ಮಂಡ್ಯ: ಭರತನಾಟ್ಯ, ಮೂಡಲಪಾಯ ಯಕ್ಷಗಾನ, ಕಂಸಾಳೆ, ತಮಟೆ, ಪೂಜಾ ಕುಣಿತ, ದೊಣ್ಣೆ ವರಸೆ! ಅಬ್ಬಬ್ಬಾ ಇದೇನಿದು? ವಿಶೇಷ ಅಂದ್ಕೊಂಡ್ರಾ? ಮಂಡ್ಯದ ತ್ರಿವೇಣಿ ಸಂಗಮದಲ್ಲಿ (Triveni Sangam) ನಡೆಯುತ್ತಿರೋ ಮಹಾ ಕುಂಭಮೇಳದ (Mandya KR Pet Maha Kumbh Mela) ಗರ್ದಿ ಗಮ್ಮತ್ತಿದು. ಮಲೆ ಮಹದೇಶ್ವರ ಬೆಟ್ಟದಿಂದ ಆಗಮಿಸಿದ ಜ್ಯೋತಿ ಮೆರವಣಿಗೆ ವೈಭವದಿಂದ ಸಾಗಿದ ಪರಿಯಿದು. ಕುಂಭ ಸ್ನಾನ ಮಾಡಿ ಪಾವನಾರಾಗೋಕೆ ಕಾದಿರೋ ಭಕ್ತರು. ಕಾಶಿಯೇ ಮಂಡ್ಯದಲ್ಲಿ ನೆಲೆಯೂರಿದೆಯೇನೋ ಅನ್ನೋ ಭಾವ!
ಕೊಡಗಿನಿಂದ ತಲಕಾವೇರಿ, ಚಿಕ್ಕಮಗಳೂರಿನ ಬಲ್ಲಾಳದುರ್ಗದಲ್ಲಿ ಹುಟ್ಟುವ ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಮಂಡ್ಯದ ಕೆ ಆರ್ ಪೇಟೆಯಲ್ಲಿ ಸಂಗಮವಾಗುತ್ತವೆ. ಈ ಸಂಗಮ ಕ್ಷೇತ್ರವನ್ನು ನೋಡೋದೇ ಒಂದು ಅದ್ಭುತ ಅನುಭವ! ಇಲ್ಲೇ ಈಗ ಮಹಾ ಕುಂಭಮೇಳದ ವೈಭವ.
ಈ ಮೂರು ನದಿ ಸಂಗಮಕ್ಕೆ ಪೂಜೆ
ಸದ್ಯ ಈ ಮೂರು ನದಿ ಸಂಗಮಕ್ಕೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕುಂಭಮೇಳ ಉದ್ಘಾಟನೆ ಮಾಡಿದ್ದಾರೆ. ಬೆಳಿಗ್ಗೆ 4 ಗಂಟೆಯಿಂದ ನೂತನ ಮಹದೇಶ್ವರ ವಿಗ್ರಹಕ್ಕೆ ಅಷ್ಟ ಬಂಧನ. ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕುಂಭಾಭಿಷೇಕ ಹಾಗೂ ಪೂಜೆ ನಡೆದಿದೆ.
ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!
ಅಬ್ಬ್ಬಾ ಇಷ್ಟೊಂದು ಜನರು! ಹೀಗೆಲ್ಲ ಇದೆ ವ್ಯವಸ್ಥೆ
ಕುಂಭ ಮೇಳದಲ್ಲಿ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳು ಪ್ರತಿದಿನ 2 ಲಕ್ಷದಂತೆ ಒಟ್ಟು 6 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಭಕ್ತರಿಗೆ 4 ದಿನಗಳ ಕಾಲ ನಿರಂತರ ಊಟದ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ಬಯೋ ಟಾಯ್ಲೆಟ್ ವ್ಯವಸ್ಥೆ ನಿರ್ಮಿಸಲಾಗಿದೆ.
ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ
ಯಾತ್ರಾರ್ಥಿಗಳಿಗೆ ಉಚಿತ ವೈಫೈ ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ವಾರಣಾಸಿಯ ಕಾಶಿಯ ಮಾದರಿಯಲ್ಲಿ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿಗಾಗಿ ಭಕ್ತರು ಕಾಯ್ತಿದ್ದಾರೆ. ಒಟ್ಟಿನಲ್ಲಿ ಕಾಶಿಯೇ ಮಂಡ್ಯದಲ್ಲಿ ಮೈದಳೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ