ಮಂಡ್ಯ: ಆಗತಾನೆ ಇಳಿಸಿರೊ ಬಿಸಿ ಬಿಸಿ ಪಾಕ, ಪಾಕವನ್ನ ಟ್ರೇಯಲ್ಲಿ ಹಾಕುತ್ತಿರೋ ಮಹಿಳೆ. ಕೈಯಲ್ಲಿ ಸ್ಕೇಲ್ ಹಿಡಿದು ಅಳತೆ ಪ್ರಕಾರ ಬರ್ಫಿಯನ್ನ ಕತ್ತರಿಸುತ್ತಿರುವ ಇನ್ನೋರ್ವ ಮಹಿಳೆ. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ (Mandya News) ಮದ್ದೂರು (Maddur) ತಾಲೂಕಿನ ಗೆಜ್ಜಲಗೆರೆಯಲ್ಲಿರೊ ಮೆಗಾ ಡೇರಿಯಲ್ಲಿ. ಡಿಸೆಂಬರ್ 30 ರಂದು ಗೆಜ್ಜಲಗೆರೆಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ (Amit Shah) ಮೆಗಾ ಡೇರಿಯನ್ನ ಉದ್ಘಾಟನೆ ನಡೆಸಿದ್ದರು. ಇದರ ನಂತರ ಮೆಗಾ ಡೇರಿಯಲ್ಲಿ ಹೊಸದಾಗಿ ಉತ್ಪಾದನೆ ಮಾಡುತ್ತಿರೊ ಬೆಲ್ಲದ ಬರ್ಫಿಗೆ ಇನ್ನಿಲ್ಲದ ಡಿಮ್ಯಾಂಡ್ ಸೃಷ್ಠಿಯಾಗಿದೆ. ಮಾರ್ಕೆಟ್ನಲ್ಲಿ ಬೆಲ್ಲದ ಬರ್ಫಿಯನ್ನ (Jaggery Burfi) ಕೊಳ್ಳಲು ಜನ ನಾ ಮುಂದು ತಾ ಮುಂದು ಎಂದು ಕ್ಯೂ ನಲ್ಲಿ ನಿಲ್ತಿದ್ದಾರೆ.
ಧಾರವಾಡ ಅಂದ್ರೆ ಪೇಡಾ. ಬೆಳಗಾವಿ ಅಂದ್ರೆ ಕುಂದ ಎಂದು ಹೇಗೆ ಕರೆಯುತ್ತಾರೋ ಅದೇ ರೀತಿ ಈಗ ಮಂಡ್ಯ ಅಂದ್ರೆ ಬೆಲ್ಲದ ಬರ್ಫಿ ಎಂಬ ಟ್ರೆಂಡ್ ಸೃಷ್ಠಿಯಾಗಿದೆ. ಅಷ್ಟಕ್ಕೂ ಈ ಬೆಲ್ಲದ ಬರ್ಫಿಯ ವಿಶೇಷತೆ ಏನು ಅದಕ್ಕೆ ಏನೆಲ್ಲ ಮಿಶ್ರಣ ಮಾಡ್ತಾರೆ ಅಂತ ನಾವ್ ನಿಮಗೆ ತಿಳಿಸ್ತೀವಿ.
ಹೇಗೆ ತಯಾರಿಸ್ತಾರೆ ಗೊತ್ತಾ?
ಕೆಮಿಕಲ್ ರಹಿತ ಬೆಲ್ಲವನ್ನ ವಿಸಿ ಫಾರ್ಮ್ನಲ್ಲಿ ರೈತರಿಂದ ನೇರವಾಗಿ ಕೊಳ್ತಾರೆ. ಬಳಿಕ ಆ ಬೆಲ್ಲವನ್ನ ಪಾಕ ಮಾಡಿ ಬಳಿಕ ಅದಕ್ಕೆ ಡ್ರೈ ಫ್ರೂಟ್ಗಳಾದ ಗೋಡಂಬಿ, ಬಾದಾಮಿ ಹಾಗೂ ಕಲ್ಲಂಗಡಿ ಹಣ್ಣಿನ ಬೀಜಗಳನ್ನ ಮಿಶ್ರಣ ಮಾಡಿ ಶುದ್ಧ ಬೆಲ್ಲದ ಬರ್ಫಿಯನ್ನ ತಯಾರು ಮಾಡ್ತಾರೆ.
ಇದನ್ನೂ ಓದಿ: Hirodeshwar Temple: ಮಿನಿ ಕುಕ್ಕೆ ಕಲ್ಯಾಣ ಕರ್ನಾಟಕದ ಈ ಕ್ಷೇತ್ರ, ಇಲ್ಲೇ ಬೀಬಿ ಫಾತಿಮಾ ಗದ್ದುಗೆಗೂ ಪೂಜೆ!
ಡಯಾಬಿಟಿಸ್ ಇದ್ರೂ ಸಮಸ್ಯೆ ಇಲ್ಲ
ಇನ್ನು ವಿಶೇಷ ಏನಪ್ಪ ಅಂದ್ರೆ ಮಧುಮೇಹಿಗಳು ಸಹ ಈ ಬೆಲ್ಲದ ಬರ್ಫಿಯನ್ನ ಸವಿಯಬಹುದು ಹಾಗಾಗಿಯೇ ಈ ಬೆಲ್ಲದ ಬರ್ಫಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಠಿಯಾಗಿದೆ.
ಇದನ್ನೂ ಓದಿ: Success Story: ಹಮಾಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ 10 ಜನರಿಗೆ ಉದ್ಯೋಗ ನೀಡಿದ ರೋಚಕ ಕಥೆ!
ಒಂದೇ ದಿನಕ್ಕೆ 1 ಕ್ವಿಂಟಲ್ ಬರ್ಫಿ ತಯಾರಿ!
ಇನ್ನು ದಿನಕ್ಕೆ ನೂರು ಕೆಜಿಯಷ್ಟು ಬೆಲ್ಲದ ಬರ್ಫಿ ತಯಾರಾಗುತ್ತಿದೆ. ಈಗ ಮಾರುಕಟ್ಟೆಯಲ್ಲಿ ಬೆಲ್ಲದ ಬರ್ಫಿಗೆ ಸಿಕ್ಕಾ ಪಟ್ಟೆ ಡಿಮ್ಯಾಂಡ್ ಸೃಷ್ಠಿಯಾಗಿದ್ಥು ಮುಂಬರುವ ದಿನಗಳಲ್ಲಿ ಉತ್ಪಾದನೆಯಲ್ಲಿ ಮತ್ತಷ್ಟು ಹೆಚ್ಚಿಸೋಕೆ ಮನ್ಮೂಲ್ ನಿರ್ಧರಿಸಿದೆ. ಮಂಡ್ಯದ ಬೆಲ್ಲದ ಬರ್ಫಿಗೆ ಡಿಮ್ಯಾಂಡ್ ಬರ್ತಾಯಿರೋದು ಕೇವಲ ಮನ್ಮೂಲ್ ಗಷ್ಟೆ ಅಲ್ದೆ ರೈತರ ಮೊಗದಲ್ಲಿಯೂ ಮಂದಹಾಸ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ