ಪ್ರತಿವರ್ಷ ಮದ್ಯಪಾನದಿಂದ 28 ಲಕ್ಷ ಜನರು ಸಾವು: ಅಧ್ಯಯನ

news18
Updated:August 25, 2018, 1:13 PM IST
ಪ್ರತಿವರ್ಷ ಮದ್ಯಪಾನದಿಂದ 28 ಲಕ್ಷ ಜನರು ಸಾವು: ಅಧ್ಯಯನ
news18
Updated: August 25, 2018, 1:13 PM IST
-ನ್ಯೂಸ್ 18 ಕನ್ನಡ

ಮದ್ಯಪಾನ ಎಂಬುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವ ವೈನ್ ಅಥವಾ ಬಿಯರ್ ಕುಡಿಯುವುದರಿಂದಲೂ ಆರೋಗ್ಯದ ಮೇಲೆ ಪರಿಣಾಮ ಬೀರಿ, ಸಾವು ಸಂಭವಿಸುತ್ತಿದೆ ಎಂದು ಅಧ್ಯಯನ ತಂಡವೊಂದು ತಿಳಿಸಿದೆ. 195 ದೇಶಗಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಪ್ರತಿ ವರ್ಷ ಮದ್ಯದ ಅಮಲಿನಿಂದ 2.8 ಮಿಲಿಯನ್​ಗಿಂತ ಹೆಚ್ಚಿನ ಜನರು ಸಾವಿಗೀಡಾಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 'ಈ ಮಹತ್ವದ ಅಧ್ಯಯನದಿಂದ ಕುಡಿತದಲ್ಲಿ ಯಾವುದೇ ಕನಿಷ್ಠ ಮಟ್ಟವಿಲ್ಲ' ಎಂಬುದನ್ನು ವಾಷಿಂಗ್ಟನ್ ಹೆಲ್ತ್ ಮೆಟ್ರಿಕ್ಸ್​ನ ಸಂಶೋಧಕ ಮ್ಯಾಕ್ಸ್​ ಗ್ರಿಸ್ವಲ್ಡ್​ ತಿಳಿಸಿದ್ದಾರೆ.

ಇತ್ತೀಚಿನ ಕೆಲ ಸಂಶೋಧನೆಯಲ್ಲಿ ಆಲ್ಕೋಹಾಲ್​ನಿಂದ ಹೃದ್ರೋಗವನ್ನು ನಿಯಂತ್ರಿಸಬಹುದು ಎಂದು ಕಂಡು ಕೊಂಡಿರುವುದಾಗಿ ವರದಿಯಾಗಿತ್ತು. ಇದರ ಬೆನ್ನಲ್ಲೇ ನಡೆಸಲಾಗಿರುವ ಈ ಅಧ್ಯಯನವು ಕುಡಿತದಿಂದ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯಾಗುತ್ತದೆ ಎಂಬುದನ್ನು ತೋರಿಸಿದೆ. ಅಲ್ಲದೆ ಅಪಾಯದ ಮಟ್ಟವು ಪ್ರತಿನಿತ್ಯ ಕುಡಿಯುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿರುತ್ತದೆ ಎಂದು ಗ್ರಿಸ್ವಲ್ಡ್ ಹೇಳಿದ್ದಾರೆ.

10 ಗ್ರಾಂ.ಗಳಷ್ಟು ಆಲ್ಕೋಹಾಲ್​ ಹೊಂದಿರುವ ಸಣ್ಣ ಬಿಯರ್, ವೈನ್ ಅಥವಾ ಶಾಟ್​ ಸ್ಪಿರಿಟ್ಸ್​ನ್ನು ಪ್ರತಿನಿತ್ಯ ಕುಡಿಯುವವರ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಒಂದು ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 914 ಮಂದಿಗೆ ಹಲವು ರೀತಿಯ ಅನಾರೋಗ್ಯಕರ ಸಮಸ್ಯೆಗಳಿರುವುದು ಕಂಡು ಬಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ದಿನಕ್ಕೆ ಎರಡು ಬಾರಿ ಮದ್ಯಪಾನವನ್ನು ಮಾಡುವವರಿಗೆ ಹೋಲಿಸಿದರೆ ಈ ಅಪಾಯವು ಶೇ 7.0 ಅಧಿಕವಾಗಿರುತ್ತದೆ. ಹಾಗೆಯೇ ದಿನ ಐದು ಬಾರಿ ಕುಡಿಯುವುದರಿಂದ ಶೇ.37 ಅಪಾಯವಿದೆ. ಆದರೆ ಕಡಿಮೆ ಕುಡಿಯುವುದು ಉತ್ತಮವಾದರೂ, ಕುಡಿಯದಿರುವುದೇ ಅತ್ಯುತ್ತಮ ಎಂದು ಸಂಶೋಧಕರು ತಿಳಿಸಿದ್ದಾರೆ. ವಾರಕ್ಕೆ 14ಕ್ಕಿಂತ ಹೆಚ್ಚು ಬಾರಿ ಕುಡಿಯಬಾರದು ಎಂದು ತಿಳಿಸಿರುವ ಬ್ರಿಟನ್​ನ ಆರೋಗ್ಯ ಪ್ರಾಧಿಕಾರ ಇದರಿಂದ ಆಲ್ಕೋಹಾಲ್​ನ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದಿದ್ದಾರೆ.

2016ರ ಅಂಕಿ ಅಂಶಗಳ ಪ್ರಕಾರ ಕುಡಿಯುವುದು ಅಕಾಲಿಕ ಮರಣ ಮತ್ತು ರೋಗಕ್ಕೆ ಕಾರಣವಾಗುತ್ತಿದೆ. ಸಾವಿಗೆ ಸಂಬಂಧಿಸಿದಂತೆ ಕುಡಿತವು ಏಳನೇ ಅಪಾಯಕಾರಿ ಅಂಶ ಎಂಬುದು ಸಾಬೀತಾಗಿದೆ. ಇದರಲ್ಲಿ ಕುಡಿತದಿಂದ ಶೇ. 2ರಷ್ಟು ಮಹಿಳೆಯರು ಮತ್ತು ಶೇ. 7ರಷ್ಟು ಪುರುಷರು ಸಾವನ್ನಪ್ಪಿದ್ದಾರೆ. ಅತಿ ಹೆಚ್ಚು ಸಾವಿಗೆ ಅಧಿಕ ರಕ್ತದೊತ್ತಡ, ಧೂಮಪಾನ, ಕಡಿಮೆ ಜನನ ತೂಕ ಮತ್ತು ಮಧುಮೇಹ, ಬೊಜ್ಜು ಮತ್ತು ಮಾಲಿನ್ಯ ಕಾರಣವಾಗುತ್ತಿದೆ. ಅದರಲ್ಲಿ ಶೇ.12ರಷ್ಟು 15-49 ನಡುವಿನ ವರ್ಷದವರು ಆಲ್ಕೋಹಾಲ್​ನಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದನ್ನು ಅಧ್ಯಯನ ತಂಡ ತಿಳಿಸಿದೆ.

ಅತಿ ಹೆಚ್ಚು ಮದ್ಯಪಾನಿಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್​(ಶೇ.97) ಮೊದಲ ಸ್ಥಾನದಲ್ಲಿದ್ದರೆ, ನಾರ್ವೆ, ಅರ್ಜೆಂಟಿನಾ, ಜರ್ಮನಿ ಮತ್ತು ಪೋಲೆಂಡ್ (ಶೇ.94) ನಂತರದ ಸ್ಥಾನದಲ್ಲಿದೆ. ಏಷ್ಯಾದಲ್ಲಿ ದಕ್ಷಿಣ ಕೊರಿಯಾ(ಶೇ.91) ಅಗ್ರಸ್ಥಾನವನ್ನು ಪಡೆದಿದೆ. ಡೇನ್ಸ್(ಶೇ.95)​ನಲ್ಲಿ ಅತಿ ಹೆಚ್ಚು ಮದ್ಯ ಸೇವಿಸುವ ಮಹಿಳೆಯರಿದ್ದಾರೆ. ನಾರ್ವೆ(ಶೇ.91), ಜರ್ಮನಿ ಮತ್ತು ಅರ್ಜೆಂಟೀನಾ(ಶೇ.90) ಹಾಗೂ ನ್ಯೂಜಿಲೆಂಡ್ (ಶೇ.89) ಉಳಿದ ಸ್ಥಾನಗಳನ್ನು ಹಂಚಿಕೊಂಡಿದೆ.
Loading...

ರೋಮಾನಿಯಾದಲ್ಲಿ ಪುರುಷರು ಸರಾಸರಿ ದಿನಕ್ಕೆ ಎಂಟು ಯುನಿಟ್​ ಕುಡಿಯುತ್ತಾರೆ ಎಂದು  ಸಮೀಕ್ಷೆ ತಿಳಿಸಿದೆ. ಹಾಗೆಯೇ ಪೋರ್ಚುಗಲ್, ಲಕ್ಸೆಂಬರ್ಗ್, ಲಿಥುವಾನಿಯಾ ಮತ್ತು ಉಕ್ರೇನ್ ದೇಶಗಳ ಜನರು ದಿನಕ್ಕೆ ಏಳು ಯುನಿಟ್​ಗಳನ್ನು ಸೇವಿಸುತ್ತಾರೆ.

ಅದೇ ರೀತಿ ಉಕ್ರೇನ್ ಮಹಿಳೆಯರು ದಿನಕ್ಕೆ ನಾಲ್ಕು ಗ್ಲಾಸ್​ ಅಥವಾ ಶಾಟ್ಸ್​​ ಕುಡಿದರೆ, ಅಂಡೋರಾ, ಲಕ್ಸೆಂಬರ್ಗ್, ಬೆಲಾರಸ್, ಸ್ವೀಡೆನ್, ಡೆನ್ಮಾರ್ಕ್​, ಐರ್ಲೆಂಡ್ ಮತ್ತು ಬ್ರಿಟನ್ ದೇಶಗಳ ಮಹಿಳೆಯರು ದಿನಕ್ಕೆ ಮೂರು ಯುನಿಟ್​​ಗಳನ್ನು ಕುಡಿಯುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ