ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ (Bengaluru Mysuru Expressway) ಲೋಕಾರ್ಪಣೆಗೆ ಇದೇ ಮಾರ್ಚ್ 12 ರಂದು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಮಂಡ್ಯದ ವೃದ್ದೆಯೋರ್ವರು (Mandya Old Lady) ಪ್ರಧಾನಿ ನರೇಂದ್ರ ಮೋದಿ ಅವರನ್ನು (PM Narendra Modi) ನೋಡುವ ಆಸೆ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.
ಮಂಡ್ಯದ ಅಜ್ಜಿಯೊಬ್ಬರು ಹಾಲು ಕರೆಯುತ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ವಿರಾಜಮ್ಮ ಅವರೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಬಯಸುವ ಆಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mandya: ಬ್ರಹ್ಮಚಾರಿಗಳ ನಡೆ, ಮಾದಪ್ಪನ ಬೆಟ್ಟದ ಕಡೆ! ರೈತರಿಗೆ ವಧು ಸಿಗಲು ಅವಿವಾಹಿತರ ಪ್ರಾರ್ಥನೆ
ಇಳಿ ವಯಸ್ಸಿನ ಅಜ್ಜಿಯ ಆಸೆಯ ವಿಡಿಯೋ ವೈರಲ್ ಆಯ್ತು!
ಈ ಇಳಿ ವಯಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ ವೃದ್ದೆಯ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Bengaluru Mysuru Expressway ಲೋಕಾರ್ಪಣೆ, ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ತನ್ನ ಖಾತೆಗೆ ಮೋದಿ ಹಣ ಹಾಕಿದ್ದಾರೆ ಎಂದ ಅಜ್ಜಿ
ತನ್ನ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ಹಣ ಹಾಕಿದ್ದಾರೆ. ತನಗೆ ಸಹಾಯ ಮಾಡಿದ್ದಾರೆ ಎಂದು ಈ ವೃದ್ದೆ ಸ್ಮರಣೆ ಮಾಡಿದ್ದಾರೆ. ಹೀಗಾಗಿ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ತೆರಳುತ್ತೇನೆ ಎಂದು ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ವೃದ್ಧೆ ವಿರಾಜಮ್ಮ ಹೇಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.
ಈ ಮಾಹಿತಿಯನ್ನು ಮರೆಯಲೇಬೇಡಿ
ಮೈಸೂರು ನಗರದಿಂದ ಬೆಂಗಳೂರಿಗೆ ಹೋಗುವ ಮುನ್ನ ಈ ಮಾಹಿತಿಯನ್ನು ಮರೆಯಬೇಡಿ. ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳು ಮೈಸೂರು -ಬನ್ನೂರು-ಕಿರುಗಾವಲು- ಮಳವಳ್ಳಿ-ಹಲಗೂರು-ಕನಕಪುರ- ಬೆಂಗಳೂರು ಮುಖಾಂತರ ಸಂಚರಿಸಬೇಕಿದೆ.
ಮೈಸೂರು ನಗರದಿಂದ ತುಮಕೂರಿಗೆ ಪ್ರಯಾಣಿಸುವವರು ಗಮನಿಸಿ
ಮೈಸೂರು ನಗರದಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳ ಪ್ರಯಾಣಿಕರು ಮೈಸೂರು-ಶ್ರೀರಂಗಪಟ್ಟಣ- ಪಾಂಡವಪುರ-ನಾಗಮಂಗಲ-ಬೆಳ್ಳೂರು ಕ್ರಾಸ್ – ತುಮಕೂರಿನ ಮೂಲಕ ಪ್ರಯಾಣಿಬಹುದಾಗಿದೆ.
ತುಮಕೂರಿನಿಂದ ಮೈಸೂರಿಗೆ ಹೀಗೆ ಬನ್ನಿ
ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳ ಪ್ರಯಾಣಿಕರು ತುಮಕೂರು-ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ- ಶ್ರೀರಂಗಪಟ್ಟಣ ಮೈಸೂರಿನ ಮೂಲಕ ಪ್ರಯಾಣಿಸಬೇಕಿದೆ.
ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಮುನ್ನ ನೆನಪಿಡಿ
ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ವಾಹನಗಳ ಪ್ರಯಾಣಿಕರು ಬೆಂಗಳೂರು-ಚನ್ನಪಟ್ಟಣ-ಹಲಗೂರು-ಮಳವಳ್ಳಿ-ಕಿರುಗಾವಲು-ಬನ್ನೂರು - ಮೈಸೂರು ಮಾರ್ಗವಾಗಿ ಪ್ರಯಾಣ ಬೆಳೆಸಬೇಕಿದೆ.
ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ- ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲಾ ರೀತಿಯ ವಾಹನಗಳು ಬೆಂಗಳೂರು-ಚನ್ನಪಟ್ಟಣ- ಹಲಗೂರು-ಮಳವಳ್ಳಿ- ಕೊಳ್ಳೇಗಾಲ- ಮಹದೇಶ್ವರ ಬೆಟ್ಟದ ಮೂಲಕ ಪ್ರಯಾಣ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ