• Home
 • »
 • News
 • »
 • lifestyle
 • »
 • ನಿಮ್ಮ #LifeGoals ಸಾಧಿಸಲು ಕಠಿಣ ಪರಿಶ್ರಮ ಮತ್ತು ಕೌಶಲ್ಯ ಮಾತ್ರ ಸಾಲದು

ನಿಮ್ಮ #LifeGoals ಸಾಧಿಸಲು ಕಠಿಣ ಪರಿಶ್ರಮ ಮತ್ತು ಕೌಶಲ್ಯ ಮಾತ್ರ ಸಾಲದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮಹಿಳೆಯರಂತೆ ನೀವು ಕೂಡ ನಿಮ್ಮಿಚ್ಛೆಯಂತೆ ಬದುಕಬಹುದು. ನಿಮ್ಮ ಪರಿಶ್ರಮ ಮತ್ತು ಸಂಕಲ್ಪದ ಜೊತೆಗೆ HDFC ಲೈಫ್ ಪೆನ್ಷನ್ ಗ್ಯಾರಂಟೀಡ್ ಪ್ಲಾನ್ ಮೂಲಕ ನಿಮಗೆ ಬೇಕಾದ ಭವಿಷ್ಯ ರೂಪಿಸುವುದು ಹೇಗೆ ಎಂಬ ವಿವರ ಇಲ್ಲಿದೆ…

 • Share this:

  ಇಂದು ಜಗತ್ತಿನಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ಸಾಧಿಸಿ ಯಶಸ್ಸಿನ ಉತ್ತುಂಗಕ್ಕೇರಿರುವುದೇನೋ ನಿಜ, ಆದರೆ ಈ ಯಶಸ್ಸು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇದಕ್ಕಾಗಿ ಅತಿ ಹೆಚ್ಚಿನ ಕಠಿಣ ಪರಿಶ್ರಮ ಮತ್ತು ತಡೆರಹಿತ ಯೋಜನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸುಂದರ ಜಗತ್ತಿನ ನಿರ್ಮಾಣದ ಮೇಲೆ ಪರಿಣಾಮ ಬೀರಲು ಭವಿಷ್ಯದ ಕುರಿತಾದ ಸರಿಯಾದ ಚಿಂತನೆ ಮತ್ತು ಸಾಧ್ಯತೆಗಳ ನಿರ್ಮಾಣದಿಂದ ಹೇಗೆ ಸಾಧ್ಯ ಎಂಬುದಕ್ಕೆ ಕೆಲವು ಉದಾಹರಣೆಗಳು ಹೀಗಿವೆ:


  ಸಾಕ್ಷಿ ಮಲ್ಲಿಕ್, ಮಿಥಾಲಿ ರಾಜ್, ಮೇರಿ ಕೋಮ್, ಕರ್ಣಮ್ ಮಲ್ಲೇಶ್ವರಿ, ಸೈನಾ ನೆಹ್ವಾಲ್, ಹಿಮಾ ದಾಸ್ ಮತ್ತು ಪಿ. ವಿ. ಸಿಂಧು


  ಹೌದು, ಇವರೆಲ್ಲರೂ ಕ್ರೀಡಾ ಜಗತ್ತಿನಲ್ಲಿ ವಿಭಿನ್ನವಾದ ಕೆಲವು ಅದ್ಭುತ ಸಾಧನೆಗಳನ್ನು ಮಾಡಿರುವ ಮಹಿಳೆಯರು. ಆದರೆ ಒಂದು ಸಾಮ್ಯತೆ ಅವರೆಲ್ಲರಲ್ಲಿಯೂ ಇದೆ. ಪ್ರತಿಯೊಬ್ಬರೂ ಸಂಕಷ್ಟದಿಂದ ಮೇಲೇರಲು ಮತ್ತು ಅವರ ವೃತ್ತಿಜೀವನದ ಉತ್ತುಂಗವನ್ನು ತಲುಪಿ ಸಾಧನೆ ಮಾಡಲು ಕೆಲವೊಂದನ್ನು ಕಳೆದುಕೊಳ್ಳಬೇಕಾಗಿತ್ತು. ಅವರೆಲ್ಲರ ನಡುವೆ ಒಲಿಂಪಿಕ್ ಪದಕಗಳನ್ನು ಗೆಲ್ಲುವುದು, ಉತ್ತಮ ಕ್ರೀಡಾಪಟುತ್ವ ಮತ್ತು ಎಲ್ಲಾ ಅಭಿಮಾನಿಗಳ ಮನವೊಲಿಸಿದ ನಂತರ ಎಲ್ಲರಿಗೂ ಮಾದರಿಯಾಗಬೇಕೆಂಬ ಸಂಕಲ್ಪವಿದೆ.


  ಅವನಿ ಚತುರ್ವೇದಿ, ಭಾರತದಲ್ಲಿ ಫೈಟರ್ ಜೆಟ್ ಹಾರಿಸುವ ಮೊದಲ ಮಹಿಳಾ ಪೈಲಟ್


  ಮಧ್ಯಪ್ರದೇಶದ ರೇವಾ ಜಿಲ್ಲೆಯ ಸಣ್ಣ ನಗರದಿಂದ ಬಂದ ಈ ಹುಡುಗಿಗೆ, ಹಳೆಯ ಸಂಪ್ರದಾಯಗಳನ್ನೆಲ್ಲ ಬದಿಗೊತ್ತಿ ದೊಡ್ಡ ಕನಸು ಕಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಗುಜರಾತ್‌ನ ಜಾಮ್‌ನಗರದಲ್ಲಿ ಈಕೆ ಇತ್ತೀಚೆಗೆ MiG-21 ಜೆಟ್ ಅನ್ನು ಉಡಾಯಿಸಿದ ಭಾರತದ ಮೊಟ್ಟಮೊದಲ ಮಹಿಳೆ ಎಂಬ ಗರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಗೊಡ್ಡು ಸಂಪ್ರದಾಯಗಳನ್ನು ಮುರಿಯಲು ತನ್ನ ಸುತ್ತಮುತ್ತಲಿನ ಇತರರಿಗಿಂತ ಭಿನ್ನವಾಗಿ ಆಕೆಗೆ ಸತತ ಪ್ರಯತ್ನ, ಸರಿಯಾದ ಯೋಜನೆ ಮತ್ತು ಇಚ್ಛಾಶಕ್ತಿಯು ಅಗತ್ಯವಾಗಿತ್ತು.


  ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರುಥ್ ಬೇಡರ್ ಗಿನ್ಸ್‌ಬರ್ಗ್


  1993 ರಿಂದೀಚೆಗೆ ಯುನೈಟೆಡ್ ಸ್ಟೇಟ್ಸ್‌ನ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ಮೊಟ್ಟಮೊದಲ ಜೆವಿಶ್ ಮಹಿಳೆ ಮತ್ತು ಎರಡನೆಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಆಕೆ ನ್ಯೂ ಯಾರ್ಕ್, ಬ್ರೂಕ್ಲಿನ್‌ನ ಒಂದು ಬಡ ಕುಟುಂಬದಿಂದ ಬಂದವರಾಗಿದ್ದಾರೆ.


  1960 ರ ಪ್ರಾರಂಭದಲ್ಲಿ, ಆಕೆಯ ಜೀವನಕಾಲದಲ್ಲಿ ಅವರು ಅನೇಕ ಪ್ರಥಮಗಳನ್ನು ಸಾಧಿಸಿದರು ಮತ್ತು ಕಾನೂನು ಮಹಿಳೆಯರನ್ನು ಹೇಗೆ ಕಾಣುತ್ತದೆ ಎಂಬುದರಲ್ಲಿ ಬದಲಾವಣೆಗಾಗಿ ತಮ್ಮ ಕಾನೂನು ವೃತ್ತಿಜೀವನದ ಹೆಚ್ಚಿನ ಸಮಯವನ್ನು ಅವರು ವಕಾಲತ್ತಿನಲ್ಲಿ ಕಳೆದರು.


  ಅಮೆರಿಕಾದ ರಾಜಕಾರಿಣಿ, ವಕೀಲೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ದೇವಿ ಹ್ಯಾರಿಸ್


  ಮೊದಲ ಮಹಿಳಾ ಉಪಾಧ್ಯಕ್ಷೆ ಮತ್ತು ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ, ಕಮಲಾ ಹ್ಯಾರಿಸ್ ಈ ಸ್ಥಾನಕ್ಕೆ ಏರಿದ ಇತಿಹಾಸ ಈಗ ಸುದ್ದಿಯಲ್ಲಿದೆ. ಆದರೆ ಇಲ್ಲಿ ಗೆದ್ದಿರುವುದು ಅವರ ಬಹಳ ದೂರದೃಷ್ಟಿ ಮತ್ತು ಕೌಶಲ್ಯ ಹಾಗೂ ವಿಶ್ವದ ಪ್ರಸ್ತುತ ಸ್ಥಿತಿಯನ್ನು ಮೀರಿ ಯೋಚಿಸುವ ಮತ್ತು ಸಾಧ್ಯತೆಯನ್ನು ನೋಡುವ ಇಚ್ಛಾಶಕ್ತಿ ಎಂದರೆ ಅತಿಶಯೋಕ್ತಿಯಲ್ಲ.


  ಪ್ರತಿ ತಾಯಿಯು ಎಲ್ಲೆಡೆಯಲ್ಲಿಯೂ


  ನಿರ್ಭೀತ ಭಾರತೀಯ ತಾಯಿ ಯಾರು ಬೇಕಾದರೂ ಆಗಿರಬಹುದು. ಈ ರೀತಿಯ ಮಹಿಳೆಯರು ಎಲ್ಲಾ ರೀತಿಯ ವಿಲಕ್ಷಣಗಳನ್ನು ಮೆಟ್ಟಿ ನಿಂತು ನಮ್ಮ ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಾರೆ. ಅವರು ಮಕ್ಕಳ ಮನಸ್ಸುಗಳನ್ನು ರೂಪಿಸಲು ಹಿನ್ನೆಲೆಯಾಗಿರುತ್ತಾರೆ ಮತ್ತು ಅವರ ಬದುಕಿನ ಇಂಚಿಂಚು ಕೂಡ ಮಕ್ಕಳ ಜೀವನೋದ್ಧಾರಕ್ಕಾಗಿ ಬೆಂದು ಬಸವಳಿದು ಹೋಗುತ್ತದೆ. ನಮ್ಮ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಲು ಅವುಗಳಲ್ಲಿ ಪ್ರತಿಯೊಂದೂ ಕಠಿಣ ಪರಿಶ್ರಮವು ನಮಗೆ ಸಹಾಯ ಮಾಡುತ್ತದೆ. ಆದರೆ ಸ್ವಲ್ಪಮಟ್ಟಿನ ಉದ್ದೇಶಪೂರ್ವಕ ಯೋಜನೆಯು ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ಎಲ್ಲಾ ದೀರ್ಘ ಸಮಯ ಮತ್ತು ತ್ಯಾಗವನ್ನು ಸಾರ್ಥಕಗೊಳಿಸುತ್ತದೆ.


  ಈ ಶಕ್ತಿಯುತ ಮಹಿಳೆಯರಿಂದ ಸ್ಫೂರ್ತಿ ಪಡೆದ ಉಳಿದ ನಮಗೆ, ಕಾಡುವ ಪ್ರಶ್ನೆ ನಾವು ಎಲ್ಲಿಂದ ಪ್ರಾರಂಭಿಸಬೇಕು? ಪ್ರಾರಂಭಿಸಲು ಉತ್ತಮ ಸ್ಥಳವೆಂದರೆ ನಿವೃತ್ತಿಯ ನಂತರವೂ ನಿಮ್ಮನ್ನು ಸ್ವತಂತ್ರಗೊಳಿಸುವುದು. ಅದೃಷ್ಟದ ಸಂಗತಿಯೆಂದರೆ, HDFC Life Pension Guaranteed Plan ಭವಿಷ್ಯದ ಕುರಿತಾದ ದೃಢವಾದ ದೂರದೃಷ್ಟಿಯನ್ನು ಹೊಂದಿದೆ. ಆಲೋಚನೆ, ಮಹತ್ವಾಕಾಂಕ್ಷೆ ಮತ್ತು ನಿವೃತ್ತಿಯ ನಂತರದ ಜೀವನವನ್ನು ಹೊಂದಲು ನಮ್ಮನ್ನು ಸ್ವತಂತ್ರರನ್ನಾಗಿ ಮಾಡುವುದು ಉತ್ತಮ ಮಾರ್ಗ ಎಂಬ ದೃಢತೆಯ ಮೇಲೆ ಒಂದು ಯೋಜನೆಯನ್ನು ನಿರ್ಮಿಸಲಾಗಿದೆ.


  HDFC Life Pension Guaranteed Plan ಏಕೆ?


  ಇದು ಒಂದೇ ಪ್ರೀಮಿಯಂ ವರ್ಷಾಶನ ಉತ್ಪನ್ನವಾಗಿದ್ದು, ಇದು ನಿಮ್ಮ ಜೀವಿತಾವಧಿಯಲ್ಲಿ ನಿಯಮಿತ ಖಾತರಿಯ ಆದಾಯವನ್ನು ನೀಡುತ್ತದೆ ಎಂದು ಭರವಸೆ ನೀಡುತ್ತದೆ. ಇದು ವಿಶೇಷವಾಗಿ ನಿಷ್ಫಲವಾಗಿ ಇರುವ ಹಣವನ್ನು ಹೊಂದಿರುವವರಿಗೆ ಹೂಡಿಕೆ ಮಾಡಲು ಉಪಯುಕ್ತವಾಗಿದೆ. ಆದರೆ, ಹೆಚ್ಚಿನ ಆದಾಯ ಗಳಿಸಲು, ನಿಮಗೆ ಆಯ್ಕೆಗಳ ಲಭ್ಯತೆ ಮತ್ತು ನಿಮ್ಮ ಅಗತ್ಯಗಳನ್ನು ಆಧರಿಸಿ ಆಯ್ಕೆ ಮಾಡುವ ಶಕ್ತಿ ಎರಡೂ ಇರಬೇಕು.HDFC life


  ಸಿಂಗಲ್ ಅಥವಾ ಜಾಯಿಂಟ್ ಲೈಫ್ ಆಧಾರದ ಮೇಲೆ ಯೋಜನೆಯನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿರುವ ಹಲವಾರು ಪ್ರಯೋಜನಗಳನ್ನು ಮತ್ತು ಆಯ್ಕೆಗಳನ್ನು HDFC Life Pension Guaranteed Plan ಒದಗಿಸುತ್ತದೆ.


  ಸಿಂಗಲ್ ಲೈಫ್ ಆಯ್ಕೆಯ ಪ್ರಕಾರ, ವ್ಯಕ್ತಿಯು ಜೀವಂತವಾಗಿರುವವರೆಗೆ, ನೀವು ಆಯ್ಕೆ ಮಾಡಿದ ಪಾವತಿ ಆವರ್ತನದ ಪ್ರಕಾರ ವರ್ಷಾಶನದ ಬಾಕಿ ಪಾವತಿಸಲಾಗುತ್ತದೆ. ಸಾವಿನ ನಂತರ ವರ್ಷಾಶನ ಪಾವತಿಗಳು ನಿಲ್ಲುತ್ತವೆ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಾವತಿಸಲಾಗುವುದಿಲ್ಲ. ನೀವು ಹೆಚ್ಚಿನ ಮಾಸಿಕ ಆದಾಯವನ್ನು ಬಯಸಿದರೆ ಇದು ಉತ್ತಮ ಉಪಾಯವಾಗಿದೆ.


  ಜಾಯಿಂಟ್ ಲೈಫ್ ವರ್ಷಾಶನ ಆಯ್ಕೆ ಮಾಡಿದ ಸಂದರ್ಭದಲ್ಲಿ, ಇಬ್ಬರಲ್ಲಿ ಒಬ್ಬರು ಜೀವಂತವಾಗಿರುವವರೆಗೆ, ನೀವು ಆಯ್ಕೆ ಮಾಡಿದ ಪಾವತಿ ಆವರ್ತನದ ಪ್ರಕಾರ ಅದನ್ನು ಬಾಕಿ ಪಾವತಿಸಲಾಗುವುದು. ಮುಂದಕ್ಕೆ ಇಬ್ಬರೂ ಜೀವಂತವಾಗಿರದಿದ್ದಾಗ ಮಾತ್ರ ಇಲ್ಲಿ ಪ್ರಯೋಜನಗಳು ನಿಲ್ಲುತ್ತವೆ. ನಿಮ್ಮ ಮರಣ ನಂತರ ಕೂಡ ನಿಮ್ಮ ಸಂಗಾತಿ ಅಥವಾ ಜೊತೆಗಾರರು ಪ್ರತಿ ತಿಂಗಳು ಆದಾಯವನ್ನು ಪಡೆಯುವುದನ್ನು ಮುಂದುವರೆಸುತ್ತಾರೆ ಎಂದು ನೆಮ್ಮದಿಯನ್ನು ಹೊಂದಲು ನೀವು ಬಯಸಿದರೆ ಈ ಆಯ್ಕೆಯು ಉತ್ತಮವಾಗಿರುತ್ತದೆ.


  ಆರ್ಥಿಕವಾಗಿ ನೀವು ಈಗಾಗಲೇ ಸದೃಢರಾಗಿದ್ದರೆ, ನಿಮ್ಮ ಪಾವತಿಗಳನ್ನು ವಾರ್ಷಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಧಾರದ ಮೇಲೆ ಪಡೆಯಲು ನೀವು ಬಯಸಬಹುದು. ನಿಮ್ಮ ಪ್ರಯಾಣದ ಯೋಜನೆಗಳಿಗೆ, ಕುಟುಂಬದ ಕಾರ್ಯಕ್ರಮಗಳಿಗೆ ಮತ್ತು ವಿಶೇಷವಾದ ಸಂದರ್ಭಗಳಿಗಾಗಿ ಖರ್ಚು ಮಾಡಲು ಸ್ವಲ್ಪ ಮಟ್ಟಿನ ಹಣವನ್ನು ನೀವು ಹೊಂದಿದ್ದೀರಿ ಎಂದು ಇದನ್ನು ಅರ್ಥೈಸಿಕೊಳ್ಳಬಹುದು.


  ನೀವು ಟಾಪ್ ಅಪ್ ಸೇರಿಸಲು ಬಯಸುತ್ತೀರಿಎಂದಾದರೆ, ಟಾಪ್-ಅಪ್ ಆಯ್ಕೆಯ ಮೂಲಕ ನಿಮ್ಮ ವರ್ಷಾಶನ ಪಾವತಿ ಹೆಚ್ಚಿಸುವುದನ್ನು ಈ ಯೋಜನೆಯು ಸುಲಭಗೊಳಿಸುತ್ತದೆ. ಈ ಹೆಚ್ಚುವರಿ ವರ್ಷಾಶನ ಮೊತ್ತವು ನೀವು ಟಾಪ್ ಅಪ್ ಮಾಡುವ ಮೊತ್ತ ಮತ್ತು ಟಾಪ್-ಅಪ್ ಸಮಯದಲ್ಲಿನ ವರ್ಷಾಶನ ದರಗಳನ್ನು ಆಧರಿಸಿರುತ್ತದೆ.


  ಇದೆಲ್ಲದರ ಜೊತೆಗೆ ಪಾವತಿಯ ದಿನಾಂಕದಂದು ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ ನೀವು ಹಲವಾರು ತೆರಿಗೆ ಪ್ರಯೋಜನಗಳನ್ನು ಕೂಡಾ ಪಡೆಯಬಹುದು. ನೀವು ಯಾವ ರೀತಿಯ ಪ್ರಯೋಜನಗಳಿಗೆ ಅರ್ಹರಾಗುತ್ತೀರಿ ಎಂಬುದನ್ನು ನಿಮ್ಮ ತೆರಿಗೆ ಸಲಹೆಗಾರಲ್ಲಿ  ಕೇಳಿ ತಿಳಿದುಕೊಳ್ಳಿ.


  ಈ ಸಮಯದಲ್ಲಿ, ಈ ಆಯ್ಕೆಗಳನ್ನು ಬಿಟ್ಟುಬಿಡುವುದು ಮತ್ತು ಪರಿಗಣಿಸುವುದು ವಿವೇಕಯುತವಾಗಿದೆ. ನಿಮಗೆ ಯಾವ ರೀತಿಯ ಬೆಂಬಲ ಬೇಕು ಎಂದು ನಿಮಗನ್ನಿಸುತ್ತಿದೆ ಎಂದು ನಿಮ್ಮನ್ನು ಕೇಳಿಕೊಳ್ಳಿ. ನಿಮಗೆ ವಯಸ್ಸಾದ ನಂತರ ನೀವು ಸುರಕ್ಷಿತ ಮತ್ತು ಆತ್ಮವಿಶ್ವಾಸವನ್ನು ಅನುಭವಿಸಲು ಏನು ಬೇಕು? ನಿವೃತ್ತಿಯ ನಂತರದ ನೀವು ನೆಮ್ಮದಿಯ ಜೀವನವನ್ನು ನಡೆಸಲು ಯಾವ ರೀತಿಯ ಉಳಿತಾಯ ಬೇಕಾಗುತ್ತದೆ?


  ಈ ಮಹಿಳೆಯರು ಮಾಡಿದ ಚಮತ್ಕಾರಗಳನ್ನು ನೋಡುವುದು ಸುಲಭ, ಮತ್ತು ಅವರು ಅದನ್ನು ಹೇಗೆ ನಿರ್ವಹಿಸಿದ್ದಾರೆ ಮತ್ತು ನೀವು ಹೇಗೆ ಛಾಪು ಮೂಡಿಸಲು ಸಾಧ್ಯ ಎಂಬುದು ಎರಡೂ ಕೂಡ ಅಚ್ಚರಿಯೇ ಹೌದು. ನೀವು ಹೇಗೆ ನೆನಪಿನಲ್ಲಿ ಉಳಿಯಬೇಕು ಎಂದು ಬಯಸುತ್ತೀರಿ? ನಿಮ್ಮ 20 ರ ಮತ್ತು 30 ರ ವಯಸ್ಸಿನಲ್ಲಿ ದುಡಿದಷ್ಟು ಖರ್ಚುಮಾಡಿ ನಿರಾತಂಕದಲ್ಲಿ ಜೀವನ ನಡೆಸುವುದು ಸರಿಯಾಗಿರಬಹುದು ಆದರೆ ನೀವು ಆ ವಯಸ್ಸನ್ನು ದಾಟಿದ ನಂತರ, ನಿಮ್ಮ ಜೀವನದ ಮುಂದಿನ ಹಂತಕ್ಕೆ ತಯಾರಿ ಮಾಡಿಕೊಳ್ಳಲು ತ್ವರಿತವಾಗಿ ಕಾರ್ಯನಿರ್ವಹಿಸುವುದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀವು ಮಾಡಬಹುದಾದ ಅತ್ಯಂತ ಬುದ್ಧಿವಂತ ಕಾರ್ಯವಾಗಿದೆ. ನೀವು ಸ್ವತಂತ್ರರಾಗಿದ್ದರೆ ಅದು ನಿಮ್ಮ ಮಕ್ಕಳು ಮತ್ತು ಪ್ರೀತಿಪಾತ್ರರ ಮೇಲೆ ಜವಾಬ್ದಾರಿಯ ಭಾರವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಸುರಕ್ಷಿತವಾಗಿರುವುದರಿಂದ ಒಂದು ರೀತಿಯ ಸಂತೋಷವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ.


  ಈಗಲೇ HDFC Life ಗೆ ಭೇಟಿ ನೀಡಿ ಮತ್ತು ನಿಮ್ಮ ಅತ್ಯಂತ ರೋಮಾಂಚಕಾರಿ ಭವಿಷ್ಯವನ್ನು ನೀವು ಹೇಗೆ ನಿರೀಕ್ಷಿಸಬಹುದು ಎಂಬುದರ ಕುರಿತು ಇನ್ನಷ್ಟು ವಿವರಗಳನ್ನು ಪರಿಶೀಲಿಸಿ


  ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ.

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು