• Home
  • »
  • News
  • »
  • lifestyle
  • »
  • Stroke Signs: ಬ್ಲಡ್‌ ಗ್ರೂಪ್ ಮೂಲಕ ಸ್ಟ್ರೋಕ್ ಲಕ್ಷಣಗಳನ್ನು ಪತ್ತೆ ಮಾಡ್ಬೋದಂತೆ

Stroke Signs: ಬ್ಲಡ್‌ ಗ್ರೂಪ್ ಮೂಲಕ ಸ್ಟ್ರೋಕ್ ಲಕ್ಷಣಗಳನ್ನು ಪತ್ತೆ ಮಾಡ್ಬೋದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Blood Type And Stroke: ರಕ್ತದ ಪ್ರಕಾರಗಳಿಂದ ಸ್ಟ್ರೋಕ್ ಇದೆಯೇ ಇಲ್ಲವೇ ಎಂಬುದನ್ನು ಮೊದಲೇ ಗುರುತಿಸುವುದು ಒಳ್ಳೆಯ ಬೆಳವಣಿಗೆಯಾದರೂ ಜನರು ಹೆದರಬೇಕಾಗಿಲ್ಲ ಎಂಬ ಸೂಚನೆಯನ್ನು ಅಧ್ಯಯನಕಾರರು ನೀಡಿದ್ದಾರೆ. ಯಾವುದಕ್ಕೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂಬುದು ತಜ್ಞರ ಇರಾದೆಯಾಗಿದೆ.

ಮುಂದೆ ಓದಿ ...
  • Share this:

ಮಾನವನ ರಕ್ತಪ್ರಕಾರದಿಂದ (Blood Group) ಸ್ಟ್ರೋಕ್‌ನ (Stroke) ಆರಂಭಿಕ ಲಕ್ಷಣಗಳನ್ನು (Signs) ಪತ್ತೆಹಚ್ಚಬಹುದು ಎಂಬುದು ಇದೀಗ ಅಧ್ಯಯನಗಳಿಂದ ತಿಳಿದುಬಂದಿದೆ. ಹದಿಹರೆಯದವರಲ್ಲಿ ಕಂಡುಬರುವ ಆರಂಭಿಕ ಪಾರ್ಶ್ವವಾಯು ಲಕ್ಷಣಗಳನ್ನು ಈ ಮೂಲಕ ಪತ್ತೆಹಚ್ಚಬಹುದಾಗಿದ್ದು ಇದರಿಂದ ಹೆಚ್ಚಿನ ಅಪಾಯವನ್ನು ನಿಯಂತ್ರಿಸಬಹುದು ಎಂದು ಅಧ್ಯಯನ ತಿಳಿಸಿದೆ. ರಕ್ತದ ಪ್ರಕಾರಗಳಿಂದ ಸ್ಟ್ರೋಕ್ ಇದೆಯೇ ಇಲ್ಲವೇ ಎಂಬುದನ್ನು ಮೊದಲೇ ಗುರುತಿಸುವುದು ಒಳ್ಳೆಯ ಬೆಳವಣಿಗೆಯಾದರೂ ಜನರು ಹೆದರಬೇಕಾಗಿಲ್ಲ ಎಂಬ ಸೂಚನೆಯನ್ನು ಅಧ್ಯಯನಕಾರರು ನೀಡಿದ್ದಾರೆ. ಯಾವುದಕ್ಕೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂಬುದು ತಜ್ಞರ ಇರಾದೆಯಾಗಿದೆ.


ಎ ರಕ್ತದ ಗುಂಪಿಗೆ ಅಪಾಯ ಹೆಚ್ಚೇ?


ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಕಂಡುಬರುವ ವಿವಿಧ ಶ್ರೇಣಿಯ ರಾಸಾಯನಿಕಗಳನ್ನು ಬೇರೆ ಬೇರೆ ರಕ್ತ ಪ್ರಕಾರಗಳು ಉಲ್ಲೇಖಿಸುತ್ತವೆ. ಎ ಹಾಗೂ ಬಿ ರಕ್ತದ ಗುಂಪುಗಳು ಸಾಮಾನ್ಯ ರಕ್ತ ಪ್ರಕಾರಗಳಾಗಿದ್ದು, ಇತರ ರಕ್ತದ ಗುಂಪುಗಳಿಗೆ ಹೋಲಿಸಿದಾಗ ಎ ರಕ್ತದ ಗುಂಪಿನವರು 60 ವರ್ಷಕ್ಕಿಂತ ಮೊದಲೇ ಪಾರ್ಶ್ವವಾಯು ಸಮಸ್ಯೆಗೆ ಬೇಗ ತುತ್ತಾಗುತ್ತಾರೆ ಎಂಬುದನ್ನು ತಿಳಿಸಿದೆ. ನ್ಯುರೋಲಜಿಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.


60 ಕ್ಕೂ ಮುನ್ನವೇ ಸ್ಟ್ರೋಕ್‌ ಕಾಣಿಸಿಕೊಳ್ಳಬಹುದು


ಅಧ್ಯಯನಕಾರರು ಸಮೀಕ್ಷೆಗಳನ್ನು ನಡೆಸಿದ್ದು, 17,000 ರೋಗಿಗಳನ್ನು ಒಳಗೊಂಡಿರುವ 48 ಜೆನೆಟಿಕ್ ಅಧ್ಯಯನಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. 18 ರಿಂದ 59 ರ ಹರೆಯದ ಭಾಗವಹಿಸುವವರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಎ ರಕ್ತದ ಗುಂಪಿನ ಜನರು ಇತರ ರಕ್ತಪ್ರಕಾರದ ಜನರಿಗೆ ಹೋಲಿಸಿದಾಗ ಸ್ಟ್ರೋಕ್‌ನ ಅಂಶಗಳನ್ನು 16% ಕ್ಕಿಂತ ಹೆಚ್ಚು ಹೊಂದಿದ್ದು 60 ರ ಹರೆಯಕ್ಕೂ ಮುನ್ನವೇ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.


O1 ರಕ್ತದ ಗುಂಪಿನ ಜೀನ್ ಅನ್ನು ಹೊಂದಿರುವವರು 12% ದಷ್ಟು ಕಡಿಮೆ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ತಂಡವು ಈ ಸಂಶೋಧನೆಯನ್ನು ನಡೆಸಿದ್ದು ಅನುವಂಶಿಕ ಗುಣಲಕ್ಷಣಗಳಾದ ರಕ್ತದ ಪ್ರಕಾರ ಮತ್ತು ಪಾರ್ಶ್ವವಾಯುವಿನ ನಡುವಿನ ಸಂಬಂಧವನ್ನು ಅವಲೋಕಿಸಿದ್ದಾರೆ.


ಇದನ್ನೂ ಓದಿ: ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದರೆ ಚಿಂತಿಸಬೇಡಿ, ಈ ಸಲಹೆ ಪಾಲಿಸಿ


ಸ್ಟ್ರೋಕ್‌ನ ಅಪಾಯವು ತುಂಬಾ ಸಾಧಾರಣವಾಗಿದೆ


ಎ ರಕ್ತದ ಗುಂಪಿನವರು ಸ್ಟ್ರೋಕ್‌ಗೆ ಒಳಗಾಗುತ್ತೇವೆ ಎಂದು ಗಾಬರಿಯಾಗಬಾರದು ಎಂದು ತಿಳಿಸಿರುವ ಅಧ್ಯಯನಕಾರರು ಹೆಚ್ಚುವರಿ ತಪಾಸಣೆಗೆ ಒಳಗಾಗಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ವೈದ್ಯಕೀಯವಾಗಿ, ನಮ್ಮ ರಕ್ತದ ಪ್ರಕಾರಗಳು ಪಾರ್ಶ್ವವಾಯುವಿಗೆ ಹೆಚ್ಚಿನ ಅಪಾಯವನ್ನುಂಟುಮಾಡುವ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ ಎಂಬುದು ಅಧ್ಯಯನ ತಂಡದ ಸದಸ್ಯರಾಗಿರುವ ಮಿಚೆಲ್ ಅಭಿಪ್ರಾಯವಾಗಿದ್ದು, ಆರಂಭದಲ್ಲಿಯೇ ಸ್ಟ್ರೋಕ್ ಇರುವುದನ್ನು ಪತ್ತೆಹಚ್ಚುವುದರಿಂದ ಅದನ್ನು ಉಪಚರಿಸಬಹುದು ಎಂದು ತಿಳಿಸಿದ್ದಾರೆ.




ದುಶ್ಚಟಗಳಿಂದ ದೂರವಿದ್ದಷ್ಟೂ ಒಳ್ಳೆಯದು


ಪಾರ್ಶ್ವವಾಯುವು ರಕ್ತದಲ್ಲಿ ಆರಂಭದಲ್ಲಿ ಕಂಡುಬಂದರೂ ಅದನ್ನು ಹೆಚ್ಚಿಸುವ ಧೂಮಪಾನ, ಮಧ್ಯಪಾನ ಮೊದಲಾದ ಅಪಾಯಕಾರಿ ಚಟುವಟಿಕೆಗಳನ್ನು ಕಡಿಮೆ ಮಾಡಿದರೆ ಆರಂಭದಲ್ಲಿಯೇ ರೋಗಲಕ್ಷಣಗಳನ್ನು ಚಿವುಟಿ ಹಾಕಬಹುದು ಎಂಬುದು ಮಿಚೆಲ್ ಸಲಹೆಯಾಗಿದೆ.


ರಕ್ತ ಪ್ರಕಾರಗಳಿಂದ ಇತರ ಕಾಯಿಲೆಗಳನ್ನು ತಿಳಿದುಕೊಳ್ಳಬಹುದು


ರಕ್ತ ಪ್ರಕಾರಗಳು ಕೇವಲ ಸ್ಟ್ರೋಕ್‌ನ ಚಿಹ್ನೆಗಳನ್ನು ಪ್ರದರ್ಶಿಸಿದ್ದು ಮಾತ್ರವಲ್ಲದೆ ಇನ್ನಿತರ ಅಪಾಯಕಾರಿ ಕಾಯಿಲೆಗಳ ಬಗ್ಗೆಯೂ ಮಾಹಿತಿ ನೀಡುತ್ತದೆ ಎಂಬುದು ತಿಳಿದುಬಂದಿದೆ.


ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ರಕ್ತದ ಗುಂಪುಗಳಾದ ಎ, ಬಿ, ಎಬಿ ಯ ಜನರು ರಕ್ತದ ಗುಂಪು ಒ ವಿಗಿಂತ ಪರಿಧಮನಿಯ ಹೃದಯ ಕಾಯಿಲೆಯನ್ನು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಅಪರೂಪದ ರಕ್ತ ಗುಂಪು ಎಬಿಯು ಹೃದಯ ಕಾಯಿಲೆಯ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ವರದಿಯಾಗಿದೆ.


ಇತರ ಅಧ್ಯಯನಗಳು ಇತರ ರಕ್ತ ಪ್ರಕಾರಗಳಿಗೆ ಹೋಲಿಸಿದರೆ ಎ ರಕ್ತ ಗುಂಪಿನ ಜನರಲ್ಲಿ ಹೊಟ್ಟೆಯ ಕ್ಯಾನ್ಸರ್ ಕಂಡುಬರುತ್ತದೆ ಎಂದು ಸೂಚಿಸಿದ್ದಾರೆ.


ಇದನ್ನೂ ಓದಿ: ಹೃದಯದ ಆರೋಗ್ಯ ಹಾಳಾಗಬಾರದು ಅಂದ್ರೆ ಚೆನ್ನಾಗಿ ನೀರು ಕುಡಿಬೇಕಂತೆ


ಜನರು ಹೆದರಬೇಕಾಗಿಲ್ಲ


ಅಧ್ಯಯನಗಳು ಇನ್ನೂ ಮುಂದುವರಿಯುತ್ತಿದ್ದು ಈ ಮಾಹಿತಿಯನ್ನು ದೃಢೀಕರಿಸಲು ಇನ್ನಷ್ಟು ವಿವರಗಳು ಬೇಕು ಎಂಬುದಾಗಿ ಮಿಚೆಲ್ ತಿಳಿಸಿದ್ದಾರೆ. ಇನ್ನು ಇದೊಂದು ಅಧ್ಯಯನವಾಗಿರುವುದರಿಂದ ಜನರು ಹೆಚ್ಚು ಚಿಂತಿತರಾಗಬಾರದು ಎಂಬ ಸೂಚನೆಯನ್ನು ನೀಡಿದ್ದಾರೆ. ಇನ್ನಷ್ಟು ಅಧ್ಯಯನಗಳನ್ನು ಈ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತದೆ ಹಾಗೂ ಪರಿಹಾರವನ್ನು ತಿಳಿಸಲಾಗುತ್ತದೆ ಎಂಬುದು ಮಿಚೆಲ್ ಮಾತಾಗಿದೆ.

Published by:Sandhya M
First published: