Paaru Serial: ವೈಮನಸ್ಸು ಮರೆತು ಮತ್ತೆ ಒಂದಾದ ಜನನಿ-ಪಾರು! ಹೆಚ್ಚಿತು ಕುತೂಹಲ

ಜೀ ಕನ್ನಡ ವಾಹಿನಿಯ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಕೂಡ ಒಂದು. ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರವನ್ನು ನಿರ್ವಹಿಸುತ್ತಿರುವ ವಿನಯ ಪ್ರಸಾದ್ ಅವರಿಗೆ ಅಭಿಮಾನಿಗಳ ಬಳಗವೇ ಇದೆ.

ಜನನಿ-ಪಾರು

ಜನನಿ-ಪಾರು

  • Share this:
    ಜೀ ಕನ್ನಡ (Zee Kannada) ವಾಹಿನಿಯ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು (Paaru) ಕೂಡ ಒಂದು. ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರವನ್ನು ನಿರ್ವಹಿಸುತ್ತಿರುವ ವಿನಯ ಪ್ರಸಾದ್ ಅವರಿಗೆ ಅಭಿಮಾನಿಗಳ ಬಳಗವೇ ಇದೆ. ಆದಿತ್ಯ(Adhithya) ಮತ್ತು ಪಾರ್ವತಿ (Parvathi) ನಡುವಿನ ನಂಬಿಕೆ, ಪ್ರೀತಿಯ ಸಂಭಾಷಣೆ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಪಾರು ಮತ್ತು ಆದಿ ಮದುವೆಯ ಬಳಿಕ ಪ್ರತಿದಿನ ಹೊಸ ಹೊಸ ತಿರುವುಗಳು ಧಾರಾವಾಹಿಯಲ್ಲಿ ಎದುರಾಗುತ್ತಿರುವುದರಿಂದ ಮುಂದೇನಾಗುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಾರದು.ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಆದಿ ಮತ್ತು ಪಾರ್ವತಿ ಒಳ್ಳೆ ರೀತಿಯಲ್ಲಿ ಸಂಸಾರ ನಡೆಸುವುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

    ವೈಮನಸ್ಸು ಮರೆತು ಮತ್ತೆ ಒಂದಾದ ಜನನಿ-ಪಾರು

    ಮದುವೆಯಾದ ಆರಂಭದಿಂದಲೂ ಅನ್ಯೋನ್ಯತೆಯಿಂದ ಇದ್ದಂತಹ ಪಾರು ಮತ್ತು ಜನನಿ ಮಧ್ಯೆ ಭಿನ್ನಾಭಿಪ್ರಾಯಗಳನ್ನು ತಂದಿಡಲು ಆರಂಭದಿಂದಲೂ ಧಾಮಿನಿ ಪ್ರಯತ್ನ ಪಡುತ್ತಿದ್ದಳು. ಅರಸನಕೋಟೆಯ ಆಸ್ತಿಯ ಆಸೆ ಪಾರ್ವತಿಗೆ ಇದೆ ಎಂದು ಇಲ್ಲ ಸಲ್ಲದ ಅಪವಾದಗಳನ್ನು ಪಾರ್ವತಿ ಮೇಲೆ ಹಾಕಿ ಮುಗ್ಧೆ ಜನನಿಯ ಮನಸ್ಸು ಕೆಡಿಸಿದ್ದಳು ಧಾಮಿನಿ. ಇದೇ ವಿಚಾರವಾಗಿ ಜನನಿ‌ ಪಾರ್ವತಿ ಮೇಲೆ ಹಲವಾರು ಬಾರಿ ತನ್ನ ಅಸಮದಾನವನ್ನು ಕೂಡ ತೋರಿಸೊಕೊಂಡಿದ್ದಳು. ಧಾಮಿನಿಯ ಕುತಂತ್ರದಿಂದ ತಪ್ಪು ಮಾಡದ ಪಾರು ಪ್ರತಿ ಬಾರಿ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಆಗುತ್ತಿತ್ತು. ಆದರೆ ಇದೀಗ ಪಾರು ಮತ್ತು ಜನನಿ ಮತ್ತೆ ಒಂದಾಗಿದ್ದಾರೆ. ಅಷ್ಟೇ ಅಲ್ಲದೆ ಜನನಿಗೆ ತನ್ನ ತಪ್ಪಿನ ಅರಿವು ಕೂಡ ಆಗಿದೆ.

    ಇದನ್ನೂ ಓದಿ: Gattimela Serial: ಅಪಾಯದಲ್ಲಿರುವ ಧ್ರುವನ ರಕ್ಷಿಸುವವರು ಯಾರು? ಮುಂದಿದೆ ಬಿಗ್ ಟ್ವಿಸ್ಟ್

    ಅಷ್ಟೇ ಅಲ್ಲದೆ ದಾಮಿನಿಯ ಕುತಂತ್ರದಿಂದ ಮನೆಯ ಮಂದಿಯ ಮುಂದೆ ಈ ಆಸಿಡ್ ಹಾಕಿಸಿಕೊಳ್ಳುವ ಪ್ಲಾನ್ ಪಾರ್ವತಿಯೇ ಮಾಡಿದ್ದಾಳೆ ಹೇಳಿ ಎಲ್ಲರ ಮುಂದೆ ಕೆಟ್ಟವಳಾಗಿದ್ದಾಳೆ ಜನನಿ. ಆಸಿಡ್ ವಿಚಾರವಾಗಿ ಮನೆಯಲ್ಲಿ ಎಲ್ಲರೂ ಜನನಿ ಮೇಲೆ ‌ಕೋಪಿಸಿಕೊಂಡಿದ್ದರೂ ಪಾರ್ವತಿ ಜನನಿಯ ಪರ ನಿಂತಿದ್ದಳು. ಅದೇ ರೀತಿ ಸ್ವತಃ ಜನನಿಯ ಪತಿ ಪ್ರೀತಮ್ ಆಕೆಯನ್ನು ಮನೆಯಿಂದ ಹೊರ ಹಾಕಿದಾಗ ಪಾರ್ವತಿ ಮನೆ ಮಂದಿಯನ್ನು ಎದುರು ಹಾಕಿಕೊಂಡು ಜನನಿಯನ್ನು ಮತ್ತೆ ಮನೆಗೆ ಸೇರಿಸಿಕೊಳ್ಳುವಂತೆ ಮಾಡಿದ್ದಾಳೆ.

    ಆದಿ ಮುಂದೆ ರಾಣ ತಂತ್ರ ‌ಬಯಲಾಯಿತೇ?

    ಈಗಾಗಲೇ ಹಲವಾರು ಬಾರಿ ಅರಸನಕೊಟೆ ನೆಮ್ಮದಿಯನ್ನು ಕೆಡಿಸಿರುವ ರಾಣಾ ಮತ್ತು ಅರುಂಧತಿ ತಂತ್ರಗಳು ಆದಿಯ ಮುಂದೆ ಬದಲಾಗುವ ಸಮಯ ಹತ್ತಿರ ಬಂದಂತಿದೆ.ದಾಮಿನಿ ಹಣದ ಆಸೆಗೆ ಬಲಿಯಾಗಿ ರಾಣ ಹೇಳಿದಂತೆ ಕೇಳುತ್ತಿದ್ದಾಳೆ. ಅಷ್ಟೇ ಅಲ್ಲದೆ ಮನೆಯಲ್ಲಿ ನಡೆಯುತ್ತಿವೆ ಎಲ್ಲಾ ವಿಚಾರಗಳನ್ನು ಪೆನ್ ನಲ್ಲಿರುವ ಕ್ಯಾಮೆರಾ ಮೂಲಕ ರಾಣ ಹಾಗೂ ಅರುಂಧತಿ ತಿಳಿಯುವಂತೆ ಮಾಡಿಸಿದ್ದಾಳೆ ದಾಮಿನಿ.

    ವಾಸ್ತವದಲ್ಲಿ ಈ ಬಗ್ಗೆ ದಾಮಿನಿಗೆ ಯಾವುದೇ ರೀತಿಯ ಮಾಹಿತಿ ಇಲ್ಲ, ದುಡ್ಡಿನ ಆಸೆ ಮತ್ತು ದಾಮಿನಿಯ ಮುಗ್ಧತೆಯನ್ನು ಬಳಸಿಕೊಂಡು ರಾಣ ಆಕೆಯನ್ನು ತನ್ನ ಕೆಲಸಕ್ಕೆ ಬಳೆಸಿಕೊಳ್ಳುತ್ತಿದ್ದಾನೆ. ಈಗಾಗಲೇ ಹಲವಾರು ಬಾರಿ ಆದಿತ್ಯ ಮತ್ತು ಪಾರ್ವತಿ ಸಾಂಸಾರಿಕ ಜೀವನದಲ್ಲಿ ಒಂದರ ಮೇಲೊಂದರಂತೆ ನೋವು ಕೊಡುತ್ತಾ ಬಂದಿರುವ ರಾಣಾ ಮತ್ತು ಅರುಂಧತಿ ಇದೀಗ ಅರಸನ ಕೋಟೆಯ ಪೂರ್ತಿ ನೆಮ್ಮದಿಯನ್ನು ಕೆಡಿಸಿದ್ದಾನೆ.

    ಇದನ್ನೂ ಓದಿ: Nannarasi Radhe Serial: ಇಂಚರಾ ಸತ್ಯ ಹೇಳಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ! ಅಶ್ವಿನಿ ನಿಜಮುಖ ಬಯಲಾಗೋದೇ ಇಲ್ವಾ?

    ಪಾರ್ವತಿಯ ಕಿಡ್ನಾಪ್ ಮತ್ತು ಇತರ ಎಲ್ಲಾ ಸಮಸ್ಯೆಗಳಿಗೂ ಯಾರೋ ಒಬ್ಬ ವ್ಯಕ್ತಿ ಕಾರಣ ಎಂದು ಈಗಾಗಲೇ ಆದಿತ್ಯನಿಗೆ ಸಂಶಯ ಮೂಡಿದೆ. ಅಷ್ಟೇ ಅಲ್ಲದೆ ದಾಮಿನಿ ಸನ್ಯಾಸಿ ರೂಪದಲ್ಲಿ ಬಂದಿರುವ ರಾಣನನ್ನು ಭೇಟಿ ಆಗುತ್ತಿರುವುದನ್ನು ಆದಿತ್ಯ ನೋಡಿದ್ದಾನೆ. ಎಲ್ಲಾ ಸಮಸ್ಯೆಗೂ ಇದರಿಂದ ಪರಿಹಾರ ದೊರಕಿದರೆ ಸಾಕು ಎಂದು ಪ್ರೇಕ್ಷಕರು ಬಯಸುತ್ತಿದ್ದಾರೆ
    Published by:Swathi Nayak
    First published: