ್ ನಟನೆಯ ರಾಜಕುಮಾರ ಚಿತ್ರದ ನೀನೇ ರಾಜಕುಮಾರ ಹಾಡಿಗೆ ನೀರು- ಬೆಳಕಿನ ಮಿಶ್ರಣದಲ್ಲಿ ಮೂಡಿಬಂದ ಪುನೀತ್​ ರಾಜ್​ಕುಮಾರ್ ಅವರನ್ನ ಕಂಡು ಅಭಿಮಾನಿಗಳು ಪುಳಕಿತರಾದರು. ಅಷ್ಟೇ ಅಲ್ಲದೇ ತ್ರಿವೇಣಿ ಸಂಗಮದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ಪಾವನರಾದರು.


    ಒಂದು ಅದ್ಭುತ ಅನುಭವ
    ಕೊಡಗಿನಿಂದ ತಲಕಾವೇರಿ, ಚಿಕ್ಕಮಗಳೂರಿನ ಬಲ್ಲಾಳದುರ್ಗದಲ್ಲಿ ಹುಟ್ಟುವ ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಮಂಡ್ಯದ ಕೆ ಆರ್ ಪೇಟೆಯಲ್ಲಿ ಸಂಗಮವಾಗುತ್ತವೆ. ಈ ಸಂಗಮ ಕ್ಷೇತ್ರವನ್ನು ನೋಡೋದೇ ಒಂದು ಅದ್ಭುತ ಅನುಭವ! ಇಲ್ಲೇ ಈಗ ಮಹಾ ಕುಂಭಮೇಳದ ವೈಭವ.


    ಇದನ್ನೂ ಓದಿ: Mandya Maha Kumbh Mela: ಇದು ಕರ್ನಾಟಕದ ಮಹಾ ಕುಂಭಮೇಳದ ವೈಭವ!


    ಈ ಮೂರು ನದಿ ಸಂಗಮಕ್ಕೆ ಪೂಜೆ
    ಸದ್ಯ ಈ ಮೂರು ನದಿ ಸಂಗಮಕ್ಕೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕುಂಭಮೇಳ ಉದ್ಘಾಟನೆ ಮಾಡಿದ್ದಾರೆ. ಬೆಳಿಗ್ಗೆ 4 ಗಂಟೆಯಿಂದ ನೂತನ ಮಹದೇಶ್ವರ ವಿಗ್ರಹಕ್ಕೆ ಅಷ್ಟ ಬಂಧನ. ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕುಂಭಾಭಿಷೇಕ ಹಾಗೂ ಪೂಜೆ ನಡೆದಿದೆ.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಅಬ್ಬ್ಬಾ ಇಷ್ಟೊಂದು ಜನರು! ಹೀಗೆಲ್ಲ ಇದೆ ವ್ಯವಸ್ಥೆ
    ಕುಂಭ ಮೇಳದಲ್ಲಿ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳು ಪ್ರತಿದಿನ 2 ಲಕ್ಷದಂತೆ ಒಟ್ಟು 6 ಲಕ್ಷ ಜನರು ಭಾಗವಹಿಸಲಾಗಿದೆ ಎನ್ನಲಾಗಿದೆ. ಭಕ್ತರಿಗೆ 4 ದಿನಗಳ ಕಾಲ ನಿರಂತರ ಊಟದ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ಬಯೋ ಟಾಯ್ಲೆಟ್ ವ್ಯವಸ್ಥೆ ನಿರ್ಮಿಸಲಾಗಿತ್ತು.

    Published by:ಗುರುಗಣೇಶ ಡಬ್ಗುಳಿ
    First published: