Personality Test: ನೀವು ಕುಳಿತುಕೊಳ್ಳುವ ಭಂಗಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸುತ್ತೆ

ಇತ್ತೀಚೆಗೆ ನಾವು ಮಲಗುವ ಭಂಗಿ, ಮೂಗಿನ ಆಕಾರ, ನೆಚ್ಚಿನ ಕಾಫಿ, ನಡೆಯುವ ಶೈಲಿ ಮತ್ತು ಹೀಗೆ ಹೆಚ್ಚಿನವುಗಳ ಆಧಾರದ ಮೇಲೆ ಸಹ ನಮ್ಮ ವ್ಯಕ್ತಿತ್ವ ಎಂತದ್ದು ಅಂತ ಊಹಿಸುತ್ತಿದ್ದಾರೆ. ಇಲ್ಲಿ ಇಂತಹದೇ ಇನ್ನೊಂದು ಟ್ರಿಕ್ ಇದೆ ನೋಡಿ, ನೀವು ಹೇಗೆ ಕುಳಿತು ಕೊಳ್ಳುತ್ತೀರಿ ಆ ಶೈಲಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತದ್ದು ಅಂತ ಇಲ್ಲಿ ಹೇಳಿದ್ದಾರೆ ನೋಡಿ.

ಕುಳಿತುಕೊಳ್ಳುವ ಭಂಗಿಗಳು

ಕುಳಿತುಕೊಳ್ಳುವ ಭಂಗಿಗಳು

  • Share this:
ಸಾಮಾನ್ಯವಾಗಿ ಈ ವ್ಯಕ್ತಿತ್ವ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ಭಿನ್ನವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ (Personality) ಹೇಗೆ ಅಂತ ನಮಗೆ ಗೊತ್ತಾಗುವುದು ಅವರ ಜೊತೆಯಲ್ಲಿ ಒಡನಾಟ ಇರಿಸಿಕೊಂಡಾಗ ಮಾತ್ರ ಎಂಬುದು ಅನೇಕರ ನಂಬಿಕೆಯಾಗಿದೆ. ಆದರೆ ಇತ್ತೀಚೆಗೆ ನಾವು ಮಲಗುವ ಭಂಗಿ, ಮೂಗಿನ ಆಕಾರ, ನೆಚ್ಚಿನ ಕಾಫಿ, ನಡೆಯುವ ಶೈಲಿ ಮತ್ತು ಹೀಗೆ ಹೆಚ್ಚಿನವುಗಳ ಆಧಾರದ ಮೇಲೆ ಸಹ ನಮ್ಮ ವ್ಯಕ್ತಿತ್ವ ಎಂತದ್ದು ಅಂತ ಊಹಿಸುತ್ತಿದ್ದಾರೆ. ಇಲ್ಲಿ ಇಂತಹದೇ ಇನ್ನೊಂದು ಟ್ರಿಕ್ (Trick) ಇದೆ ನೋಡಿ, ನೀವು ಹೇಗೆ ಕುಳಿತು ಕೊಳ್ಳುತ್ತೀರಿ ಆ ಶೈಲಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತದ್ದು ಅಂತ ಇಲ್ಲಿ ಹೇಳಿದ್ದಾರೆ ನೋಡಿ.

ಅನೇಕ ತಜ್ಞರು ಮಾಡಿರುವಂತಹ ನಡವಳಿಕೆಯ ಅಧ್ಯಯನಗಳ ಪ್ರಕಾರ, ನಮ್ಮ ಕಾಲುಗಳ ಸ್ಥಾನವು ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ ಎಂದು ಕಂಡುಬಂದಿದೆ. ಹೌದು, ನಮ್ಮ ಕಾಲುಗಳು ಮತ್ತು ಪಾದಗಳು ನಮ್ಮ ವ್ಯಕ್ತಿತ್ವ ಎಂತದ್ದು ಅಂತ ಒಂದು ಅಂದಾಜು ನೀಡಬಹುದು. ನಮ್ಮ ಸುಪ್ತಪ್ರಜ್ಞೆಯ ಮೂಲಕ ಹೊರಡಿಸಲಾದ ಆಜ್ಞೆಗಳ ಆಧಾರದ ಮೇಲೆ ನಮ್ಮ ಕಾಲುಗಳು ಕಾರ್ಯನಿರ್ವಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಬನ್ನಿ ಹಾಗಾದರೆ ಕುಳಿತುಕೊಳ್ಳುವ ಭಂಗಿಗಳು ಏನೆಲ್ಲಾ ಹೇಳುತ್ತವೆ ಅಂತ ತಿಳಿದುಕೊಳ್ಳೋಣ.

ಭಂಗಿ 1: ಕುಳಿತುಕೊಂಡಾಗ ಮೊಣಕಾಲುಗಳನ್ನು ನೇರವಾಗಿಡುವುದು
ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಮೊಣಕಾಲುಗಳನ್ನು ನೇರವಾಗಿ ಇಟ್ಟುಕೊಂಡು ಕುಳಿತುಕೊಳ್ಳುವ ಜನರು ತಮ್ಮ ಕೌಶಲ್ಯಗಳನ್ನು ಹೆಚ್ಚಾಗಿ ನಂಬುವವರು ಅಂತ ಕಂಡುಕೊಳ್ಳಲಾಗಿದೆ. ಅವರು ತಮ್ಮ ಬಗ್ಗೆ ಆರೋಗ್ಯಕರ ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ ಮತ್ತು ಇದರ ಪರಿಣಾಮವಾಗಿ, ಅವರು ಕಡಿಮೆ ಅಭದ್ರತೆ ಭಾವನೆಯನ್ನು ಹೊಂದಿರುತ್ತಾರೆ.

ಮೊಣಕಾಲುಗಳನ್ನು ನೇರವಾಗಿಟ್ಟುಕೊಂಡು ನೇರವಾಗಿ ಕುಳಿತುಕೊಳ್ಳುವುದು ಸಹ ಉನ್ನತ ಮಟ್ಟದ ಆತ್ಮವಿಶ್ವಾಸದ ಸೂಚಕವಾಗಿದೆ. ಈ ಜನರು ಬುದ್ಧಿವಂತರು, ತರ್ಕಬದ್ಧ ಚಿಂತಕರು ಮತ್ತು ಅವರ ದೈನಂದಿನ ಜೀವನದಲ್ಲಿ ಸಮಯಪ್ರಜ್ಞೆಯುಳ್ಳವರು. ಅವರು ಯಾವುದೇ ಸ್ಥಳ, ಸಭೆ ಅಥವಾ ಸಂದರ್ಶನಕ್ಕೆ ತಡವಾಗಿ ತಲುಪುವ ಸಾಧ್ಯತೆ ತುಂಬಾನೇ ಕಡಿಮೆ ಇರುತ್ತದೆ.

ಇದನ್ನೂ ಓದಿ: Tourist Places: ನೀವೂ ಧ್ಯಾನ, ಯೋಗ ಮಾಡಲು ಒಳ್ಳೆ ಸ್ಥಳ ಹುಡುಕುತ್ತಿದ್ದಿರಾ? ಹಾಗಿದ್ರೆ ಈ ಸ್ಥಳಗಳಿಗೆ ಒಮ್ಮೆ ಭೇಟಿ ಕೊಡಿ

ಅವರು ಸ್ಮಾರ್ಟ್ ಆಗಿ ಕೆಲಸವನ್ನು ಮಾಡುತ್ತಾರೆ ಮತ್ತು ಅವರ ಮನೆ ಮತ್ತು ಕಚೇರಿ ಸ್ಥಳ ಮತ್ತು ಕಾರ್ಯಸ್ಥಳವನ್ನು ಅಚ್ಚುಕಟ್ಟಾಗಿ ಮತ್ತು ಕ್ರಮಬದ್ಧವಾಗಿ ಇರಿಸಿಕೊಳ್ಳುತ್ತಾರೆ. ಅವರು ಸುಮ್ಮನೆ ಸಮಯ ವ್ಯರ್ಥವಾಗುವ ಘರ್ಷಣೆಗಳಲ್ಲಿ ತೊಡಗುವ ಬದಲು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಹೇಳಬಹುದು.

ಭಂಗಿ 2: ಮೊಣಕಾಲುಗಳನ್ನು ಪ್ರತ್ಯೇಕವಾಗಿರಿಸುವುದು
ತಮ್ಮ ಮೊಣಕಾಲುಗಳನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಕುಳಿತುಕೊಳ್ಳುವ ಜನರು ಅವರ ಬಗ್ಗೆ ಸ್ವಯಂ-ಕೇಂದ್ರಿತ ಕಂಪನವನ್ನು ಹೊಂದಿರುವುದು ಕಂಡು ಬರುತ್ತದೆ. ಅವರು ಅಹಂಕಾರಿ ಮತ್ತು ತೀರ್ಪು ನೀಡುವವರಂತೆಯೂ ಕಾಣುತ್ತಾರೆ. ಆದಾಗ್ಯೂ, ಅಧ್ಯಯನಗಳು ಮೇಲ್ಮೈಯಲ್ಲಿ ತೋರುವುದಕ್ಕಿಂತ ಸಂಪೂರ್ಣವಾಗಿ ವಿರುದ್ಧವಾಗಿವೆ ಎಂದು ಬಹಿರಂಗಪಡಿಸಿವೆ. ಇವರು ಆತಂಕ ಮತ್ತು ಕಳವಳ ಪಡುವಂತಹ ವ್ಯಕ್ತಿಯಾಗಿರುತ್ತಾರೆ.

ಮೊಣಕಾಲುಗಳನ್ನು ಪ್ರತ್ಯೇಕವಾಗಿರಿಸಿಕೊಂಡು ಕುಳಿತುಕೊಳ್ಳುವ ಜನರು ತುಂಬಾ ಗೊಂದಲಮಯ ಮನಸ್ಸನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯು ತೋರಿಸಿದೆ. ಏಕಾಗ್ರತೆ ಸಾಧಿಸಲು ತೊಂದರೆ ಅನುಭವಿಸುತ್ತಾರೆ ಮತ್ತು ಇವರು ಯಾವಾಗಲೂ ಹೊಸ ವಿಷಯದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.

ಅವರು ಬುದ್ಧಿವಂತರಾಗಿ ಮಾತನಾಡುತ್ತಾರೆ ಎಂದು ಅವರು ಭಾವಿಸುತ್ತಾರೆ ಆದರೆ ಸಾಮಾನ್ಯವಾಗಿ, ಅವರ ಆಲೋಚನೆಗಳು ತುಂಬಾನೇ ಚದುರಿ ಹೋಗಿರುತ್ತವೆ ಎಂದು ಹೇಳಬಹುದು. ಅವರು ತಮ್ಮ ಮಾತುಗಳ ಪರಿಣಾಮದ ಬಗ್ಗೆ ಯೋಚಿಸದೇ ಮಾತನಾಡುತ್ತಾರೆ.

ಇವರು ತುಂಬಾನೇ ಸುಲಭವಾಗಿ ಬೇಸರಗೊಳ್ಳುತ್ತಾರೆ ಮತ್ತು ಆದ್ದರಿಂದ ಈ ಜನರಿಗೆ ಅವರ ಸುತ್ತಲೂ ಹೆಚ್ಚು ಉತ್ತೇಜಕ ಶಕ್ತಿಯ ಅಗತ್ಯವಿದೆ. ಪುರುಷರು ಸಾಮಾನ್ಯವಾಗಿ ಮೊಣಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳುತ್ತಾರೆ.

ಭಂಗಿ 3: ಕುಳಿತುಕೊಂಡಾಗ ಅಡ್ಡಾದಿಡ್ಡಿ ಕಾಲುಗಳನ್ನು ಇರಿಸುವುದು
ನೀವು ಕಾಲುಗಳನ್ನು ಅಡ್ಡವಾಗಿರಿಸಿಕೊಂಡು ಕುಳಿತುಕೊಳ್ಳುವವರಾಗಿದ್ದರೆ, ಆಗಾಗ್ಗೆ ಸೃಜನಶೀಲ ಆಲೋಚನೆಗಳು ನಿಮಗೆ ಬರುತ್ತವೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ನೀವು ಹೆಚ್ಚು ಕಾಲ್ಪನಿಕ ಚಿಂತನೆಯನ್ನು ಹೊಂದಿರುತ್ತೀರಿ. ನೀವು ಸಾಕಷ್ಟು ಕನಸುಗಳನ್ನು ಕಾಣುತ್ತೀರಿ ಮತ್ತು ಜನರ ಗುಂಪಿನಲ್ಲಿ ಕುಳಿತಿರುವಾಗ ನೀವು ನಿಮ್ಮ ಆಲೋಚನೆಗಳಲ್ಲಿ ಕಳೆದು ಹೋಗಬಹುದು.

ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಂಡು ಕುಳಿತುಕೊಳ್ಳುವುದು ರಕ್ಷಣಾತ್ಮಕ ಅಥವಾ ಮುಚ್ಚಿದ ಮನೋಭಾವ ಅಂತಾನೂ ಸಹ ಹೇಳಲಾಗುತ್ತದೆ. ಸಂಭಾಷಣೆಯ ಸಮಯದಲ್ಲಿ, ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಂಡು ಕುಳಿತುಕೊಳ್ಳುವುದು ನಿರಾಸಕ್ತಿ ಎಂದು ಪರಿಗಣಿಸಲಾಗುತ್ತದೆ. ವ್ಯವಹಾರದ ಸಭೆಗಳಲ್ಲಿ ಹೀಗೆ ಕಾಲುಗಳನ್ನು ಅಡ್ಡವಾಗಿರಿಸಿಕೊಂಡು ಕುಳಿತುಕೊಳ್ಳುವವರ ಆಲೋಚನೆಗಳನ್ನು ತಿರಸ್ಕರಿಸುವ ಅವಕಾಶಗಳು ಕಡಿಮೆ ಇರುತ್ತವೆ.

ಆದಾಗ್ಯೂ, ಈ ಭಂಗಿಯನ್ನು ಅನೇಕರು ಅನೇಕ ಸಂದರ್ಭಗಳಲ್ಲಿ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಕಾಲುಗಳನ್ನು ಅಡ್ಡವಾಗಿರಿಸಿಕೊಂಡು ಕುಳಿತರೇ ವಿಶ್ರಾಂತಿ ಪಡೆಯುತ್ತಿದ್ದಾರೆ ಅಂತ ಸಹ ಅರ್ಥ ಬರುತ್ತದೆ. ಕೆಲವೊಮ್ಮೆ ಇವರು ಭಯಭೀತರಾಗಿದ್ದಾರೆ ಅದಕ್ಕೆ ಹೀಗೆ ಕುಳಿತುಕೊಂಡಿದ್ದಾರೆ ಅಂತಾನೂ ಹೇಳಲಾಗುತ್ತದೆ. ನೀವು ನಿಮ್ಮ ಕುರ್ಚಿಯಲ್ಲಿ ನಿಮ್ಮ ಕಾಲುಗಳನ್ನು ಅಡ್ಡಾದಿಡ್ಡಿಯಾಗಿರಿಸಿಕೊಂಡು ಕುಳಿತು ಮತ್ತು ನಿಮ್ಮ ಪಾದಗಳು ನಿಮ್ಮ ಎದುರಿಗಿರುವ ವ್ಯಕ್ತಿಯ ಕಡೆಗೆ ಇದ್ದರೆ ಆಗ ನೀವು ತುಂಬಾನೇ ಆತ್ಮವಿಶ್ವಾಸದಿಂದ ಆ ಸಂಭಾಷಣೆಯನ್ನು ಆನಂದಿಸುತ್ತಿದ್ದೀರಿ ಎಂದರ್ಥ.

ಆದರೆ, ನೀವು ಇಕ್ಕಟ್ಟಾಗಿ ಕುಳಿತಿದ್ದರೆ ಅಥವಾ ನಿಮ್ಮ ಕಾಲುಗಳನ್ನು ಬಿಗಿಯಾಗಿ ಅಡ್ಡಗಟ್ಟಿ ಚಡಪಡಿಸುತ್ತಿದ್ದರೆ ಆಗ ನಿಮಗೆ ಅನಾನುಕೂಲವಾಗುವ ಸಾಧ್ಯತೆಯಿದೆ. ಆ ಕ್ಷಣದಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ಬೇರೆಡೆ ಇರಬೇಕು ಎಂದು ಅರ್ಥ ನೀಡುತ್ತದೆ.

ಭಂಗಿ 4: ಎರಡು ಪಾದಗಳನ್ನು ಕ್ರಾಸ್ ಆಗಿರಿಸಿಕೊಳ್ಳುವುದು
ನೀವು ಎರಡು ಪಾದಗಳನ್ನು ಕ್ರಾಸ್ ರೀತಿಯಲ್ಲಿ ಮಡಚಿಕೊಂಡು ಕುಳಿತರೆ, ನೀವು ಒಳ್ಳೆ ರಾಜ ಮತ್ತು ರಾಣಿಯಂತಹ ಜೀವನವನ್ನು ನಡೆಸಲು ಇಷ್ಟಪಡುವಿರಿ ಎಂದರ್ಥ. ಯಾವುದೇ ಪರಿಸ್ಥಿತಿಯಲ್ಲಿ ನೀವು ಹೆಚ್ಚು ಆತ್ಮವಿಶ್ವಾಸ ಮತ್ತು ಆರಾಮದಾಯಕವಾಗಿ ಕಾಣಿಸಿಕೊಳ್ಳಬಹುದು. ನೀವು ಭಯಭೀತರಾಗುವುದು ತುಂಬಾನೇ ವಿರಳ, ವಿಷಯಗಳು ತಮ್ಮದೇ ಆದ ವೇಗದಲ್ಲಿ ಚಲಿಸುವುದರಿಂದ ನೀವು ಸದಾ ಒಂದೇ ರೀತಿಯಲ್ಲಿ ವ್ಯವಹರಿಸುತ್ತೀರಿ ಎಂದು ಹೇಳಬಹುದು. ವಾಸ್ತವವಾಗಿ, ನಿಮ್ಮ ಸುತ್ತಲಿನ ಪ್ರತಿಯೊಬ್ಬರೂ ಆತ್ಮವಿಶ್ವಾಸವನ್ನು ಅನುಭವಿಸುವಂತೆ ಮಾಡುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ.

ಇದನ್ನೂ ಓದಿ: Laughter: ನಕ್ಕರೆ ಅದೇ ಸ್ವರ್ಗ! ಆದ್ರೆ ನಗುವಿನಲ್ಲೂ ಹಲವು ವಿಧಗಳಿವೆ ಕಂಡ್ರಿ

ನಿಮ್ಮ ಗುರಿಗಳನ್ನು ಸಾಧಿಸಲು ನೀವು ಕಷ್ಟಪಟ್ಟು ಮತ್ತು ದಣಿವರಿಯದೆ ಕೆಲಸ ಮಾಡುವಿರಿ. ನಿಮ್ಮ ಕಠಿಣ ಪರಿಶ್ರಮವು ಫಲಗಳನ್ನು ತರುತ್ತದೆ ಎಂಬ ದೃಢವಾದ ನಂಬಿಕೆಯನ್ನು ನೀವು ಹೊಂದಿರುತ್ತೀರಿ. ನೀವು ಒಬ್ಬ ಉತ್ತಮ ಕೇಳುಗ ಮತ್ತು ಪ್ರತಿಯೊಬ್ಬರ ರಹಸ್ಯಗಳನ್ನು ಕೇಳಿಸಿಕೊಂಡು ಅವುಗಳನ್ನು ಕಾಪಾಡಿಕೊಳ್ಳುತ್ತೀರಿ. ಆದಾಗ್ಯೂ, ನಿಮ್ಮ ರಹಸ್ಯಗಳನ್ನು ಅಥವಾ ನಿಮ್ಮ ಮುಂದಿನ ನಡೆಯನ್ನು ನೀವು ಎಂದಿಗೂ ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ. ನಿಮ್ಮ ಖಾಸಗಿ ವಿಷಯಗಳ ವಿಷಯಕ್ಕೆ ಬಂದರೆ ನೀವು ಸಾಕಷ್ಟು ಅಹಂಕಾರಿಗಳಾಗಿರುತ್ತೀರಿ ಎಂದು ಹೇಳಲಾಗುತ್ತದೆ.

ನಿಮ್ಮ ನೋಟದ ಬಗ್ಗೆಯೂ ನೀವು ಸಾಕಷ್ಟು ಕಾಳಜಿ ವಹಿಸುತ್ತೀರಿ. ಸಂದರ್ಭಕ್ಕೆ ಅನುಗುಣವಾಗಿ ನೀವು ಹೇಗೆ ಕಾಣಿಸಬೇಕು ಅನ್ನೋದರ ಬಗ್ಗೆ ಕಾಳಜಿ ವಹಿಸುತ್ತೀರಿ. ನಡವಳಿಕೆಯ ತಜ್ಞರು ಮತ್ತು ಮನಶ್ಶಾಸ್ತ್ರಜ್ಞರು ಕೆಲವು ಸಂದರ್ಭಗಳಲ್ಲಿ ಪಾದಗಳನ್ನು ಅಡ್ಡವಾಗಿಟ್ಟುಕೊಂಡು ಕುಳಿತುಕೊಳ್ಳುವುದು ರಕ್ಷಣಾತ್ಮಕತೆ ಮತ್ತು ಅಭದ್ರತೆಯ ಸೂಚನೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಭಂಗಿ 5: ಎರಡು ಕಾಲುಗಳನ್ನು ಲಾಕ್ ಮಾಡಿಕೊಂಡು ಕುಳಿತುಕೊಳ್ಳುವುದು

ನೀವು ನಿಮ್ಮ ಎರಡು ಕಾಲುಗಳನ್ನು ಲಾಕ್ ಮಾಡಿಕೊಂಡು ಕುಳಿತುಕೊಂಡರೆ ಆಗ ಅದು ನೀವು ಆತ್ಮವಿಶ್ವಾಸ ಮತ್ತು ಪ್ರಾಬಲ್ಯವನ್ನು ಹೊಂದಿದ್ದೀರಿ ಎಂದು ಪ್ರತಿಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಈ ಕುಳಿತುಕೊಳ್ಳುವ ಭಂಗಿಯು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗುತ್ತಿದೆ. ನೀವು ಇತರ ಕುಳಿತುಕೊಳ್ಳುವ ಭಂಗಿಗಳನ್ನು ಹೊಂದಿರುವ ಜನರಿಗೆ ಹೋಲಿಸಿದರೆ ಹೆಚ್ಚು ಪ್ರಬಲ, ವಿಶ್ರಾಂತಿ ಪ್ರಿಯರು ಮತ್ತು ಆತ್ಮವಿಶ್ವಾಸದಿಂದ ಇರಬಹುದು. ಒಟ್ಟಿನಲ್ಲಿ ಹೇಳುವುದಾದರೆ ನೀವು ನಿಮ್ಮ ಜೀವನದಲ್ಲಿ ಸುರಕ್ಷಿತ ಮತ್ತು ಸಂತೃಪ್ತರಾಗಿದ್ದೀರಿ ಅಂತ ಹೇಳಲಾಗುತ್ತದೆ.

ನೀವು ಯಾವುದರ ಕೊರತೆಯನ್ನೂ ಅನುಭವಿಸಿದರೂ ಸಹ, ನಿಮ್ಮ ಆಸೆಗಳನ್ನು ನೀವೇ ಪೂರೈಸಲು ನಿಮ್ಮ ಮನಸ್ಸು ಮತ್ತು ಶಕ್ತಿಯನ್ನು ವಿನಿಯೋಗಿಸುತ್ತೀರಿ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನೀವು ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ.

ನೀವು ನಿಮ್ಮ ಗುರಿಗಳನ್ನು ಹೊಂದಿಸುತ್ತೀರಿ ಮತ್ತು ಅವುಗಳನ್ನು ಸಾಧಿಸುವ ಸಮಯದವರೆಗೆ ನೀವು ಜಾಣ್ಮೆಯಿಂದ ಕೆಲಸ ಮಾಡುವಿರಿ. ನಿಮ್ಮ ವೃತ್ತಿಜೀವನ ಮತ್ತು ಶಿಕ್ಷಣ ಎರಡು ತುಂಬಾನೇ ಮುಖ್ಯವಾಗಿರುತ್ತವೆ ನಿಮಗೆ ಎಂದು ಹೇಳಲಾಗುತ್ತದೆ. ಇದರರ್ಥ ನೀವು ಜೀವನದ ಇತರ ಅಂಶಗಳನ್ನು ಆನಂದಿಸುವುದಿಲ್ಲ ಎಂದು ಅರ್ಥವಲ್ಲ, ಆದರೆ ನೀವು ಯಾವಾಗಲೂ ನಿಮ್ಮ ಶಿಕ್ಷಣ ಮತ್ತು ವೃತ್ತಿಜೀವನಕ್ಕಾಗಿ ಹೆಚ್ಚು ಶ್ರಮಿಸುತ್ತೀರಿ ಎಂದರ್ಥ.

ಇದನ್ನೂ ಓದಿ: Work From Home ಮತ್ತು ಆಫೀಸ್‌ನಲ್ಲಿ ಕೆಲಸ ಈ ಎರಡರಲ್ಲಿ ಯಾವುದು ಬೆಸ್ಟ್?

ಹೀಗೆ ಕುಳಿತುಕೊಳ್ಳುವುದರಿಂದ ಸಾಮಾನ್ಯವಾಗಿ ನಿಮಗೆ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳುವಂತೆಯೇ, ಈ ಕುಳಿತುಕೊಳ್ಳುವ ಶೈಲಿಯನ್ನು ಹೊಂದಿರುವ ಜನರು ತಮ್ಮ ಸ್ಥಳ ಮತ್ತು ಗೌಪ್ಯತೆಯನ್ನು ಸಹ ಪ್ರೀತಿಸುತ್ತಾರೆ. ಅವರು ಸಾಮಾನ್ಯವಾಗಿ ದೊಡ್ಡ ಮನೆ, ದೊಡ್ಡ ದೊಡ್ಡ ಕೋಣೆಗಳು, ವಾರ್ಡ್ರೋಬ್ ಗಳು ಇದೆಲ್ಲವನ್ನು ಇಷ್ಟಪಡುತ್ತಾರೆ.

ಈ ಭಂಗಿಯಲ್ಲಿ ಕುಳಿತುಕೊಳ್ಳುವ ಜನರು ಪ್ರತಿಯೊಂದಕ್ಕೂ ತನ್ನದೇ ಆದ ಸಮಯ ಮತ್ತು ಸ್ಥಳವನ್ನು ಹೊಂದಿರುತ್ತಾರೆ ಎಂದು ನಂಬುತ್ತಾರೆ ಎಂದು ನಡವಳಿಕೆಯ ತಜ್ಞರು ಗಮನಿಸಿದ್ದಾರೆ. ಅವರು ಸದಾ ಉತ್ತಮ ಉಡುಗೆ ತೊಡುಗೆಗಳನ್ನು ತೊಟ್ಟು ಚೆನ್ನಾಗಿ ಕಾಣಬೇಕೆಂಬ ಒಲವು ಹೊಂದಿರುತ್ತಾರೆ. ಅವರು ಇದೆಲ್ಲದರ ಜೊತೆಗೆ ಸ್ಪರ್ಧಾತ್ಮಕ ಸ್ವಭಾವವನ್ನು ಸಹ ಹೊಂದಿರುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಭಿಪ್ರಾಯಗಳನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
Published by:Ashwini Prabhu
First published: