• Home
  • »
  • News
  • »
  • lifestyle
  • »
  • Palm Health: ಹಲವು ಕೆಲಸ ಮಾಡುವ ಕೈಗಳಿಗೂ ಬೇಕು ವ್ಯಾಯಾಮ! ಹೀಗೆ ಮಾಡಿ ಸಾಕು

Palm Health: ಹಲವು ಕೆಲಸ ಮಾಡುವ ಕೈಗಳಿಗೂ ಬೇಕು ವ್ಯಾಯಾಮ! ಹೀಗೆ ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆರಳು ಮತ್ತು ಕೈಗಳು ಹಾಗೂ ಮಣಿಕಟ್ಟುಗಳಿಗೆ ಪ್ರೆಸ್ ಮಾಡುವುದು ಮತ್ತು ಕೈ ಕಾಲುಗಳ ಮಸಾಜ್ ಮಾಡುವುದು ನೀವು ತಲೆನೋವು ಮತ್ತು ಬೆನ್ನುನೋವಿನ ಸಮಸ್ಯೆ ಮತ್ತು ಆತಂಕ ಕಡಿಮೆ ಮಾಡಲು ಸಹಕಾರಿ ಆಗಿದೆ. ವಿವಿಧ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

  • Share this:

    ನಮ್ಮ ಕೈಗಳು (Hands) ನಮ್ಮ ಇಡೀ ದೇಹಕ್ಕೆ (Body) ನರಗಳನ್ನು (Nerves) ಸಂಪರ್ಕ ಮಾಡುವ ಭಾಗಗಳಾಗಿವೆ (Parts). ಹಾಗಾಗಿ ಕೈಗಳನ್ನು ಆಗಾಗ್ಗೆ ಮಸಾಜ್ (Massage) ಮಾಡುವುದರಿಂದ ನಿಮ್ಮ ದೇಹದ ಸಂಪೂರ್ಣ ವ್ಯವಸ್ಥೆ ಸಮತೋಲನ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜಿ ಇಲ್ಲವೇ ಹಿರಿಯರು ಬೆಳಗಿನ (Morning) ಬಿಸಿಲಿನಲ್ಲಿ ಕುಳಿತು ತಮ್ಮ ಕೈ ಮತ್ತು ಕಾಲುಗಳ ಬೆರಳುಗಳನ್ನು ಹಲವು ಬಾರಿ ಒತ್ತುವುದನ್ನು ನೀವು ಆಗಾಗ್ಗೆ ನೋಡಿರಬಹುದು. ನಮ್ಮ ಒಟ್ಟಾರೆ ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ, ಅದೇ ರೀತಿ ಕೈ ವ್ಯಾಯಾಮ ಕೂಡ ದೇಹದ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯ ಆಗಿದೆ.


    ಕೈಗಳಿಗೆ ಮಸಾಜ್ ಮಾಡುವುದು


    ನಿಮ್ಮ ಬೆರಳು ಮತ್ತು ಕೈಗಳು ಹಾಗೂ ಮಣಿಕಟ್ಟುಗಳಿಗೆ ಪ್ರೆಸ್ ಮಾಡುವುದು ಮತ್ತು ಕೈ ಕಾಲುಗಳ ಮಸಾಜ್ ಮಾಡುವುದು ನೀವು ತಲೆನೋವು ಮತ್ತು ಬೆನ್ನುನೋವಿನ ಸಮಸ್ಯೆ ಮತ್ತು ಆತಂಕ ಕಡಿಮೆ ಮಾಡಲು ಸಹಕಾರಿ ಆಗಿದೆ. ವಿವಿಧ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.


    ಹಾಗಾಗಿ ಇಂದು ನಾವು ನಿಮ್ಮ ಕೈಗಳ ಬೆರಳುಗಳಿಗೆ ಅಂತಹ ಕೆಲವು ವ್ಯಾಯಾಮಗಳ ಬಗ್ಗೆ ಇಲ್ಲಿ ನೋಡೋಣ. ಈ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದು ನಿಮ್ಮ ಇಡೀ ದೇಹದ ಚಲನೆಯನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೈಗಳಿಗೆ ವಿಶ್ರಾಂತಿ ನೀಡುತ್ತದೆ ಮತ್ತು ಒಟ್ಟಾರೆ ನರಮಂಡಲ ಸರಾಗವಾಗಿ ಕೆಲಸ ಮಾಡಲು ಸಹಕಾರಿ ಆಗಿದೆ.


    ಇದನ್ನೂ ಓದಿ: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ


    ದಿನವೂ ಮಾಡಬೇಕಾದ ಕೆಲವು ವಿಶೇಷ ಅಂಗೈ ವ್ಯಾಯಾಮಗಳು


    ಮುಷ್ಟಿ ವ್ಯಾಯಾಮ


    ಈ ವ್ಯಾಯಾಮಗಳು ಕೈ ಮತ್ತು ಬೆರಳುಗಳನ್ನು ಬಲಪಡಿಸಲು, ಚಲನೆಯ ವ್ಯಾಪ್ತಿ ಹೆಚ್ಚಿಸಲು ಮತ್ತು ನಿಮಗೆ ನೋವು ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಅಂಗೈಯನ್ನು ಹಿಗ್ಗಿಸಿ. ನೀವು ನೋವು ಅನುಭವಿಸದಂತೆ ಈ ವ್ಯಾಯಾಮ ಮಾಡಿ.




    ಈ ವ್ಯಾಯಾಮ ಮಾಡಲು, ನಿಮ್ಮ ಬೆರಳುಗಳ ಮೇಲೆ ನಿಮ್ಮ ಹೆಬ್ಬೆರಳು ಮುಚ್ಚುವ ಮೂಲಕ ಮುಷ್ಟಿ ಮಾಡಿ. ಅರ್ಧ ನಿಮಿಷ ಅದನ್ನು ಹಿಡಿದುಕೊಳ್ಳಿ. ನಂತರ ಬೆರಳುಗಳನ್ನು ಅಗಲವಾಗಿಸಿ. ಎರಡೂ ಕೈಗಳಿಂದ ಕನಿಷ್ಠ ನಾಲ್ಕು ಬಾರಿ ಇದನ್ನು ಪುನರಾವರ್ತಿಸಿ.


    ಫಿಂಗರ್ ಲಿಫ್ಟ್


    ನಿಮ್ಮ ಬೆರಳುಗಳಲ್ಲಿ ಚಲನೆ ಮತ್ತು ನಮ್ಯತೆ ವ್ಯಾಪ್ತಿ ಹೆಚ್ಚಿಸಲು ಈ ವ್ಯಾಯಾಮ ಮಾಡಿ. ನಿಮ್ಮ ಕೈಯನ್ನು ವಿಸ್ತರಿಸಿ ಮತ್ತು ಮೇಜಿನ ಮೇಲೆ ಇರಿಸಿ. ನಿಧಾನವಾಗಿ ಮೇಜಿನ ಮೇಲಿಂದ ಒಂದು ಬೆರಳು ಮೇಲಕ್ಕೆತ್ತಿ ನಂತರ ಅದನ್ನು ಕೆಳಗಿಳಿಸಿ. ಎಲ್ಲಾ ಬೆರಳುಗಳಿಗೆ ಈ ವಿಧಾನ 12 ಬಾರಿ ಪುನರಾವರ್ತಿಸಿ.


    ಹೆಬ್ಬೆರಳು ಸ್ಪರ್ಶ ಮಾಡುವುದು


    ಈ ವ್ಯಾಯಾಮವು ನಿಮ್ಮ ಹೆಬ್ಬೆರಳಿನ ನಮ್ಯತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಟೂತ್ ಬ್ರಷ್, ಫೋಕಸ್ ಮತ್ತು ಚಮಚ ಮತ್ತು ಪೆನ್‌ ನಿಂದ ಬರೆಯುವಾಗ ಕೈ ಚಲನೆಗೆ ಸಹಕಾರಿ. ನಿಮ್ಮ ಮಣಿಕಟ್ಟನ್ನು ನೇರವಾಗಿ ಇರಿಸಿ. ನಿಮ್ಮ ಕೈಯನ್ನು ನಿಮ್ಮ ಮುಂದಿರಿಸಿ. ನಿಮ್ಮ ಹೆಬ್ಬೆರಳನ್ನು ನಿಮ್ಮ ನಾಲ್ಕು ಬೆರಳುಗಳಿಗೆ ಒಂದೊಂದಾಗಿ ನಿಧಾನವಾಗಿ ಸ್ಪರ್ಶಿಸಿ. ಸೊನ್ನೆ ಆಕಾರ ಮಾಡಿ. ಇದನ್ನು ನಾಲ್ಕು ಬಾರಿ ಪುನರಾವರ್ತಿಸಿ.


    ಫಿಂಗರ್ ಸ್ಟ್ರೆಚ್ ಮಾಡುವುದು


    ಕೈ ನೋವನ್ನು ನಿವಾರಿಸಲು ಮತ್ತು ನಿಮ್ಮ ಕೈ ಚಲನೆ ಸುಧಾರಿಸಲು ಇದು ಸಹಕಾರಿ. ಕೈಯನ್ನು ಮೇಜಿನ ಮೇಲೆ ಇರಿಸಿ. ಬೆರಳುಗಳನ್ನು ಮೇಲ್ಮೈಗೆ ಎಷ್ಟು ಸಾಧ್ಯವೋ ಅಷ್ಟು ಹಿಗ್ಗಿಸಿ. 30 ರಿಂದ 60 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ನಂತರ ಬಿಡಿ. ಇದನ್ನು ನಾಲ್ಕು ಬಾರಿ ಪುನರಾವರ್ತಿಸಿ.


    ಇದನ್ನೂ ಓದಿ: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು


    ಹೆಬ್ಬೆರಳು ಫ್ಲೆಕ್ಸ್ ವ್ಯಾಯಾಮ


    ಈ ವ್ಯಾಯಾಮವು ನಿಮ್ಮ ಹೆಬ್ಬೆರಳಿನ ಬಿಗಿತ ಸುಧಾರಿಸುತ್ತದೆ. ಕೈಗಳನ್ನು ನೇರವಾಗಿ ಗಾಳಿಯಲ್ಲಿ ಇರಿಸಿ. ಹೆಬ್ಬೆರಳನ್ನು ಇತರೆ ಬೆರಳುಗಳಿಂದ ದೂರವಿರಿಸಿ. ನಂತರ ನಿಮ್ಮ ಹೆಬ್ಬೆರಳನ್ನು ನಿಮ್ಮ ಅಂಗೈಯ ಮೇಲೆ ಮಡಿಸಿ. ಅರ್ಧ ನಿಮಿಷ ಹಿಡಿದು ಬಿಡಿ. ನಾಲ್ಕು ಬಾರಿ ಪುನರಾವರ್ತಿಸಿ.

    Published by:renukadariyannavar
    First published: