• Home
  • »
  • News
  • »
  • mandya
  • »
  • Mandya Viral Video: ಈ ಥರ ಮಾಡಿದ್ರೆ ಮಳೆ ನಿಲ್ಲುತ್ತಾ? ಮಂಡ್ಯದ ವೈರಲ್ ವೀಡಿಯೋ ನೋಡಿ

Mandya Viral Video: ಈ ಥರ ಮಾಡಿದ್ರೆ ಮಳೆ ನಿಲ್ಲುತ್ತಾ? ಮಂಡ್ಯದ ವೈರಲ್ ವೀಡಿಯೋ ನೋಡಿ

ಮಳೆ ಮಳೆ ಮಳೆ

"ಮಳೆ ಮಳೆ ಮಳೆ"

ಧಾರಾಕಾರ ಮಳೆಯಾಗುತ್ತಿರುವುದರಿಂದ ಜನ ದೇವರ ಸಹಾಯ ಯಾಚಿಸುವುದು ಸಾಮಾನ್ಯ. ಆದರೆ, ಮಳೆ ನಿಲ್ಲಿಸು ಅಂತಾ ಮೌಢ್ಯದ ಹಿಂದೆ ಹೋಗೋರ ಸಂಖ್ಯೆ ಕಡಿಮೆಯದ್ದಲ್ಲ. ಇಲ್ಲೂ ಅಂತಹದ್ದೇ ಒಂದು ಘಟನೆ ನಡೆದಿದೆ ನೋಡಿ..

  • Share this:

    ಮಂಡ್ಯ: ಎಂತೆಂತ ಜನ ಇದ್ದಾರೆ ನೋಡ್ರೀ.. ಮಳೆ ಬಂದಿಲ್ಲ ಅಂದ್ರೆ ಕಪ್ಪೆಗೆ ಮದುವೆ ಮಾಡಿಸ್ತಾರೆ.. ಅದೇ ಮಳೆ ಜೋರಾಗಿ ಬಂದ್ರೆ….? ಇದು ಅದೇ ಕಥೆ.. ಮಳೆ ನಿಂತಿಲ್ಲ ಅನ್ನೋ ಕಾರಣಕ್ಕಾಗಿ ನಡೆಯುತ್ತಿರುವ ವಿಶಿಷ್ಟ ಪೂಜೆ. ಒಂದು ಅರ್ಥದಲ್ಲಿ ಇದೊಂದು ಥರ ಮೌಢ್ಯಾಚರಣೆ.. ಮಳೆ ನಿಂತಿಲ್ಲ ಅನ್ನೋ ಕಾರಣಕ್ಕಾಗಿ ಇದೆಂತಹ ಮೌಢ್ಯ ಅಂತೀರಾ? ಸರಿಯಾಗಿ ನೋಡಿ, ನೇಗಿಲಿನ ಗುಳವನ್ನ ಮರಕ್ಕೋ, ಕಂಬಕ್ಕೋ ಕಟ್ಟಿ ಅದಕ್ಕೆ ಪೂಜೆ ಮಾಡ್ತಿದ್ದಾರೆ. ಹೀಗೆ ಪೂಜೆ ಮಾಡ್ತಿರೋ ಮಂಡ್ಯದ (Mandya) ಮದ್ದೂರಿನ ಜನರ ಉದ್ದೇಶವೇ ಮಳೆ (Karnataka Rains) ನಿಲ್ಬೇಕೆನ್ನುವುದು..


    ನೇಗಿಲಿನ ಗುಳ ತಲೆಕೆಳಗಾಗಿಸಿ ಪೂಜೆ
    ಅದಕ್ಕಾಗಿ ನೇಗಿಲಿನ ಗುಳ ತಲೆಕೆಳಗಾಗಿಸಿ ಪೂಜೆ ಮಾಡ್ತಾರೆ. ಊರ ಹಿರಿಯರೇ ಮುಂದೆ ನಿಂತು ಪೂಜೆ ಪುನಸ್ಕಾರ ನೆರವೇರಿಸಿ ವರುಣನ ಮೊರೆ ಹೋಗ್ತಾರೆ. ಮಳೆ ನಿಲ್ಸು ಅಂತಾ ಪ್ರಾರ್ಥಿಸ್ತಾರೆ.


    ಇದನ್ನೂ ಓದಿ:  Gayatri Temple Tadas: ದಕ್ಷಿಣ ಭಾರತದ ಏಕೈಕ ಗಾಯತ್ರಿ ದೇಗುಲ! ತಡಸದಲ್ಲಿದೆ ತಪೋಭೂಮಿ!


    ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ, ಮಂಡ್ಯದಲ್ಲೂ ಎಡೆಬಿಡದೇ ಜಿಟಿಜಿಟಿ ಮಳೆಯಾಗ್ತಿದೆ. ಮಳೆ ಜೋರಾದ್ರೆ ಕೃಷಿ ಚಟುವಟಿಕೆಗೆ ಅಡ್ಡಿಯಾಗೋ ಆತಂಕನೂ ಇದೆ.


    ಇದನ್ನೂ ಓದಿ:  Uttara Kannada: ಉತ್ತರ ಕನ್ನಡದ ಹುಡುಗಿ ಕಾಮನ್​ವೆಲ್ತ್​ನಲ್ಲಿ! ಇವರೇ ನೋಡಿ ಕರುನಾಡ ಸಾಧಕಿ


    ಹಾಗಾಗಿ ಮಳೆ ನಿಲ್ಬೇಕೆನ್ನೋ ಕಾರಣಕ್ಕಾಗಿ ಇಂತಹ ವಿಶಿಷ್ಟ ಆಚರಣೆಗೆ ಜನ ಮುಂದಾಗಿದ್ದಾರೆ. ಮದ್ದೂರು ಜನರ ಪ್ರಕಾರ ನೇಗಿಲಿನ ಗುಳ ತಲೆಕೆಳಗಾಗಿಸಿದ್ರೆ ಮಳೆ ಕಡಿಮೆ ಆಗುತ್ತಂತೆ.. ಈ ನಂಬಿಕೆ ರೈತರ ಕೈ ಹಿಡಿಯುತ್ತಾ ಕಾದು ನೋಡಬೇಕಿದೆ.

    Published by:ಗುರುಗಣೇಶ ಡಬ್ಗುಳಿ
    First published: