ಟೂತ್​ಪೇಸ್ಟ್​ಗಳಲ್ಲಿರುವ ಉಪ್ಪು ಹಲ್ಲುಗಳಿಗೆ ಹಾನಿಕಾರಕ ?

news18
Updated:May 27, 2018, 5:00 PM IST
ಟೂತ್​ಪೇಸ್ಟ್​ಗಳಲ್ಲಿರುವ ಉಪ್ಪು ಹಲ್ಲುಗಳಿಗೆ ಹಾನಿಕಾರಕ ?
news18
Updated: May 27, 2018, 5:00 PM IST
ನಮ್ಮ ಟೂತ್​ಪೇಸ್ಟ್​ನಲ್ಲಿ ಉಪ್ಪಿದೆ ಎಂದು ಕೆಲ ಕಂಪನಿಗಳು ಹೇಳಿಕೊಳ್ಳುತ್ತಿದೆ. ಇದು ನಿಮ್ಮ ಹಲ್ಲುಗಳಿಗೆ ಉತ್ತಮ ಎಂದೆಲ್ಲಾ ಜಾಹೀರಾತನ್ನೂ ನೀಡುತ್ತಿದ್ದಾರೆ. ಆದರೆ ಇಂತಹ ಪೇಸ್ಟ್​ಗಳು ಹಲ್ಲುಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತಿದೆ.


ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದರೆ ಹಲ್ಲುಗಳಿಗೆ ಅಪಾಯಕಾರಿ. ದಾಲ್ಚಿನ್ನಿ, ತೆಂಗಿನ ಎಣ್ಣೆ, ಇದ್ದಿಲು, ಅಡುಗೆ ಸೋಡಾ ಇತ್ಯಾದಿಗಳನ್ನು ಹೊಂದಿರುವ ಟೂತ್​ಪೇಸ್ಟ್​ಗಳನ್ನು ಸಹ ಮಾರುಕಟ್ಟೆಯಲ್ಲಿ ಕಾಣಬಹುದು. ಇವುಗಳಿಂದ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಂತೆ.


ಸಾಮಾನ್ಯವಾಗಿ ಉಪ್ಪನ್ನು ಆಹಾರದಲ್ಲಿ ಬಳಸಲಾಗುತ್ತದೆ.  ಆಹಾರಗಳಲ್ಲಿ ಮತ್ತು ಟೂತ್​ಪೇಸ್ಟ್​ನಲ್ಲಿ ಉಪ್ಪು ಇರುವುದರಿಂದ ಇದು ಹಲ್ಲುಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಸೋಡಿಯಂ ಅಂಶವಿರುವ ಉಪ್ಪಿನ ಬಳಕೆ ಹಲ್ಲಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಆಹಾರದಲ್ಲೂ ಉಪ್ಪನ್ನು ಹೆಚ್ಚಾಗಿ ಬಳಸಿದರೆ ಹೊಟ್ಟೆಯ ಉಬ್ಬಿನ ಸಮಸ್ಯೆ ತಲೆದೂರಬಹುದು. ಒಟ್ಟಾರೆ ಉಪ್ಪು ಎಂಬುದು ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.


ಸೋಡಿಯಂಯುಕ್ತ ಆಹಾರಗಳಲ್ಲಿ ಕಂಡು ಬರುವ ಸಕ್ಕರೆಯ ಅಂಶವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಉಪ್ಪು ಹಲ್ಲನ್ನು ಬಿಳಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಲ್ಲರೂ ನಂಬುತ್ತಾರೆ. ಆದರೆ ಉಪ್ಪು ಎಂಬುದು ಸೋಂಕು ನಿವಾರಕವಾಗಿದ್ದು, ಇದನ್ನು ಬಾಯಲ್ಲಿ ಮುಕ್ಕಳಿಸುವುದರಿಂದ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಬಹುದು. ಹೀಗಾಗಿ ದಂತವೈದ್ಯರು ಉಪ್ಪಿನಿಂದ ಬಾಯಿ ಮುಕ್ಕಳಿಸಲು ಸೂಚಿಸುತ್ತಾರೆ.


ದಿನ್ನಕ್ಕೆ ಎರಡು ಬಾರಿ ಹಲ್ಲುಜ್ಜುದರಿಂದ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಉಪ್ಪಿನ ಅತಿಯಾದ ಬಳಕೆ ಹಲ್ಲುಗಳ ಮತ್ತು ಬಾಯಿಯ ಮೇಲೆ ವ್ಯತಿರಿಕ್ತವಾಗಿ ಪರಿಣಮಿಸುತ್ತದೆ.
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ