Mother Save Child from Cobra: ಕಚ್ಚಲು ಬಂದ ಹಾವಿನಿಂದ ಕ್ಷಣಾರ್ಧದಲ್ಲಿ ತನ್ನ ಮಗನನ್ನು ರಕ್ಷಿಸಿದ ತಾಯಿ! ಎಲ್ಲೆಡೆ ವಿಡಿಯೋ ವೈರಲ್

ಹೌದು ಮಂಡ್ಯದಲ್ಲಿ ನಡೆದ ಘಟನೆಯೊಂದು ಎದೆ ಝಲ್ ಎನ್ನಿಸುವಂತೆ ಇದೆ. ಮಗುವೊಂದು ನಾಗರಹಾವು ಕಡಿತದಿಂದ ಜಸ್ಟ್ ಮಿಸ್ ಆಗಿದೆ. ತಾಯಿಯೂ ಕ್ಷಣಾರ್ಧದಲ್ಲಿ ತನ್ನ ಮಗನನ್ನು ಹಾವಿನಿಂದ ರಕ್ಷಣೆ ಮಾಡಿದ್ದಾಳೆ. ಇಲ್ಲದಿದ್ದರೆ ಆ ಹಾವು ಮಗುವನ್ನು ಕಚ್ಚಿ ಬಿಡುತ್ತಿತ್ತು. ತಾಯಿ ಮಗುವನ್ನು ರಕ್ಷಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಿಕ್ಕ ಮಕ್ಕಳನ್ನು ಪೋಷಕರು ಎಷ್ಟೇ ಸುರಕ್ಷತೆಯಿಂದ ನೋಡಿಕೊಂಡ್ರೂ ಒಂದಲ್ಲ ಒಂದು ತೊಂದರೆಗಳು ಹುಡುಕಿಕೊಂಡು ಬರುತ್ತವೆ. ಅದು ಆಗಾಗ ಆರೋಗ್ಯ ಸರಿ ಇಲ್ಲದೇ ಇರುವುದು, ಇಲ್ಲವೇ ಅಚಾನಕ್ಕಾಗಿ ಸಂಭವಿಸುವ ಘಟನೆಗಳಿಂದ ಮಕ್ಕಳಿಗೆ ತೊಂದರೆಯಾಗಬಹುದು. ಅದಕ್ಕೆ ಮಕ್ಕಳನ್ನು ಆದಷ್ಟು ಸುರಕ್ಷಿತೆಯಿಂದ ನೋಡಿಕೊಳ್ಳಬೇಕು. ಹೌದು ಮಂಡ್ಯದಲ್ಲಿ ನಡೆದ ಘಟನೆಯೊಂದು ಎದೆ ಝಲ್ ಎನ್ನಿಸುವಂತೆ ಇದೆ. ಮಗುವೊಂದು ನಾಗರಹಾವು (Cobra) ಕಡಿತದಿಂದ ಜಸ್ಟ್ ಮಿಸ್ ಆಗಿದೆ. ತಾಯಿಯೂ (Mother) ಕ್ಷಣಾರ್ಧದಲ್ಲಿ ತನ್ನ ಮಗನನ್ನು (Son) ಹಾವಿನಿಂದ ರಕ್ಷಣೆ ಮಾಡಿದ್ದಾಳೆ. ಇಲ್ಲದಿದ್ದರೆ ಆ ಹಾವು ಮಗುವನ್ನು ಕಚ್ಚಿ ಬಿಡುತ್ತಿತ್ತು. ತಾಯಿ ಮಗುವನ್ನು ರಕ್ಷಿಸುತ್ತಿರುವ ವಿಡಿಯೋ (Video) ಎಲ್ಲೆಡೆ ವೈರಲ್ (Viral) ಆಗಿದೆ.

  CCTVಯಲ್ಲಿ ಸೆರೆಯಾಯ್ತು ಎದೆ ಝಲ್ ಎನಿಸುವ ದೃಶ್ಯ
  ಬಾಲಕನೊಬ್ಬ ಮನೆಯಿಂದ ಹೊರಗೆ ಹೋಗೋಕೆ ರೆಡಿಯಾಗಿರುತ್ತಾನೆ. ಹಿಂದೆಯೇ ಅವನ ತಾಯಿ ಇರುತ್ತಾಳೆ. ಮಗು ಒಂದು ಹೆಜ್ಜೆಯನ್ನು ಮೆಟ್ಟಿಲಿನಿಂದ ಕೆಳಗೆ ಇಡುತ್ತಾನೆ. ಇನ್ನೇನು ಹಾವಿನ ಮೇಲೆ ಕಾಲಿಡಬೇಕಿತ್ತು, ಅಷ್ಟರಲ್ಲಿ ನಾಗರಹಾವು ಹಿಂದಕ್ಕೆ ಸರಿಯುತ್ತೆ. ಮಗುವಿನತ್ತ ತನ್ನ ತಲೆಯೆತ್ತಿ ಬುಸ್‍ಗುಟ್ಟುತ್ತಾ ಬರುತ್ತೆ. ಅಷ್ಟರಲ್ಲಿ ತಾಯಿ ಓಡಿ ಬಂದು ಮಗುವನ್ನು ಎತ್ತಿಕೊಂಡು, ಹಾವು ಕಚ್ಚುವುದನ್ನು ತಪ್ಪಿಸುತ್ತಾಳೆ.

  ಎಲ್ಲೆಡೆ ವೈರಲ್ ಆದ ವಿಡಿಯೋ
  ಮಂಡ್ಯದ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ದೃಶ್ಯವು ಮನೆ ಬಳಿ ಇರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ನಾಗರಹಾವೊಂದು ಮನೆ ಬಳಿ ಬರುತ್ತದೆ. ನಿಧಾನವಾಗಿ ಮೆಟ್ಟಿಲ ಬಳಿ ಬಂದು ಮಲಗುತ್ತೆ. ಆಗ ಮಗುವು ರೆಡಿಯಾಗಿ ಬರುತ್ತೆ. ಮಗುಗೆ ಹಾವು ಕಚ್ಚುವುದನ್ನು ತಪ್ಪಿಸುವ ದೃಶ್ಯ ಸೆರೆಯಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.  ತಾಯಿಯ ಧೈರ್ಯಕ್ಕೆ ಭಾರೀ ಮೆಚ್ಚುಗೆ
  ತಾಯಿ ಮಗುವನ್ನು ಹಾವಿನಿಂದ ರಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ತಾಯಿಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆ ತಾಯಿಯ ಧೈರ್ಯ ಮೆಚ್ಚಬೇಕು. ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Independence Day 2022: ಆ. 15, ಭಾರತದ ಜೊತೆ ಯಾವೆಲ್ಲಾ ರಾಷ್ಟ್ರಗಳು ಸ್ವಾತಂತ್ರ್ಯ ದಿನ ಆಚರಿಸುತ್ತವೆ?

  ಹಾವಿನ ಕಡಿತದ ಪರಿಣಾಮ
  ಹಾವಿನ ಕಡಿತದ ಪರಿಣಾಮವು, ಹಾವಿನ ಜಾತಿಗಳು, ಹಾವು ಕಚ್ಚಲ್ಪಟ್ಟ ದೇಹದ ಭಾಗ, ವಿಷವು ಒಳ ಸೇರಲ್ಪಟ್ಟ ಪ್ರಮಾಣ, ಮತ್ತು ಹಾನಿಗೊಳಪಟ್ಟ ವ್ಯಕ್ತಿಯ ಆರೋಗ್ಯ ಸ್ಥಿತಿಗಳು ಮುಂತಾದವುಗಳನ್ನು ಒಳಗೊಂಡಿರುತ್ತೆ. ಭಯದ ಮತ್ತು ಭೀತಿಯ ಭಾವನೆಗಳು ಹಾವಿನ ಕಡಿತದ ನಂತರ ಸಾಮಾನ್ಯವಾಗಿರುತ್ತವೆ ಮತ್ತು ಸ್ವನಿಯಂತ್ರಿತ ನರಗಳ ವ್ಯವಸ್ಥೆಯ ಮೂಲಕ, ಅಂದರೆ ರೇಸಿಂಗ್ ಹಾರ್ಟ್ ಮತ್ತು ಪಿತ್ತೋದ್ರೇಕಗಳ ಮೂಲಕ ಒಂದು ಗುಣಲಕ್ಷಣಗಳ ಸೇಟ್‍ನ ರೋಗಲಕ್ಷಣಗಳ ಮೂಲಕ ಸಂವಹಿಸಲ್ಪಡುತ್ತದೆ.

  ವಿಷಯುಕ್ತ-ಅಲ್ಲದ ಹಾವುಗಳ ಕಡಿತಗಳೂ ಕೂಡ ಹಾನಿಯನ್ನು ಉಂಟುಮಾಡುತ್ತವೆ, ಅನೇಕ ವೇಳೆ ಹಾವಿನ ಹಲ್ಲು, ಅಥವಾ ಅದರ ಪರಿಣಾಮವಾಗಿ ಉಂಟಾಗುವ ಸೋಂಕಿನ ಮೂಲಕದ ಸೀಳುವಿಕೆಯ ಕಾರಣದಿಂದ ಉಂಟಾಗುತ್ತವೆ. ಹಾವಿನ ಕಡಿತವು ಅತಿ ಸಂವೇದನಶೀಲತೆಯ ಪ್ರತಿಕ್ರಿಯೆಯಿಂದಲೂ ಕೂಡ ಉಲ್ಭಣಗೊಳ್ಳುತ್ತದೆ, ಅದು ಸಂಭಾವ್ಯವಾಗಿ ಮಾರಣಾಂತಿಕವಾಗಿರುತ್ತದೆ. ಹಾವಿನ ಕಡಿತಕ್ಕೆ ಪ್ರಥಮ ಚಿಕಿತ್ಸೆಯ ಶಿಫಾರಸುಗಳು ಹಾವುಗಳು ವಾಸವಾಗಿರುವ ಪ್ರದೇಶದ ಮೇಲೆ ಅವಲಂಬಿತವಾಗಿರುತ್ತವೆ, ಕೆಲವು ಜಾತಿಗಳ ಹಾವುಗಳಿಗೆ ಆಯ್ಕೆಮಾಡಲ್ಪಟ್ಟ ಚಿಕಿತ್ಸೆಗಳು ಇತರ ಜಾತಿಯ ಹಾವುಗಳಿಗೂ ಕೂಡ ಪರಿಣಾಮಕಾರಿಯಾದ ಚಿಕಿತ್ಸೆಗಳಾಗಿರುತ್ತವೆ.

  ಇದನ್ನೂ ಓದಿ: Independence Day 2022: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳೋದು ಹೇಗೆ? ಇಲ್ಲಿದೆ ನೋಡಿ!

  ಹಾವಿನ ನಂಜು 
  ಹಾವುಗಳು ಕೆಲವು ವೇಳೆ ಮಯೋಸಿನ್ ಕಾಲದಲ್ಲಿ ವಿಷದ ಉತ್ಪಾದನೆ ಮಾಡುವಿಕೆ ಮತ್ತು ಅದನ್ನು ಬಿಡುಗಡೆ ಮಾಡುವಿಕೆಗೆ ಅವಶ್ಯಕವಾದ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುತ್ತವೆ ಎಂದು ಸೂಚಿಸಲಾಗಿದೆ. ತೃತೀಯ ಶೇಣಿಯ-ಮಧ್ಯದ ಸಮಯದಲ್ಲಿ, ಹೆಚ್ಚಿನ ಹಾವುಗಳು ಹೆನೊಫೀಡಿಯಾ ಸುಪರ್‌ಸಂತತಿಗೆ ಸೇರಿದ ದೊಡ್ಡ ಆಂಬುಷ್ ಪರಭಕ್ಷಕಗಳಾಗಿದ್ದವು, ಅವುಗಳು ತಮ್ಮ ಶಿಕಾರಿಗಳನು ಕೊಲ್ಲುವುದಕ್ಕೆ ಸಂಕೋಚನವನ್ನು ಬಳಸಿಕೊಳ್ಳುತ್ತವೆ.
  Published by:Savitha Savitha
  First published: