ನಮ್ಮ ದೇಶದಲ್ಲಿನ ಮರಗಳು (Tree) ಮತ್ತು ಗಿಡಗಳ (Plant) ಎಲೆಗಳಲ್ಲಿ ರೋಗ ನಿವಾರಕ ಶಕ್ತಿ ಇದೆ. ಆಯುರ್ವೇದವು (Ayurveda) ಒಂದು ಕಾಲದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ (Indian Culture) ವೈದ್ಯಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿತ್ತು. ಈ ಆಧುನಿಕ ಕಾಲದಲ್ಲಿಯೂ ಅನೇಕ ಮಂದಿ ಈ ಆಯುರ್ವೇದ ಔಷಧಿಗಳನ್ನೇ (Medicine) ಅವಲಂಬಿಸಿದ್ದಾರೆ. ಈ ಮರಗಳು ಮತ್ತು ಗಿಡಗಳು ಗಂಭೀರ ಕಾಯಿಲೆಗಳನ್ನು ಸಹ ತೊಡೆದುಹಾಕುತ್ತವೆ. ಅಂತಹ ಕೆಲವು ಪ್ರಮುಖ ಗಿಡಗಳಲ್ಲಿ ನಮ್ಮ ಮುಂದೆ ಇರುವ ವೀಳ್ಯದೆಲೆ (Betel Leaf)ಕೂಡ ಒಂದು. ವೀಳ್ಯದೆಲೆ ಜೀರ್ಣಕ್ರಿಯೆಯನ್ನು (Digestion) ಸುಧಾರಿಸುತ್ತದೆ. ಸಾಮಾನ್ಯವಾಗಿ ಊಟದ ನಂತರ ವೀಳ್ಯದೆಲೆಯನ್ನು ಸೇವಿಸಲಾಗುತ್ತದೆ. ಏಕೆಂದರೆ ಅವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಗ್ಯಾಸ್ ಎದೆಯುರಿಯನ್ನೂ (Gastric Problem) ಸಹ ಕಡಿಮೆ ಮಾಡುತ್ತದೆ. ವೀಳ್ಯದೆಲೆ ಜ್ಯೂಸ್ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ವೀಳ್ಯದೆಲೆಯ ರಸವು ಹೊಟ್ಟೆಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವೀಳ್ಯೆದೆಕೆಯಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಬರುವುದಿಲ್ಲ. ಬದಲಾಗಿ ಮನುಷ್ಯರಲ್ಲಿ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ.
ಮಧುಮೇಹ ವಿರೋಧಿ ಔಷಧಿ ವೀಳ್ಯೆದೆಲೆ
ವಿವಿಧ ಮಧುಮೇಹ-ವಿರೋಧಿ ಔಷಧಿಗಳು ದೀರ್ಘಾವಧಿಯಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಹೊಸದಾಗಿ ಪತ್ತೆಯಾದ ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ವ್ಯಕ್ತಿಗಳಲ್ಲಿ ಒಣಗಿದ ವೀಳ್ಯದೆಲೆಯ ಪುಡಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ವೀಳ್ಯೆದೆಲೆಯಲ್ಲಿದೆ ಬ್ಯಾಕ್ಟೀರಿಯಾ ವಿರೋಧಿ ಗುಣ
ನಮ್ಮ ದೇಶದಲ್ಲಿರುವ ಮರಗಳಿಂದ ಸಾಕಷ್ಟು ಉಪಯೋಗಗಳಿದೆ. ಹಾಗೆಯೇ ವೀಳ್ಯದೆಲೆಯು ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಹದ ಮೇಲೆ ಎಲ್ಲಿಯಾದರೂ ಕೊಯ್ದುಕೊಂಡ ಗಾಯವಾದರೆ, ಆ ಸ್ಥಳದಲ್ಲಿ ವೀಳ್ಯದೆಲೆಯ ರಸ ಅಥವಾ ಎಲೆಗಳನ್ನು ಬಳಸಬಹುದು. ಇದು ಸೋಂಕು ಅಥವಾ ಸೂಕ್ಷ್ಮಜೀವಿಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ. ವೀಳ್ಯದೆಲೆ ಹಸಿವು ಅಥವಾ ಹೊಟ್ಟೆಯ ಸಮಸ್ಯೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಹೊಟ್ಟೆಯ ಆಮ್ಲೀಯತೆ ಅಥವಾ pH ಮಟ್ಟವು ಸರಿಯಾಗಿಲ್ಲದಿದ್ದರೆ. ದೇಹದಲ್ಲಿ ತೊಂದರೆಗಳು ಉಂಟಾಗುತ್ತವೆ, ಹಸಿವು ಕೆಟ್ಟದು. ಹೀಗಿರುವಾಗ ಸ್ವಲ್ಪ ವೀಳ್ಯದೆಲೆಯನ್ನು ಜಗಿಯುವುದರಿಂದ ಪ್ರಯೋಜನವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ