Dog Prediction: ಯಾರಾಗ್ತಾರೆ ಸಿಎಂ? ಭವಿಷ್ಯ ನುಡಿದ ಮಂಡ್ಯದ ನಾಯಿ!

ಭೈರವ ಎಂಬ ನಾಯಿಯ ಭವಿಷ್ಯ!

ಭೈರವ ಎಂಬ ನಾಯಿಯ ಭವಿಷ್ಯ!

ಭೈರವ ನಾಯಿಯ ಹಲವು ಭವಿಷ್ಯಗಳು ಕಳೆದ ಎರಡು ವರ್ಷಗಳಿಂದ ನಿಜ ಆಗಿವೆಯಂತೆ!

  • News18 Kannada
  • 3-MIN READ
  • Last Updated :
  • Mandya, India
  • Share this:

ಮಂಡ್ಯ: ಕರ್ನಾಟಕದ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ. ಈ ಬಾರಿ ಯಾರು ಗೆಲ್ಲುತ್ತಾರೆ? ಯಾವ ಪಕ್ಷಕ್ಕೆ ಬಹುಮತ ಬರಲಿದೆ? ಕೊನೆಗೆ ಯಾರು ಮುಖ್ಯಮಂತ್ರಿ ಗದ್ದುಗೆ ಏರುತ್ತಾರೆ? ಸದ್ಯ ಚುನಾವಣೆ ಫಲಿತಾಂಶ (Karnataka Elections Results) ಬರುವವರೆಗೂ ಇದು ಮಿಲಿಯನ್ ಡಾಲರ್ ಪ್ರಶ್ನೆ! ಆದರೆ ಮಂಡ್ಯದಲ್ಲಿ (Mandya Viral Video)  ನಾಯಿಯೊಂದು ಈ ಬಾರಿ ಯಾರು ಸಿಎಂ (Karnataka Next CM) ಆಗ್ತಾರೆ (Dog Prediction) ಎಂದು ಭವಿಷ್ಯ ನುಡಿದಿದೆ.


ಮಂಡ್ಯ ನಗರದ ಅಶೋಕನಗರದ ನಿವಾಸಿ ಗೋಪಿ ಎಂಬುವವರ ನಾಯಿಯೆ ಹೀಗೆ ಭವಿಷ್ಯ ಹೇಳಿರೋದು. ಈ ನಾಯಿಯ ಹೆಸರು ಭೈರವ!
ಕಾಲ ಭೈರವೇಶ್ವರನ ಪೂಜೆ ಮಾಡಿದ ನಂತರ ಭವಿಷ್ಯ!
ಮಂಡ್ಯದ ಗೋಪಿ ಅವರು ಕಾಲ ಭೈರವೇಶ್ವರನ ಭಕ್ತರಾಗಿದ್ದಾರೆ. ಕಾಲ ಭೈರವನಿಗೆ ಪೂಜೆ ಮಾಡಿದ ಗೋಪಿಯವರು ಮುಂದಿನ ಸಿಎಂ ಯಾರಾಗ್ತಾರೆ ಎಂದು ನಾಯಿ ಬಳಿ ಭವಿಷ್ಯ ಕೇಳಲಾಗಿದೆ.
ಇದನ್ನೂ ಓದಿ: Mandya Viral Video: ನಾಯಿ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಂಡ್ಯದ ಬಾಲಕ!


ನಾಯಿಯ ಹೆಸರು ಭೈರವ!
ಕಳೆದ ಎರಡು ವರ್ಷಗಳಿಂದ ಭೈರವ ಎಂಬ ಈ ನಾಯಿಯ ಸೂಚಿಸುವ ಭವಿಷ್ಯ ನಿಜವಾಗುತ್ತಿದೆ ಎಂಬ ನಂಬಿಕೆಯಿದೆಯಂತೆ. ಬಸವರಾಜ ಬೊಮ್ಮಾಯಿ, ಎಚ್.​ಡಿ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ.
ಭೈರವ ನಾಯಿ ಕಚ್ಚಿದ್ದು ಇವರ ಫೋಟೋ!
ಈ ವೇಳೆ ಭೈರವ ನಾಯಿ ಎಚ್. ಡಿ.ಕುಮಾರಸ್ವಾಮಿ ಅವರ ಫೋಟೋವನ್ನು ಬಾಯಲ್ಲಿ ಕಚ್ಚಿ ಇವರೇ ಮುಂದಿನ ಸಿಎಂ ಆಗ್ತಾರೆ ಎಂದು ಸೂಚನೆ ನೀಡಿದೆ! 


ಇದನ್ನೂ ಓದಿ: Karnataka Polls: ಚುನಾವಣೆಯಲ್ಲಿ ಗೆಲ್ತೀಯಾ; ನಾಗಾಸಾಧು ಭವಿಷ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಖುಷ್


ಭೈರವ ನಾಯಿಯ ಹಲವು ಭವಿಷ್ಯಗಳು ಕಳೆದ ಎರಡು ವರ್ಷಗಳಿಂದ ನಿಜ ಆಗಿವೆಯಂತೆ. ಅದೇ ರೀತಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂದು ಈ ಬಾರಿ ಸೂಚಿಸಿದ  ಭವಿಷ್ಯ ಏನಾಗುತ್ತೆ ಎಂದು ಕಾದು ನೋಡಬೇಕಿದೆ. 

top videos
    First published: