Marriage: ಅರೇಂಜ್ಡ್ ಮ್ಯಾರೇಜ್​ಗಿಂತ ಲವ್​ ಮ್ಯಾರೇಜ್ ಬಗ್ಗೆ ಇಂದಿನ ಯುವವಪೀಳಿಗೆಗೆ ಹೆಚ್ಚು ಆಸಕ್ತಿ..

Love And Arranged Marriage: ನಮ್ಮ ಎಲ್ಲ ಗುಣಗಳಿಗೆ ಮ್ಯಾಚ್ ಆಗುವ ಸಂಗಾತಿ ಸಿಗುವುದಿಲ್ಲ, ಯಾಕೆಂದರೆ ಇಬ್ಬರು ವ್ಯಕ್ತಿಗಳು ಒಂದೆ ರೀತಿಯಿರಲು ಆಗುವುದಿಲ್ಲ. ಆದರೆ ನಿಮ್ಮ ಮುಖ್ಯ ಆಲೋಚನೆಗಳಿಗೆ ಹೊಂದುವಂತ ಹುಡುಗನನ್ನ ಆಯ್ಕೆ ಮಾಡಿಕೊಳ್ಳಬಹುದು. ಸಣ್ನ ಪುಟ್ಟ ವಿಚಾರಗಳಲ್ಲಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಲಘಟ್ಟಗಳು ಬದಲಾದಂತೆ ಜೀವನ ಶೈಲಿಯಲ್ಲಿ ಸಹ ಬಹಳಷ್ಟು ಬದಲಾವಣೆಗಳು ಆಗುತ್ತದೆ. ಮಕ್ಕಳ ಮತ್ತು ಹಿರಿಯರ ನಡುವೆ ಕೆಲವೊಂದು ವಿಚಾರವಾಗಿ ಉತ್ತಮ ಬಾಂಧವ್ಯ ಬೆಳೆದರೆ ಕೆಲವೊಮ್ಮೆ ಸಂಬಂಧಗಳು ಬೆಲೆಯನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮದುವೆಯ ವಿಚಾರಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್(Love Marriage) ಹೆಚ್ಚಾಗಿದೆ. ಮೊದಲೆಲ್ಲ ಪೋಷಕರು ನೋಡಿದ ಹುಡುಗನನ್ನ ಯಾವುದೇ ಮಾತನಾಡದೆ ಮದುವೆಯಾಗುತ್ತಿದ್ದರು, ಅದು ಹುಡುಗರ ವಿಚಾರದಲ್ಲಿ ಸಹ ಸೇಮ್, ಆದರೆ ಈಗ ಕಾಲ ಬದಲಾಗಿದೆ. ಇಂದಿನ ಯುವಕರು ಅರೇಂಜ್ಡ್ ಮ್ಯಾರೇಜ್(Arrange Marriage) ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಹೀಗೆ ಯುವಕರು ಅರೇಂಜ್ಡ್ ಮ್ಯಾರೇಜ್ ಬಗ್ಗೆ ಅಸಡ್ಡೆ ತೋರುವುದು ಬೇಸರದ ವಿಚಾರ ಎಂದು ಭಾರತದ ನಂಬರ್ 1 ಮ್ಯಾಚ್ ಮೇಕರ್ ಎಂದೇ ಹೆಸರಾಗಿರುವ ಸೀಮಾ ತಪಾರಿಯ ಹೇಳಿದ್ದಾರೆ. ಅಲ್ಲದೇ ಅರೇಂಜ್ಡ್ ಮ್ಯಾರೇಜ್ ಬಗ್ಗೆ ಯುವಕರಲ್ಲಿರುವ ಭಾವನೆಗಳು ಬದಲಾಗಲಿ ಎಂದು ಬಯಸಿದ್ದಾರೆ.

ಅರೇಂಜ್ಡ್ ಮ್ಯಾರೇಜ್ ಎಂದರೆ ಎರಡು ಕುಟುಂಬಗಳ ನಡುವೆ ಬಾಂಧವ್ಯ ಮೂಡುವಂತೆ ಮಾಡುತ್ತದೆ.  ಮೊದಲಿನ ಕಾಲದಿಂದಲೂ ಇಬ್ಬರ ಮದುವೆಯ ಜೊತೆ ಎರಡು ಕುಟುಂಬದ ಸಂಪ್ರದಾಯಗಳು ಬೆಸೆಯುತ್ತವೆ ಎನ್ನುವ ಕಾರಣಕ್ಕೆ ಅರೇಂಜ್ ಮ್ಯಾರೇಜ್​ಗೆ ಒತ್ತು ನೀಡುತ್ತಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ದಂಪತಿಗಳ ನಡುವೆ ಯಾವುದೇ ಸಮಸ್ಯೆ ಬಂದಲ್ಲಿ ಅದು ದೊಡ್ಡದಾಗಲು ಬಿಡುವುದಿಲ್ಲ, ಅದನ್ನು ಕುಳಿತು ಬಗೆ ಹರಿಸುವುದಲ್ಲದೆ ಅವರ ಜೊತೆ ನಿಲ್ಲುತ್ತಾರೆ.  ಆದರೆ ಪ್ರೇಮ ವಿವಾಹದಲ್ಲಿ ತಂದೆ ತಾಯಿಗಳಿಗೆ ಪೂರ್ತಿ ಮನಸ್ಸಿರಲಿಲ್ಲ ಅಂದರೆ ನಿಮಗೆ ಸಪೋರ್ಟ್ ಮಾಡುವುದಿಲ್ಲ. ಹಾಗೆಯೆ ಪ್ರೇಮ ವಿವಾಹಗಳು ಹೆಚ್ಚು ಯಶಸ್ವಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಲವ್ ಮ್ಯಾರೇಜಿನಲ್ಲಿ ಹುಡುಗ ಹುಡುಗಿ ಒಂಟಿಯಾಗುತ್ತಾರೆ. ಅವರ ನಡುವೆ ಭಿನ್ನಾಭಿಪ್ರಾಯ ಬಂದರೆ ಅವರ ಸಹಾಯಕ್ಕೆ ಯಾರು ಬರುವುದಿಲ್ಲ. ನೀವು ಗಮನಿಸಿ ನೋಡಿ, ಈಗಿನ ಹೆಚ್ಚಿನ ಯುವಕರು ತಮ್ಮ ಸಂಗಾತಿಯನ್ನು ಹುಡುಕಿಕೊಂಡಿರುತ್ತಾರೆ. ಅವರನ್ನೇ ಮದುವೆಯಾಗುವ ನಿರ್ಧಾರ ಮಾಡುತ್ತಾರೆ ಹೆಚ್ಚಿನ ಜನರು ಲವ್ ಮ್ಯಾರೇಜ್​ ಬಗ್ಗೆ ಒಲವು ತೋರಲು ಮುಖ್ಯ ಕಾರಣ, ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಅವರಲ್ಲಿದೆ. ಆದರೆ ಅರೇಂಜ್ಡ್ ಮ್ಯಾರೇಜ್​ನಲ್ಲಿ ಸಹ ನೀವೇ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದನ್ನು ಅವರು ಯೋಚನೆ ಮಾಡುವುದಿಲ್ಲ.

ಇದನ್ನೂ ಓದಿ: ಮೇಕಪ್ ವಸ್ತುಗಳನ್ನ ಕೊಳ್ಳುವ ಮೊದಲು ಲೇಬಲ್ ಮೇಲೆ ಇವೆಲ್ಲಾ ಇದ್ಯಾ ನೋಡಿ, ಇಲ್ಲದಿದ್ರೆ ಮೋಸ ಹೋಗ್ತೀರಾ!

ನಮ್ಮ ಎಲ್ಲ ಗುಣಗಳಿಗೆ ಮ್ಯಾಚ್ ಆಗುವ ಸಂಗಾತಿ ಸಿಗುವುದಿಲ್ಲ, ಯಾಕೆಂದರೆ ಇಬ್ಬರು ವ್ಯಕ್ತಿಗಳು ಒಂದೆ ರೀತಿಯಿರಲು ಆಗುವುದಿಲ್ಲ. ಆದರೆ ನಿಮ್ಮ ಮುಖ್ಯ ಆಲೋಚನೆಗಳಿಗೆ ಹೊಂದುವಂತ ಹುಡುಗನನ್ನ ಆಯ್ಕೆ ಮಾಡಿಕೊಳ್ಳಬಹುದು. ಸಣ್ನ ಪುಟ್ಟ ವಿಚಾರಗಳಲ್ಲಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.

ಕೇವಲ ಮದುವೆ ಎಂದಲ ಪ್ರತಿಯೊಂದು ಸಂಬಂಧದಲ್ಲಿ ಹೊಂದಾಣಿಕೆ ಅಗತ್ಯ. ಅದರಲ್ಲೂ ದಂಪತಿಗಳ ಮಧ್ಯೆ ಅನುಸರಿಸಿಕೊಂಡು ಹೋದಾಗಲೆ ಒಂದು ಸಂಬಂಧ ಚನ್ನಾಗಿರಲು ಸಾಧ್ಯ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಯಾರ ಮಧ್ಯೆ ಬೇಕಾದರೂ ಮನಸ್ತಾಪ ಬರುತ್ತದೆ ಎಂದು ಸೀಮಾ ತಪಾರಿಯ ಹೇಳಿದ್ದಾರೆ.

ನೀವು ಗಮನಿಸಿ ನೋಡಿ 10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಕೂಡ 2 ವರ್ಷಗಳ ಕಾಲ ಸಹ ಸಂಸಾರ ಮಾಡದೆ ಇರುವುದನ್ನ ನೋಡಿದ್ದೇವೆ. ಅದೇ ಅರೇಂಜ್ಡ್ ಮ್ಯಾರೇಜ್ ಆದವರೂ ಬಹಳ ಚನ್ನಾಗಿದ್ದಾರೆ. ಹಾಗಂತ ಲವ್ ಮ್ಯಾರೇಜ್ ತಪ್ಪು ಎಂದಲ್ಲ, ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು ಅಷ್ಟೇ.

ಇದನ್ನೂ ಓದಿ: ರೇಷ್ಮೆ ಸೀರೆ ಮೇಲೆ ಕಲೆಯಾಗಿದೆಯಾ; ಈ ಸುಲಭ ವಿಧಾನ ಬಳಸಿ ತೆಗೆಯಿರಿ

ಆದರೆ  ಕೆಲವರು ಮದುವೆಯ ವಿಚಾರದಲ್ಲಿ ಹೆಚ್ಚು ತಿಳಿದುಕೊಮಡು ಆರೇಂಜ್ಡ್ ಮ್ಯಾರೇಜ್ ಆಗುವಂತ ಆಸಕ್ತಿ ತೋರಿಸುತ್ತಿದ್ದಾರೆ. ಸೀಮಾ ತಪಾರಿಯ ಅವರು ನೆಟ್ ಫ್ಲಿಕ್ಸ್ ನಲ್ಲಿ 'ಇಂಡಿಯನ್ ಮ್ಯಾಚ್ ಮೇಕಿಂಗ್' ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ.
Published by:Sandhya M
First published: