Parenting Tips: ಆನ್​ಲೈನ್ ಶಿಕ್ಷಣದ ವೇಳೆ ಮಕ್ಕಳ ಬಗ್ಗೆ ಕಾಳಜಿವಹಿಸಿ

ಮಗುವಿನ ಕಲಿಕೆ ಮತ್ತು ನೆನಪಿಡುವ ಸಾಮರ್ಥ್ಯವನ್ನು ಪೋಷಕರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅವರು ಮಾತನಾಡುವಾಗ ಕಲಿತ ವಿಷಯಗಳನ್ನು ಪ್ರಸ್ತಾಪಿಸಿ.

news18-kannada
Updated:May 22, 2020, 2:57 PM IST
Parenting Tips: ಆನ್​ಲೈನ್ ಶಿಕ್ಷಣದ ವೇಳೆ ಮಕ್ಕಳ ಬಗ್ಗೆ ಕಾಳಜಿವಹಿಸಿ
parenting tips
  • Share this:
ಈಗಾಗಲೇ ಲಾಕ್​ಡೌನ್ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಆನ್​ಲೈನ್ ಕ್ಲಾಸ್​ಗಳನ್ನು ಆರಂಭಿಸಲಾಗಿದೆ. ಇದರಿಂದ ಮಕ್ಕಳು ಮನೆಯಿಂದಲೇ ಶಾಲಾ ಪಠ್ಯಕ್ರಮಗಳನ್ನು ಕಲಿಯಲು ಅನುಕೂಲವಾಗಲಿದೆ. ಆದರೆ ಶಾಲಾ ವಾತಾವರಣ ಇಲ್ಲದೇ ಇರುವುದರಿಂದ ಅಧ್ಯಯನದ ಬಗ್ಗೆ ಮಕ್ಕಳಿಗೆ ಆಸಕ್ತಿ ಇರುವುದಿಲ್ಲ. ಇದು ಅವರ ಶಿಕ್ಷಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪೋಷಕರ ಆತಂಕ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಮಕ್ಕಳ ಪಾಲನೆಯಲ್ಲಿ ವಿಶೇಷ ಕಾಳಜಿವಹಿಸಿಕೊಳ್ಳುವ ಮೂಲಕ ಅವರ ಅಧ್ಯಯನ ಅಭಿರುಚಿಯನ್ನು ಹೆಚ್ಚಿಸುವ ಜವಾಬ್ದಾರಿ ಪೋಷಕರಿಗೆ ಇದೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.

ಅಧ್ಯಯನ ಮಾಡುವಾಗ ಮಕ್ಕಳೊಂದಿಗೆ ಕುಳಿತುಕೊಳ್ಳಿ:
ಮಕ್ಕಳ ಅಧ್ಯಯನಕ್ಕೆ ಮನೆಯಲ್ಲಿ ಉತ್ತಮ ವಾತಾವರಣವಿದ್ದರೆ ಅವರ ಮುಂದಿನ ಜೀವನ ಉಜ್ವಲವಾಗಿರುತ್ತದೆ. ಹೀಗಾಗಿ ಅವರು ಶಾಲಾ ಪಠ್ಯ ಕಲಿಕೆ ಸಂದರ್ಭಗಳಲ್ಲಿ ಅವರನ್ನು ಪ್ರೇರೇಪಿಸಲು ಅವರೊಂದಿಗೆ ಕುಳಿತುಕೊಳ್ಳಿ. ಈ ಸಮಯದಲ್ಲಿ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನಿರತರಾಗಿರುವ ಬದಲು, ನೀವು ಅವರಿಗೆ ಪಾಠವನ್ನು ಹೇಳಿಕೊಡಿ.

ಹೊಸದನ್ನು ಕಲಿಯಲು ಪ್ರೇರೇಪಿಸಿ:
ಪೋಷಕರು ಉತ್ತಮ ಮಾರ್ಕ್ಸ್​ ಪಡೆಯಲು ಒತ್ತಾಯಿಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯ. ಆದರೆ ಹಾಗೆ ಮಾಡುವುದು ಸಂಪೂರ್ಣವಾಗಿ ತಪ್ಪು. ಏಕೆಂದರೆ ಒಳ್ಳೆಯ ಮಾರ್ಕ್ಸ್​ ಪಡೆಯಬೇಕಿದ್ರೆ, ನಿಮ್ಮ ಮಗುವನ್ನು ಹೊಸ ವಿಷಯಗಳನ್ನು ಕಲಿಯಲು ಪ್ರೇರೇಪಿಸಬೇಕು. ಆನ್‌ಲೈನ್ ತರಗತಿಯಲ್ಲಿ ಏನು ಕಲಿತೆ, ಏನು ಕಷ್ಟವಾಗುತ್ತಿದೆ ಎಂಬುದನ್ನು ಚರ್ಚಿಸಿ. ಆ ಬಳಿಕ ಅದನ್ನು ಸುಲಭವಾಗಿ ಬಿಡಿಸಿ ಹೇಳಿಕೊಡಲು ಪ್ರಯತ್ನಿಸಿ. ಇದರೊಂದಿಗೆ ಅವರಿಗೆ ಇಂಟ್ರೆಸ್ಟಿಂಗ್ ಆಗಿರುವ ಹೊಸ ವಿಷಯಗಳನ್ನು ಉದಾಹರಣೆಯಾಗಿ ನೀಡಿ.

ಅಧ್ಯಯನದ ವೇಳಾಪಟ್ಟಿಯನ್ನು ಮಾಡಿ:
ನಿಮ್ಮ ಮಗು ಸರಿಯಾದ ಸಮಯದಲ್ಲಿ ಅಧ್ಯಯನ ಮಾಡಲು ಮತ್ತು ಆಟವಾಡಲು ಸಮಯ ನಿಗದಿ ಪಡಿಸಿ. ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸಿ ನೀಡಿ. ಹಾಗೆಯೇ ಆಟವಾಡುವ ಸಮಯದ ಬಗ್ಗೆ ತಿಳಿಸಿಕೊಡಿ. ಹಾಗೆಯೇ ಅವರು ಕಲಿತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗೆಲ್ಲಾ ಮಾತನಾಡಿ.ಕಲಿಕೆಯ ಶೈಲಿಯನ್ನು ಅರ್ಥಮಾಡಿಕೊಳ್ಳಿ:
ಮಗುವಿನ ಕಲಿಕೆ ಮತ್ತು ನೆನಪಿಡುವ ಸಾಮರ್ಥ್ಯವನ್ನು ಪೋಷಕರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅವರು ಮಾತನಾಡುವಾಗ ಕಲಿತ ವಿಷಯಗಳನ್ನು ಪ್ರಸ್ತಾಪಿಸಿ, ಇದರಿಂದ ವಿಷಯಗಳು ಅವರಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಹಾಗೆಯೇ ನಿಮಗೆ ಕಲಿಸಲು ಸುಲಭವಾಗಿಸುತ್ತದೆ.

ಮಕ್ಕಳನ್ನೂ ಕೇಳಿ:
ನಿಮ್ಮ ಮಗುವಿನ ಮಾತು ಮತ್ತು ಆಲೋಚನೆಗಳಿಗೆ ಪ್ರಾಮುಖ್ಯತೆ ನೀಡುವುದು ಸಹ ಬಹಳ ಮುಖ್ಯ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಅವರ ಇಂಟ್ರೆಸ್ಟಿಂಗ್ ವಿಷಯ ಮತ್ತು ಅವರು ಹೇಳುವ ಏನೇ ಆಗಿದ್ದರೂ ಅದನ್ನು ಆಲಿಸಿ. ಇದರಿಂದ ಬಾಂಧವ್ಯ ಬೆಳೆಯುವುದಲ್ಲದೆ, ನೀವು ಕೂಡ ಅವರಿಗೆ ಅರ್ಥವಾಗುವಂತೆ ತಿಳಿಸಲು ನೆರವಾಗುತ್ತದೆ.
First published:May 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading