Mandya Viral Video: ನಾಯಿ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಂಡ್ಯದ ಬಾಲಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೊಲದಲ್ಲಿ ಒಟ್ಟು 8 ಚಿರತೆ ಮರಿಗಳಿದ್ವು, ಅದರಲ್ಲಿ 2 ಮರಿಯನ್ನು ಮಕ್ಕಳು ಮನೆಗೆ ಕರೆದುಕೊಂಡು ಬಂದಿದ್ದಾರೆ. ಚಿರತೆ ಮರಿಯನ್ನ ಕೋಳಿ ಗೂಡಿನಲ್ಲಿಟ್ಟು ಪೋಷಣೆ ಮಾಡಲು ಮುಂದಾಗಿದ್ದಾರೆ!

  • News18 Kannada
  • 4-MIN READ
  • Last Updated :
  • Mandya, India
  • Share this:

    ಮಂಡ್ಯ: ಈ ಪುಟ್ಟ ಬಾಲಕನ ಕೈಯಲ್ಲಿ ಮುದ್ದು ಪ್ರಾಣಿ, ಸುತ್ತಲೂ ಮೂಗಿನ ಮೇಲೆ ಬೆರಳಿಟ್ಟು ಈ ಬಾಲಕನನ್ನೇ ನೋಡ್ತಿರೋ ಸ್ಥಳೀಯರು ಇಲ್ಲಿ ಬಾಲಕ ನಾಯಿ (Dog) ಅಂತ ಹಿಡಿದುಕೊಂಡಿರೋ ಈ ಪ್ರಾಣಿನೇ ಕುತೂಹಲದ ಕೇಂದ್ರಬಿಂದು. ಅರೇ! ಹಾಗಾದ್ರೆ ಈ ಪ್ರಾಣಿ ಯಾವ್ದು? ಅಷ್ಟಕ್ಕೂ ಈ ಪ್ರಾಣಿಯನ್ನು ಹಿಡಿದಿರೋ (Viral News) ಬಾಲಕ ಕುತೂಹಲ ಸೃಷ್ಟಿಸಿದ್ದೇಗೆ? ನಾವ್ ಹೇಳ್ತೀವಿ ಕೇಳಿ.


    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಮಕ್ಕಳು ಮಾಡಿರುವ ಒಂದು ಕೆಲಸ ಇದೀಗ ಭಾರೀ ಸುದ್ದಿ ಮಾಡಿದೆ. ಈ ಮಕ್ಕಳು ನಾಯಿ ಮರಿಯಂತೆ ಚಿರತೆ ಮರಿಗಳನ್ನ ಮನೆಗೆ ತಂದಿದ್ದಾರೆ! ಹೌದು, ಇದು ನಂಬಲು ಸ್ವಲ್ಪ ಕಷ್ಟವಾದ್ರೂ ನಿಜಾನೇ!


    ಆಟವಾಡ್ತಿದ್ದ ಮಕ್ಕಳಿಗೆ ಕಂಡ ಚಿರತೆ ಮರಿ!
    ಕೀರ್ತಿ ಕುಮಾರ್ ಎಂಬುವವರ ಜಮೀನಿನಲ್ಲಿ ಮಕ್ಕಳು ಆಟವಾಡ್ತಿದ್ದ ಸಮಯದಲ್ಲಿ ಚಿರತೆ ಮರಿಯನ್ನ ಮಕ್ಕಳು ನೋಡಿದ್ದಾರೆ. ಭಾರೀ ಚಂದದ ನಾಯಿ ಅಂತ ಭಾವಿಸಿ ಆ ಮರಿಯನ್ನು ಮನೆಗೆ ತೆಗೆದುಕೊಂಡು ಬಂದಿದ್ದಾರೆ.




    ಕೋಳಿ ಗೂಡಿನಲ್ಲಿ ಚಿರತೆ ಮರಿ!
    ಹೊಲದಲ್ಲಿ ಒಟ್ಟು 8 ಚಿರತೆ ಮರಿಗಳಿದ್ವು, ಅದರಲ್ಲಿ 2 ಮರಿಯನ್ನು ಮಕ್ಕಳು ಮನೆಗೆ ಕರೆದುಕೊಂಡು ಬಂದಿದ್ದಾರೆ. ಚಿರತೆ ಮರಿಯನ್ನ ಕೋಳಿ ಗೂಡಿನಲ್ಲಿಟ್ಟು ಪೋಷಣೆ ಮಾಡಲು ಮುಂದಾಗಿದ್ದಾರೆ!


    ಇದನ್ನೂ ಓದಿ: British Garrison Cemetery: ಶ್ರೀರಂಗಪಟ್ಟಣದಲ್ಲಿ ಬ್ರಿಟೀಷರ 500 ಕ್ಕೂ ಹೆಚ್ಚು ಸಮಾಧಿ!


    ಸತ್ಯ ಬಯಲಿಗೆ ಬಂತು ನೋಡಿ!
    ಆದ್ರೆ ಮನೆಗೆ ತಂದ್ಮೇಲೇ ಇವು ನಾಯಿಮರಿಯಲ್ಲ, ಚಿರತೆ ಮರಿ ಎಂಬ ಸತ್ಯ ಬಯಲಿಗೆ ಬಂದಿದೆ. ಈ ಸುದ್ದಿ ಗೊತ್ತಾಗ್ತಿದ್ದಂತೆ ಚಿರತೆ ಮರಿಯನ್ನ ನೋಡಲು ಕೂಳಗೆರೆ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.


    ಇದನ್ನೂ ಓದಿ: Mandya Jaggery Burfi: ಮಂಡ್ಯ ಬೆಲ್ಲದ ಬರ್ಫಿಗೆ ಹೆಚ್ಚುತ್ತಿದೆ ಬೇಡಿಕೆ, ನೀವೂ ಒಮ್ಮೆ ರುಚಿ ನೋಡಿ!


    ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ತಂಡ ಚಿರತೆ ಮರಿಗಳನ್ನ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: