• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆಗೆ ಈ ಹಿಟ್ಟಿನ ರೊಟ್ಟಿ ತಿನ್ನಿ, ಬೇಗ ಫಲಿತಾಂಶ ಸಿಗುತ್ತೆ

Weight Loss: ತೂಕ ಇಳಿಕೆಗೆ ಈ ಹಿಟ್ಟಿನ ರೊಟ್ಟಿ ತಿನ್ನಿ, ಬೇಗ ಫಲಿತಾಂಶ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ಇಳಿಕೆಗೆ ಮತ್ತು ಇದಕ್ಕಾಗಿ ನೀವು ರೊಟ್ಟಿ ಸೇವನೆ ಮಾಡಬಹುದು. ಈ ರೊಟ್ಟಿ ಜೋಳದ ಹಿಟ್ಟಿನಿಂದ ಮಾಡಿದ್ದಾದರೆ ಅದು ಆರೋಗ್ಯಕರ ಮತ್ತು ಟೇಸ್ಟಿ. ಜೋಳದ ಹಿಟ್ಟಿನ ರೊಟ್ಟಿ ಎಣ್ಣೆ ರಹಿತವಾಗಿರುತ್ತದೆ. ಇದನ್ನು ಮಧುಮೇಹ ಸೇರಿದಂತೆ ಕೆಲ ಕಾಯಿಲೆಯಿದ್ದವರು ಸೇವನೆ ಮಾಡಬಹುದು.

  • Share this:

    ಸ್ಥೂಲಕಾಯ (Obesity) ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಕಡಿಮೆ ಮಾಡುತ್ತದೆ. ನಿಮ್ಮ ಸೌಂದರ್ಯ (Beauty) ಕಡಿಮೆ ಮಾಡುತ್ತದೆ. ಬೊಜ್ಜು ಅನೇಕ ಕಾಯಿಲೆಗೆ (Disease) ಕಾರಣ ಆಗುತ್ತದೆ. ಮಧುಮೇಹ Diabetes), ಥೈರಾಯ್ಡ್‌ನಂತಹ ಅನೇಕ ಗಂಭೀರ ಕಾಯಿಲೆಗೆ ಕಾರಣ ಆಗುತ್ತದೆ. ಅದಾಗ್ಯೂ ತೂಕ ನಷ್ಟಕ್ಕೆ (Weight Loss) ಜನರು ಹಲವು ರೀತಿಯ ಚಟುವಟಿಕೆ ಟ್ರೈ ಮಾಡ್ತಾರೆ. ಉಪವಾಸ, ಡಯಟಿಂಗ್, ಥೆರಪಿ, ವ್ಯಾಯಾಮ, ಜಿಮ್, ಯೋಗ ಹೀಗೆ ತೂಕ ಇಳಿಕೆಗೆ ಇದು ಸಹಕಾರಿ ಆಗಿದೆ. ಕೆಲವೊಮ್ಮೆ ಜನರು ಡಯಟ್ ಆಯ್ಕೆ ಮಾಡಿಕೊಳ್ತಾರೆ. ಕೆಲವೊಮ್ಮೆ ಹಸಿವಿನ ಭಯದಿಂದ ಹೆಚ್ಚಿನ ಜನರು ತೂಕ ಇಳಿಸಲು ಮುಂದಾಗುವುದಿಲ್ಲ. ಆದರೆ ನೀವು ನಿಮ್ಮ ಡಯಟ್ ಪ್ಲಾನ್ ನಲ್ಲಿ ಈ ಪದಾರ್ಥ ಸೇರಿಸಿದರೆ ತೂಕ ಇಳಿಕೆ ಸುಲಭ.


    ತೂಕ ಇಳಿಕೆಗೆ ಜೋಳದ ರೊಟ್ಟಿ ಸೇವನೆ ಸಹಕಾರಿ


    ತೂಕ ಇಳಿಕೆಗೆ ಮತ್ತು ಇದಕ್ಕಾಗಿ ನೀವು ರೊಟ್ಟಿ ಸೇವನೆ ಮಾಡಬಹುದು. ಈ ರೊಟ್ಟಿ ಜೋಳದ ಹಿಟ್ಟಿನಿಂದ ಮಾಡಿದ್ದಾದರೆ ಅದು ಆರೋಗ್ಯಕರ ಮತ್ತು ಟೇಸ್ಟಿ. ಜೋಳದ ಹಿಟ್ಟಿನ ರೊಟ್ಟಿ ಎಣ್ಣೆ ರಹಿತವಾಗಿರುತ್ತದೆ. ಇದನ್ನು ಮಧುಮೇಹ ಸೇರಿದಂತೆ ಕೆಲ ಕಾಯಿಲೆಯಿದ್ದವರು ಸೇವನೆ ಮಾಡಬಹುದು.


    ಹಿಟ್ಟು ಮತ್ತು ನೀರನ್ನು ಮುಖ್ಯವಾಗಿ ರೊಟ್ಟಿ ತಯಾರಿಸಲು ಬಳಕೆ ಮಾಡ್ತಾರೆ. ಹಾಗಾಗಿ ನೀವು ತೂಕ ನಷ್ಟಕ್ಕೆ ಸಹಾಯ ಮಾಡಲು ಜೋಳದ ಹಿಟ್ಟನ್ನು ಬಳಸುತ್ತಿದ್ದರೆ ಅದು ತೂಕ ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ನಿಮ್ಮ ತೂಕ ಇಳಿಸುವ ಚಟುವಟಿಕೆಯಲ್ಲಿ ರೊಟ್ಟಿ ತುಂಬಾ ಪ್ರಯೋಜನ ನೀಡುತ್ತದೆ. ರೊಟ್ಟಿ ತಯಾರಿಸಲು ನೀವು ಕಡಿಮೆ ಕ್ಯಾಲೋರಿ ಹಿಟ್ಟನ್ನು ಬಳಕೆ ಮಾಡಬೇಕು. ಹಾಗಾಗಿ ಜೋಳದ ಹಿಟ್ಟು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಈಗ ನೀವು ತೂಕ ಇಳಿಸಿಕೊಂಡು ಫಿಟ್ ಆಗಲು ಹೆಚ್ಚು ಯೋಚನೆ ಮಾಡದೇ ರೊಟ್ಟಿ ಹಿಟ್ಟು ಬಳಸಬಹುದು.


    ಜೋಳದ ರೊಟ್ಟಿ ವೇಗದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ


    ನೀವು ಪ್ರತಿದಿನ ಜೋಳದ ರೊಟ್ಟಿ ಸೇವಿಸಿದರೆ, ದೇಹದ ಹೆಚ್ಚುವರಿ ಕೊಬ್ಬನ್ನು ಇದು ಕಡಿಮೆ ಮಾಡಬಹುದು. ಇದು ಲಿಪಿಡ್ ಚಯಾಪಚಯ ಅಸ್ವಸ್ಥತೆ ಸುಧಾರಿಸಲು ಜೋಳದ ಹಿಟ್ಟು ಸಹಾಯ ಮಾಡುತ್ತದೆ. ಚೀನಾದ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಇದು ಬೆಳಕಿಗೆ ಬಂದಿದೆ.


    ಬೊಜ್ಜು ಚಿಕಿತ್ಸೆಯಲ್ಲಿ ಜೋಳದ ಪಾತ್ರ ತಿಳಿಯಲು ಈ ಸಂಶೋಧನೆ ಮಾಡಲಾಗಿದೆ. ಜೋಳದ ರೊಟ್ಟಿ ತಿಂದರೆ ಸಿಗುವ ಇತರೆ ಪ್ರಯೋಜನ ತಿಳಿಯೋಣ.


    ಜೋಳದ ರೊಟ್ಟಿ ಉರಿಯೂತ ಕಡಿಮೆ ಮಾಡುತ್ತದೆ


    ಜೋಳದ ಹಿಟ್ಟು ಅದರ ಫೀನಾಲಿಕ್ ಸಂಯುಕ್ತಕ್ಕೆ ಹೆಸರುವಾಸಿ. ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಉರಿಯೂತದ ಪರಿಣಾಮ ಉಂಟು ಮಾಡುತ್ತವೆ. ಮತ್ತು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.


    ಜೀರ್ಣಕ್ರಿಯೆಗೆ ಪ್ರಯೋಜನಕಾರಿ


    ಜೋಳವು ಉತ್ತಮ ಪ್ರಮಾಣದ ಆಹಾರದ ಫೈಬರ್ ನ್ನು ಹೊಂದಿದೆ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೋಳದ ರೊಟ್ಟಿ ತಿನ್ನುವ ಮೂಲಕ ನೀವು ಹೊಟ್ಟೆ ನೋವು, ಮಲಬದ್ಧತೆ, ವಾಯು ಮುಂತಾದ ಹೊಟ್ಟೆ ಸಮಸ್ಯೆಗಳಿಂದ ದೂರವಿರಿ. ಜೋಳವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಮಧುಮೇಹಿಗಳಿಗೆ ಪ್ರಯೋಜನಕಾರಿ


    ಮಧುಮೇಹದೊಳಗೆ ರಕ್ತದ ಸಕ್ಕರೆ ನಿಯಂತ್ರಿಸುವುದು ಬಹಳ ಮುಖ್ಯ. ಜೋಳದ ರೊಟ್ಟಿ ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳಿಂದ ದೂರವಿರಬೇಕು.


    ಏಕೆಂದರೆ ಇದು ರಕ್ತದ ಸಕ್ಕರೆ ಮಟ್ಟ ತ್ವರಿತವಾಗಿ ಹೆಚ್ಚಿಸುತ್ತದೆ. ಆದರೆ ಜೋಳ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರವಾಗಿದೆ. ಇದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ.


    ಜೋಳ ಗ್ಲುಟನ್ ಮುಕ್ತವಾಗಿದೆ


    ಕೆಲವು ಜನರು ಗೋಧಿಯಂತಹ ಗ್ಲುಟನ್ ಹೊಂದಿರುವ ಆಹಾರ ಸೇವಿಸುವುದರಿಂದ ಉದರದ ಕಾಯಿಲೆ ಹೆಚ್ಚುತ್ತದೆ. ಇದು ಗ್ಲುಟನ್ ನಿಂದ ಉಂಟಾಗುವ ಅಲರ್ಜಿ. ಆದರೆ ಜೋಳವು ಸಂಪೂರ್ಣವಾಗಿ ಗ್ಲುಟನ್ ಮುಕ್ತವಾಗಿದೆ. ಇದರಿಂದಾಗಿ ಇದು ಉದರದ ಕಾಯಿಲೆಗೆ ಪರಿಹಾರ ನೀಡುತ್ತದೆ. ಗ್ಲುಟನ್ ಗೋಧಿ, ಬಾರ್ಲಿ, ರೈ ಇತ್ಯಾದಿಗಳಲ್ಲಿದೆ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ಕೆಲವು ಅಧ್ಯಯನಗಳ ಪ್ರಕಾರ ಜೋಳದಲ್ಲಿ ವಿಶೇಷ ಫೈಟೊಕೆಮಿಕಲ್‌ಗಳಿವೆ. ಇದು ಕ್ಯಾನ್ಸರ್ ಅನ್ನು ಉಂಟು ಮಾಡುವ ಅಪಾಯ ಕಡಿಮೆ ಮಾಡುತ್ತದೆ. ಧಾನ್ಯಗಳ ಸೇವನೆ ಜೀರ್ಣಾಂಗವ್ಯೂಹದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ.

    Published by:renukadariyannavar
    First published: