ಮಂಡ್ಯ: ಶ್ರೀರಂಗಪಟ್ಟಣ ಐತಿಹಾಸಿಕ ನಗರಿ, ಸ್ಮಾರಕಗಳ ತವರೂರು, ಹೀಗೆ ಹತ್ತಾರು ಹೆಸರುಗಳಿಂದ ಖ್ಯಾತಿ ಪಡೆದಿರೋ ಇಲ್ಲಿ ಹುಡುಕಿದಷ್ಟು ಸ್ಮಾರಕಗಳು ಸಿಗುತ್ತಲೇ ಇರುತ್ತವೆ. ಆದ್ರೆ ಇಲ್ಲಿ ಕೆಲವೊಂದು ಸ್ಮಾರಕಗಳು ಇರೋದು ಇಂದಿಗೂ ಯಾರಿಗೂ ಗೊತ್ತಿಲ್ಲ. ಹೀಗೆ ಯಾರಿಗೂ ತಿಳಿಯದೇ ಇರುವ ಬ್ರಿಟೀಷರ (British Grave) ಸಮಾಧಿಯೊಂದರ (British Garrison Cemetery) ಬಗ್ಗೆ ನಾವ್ ನಿಮಗೆ ಹೇಳ್ತೀವಿ ನೋಡಿ.
ಸುಮಾರು 8ನೇ ಶತಮಾನದ ಗಂಗರ ಕಾಲದಿಂದ ಹೈದರಾಲಿ, ಟಿಪ್ಪು ಸುಲ್ತಾನ್ ಕಾಲದವರೆಗಿನ ಸುಮಾರು 150 ರಿಂದ 170 ಸಮಾಧಿಗಳು ಶ್ರೀರಂಗಪಟ್ಟಣದಲ್ಲಿವೆ. ಇವುಗಳಲ್ಲಿ ಕೆಲವು ಕೋಟೆ, ಕಂದಕ, ದೇವಾಲಯ, ಚರ್ಚ್, ಮಸೀದಿ, ಸೇರಿಕೊಂಡು ಕಣ್ಮರೆಯಾಗಿವೆ. ಅಲ್ಲದೆ ಹೀಗೆ ಗುಪ್ತವಾಗಿ ಅಡಕವಾಗಿರೋದ್ರಲ್ಲಿ ಬ್ರಿಟೀಷರ ಕಾಲದ ಗ್ಯಾರೀಸನ್ ಸೆಮಂಟರಿ ಕೂಡ ಒಂದು.
3 ಎಕರೆಯಲ್ಲಿ ಸಮಾಧಿಗಳ ಸಾಮ್ರಾಜ್ಯ!
ಸುಮಾರು ಮೂರು ಎಕರೆ ವಿಸ್ತೀರ್ಣದಲ್ಲಿ ನೋಡಲು ಅತ್ಯಾಕರ್ಷಕವಾಗಿರುವ ಈ ಸೆಮಂಟರಿಯಲ್ಲಿ 500 ಕ್ಕೂ ಅಧಿಕ ಬ್ರಿಟೀಷರ ಸಮಾಧಿಗಳಿವೆ. ಗುಪ್ತವಾಗಿ ಅಡಗಿರುವ ಗ್ಯಾರೀಸನ್ ಸೆಮಂಟರಿಯ ಮಾಹಿತಿ ಕೊರತೆಯಿಂದ ಆ ಪ್ರದೇಶಕ್ಕೆ ಪ್ರವಾಸಿಗರು ಯಾರೂ ಹೋಗೋದಿಲ್ಲ.
ಟಿಪ್ಪು ಸುಲ್ತಾನ್ಗೆ ಲಿಂಕ್
ಕ್ರಿಸ್ತ ಶಕ 1799 ಮೇ 4ರಂದು 4ನೇ ಆಂಗ್ಲೋ- ಮೈಸೂರು ಯುದ್ದ ನಡೆದು ಟಿಪ್ಪು ಸುಲ್ತಾನ್ ಸೋತು ಶ್ರೀರಂಗಪಟ್ಟಣವನ್ನು ಬ್ರಿಟೀಷರು ತಮ್ಮ ವಶಕ್ಕೆ ತೆಗೆದುಕೊಂಡ್ರು. ನಂತರ 1800 ರಿಂದ 1860ರವರೆಗೆ ಮೈಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಬ್ರಿಟೀಷರ ಕ್ಯಾಪ್ಟನ್, ಕರ್ನಲ್, ಡೆಪ್ಯುಟಿ ಕರ್ನಲ್ಗಳು ಇಲ್ಲಿ ನೆಲೆಸಿದ್ದರು.
ಬ್ರಿಟೀಷರಿಗೆ ಮಾತ್ರ ಮೀಸಲು!
ಮಡಿದ ಬ್ರಿಟೀಷ್ ಅಧಿಕಾರಿಗಳ ಶವಗಳನ್ನು ಹೂಳಲು ಒಂದು ಉತ್ತಮ ಸ್ಥಳವನ್ನು ಆರಿಸಿಕೊಂಡು ಅದನ್ನು ಬ್ರಿಟೀಷರಿಗೆ ಮಾತ್ರ ಮೀಸಲಾಗಿಡಲಾಯ್ತು. ಗಣ್ಯರು, ಸೈನಿಕರು ಮೃತಪಟ್ಟಾಗ ಮಾತ್ರ ಇಲ್ಲಿ ಹೂತು ಆ ಜಾಗದಲ್ಲಿ ಸಮಾಧಿ ಮಾಡಲಾಗ್ತಿತ್ತು. ಬ್ರಿಟೀಷರ 500ಕ್ಕೂ ಹೆಚ್ಚು ಸಮಾಧಿಗಳನ್ನು ಆಕರ್ಷಕವಾಗಿ ಇಲ್ಲಿ ಕಟ್ಟಿಸಲಾಗಿದೆ. ಇದಕ್ಕೆ ಗ್ಯಾರೀಸನ್ ಸೆಮಂಟರಿ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: Mandya Jaggery Burfi: ಮಂಡ್ಯ ಬೆಲ್ಲದ ಬರ್ಫಿಗೆ ಹೆಚ್ಚುತ್ತಿದೆ ಬೇಡಿಕೆ, ನೀವೂ ಒಮ್ಮೆ ರುಚಿ ನೋಡಿ!
ಯುರೋಪ್ನ ಸೇನಾಟೋಪ್ ಶೈಲಿಯಲ್ಲಿ ಸಮಾಧಿಗಳನ್ನು ನಿರ್ಮಾಣ ಮಾಡಲಾಗಿದೆ. ಸಮಾಧಿಯನ್ನು ಚುರುಕಿಗಾರೆ, ಸುಟ್ಟ ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ. ಈ ಸಮಾಧಿಯ ಮೇಲೆ ಅಮೃತ ಶಿಲೆಯಲ್ಲಿ ಬೈಬಲ್ ಸಂದೇಶ, ಹೆಸರು, ಹುದ್ದೆ, ಜೀವಿತಾವಧಿಯನ್ನು ಕೆತ್ತಲಾಗಿದೆ.
ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Melukote Cheluvanarayana: ಮೇಲುಕೋಟೆ ಚೆಲುವನಾರಾಯಣನ ದರ್ಶನಕ್ಕೆ ಬಂದ ಗಿಳಿ!
ಇಲ್ಲಿ ಮಡಿದ ಕರ್ನಲ್ ಮ್ಯೂರಾನ್ರ 3ನೇ ತಲೆಮಾರಿನವರು 2008ರಲ್ಲಿ ಎಲ್ಲಾ ಸಮಾಧಿಗಳ ಜಿರ್ಣೊದ್ದಾರ ಮಾಡಿದ್ದಾರೆ. ಸ್ವಿಜರ್ ಲ್ಯಾಂಡ್ನಲ್ಲಿ ನೆಲೆಸಿರುವ ಇವರು ಜಾನ್ ಡಿ ಮ್ಯೂರಾನ್ ಸಂಸ್ಥೆಯನ್ನು ಸ್ಥಾಪಿಸಿ ಸಮಾಧಿಗಳ ನಿರ್ವಹಣೆ ಮಾಡ್ತಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ