• Home
 • »
 • News
 • »
 • lifestyle
 • »
 • Weight Loss: ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ತೂಕ ಇಳಿಸಿಕೊಂಡ ಯುವತಿಯ ಸಲಹೆ ಹೀಗಿದೆ

Weight Loss: ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ತೂಕ ಇಳಿಸಿಕೊಂಡ ಯುವತಿಯ ಸಲಹೆ ಹೀಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಬ್ಬಿ ವಿಲಿಯಮ್ಸ್, ಹೆಚ್ಚುವರಿ ಪಾಕೆಟ್ ಹಣಕ್ಕಾಗಿ 14 ನೇ ವಯಸ್ಸಿನಲ್ಲಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ್ರು. ಕೆಲಸದ ಸಮಯದಲ್ಲಿ ಅಬ್ಬಿ ವಿಲಿಯಮ್ಸ್, ಫ್ರೆಂಚ್ ಫ್ರೈಸ್, ಬರ್ಗರ್ ಮತ್ತು ಐಸ್ ಕ್ರೀಂ ಅನ್ನು ಬೇಕಾದಷ್ಟು ತಿನ್ನುತ್ತಾ ಇದ್ದರು. ಹೀಗಾಗಿ ಕ್ರಮೇಣ ಎಬಿ ತೂಕ ಹೆಚ್ಚಾಯಿತು.

ಮುಂದೆ ಓದಿ ...
 • Share this:

  23ರ ಹರೆಯದ ಯುವತಿಯೊಬ್ಬಳು ( Young Lady) ತನ್ನ ಆಹಾರ ಪದ್ಧತಿಯ (Food Plan)  ಬದಲಾವಣೆಯ (Changes) ಮೂಲಕ ಸುಮಾರು 40 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾಳೆ. ತೂಕ ನಷ್ಟದ ನಂತರ ಹುಡುಗಿ ಗುರುತೇ ಸಿಗದಷ್ಟು ಬದಲಾಗಿದ್ದಾಳೆ. ದಪ್ಪ ದೇಹ ಈಗ ತೆಳುವಾಗಿದೆ. ಸಿಡ್ನಿ ಮೂಲದ ಅಬ್ಬಿ ವಿಲಿಯಮ್ಸ್ ಎಂಬುವವರೇ ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮತ್ತು ನಿಯಂತ್ರಣದ ಮೂಲಕ ತೂಕ ಇಳಿಸಿಕೊಂಡವರು.  ಅಬ್ಬಿ ವಿಲಿಯಮ್ಸ್, ಹೆಚ್ಚುವರಿ ಪಾಕೆಟ್ ಹಣಕ್ಕಾಗಿ 14 ನೇ ವಯಸ್ಸಿನಲ್ಲಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ್ರು. ಕೆಲಸದ ಸಮಯದಲ್ಲಿ ಅಬ್ಬಿ ವಿಲಿಯಮ್ಸ್, ಫ್ರೆಂಚ್ ಫ್ರೈಸ್, ಬರ್ಗರ್ ಮತ್ತು ಐಸ್ ಕ್ರೀಂ ಅನ್ನು ಬೇಕಾದಷ್ಟು ತಿನ್ನುತ್ತಾ ಇದ್ದರು.


  ಎಲ್ಲರಿಗೂ ಅನಿಯಮಿತ ರುಚಿಕರ ಆಹಾರ ತಿನ್ನಲು ಇಷ್ಟವಾಗುತ್ತದೆ. ಆದರೆ ಅಬ್ಬಿ ವಿಲಿಯಮ್ಸ್ ಅತಿಯಾಗಿ ದಿನವೂ ಹೆಚ್ಚು ಕ್ಯಾಲೋರಿ, ಉಪ್ಪು ಹಾಗೂ ಸಕ್ಕರೆ ಮಿಶ್ರಿತ ಮೈದಾ ಪದಾರ್ಥ ತಿನ್ನುತ್ತಿದ್ದರು. ಹೀಗಾಗಿ ಕ್ರಮೇಣ ಎಬಿ ತೂಕ ಹೆಚ್ಚಾಯಿತು.


  ಮತ್ತು ಕೆಲವೇ ದಿನಗಳಲ್ಲಿ ಆಕೆಯ ತೂಕ 98 ಕೆಜಿಗೆ ಏರಿಕೆಯಾಗಿತ್ತು. ಆಗ ಬದಲಾಗಬೇಕು ಎಂದುಕೊಂಡು ಎಬಿ ಸತತ ಪ್ರಯತ್ನದಿಂದ 40 ಕೆಜಿ ತೂಕ ಇಳಿಸಿ, ಸ್ಲಿಮ್ ಮತ್ತು ಫಿಟ್ ಆಗಿದ್ದಾರೆ. ತಮ್ಮ ಫ್ಯಾಟ್ ಟು ಸ್ಲಿಮ್ ರೂಪಾಂತರದ ಹಿಂದೆ ಯಾವೆಲ್ಲಾ ಅಂಶಗಳಿವೆ ಎಂಬುದನ್ನು ಸಂದರ್ಶನದಲ್ಲಿ ಎಬಿ ಹೇಳಿದರು.


  ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ


  ತೂಕ ಇಳಿಸುವ ಯೋಚನೆ ಬಂದಿದ್ದು ಹೇಗೆ?


  ಸಂದರ್ಶನದಲ್ಲಿ ಎಬಿ ಹೇಳಿದ್ದು ಹೀಗೆ, ಮೊದಲಿನಿಂದಲೂ ನನ್ನ ತೂಕ ಅಷ್ಟಾಗಿ ಇರಲಿಲ್ಲ. ಕೆಲಸಕ್ಕೆ ಸೇರಿಕೊಂಡ ನಂತರ ಫ್ರೈಸ್, ಬರ್ಗರ್ ಮತ್ತು ಐಸ್ ಕ್ರೀಮ್ ಹೆಚ್ಚು ತಿನ್ನುತ್ತಿದ್ದೆ ಹಾಗಾಗಿ ನನ್ನ ತೂಕ ಮತ್ತು ಸೊಂಟದ ಗಾತ್ರವು ನಿರಂತರವಾಗಿ ಹೆಚ್ಚುತ್ತಾ ಹೋಯಿತು. ಹೆಚ್ಚುತ್ತಿರುವ ತೂಕದಿಂದಾಗಿ, ನಾನು ತುಂಬಾ ಡಿಮೋಟಿವೇಟ್ ಆಗಿದ್ದೆ. ಮತ್ತು ಕನ್ನಡಿಯಲ್ಲಿ ನನ್ನನ್ನು ನೋಡಲು ನನಗೆ ಚೆನ್ನಾಗಿ ಅನ್ನಿಸುತ್ತಿರಲಿಲ್ಲ.


  ನನ್ನ ತೂಕ ಏಕೆ ಹೆಚ್ಚುತ್ತಿದೆ ಎಂದು ಆಗ ನನಗೆ ಗೊತ್ತಾಗಿರಲಿಲ್ಲ. ನನ್ನ ತೂಕ ಹೆಚ್ಚಾಗಲು ಕಾರಣವೇನು ಎಂದು ಆಗ ನನಗೆ ಗೊತ್ತಾಗಿದ್ದಿದ್ದರೆ ನನ್ನನ್ನು ನಿಯಂತ್ರಿಸಬಹುದಿತ್ತು. ಕೊನೆಗೆ 2017ರಲ್ಲಿ 98 ಕೆಜಿ ತೂಕ ಇದ್ದಾಗ ಪಾರ್ಟಿಗೆ ಹೋಗಲು ಒಂದೇ ಒಂದು ಡ್ರೆಸ್ ಕೂಡ ಸಿಗಲಿಲ್ಲ. ಆ ದಿನವೇ ನಾನು ತೂಕ ಇಳಿಸಿಕೊಳ್ಳಬೇಕು ಎಂದು ಯೋಚಿಸಿದೆ.


  ಆಹಾರ ಪದ್ಧತಿ ಹೇಗಿತ್ತು?


  ಮತ್ತು 2018 ರಲ್ಲಿ ನನ್ನ ಫಿಟ್ನೆಸ್ ಪ್ರಯಾಣ ಪ್ರಾರಂಭಿಸಿದೆ. ಇದು ಫಿಟ್ನೆಸ್ ಜರ್ನಿಯ ಆರಂಭವಾಗಿತ್ತು ಎಂದು ಹೇಳಿದ್ದಾರೆ. ಅಂದಿನಿಂದ ಕೆಟ್ಟ ಆಹಾರ ಪದ್ಧತಿ ತೊರೆದೆ. ಮತ್ತು ಆರೋಗ್ಯಕರ ಪದಾರ್ಥಗಳ ಸೇವನೆ ಆರಂಭಿಸಿದೆ. ಬೆಳಗಿನ ಉಪಾಹಾರಕ್ಕಾಗಿ ಬೇಕನ್ ಮತ್ತು ಎಗ್ ಮೆಕ್‌ಮಫಿನ್ ಸೇವಿಸುತ್ತೇನೆ. ಊಟಕ್ಕೆ ಆರು ಗಟ್ಟಿಗಳಿರುವ ಚೀಸ್ ಬರ್ಗರ್ ತಿನ್ನುತ್ತೇನೆ. ದಿನವಿಡೀ ಕಿತ್ತಳೆ ರಸ ಮತ್ತು ನಿಂಬೆ ಪಾನಕ ಕುಡಿಯುತ್ತಿದ್ದೆ ಎಂದಿದ್ದಾಳೆ.


  ದಿನವೂ ಕನಿಷ್ಠ 10 ಸಾವಿರ ಹೆಜ್ಜೆ ನಡೆಯುತ್ತಿದ್ದೆ. ಇದರಿಂದ 18 ತಿಂಗಳಲ್ಲಿ 44 ಕೆ.ಜಿ. ಇಳಿಸಿದೆ. ಜೊತೆಗೆ ಫಿಟ್ ಆಗಿರಲು ತೂಕವನ್ನು 4 ಕೆಜಿ ಹೆಚ್ಚಿಸಿದೆ ಮತ್ತು ಈಗ ನಾನು ತುಂಬಾ ಉತ್ತಮವಾಗಿದ್ದೇನೆ.


  ವಾಕಿಂಗ್ ಮತ್ತು ವ್ಯಾಯಾಮ


  ಎಬಿ ಪ್ರಕಾರ, ವಾಕಿಂಗ್ ಮತ್ತು ವ್ಯಾಯಾಮ, ಜಿಮ್‌ ನನ್ನ ದೇಹವನ್ನು ಟೋನ್ ಮಾಡಿದೆ. ಮೊದಲಿಗೆ ನಾನು ಕಡಿಮೆ ಕ್ಯಾಲೋರಿ ತಿನ್ನುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ವಾಕಿಂಗ್ ಮಾಡುತ್ತಾ ಹೋದಾಗ ಬಹಳಷ್ಟು ವ್ಯತ್ಯಾಸ ಆಯಿತು. ಈಗ ವಾರದಲ್ಲಿ ಐದು ದಿನ ತೂಕ ತರಬೇತಿ ಮತ್ತು ವ್ಯಾಯಾಮ ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.


  ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?


  ಸಮತೋಲನ ಆಹಾರ


  ಸಮತೋಲನ ಆಹಾರ ತೆಗೆದುಕೊಳ್ಳುತ್ತಾಳೆ. ಪ್ರತಿ ಎರಡು ತಿಂಗಳಿಗೊಮ್ಮೆ ತನ್ನ ಇಷ್ಟದ ತ್ವರಿತ ಆಹಾರ ತಿನ್ನುತ್ತಾಳೆ. ಇದು ಚೀಸ್ ಬರ್ಗರ್, ಹ್ಯಾಮ್ ಮತ್ತು ಚೀಸ್ ಟೋಸ್ಟಿ, ಚಿಕನ್ ಅಥವಾ ಚೀಸ್ ಬರ್ಗರ್ ಇತ್ಯಾದಿ. ತೂಕ ಕಳೆದುಕೊಳ್ಳಲು ಪ್ರಾರಂಭಿಸಿ, ಅಭ್ಯಾಸವನ್ನು ಎಂದಿಗೂ ಬಿಡಬೇಡಿ ಎನ್ನುತ್ತಾರೆ.

  Published by:renukadariyannavar
  First published: