• Home
 • »
 • News
 • »
 • lifestyle
 • »
 • Health Tips: ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ತಕ್ಕ ಹಾಗೆ ನಿಮ್ಮ ತೂಕ ಇರಬೇಕು, ಯಾಕೆ ಅಂತಿರಾ?

Health Tips: ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ತಕ್ಕ ಹಾಗೆ ನಿಮ್ಮ ತೂಕ ಇರಬೇಕು, ಯಾಕೆ ಅಂತಿರಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತೂಕ ಇಳಿಸೋದು ಸಾಮಾನ್ಯದ ಕೆಲಸವಲ್ಲ. ಸುಲಭವಾಗಿ ಏರುವ ದೇಹದ ತೂಕ ಇಳಿಯೋಕೆ ಮಾತ್ರ ಬಹಳ ಶ್ರಮವನ್ನು ಕೇಳುತ್ತದೆ. ತೂಕ ಇಳಿಕೆಗೆ ಯಾವುದೇ ಶಾರ್ಟ್‌ ಕಟ್‌ ಇಲ್ಲದೇ ಇರೋದ್ರಿಂದ ಅದನ್ನು ಶ್ರಮಪಟ್ಟೇ ಇಳಿಸಬೇಕಾಗುತ್ತದೆ. ಇಲ್ಲದಿದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ.

 • Share this:

  ತೂಕ (Weight) ಇಳಿಸೋದು (Loss) ಸಾಮಾನ್ಯದ ಕೆಲಸವಲ್ಲ. ಸುಲಭವಾಗಿ ಏರುವ ದೇಹದ ತೂಕ (Body Weight)  ಇಳಿಯೋಕೆ ಮಾತ್ರ ಬಹಳ ಶ್ರಮವನ್ನು ಕೇಳುತ್ತದೆ. ತೂಕ ಇಳಿಕೆಗೆ ಯಾವುದೇ ಶಾರ್ಟ್‌ ಕಟ್‌ (Short Cut) ಇಲ್ಲದೇ ಇರೋದ್ರಿಂದ ಅದನ್ನು ಶ್ರಮಪಟ್ಟೇ (Effort) ಇಳಿಸಬೇಕಾಗುತ್ತದೆ. ಆದ್ರೆ ಇದಕ್ಕೂ ಮುನ್ನ ವ್ಯಕ್ತಿಗೆ ಎಷ್ಟು ಹೆಚ್ಚುವರಿ ತೂಕ ಇಳಿಸಬೇಕು ಎಂಬುದು ಗೊತ್ತಿರಬೇಕು. ಅಂದರೆ ವ್ಯಕ್ತಿಯೊಬ್ಬನ ಎತ್ತರ (Height), ಆತನ ವಯಸ್ಸಿಗೆ (Age) ಸಂಬಂಧಿಸಿದಂತೆ ಎಷ್ಟು ತೂಕವನ್ನು ಹೊಂದಿರಬೇಕು ಅನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ಇರಬೇಕು.


  ತಜ್ಞರು ಹೇಳುವ ಪ್ರಕಾರ, ವ್ಯಕ್ತಿಯ ತೂಕವು ಅವರ ದೇಹದ ಪ್ರಕಾರ, ಜೀವನಶೈಲಿ ಮತ್ತು ಅವರು ಒಂದು ದಿನದಲ್ಲಿ ಕೈಗೊಳ್ಳಬಹುದಾದ ದೈಹಿಕ ಚಟುವಟಿಕೆಗಳೊಂದಿಗೆ ಹೆಚ್ಚು ಸಂಬಂಧಿಸಿದೆ.


  ಅವೆಲ್ಲ ಏನೇ ಇದ್ದರೂ ಸರಿಯಾದ ಎತ್ತರ ಮತ್ತು ತೂಕದ ಅನುಪಾತವನ್ನು ತಿಳಿದುಕೊಳ್ಳುವ ಮೂಲಕ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಬಹುದು.


  ಬೊಜ್ಜಿನಂತಹ ಕಾಯಿಲೆಗಳಿಂದ ದೂರವಿರಿ


  ಇದು ಬೊಜ್ಜಿನಂತಹ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ ಎಂದು ಬಾಲಾಜಿ ಆಕ್ಷನ್ ಮೆಡಿಕಲ್ ಇನ್ಸ್ಟಿಟ್ಯೂಟ್ ದೆಹಲಿಯ ಇಂಟರ್ನಲ್ ಮೆಡಿಸಿನ್ ಹಿರಿಯ ಸಲಹೆಗಾರ ಡಾ.ಅರವಿಂದ್ ಅಗರ್ವಾಲ್ ಹೇಳುತ್ತಾರೆ.


  ಡಾ. ಅರವಿಂದ್‌ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಎತ್ತರಕ್ಕೆ ಅನುಗುಣವಾಗಿ ತೂಕವನ್ನು ಕಾಪಾಡಿಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ಎಷ್ಟೋ ಮಂದಿಗೆ ತಮ್ಮ ಎತ್ತರಕ್ಕೆ ತಕ್ಕಂತೆ ತೂಕ ಎಷ್ಟಿರಬೇಕು ಎಂಬುದೇ ತಿಳಿದಿರುವುದಿಲ್ಲ.


  ಏನಿದು ಬಾಡಿ ಮ್ಯಾಕ್ಸ್ ಇಂಡೆಕ್ಸ್ ?


  ಸಾಮಾನ್ಯವಾಗಿ ಎತ್ತರ ಹಾಗೂ ತೂಕದ ಲೆಕ್ಕಾಚಾರವು BMI (ಬಾಡಿ ಮ್ಯಾಕ್ಸ್ ಇಂಡೆಕ್ಸ್) ಅನ್ನು ಆಧರಿಸಿದೆ. ಇದು ಎತ್ತರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ತೂಕವನ್ನು ಅಳೆಯುವ ಸಾಮಾನ್ಯ ಸಾಧನವಾಗಿದೆ.


  *18.5 ಕ್ಕಿಂತ ಕಡಿಮೆ BMI ಎಂದರೆ ಒಬ್ಬ ವ್ಯಕ್ತಿಯು ಕಡಿಮೆ ತೂಕವನ್ನು ಹೊಂದಿದ್ದಾನೆ ಎಂದರ್ಥ.


  *18.5 ಮತ್ತು 24.9 ರ ನಡುವಿನ BMI ಸೂಕ್ತವಾಗಿದೆ.


  *25 ಮತ್ತು 29.9 ರ ನಡುವಿನ BMI ಹೆಚ್ಚಿನ ತೂಕವಾಗಿದೆ.


  *30 ಕ್ಕಿಂತ ಹೆಚ್ಚು BMI ಹೆಚ್ಚಿನ ತೂಕವನ್ನು ಅಥವಾ ಸ್ಥೂಲಕಾಯತೆಯನ್ನು ಸೂಚಿಸುತ್ತದೆ.


  ಆದಾಗ್ಯೂ, ಮುಂಬೈನ ಭಾಟಿಯಾ ಆಸ್ಪತ್ರೆಯ ಆಂತರಿಕ ಔಷಧದ ಸಲಹೆಗಾರರಾದ ಡಾ. ಅಭಿಷೇಕ್ ಸುಭಾಷ್ ಅವರ ಪ್ರಕಾರ, BMI ತೂಕ ಮಾಪನ ತಪ್ಪಾದ ಪರಿಕಲ್ಪನೆಯಾಗಿದೆ.


  ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಮತ್ತು ಇತರ ಅಂತರರಾಷ್ಟ್ರೀಯ ವೈದ್ಯಕೀಯ ಸಂಘಗಳು ಸಹ BMI ಕ್ಯಾರ್ಕ್ಯುಲೇಟರ್‌ಅನ್ನು ಕಡಿಮೆ ಅವಲಂಬಿಸಬೇಕೆಂದು ಅಭಿಪ್ರಾಯ ಪಡುತ್ತಾರೆ.


  Your weight should be according to your age and height, why is it different?
  ಸಾಂಕೇತಿಕ ಚಿತ್ರ


  ಇಂತಹ ಸಮಸ್ಯೆಗಳಿಂದ ಎಚ್ಚರವಾಗಿರಿ


  BMI ಅನ್ನು ವೈದ್ಯರು ಅಥವಾ ಜೀವಶಾಸ್ತ್ರಜ್ಞರು ರೂಪಿಸಿಲ್ಲ. ಇದನ್ನು ಗಣಿತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಸ್ನಾಯುವಿನ ದ್ರವ್ಯರಾಶಿ, ಮೂಳೆ ಸಾಂದ್ರತೆ, ಒಟ್ಟಾರೆ ದೇಹದ ಸಂಯೋಜನೆ, ಜನಾಂಗೀಯ ಮತ್ತು ಲಿಂಗ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಆದ್ದರಿಂದ BMI ಯೊಂದಿಗೆ ವಿವಿಧ ಸಮಸ್ಯೆಗಳಿವೆ ಎನ್ನುತ್ತಾರೆ ಡಾ. ಅಭಿಷೇಕ್.


  “ಇವು ಕೇವಲ ಸಂಖ್ಯೆಗಳು. ಈ ಸಂಖ್ಯೆಗಳಿಗಿಂತ ಹೆಚ್ಚಾಗಿ, ಜನರು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಮೇಲೆ ಹೆಚ್ಚು ಗಮನಹರಿಸಬೇಕು. ಇದು ಖಂಡಿತವಾಗಿಯೂ ಅವರ ಎತ್ತರ ಮತ್ತು ತೂಕದಿಂದ ನಿರ್ಧರಿಸಲ್ಪಡುವುದಿಲ್ಲ.


  ಜನರು ತಮ್ಮ ಫಿಟ್‌ನೆಸ್ ಮಟ್ಟಗಳು ಹೇಗೆ ಕಾಯ್ದುಕೊಂಡಿದ್ದಾರೆ, ಅವರು ತಮ್ಮ ದಿನನಿತ್ಯದ ಕಾರ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಮಾಡಲು ಸಮರ್ಥರಾಗಿದ್ದಾರೆಯೇ ಎಂಬುದನ್ನು ನೋಡಬೇಕು. ಅವರು ಸರಿಯಾದ ಆಹಾರ, ಕೆಲಸ, ಸಾಕಷ್ಟು ನಿದ್ರೆ ಮಾಡುತ್ತಿದ್ದಾರೆಯೇ ಎಂದು ವಿಶ್ಲೇಷಿಸಬೇಕು ಎಂದು ಡಾ ಅಭಿಷೇಕ್ ಹೇಳುತ್ತಾರೆ.


  ಎಷ್ಟು ಎತ್ತರಕ್ಕೆ ಎಷ್ಟು ತೂಕ ಇರಬೇಕು?


  ಎತ್ತರ ಮತ್ತು ತೂಕದ ಮಾದರಿ ಅನುಪಾತವನ್ನು ಇನ್ನೊಬ್ಬ ವೈದ್ಯ ಡಾ ಅರವಿಂದ್ ಅವರು ಹೀಗೆ ಪಟ್ಟಿ ಮಾಡಿದ್ದಾರೆ. ಹಾಗಿದ್ರೆ ಎಷ್ಟು ಎತ್ತರಕ್ಕೆ ಎಷ್ಟು ಆದರ್ಶ ತೂಕ ಇರಬೇಕು ಎಂಬುದನ್ನು ನೋಡೋಣ.


  * ಎತ್ತರ 4 ಅಡಿ 10 ಇಂಚು ಇದ್ದರೆ, ಆದರ್ಶ ತೂಕ 41 ರಿಂದ 52 ಕೆಜಿ ಇರಬೇಕು. ಇದಕ್ಕಿಂತ ಹೆಚ್ಚಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.


  * ಎತ್ತರ 5 ಅಡಿಯಾಗಿದ್ದರೆ, ತೂಕವು 44 ರಿಂದ 55.7 ಕೆಜಿ ನಡುವೆ ಇರಬೇಕು.


  * ಎತ್ತರ 5 ಅಡಿ 2 ಇಂಚು ಇದ್ದರೆ, ತೂಕ 49 ರಿಂದ 63 ಕೆಜಿ ನಡುವೆ ಇರಬೇಕು.


  * ಎತ್ತರ 5 ಅಡಿ 4 ಇಂಚು ಇದ್ದರೆ ತೂಕವು 49 - 63ಕೆಜಿ ನಡುವೆ ಇರಬೇಕು.


  * 5 ಅಡಿ 6 ಇಂಚು ಎತ್ತರ ಹೊಂದಿರುವ ವ್ಯಕ್ತಿಯ ತೂಕ 53 - 67ಕೆಜಿ ಇರಬೇಕು.


  * ಎತ್ತರ 5 ಅಡಿ 8 ಇಂಚು ಇದ್ದರೆ, 56 ರಿಂದ 71 ಕೆಜಿ ತೂಕವಿರಬೇಕು.


  *5 ಅಡಿ 10 ಇಂಚು ಇದ್ದರೆ ತೂಕ 59 ರಿಂದ 75 ಕೆಜಿ ಇರಬೇಕು.


  * ಎತ್ತರ ಆರು ಅಡಿಯಾಗಿದ್ದರೆ, ಸಾಮಾನ್ಯ ತೂಕವು 63 ರಿಂದ 80 ಕೆಜಿ ನಡುವೆ ಇರಬೇಕು.


  ವೈದ್ಯಕೀಯ ಸುದ್ದಿಗಳ ಪ್ರಕಾರ, ದೇಹದ ಕೊಬ್ಬಿನ ಶೇಕಡಾವಾರು ಲೆಕ್ಕಾಚಾರವು ವ್ಯಕ್ತಿಯ ಫಿಟ್‌ನೆಸ್ ಮಟ್ಟವನ್ನು ಅಳೆಯಲು ಸೂಕ್ತವಾದ ಮಾರ್ಗವಾಗಿದೆ. ಏಕೆಂದರೆ ಅದು ಅವರ ದೇಹ ಸಂಯೋಜನೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗುತ್ತದೆ.


  ಲ್ಯಾಪರೊಸ್ಕೋಪಿಕ್ ಮತ್ತು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಕರಾದ ಅಪರ್ಣಾ ಗೋವಿಲ್ ಭಾಸ್ಕರ್ ಅವರು “ಒಂದೇ ಎತ್ತರ ಮತ್ತು ಒಂದೇ ವಯಸ್ಸಿನ ಇಬ್ಬರು ವಿಭಿನ್ನ ಜನರು ಒಂದೇ ತೂಕವನ್ನು ಹೊಂದಿರಬಹುದು.


  ಅದೇ BMI ಆದರೆ ಅವುಗಳ ಕೊಬ್ಬು ಮತ್ತು ಸ್ನಾಯುವಿನ ಅಂಶವು ವಿಭಿನ್ನವಾಗಿರಬಹುದು. ಒಬ್ಬರು ಹೆಚ್ಚು ಸ್ನಾಯು ಮತ್ತು ಕಡಿಮೆ ಕೊಬ್ಬನ್ನು ಹೊಂದಿರಬಹುದು ಮತ್ತು ಇನ್ನೊಂದರ ಸಂದರ್ಭದಲ್ಲಿ ವ್ಯತ್ಯಾಸವನ್ನು ಕಾಣಬಹುದು ಎನ್ನುತ್ತಾರೆ.


  Your weight should be according to your age and height, why is it different?
  ಸಾಂಕೇತಿಕ ಚಿತ್ರ


  ಕಡಿಮೆ ಕ್ಯಾಲೊರಿ ತಿನ್ನುವುದರಿಂದ ಕೊಬ್ಬು ಕರಗುತ್ತದೆ!


  ಹಾಗೆಯೇ, ಆದರ್ಶಪ್ರಾಯ ಎನ್ನಬಹುದಾದ ತೂಕವನ್ನು ಕಾಪಾಡಿಕೊಳ್ಳುವ ಕೀಲಿಯು ಕ್ಯಾಲೊರಿ ಕೊರತೆಯಲ್ಲಿರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.


  ಅಂದರೆ ತಿನ್ನುವುದಕ್ಕಿಂತ ಹೆಚ್ಚು ಕ್ಯಾಲೋರಿಯನ್ನು ಬರ್ನ್‌ ಮಾಡುವುದು, ನಿಯಮಿತ ವ್ಯಾಯಾಮದ ಜೊತೆಗೆ ಕಡಿಮೆ ಕ್ಯಾಲೋರಿ ತಿನ್ನುವುದರಿಂದ ದೇಹದ ಕೊಬ್ಬನ್ನು ಕಳೆದುಕೊಳ್ಳಬಹುದು.


  ಏಕೆಂದರೆ ದೇಹವು ಕಡಿಮೆ ಕ್ಯಾಲೊರಿಗಳನ್ನು ತೆಗೆದುಕೊಂಡಾಗ ಕೊಬ್ಬನ್ನು ಕರಗಿಸುತ್ತದೆ. ಆದಾಗ್ಯೂ, ತುಂಬಾ ಕಡಿಮೆ ಕ್ಯಾಲೊರಿ ಸೇವನೆ ಸ್ನಾಯುವಿನ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ತೂಕ ನಷ್ಟಕ್ಕಿಂತ ಕೊಬ್ಬು ನಷ್ಟಕ್ಕೆ ಆದ್ಯತೆ ನೀಡುವುದು ಉತ್ತಮ ಎನ್ನುತ್ತಾರೆ.


  ಲೈಫ್‌ಸ್ಟೈಲ್‌ ಡಿಸೀಸ್‌ ಹೆಚ್ಚಾಗುತ್ತದೆ


  "ದೇಹದಲ್ಲಿ ಕೊಬ್ಬು ಹೆಚ್ಚಾದಾಗ ಲೈಫ್‌ಸ್ಟೈಲ್‌ ಡಿಸೀಸ್‌ ಅಥವಾ ಜೀವನಶೈಲಿ ರೋಗಗಳು ಹೆಚ್ಚಾಗುತ್ತದೆ. ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣ 15 ಅಥವಾ ಅದಕ್ಕಿಂತ ಕಡಿಮೆ ಎಂಬುದಾಗಿ ಪುರುಷರಿಗೆ ಶಿಫಾರಸು ಮಾಡಲಾಗಿದೆ.


  ಇತ್ತ, ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣ 25 ಅಥವಾ ಅದಕ್ಕಿಂತ ಕಡಿಮೆ ಮಹಿಳೆಯರಿಗಿರಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಫಿಟ್‌ನೆಸ್ ತಜ್ಞ ಬಾಲ ಕೃಷ್ಣಾ ರೆಡ್ಡಿ ದಬ್ಬೆಡಿ ತಿಳಿಸುತ್ತಾರೆ.


  ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಅಳೆಯುವುದು ಹೇಗೆ?


  - FITTR ಅಪ್ಲಿಕೇಶನ್‌ನಂತಹ ಆನ್‌ಲೈನ್ ಕ್ಯಾರ್ಕ್ಯುಲೇಟರ್‌ಗಳು, ದೇಹದ ಕೊಬ್ಬಿನ ಕ್ಯಾಲ್ಕುಲೇಟರ್‌ಗಳಿಂದ ಅಳೆಯಬಹುದು


  - ಸ್ಕಿನ್‌ಫೋಲ್ಡ್ ಕ್ಯಾಲಿಪರ್‌ಗಳು


  - ಒಂದು DEXA ಅಥವಾ BCA (ದೇಹ ಸಂಯೋಜನೆ ವಿಶ್ಲೇಷಣೆ)


  ಸ್ಕ್ಯಾನ್ವಯಸ್ಸಿಗೆ ತಕ್ಕನಾಗಿ ತೂಕ ಎಷ್ಟಿರಬೇಕು ?


  ಸಿಡಿಸಿ ಪ್ರಕಾರ ಒಬ್ಬರ ವಯಸ್ಸಿಗೆ ಅನುಗುಣವಾಗಿ ಆದರ್ಶ ತೂಕ ಎಂದು ಪರಿಗಣಿಸಬಹುದಾದ ಪಟ್ಟಿಯನ್ನು ಡಾ. ಅಗರ್ವಾಲ್ ಹಂಚಿಕೊಂಡಿದ್ದಾರೆ.


  *19-29 ವರ್ಷ ವಯಸ್ಸಿನ ಹುಡುಗನ ತೂಕ 83.4 ಕೆಜಿ ಆಗಿರಬೇಕು. ಆದರೆ ಹುಡುಗಿಯ ತೂಕ 73.4 ಕೆಜಿ ವರೆಗೆ ಇರಬೇಕು.


  *30-39 ವರ್ಷದೊಳಗಿನ ಹುಡುಗನ ತೂಕ 90.3 ಕೆಜಿ ವರೆಗೆ ಇರಬೇಕು ಮತ್ತು ಹುಡುಗಿಯ ತೂಕ 76.7 ಕೆಜಿ ವರೆಗೆ ಇರಬೇಕು.


  *40-49 ವರ್ಷ ವಯಸ್ಸಿನ ಪುರುಷನ ತೂಕ 90.9 ಕೆಜಿವರೆಗೆ, ಮಹಿಳೆಯದ್ದು 76.2 ಕೆಜಿವರೆಗೆ ತೂಕವಿರಬೇಕು.


  ಇದನ್ನೂ ಓದಿ:Healthy Lifestyle: ದೇಹದಲ್ಲಿ ಕೊಬ್ಬಿನಷ್ಟೇ ಹಾನಿ ಉಂಟುಮಾಡುತ್ತೆ ಟ್ರೈಗ್ಲಿಸರೈಡ್, ಇದರ ನಿಯಂತ್ರಣಕ್ಕೆ ಹೀಗೆ ಮಾಡಿ


  *50-60 ವರ್ಷ ವಯಸ್ಸಿನ ಪುರುಷನ ತೂಕವು 91.3 ಕೆಜಿ ವರೆಗೆ ಇರಬೇಕು ಹಾಗೆಯೇ ಮಹಿಳೆಯ ತೂಕವು 77.0 ಕೆಜಿ ವರೆಗೆ ಇರಬೇಕು.


  ಒಟ್ಟಾರೆಯಾಗಿ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ತೂಕವನ್ನು ಹೊಂದುವುದು ಸಾಧ್ಯವಾಗುತ್ತದೆ.
  ಉತ್ತಮ ತೂಕದಿಂದಾಗಿಯೇ ನಾವು ಅನೇಕ ಕಾಯಿಲೆಗಳು ಬರುವುದನ್ನೇ ತಡೆಗಟ್ಟಬಹುದು. ಹಾಗಾಗಿ ನಿಮ್ಮ ಎತ್ತರಕ್ಕೆ ತಕ್ಕಂತೆ ಎಷ್ಟು ತೂಕ ಹೊಂದಿರಬೇಕು ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕನಾಗಿ ತೂಕ ನಿಯಂತ್ರಿಸಿದರೆ ನೀವು ಆರೋಗ್ಯವಂತರಾಗಿರಬಹುದು.

  Published by:Gowtham K
  First published: