HOME » NEWS » Lifestyle » YOU WANT TO SHINE LIKE KOREAN GIRLS TRY THE JAMSU HACK TRY IN THE FACE STG HG

ನೀವು ಕೊರಿಯನ್ ಹುಡುಗಿಯರಂತೆ ಕಾಣಬೇಕಾ? ಹಾಗಿದ್ದರೆ, ಮುಖಕ್ಕೆ ಜಮ್ಸು ಹ್ಯಾಕ್ ಟ್ರೈ ಮಾಡಿ!

Jamsu Hack: ಇದೀಗ ಬಹುತೇಕ ವೈರಲ್ ಆಗಿರುವ ಒಂದು ಕೊರಿಯನ್ ಬ್ಯೂಟಿ ಹ್ಯಾಕ್ ಜಮ್ಸು ಬ್ಯೂಟಿ ಹ್ಯಾಕ್. ಬ್ಯೂಟಿ ಹ್ಯಾಕ್ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಏನು?

news18-kannada
Updated:June 25, 2021, 2:05 PM IST
ನೀವು ಕೊರಿಯನ್ ಹುಡುಗಿಯರಂತೆ ಕಾಣಬೇಕಾ? ಹಾಗಿದ್ದರೆ, ಮುಖಕ್ಕೆ ಜಮ್ಸು ಹ್ಯಾಕ್ ಟ್ರೈ ಮಾಡಿ!
Pony
  • Share this:

ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಸೌಂದರ್ಯ ಪ್ರಜ್ಞೆ ಇರುತ್ತದೆ. ಪ್ರತಿಯೊಬ್ಬರಿಗೂ ನಾನು ಸುಂದರವಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಂಪೆನಿಗಳು ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಮಾರುಕಟ್ಟೆಗೆ ತರುತ್ತಿವೆ. ಮ್ಯಾಕ್, ಲ್ಯಾಕ್ಮಿ, ಮೆಬಿಲಿನ್ ಹೀಗೆ ನಾನಾ ಸೌಂದರ್ಯ ವರ್ಧಕ ಕಂಪೆನಿಗಳು ಮಹಿಳೆಯರ ಅತ್ಯುತ್ತಮ ಸೌಂದರ್ಯ ವರ್ಧಕವಾಗಿ ಮಾರ್ಪಟ್ಟಿದೆ.ಇದರ ಜೊತೆಗೆ ಕೆ-ಪಾಪ್, ಕೆ-ಡ್ರಾಮಾಗಳು ಮತ್ತು ಕೆ-ಎಎಸ್‍ಎಂಆರ್ ಸಹ ಚಾಲ್ತಿಯಲ್ಲಿದ್ದವು. ಇದೀಗ ಇದಕ್ಕೆ ಮತ್ತೊಂದು ಹೊಸ ಸೇರ್ಪಡೆ ಕೆ-ಸೌಂದರ್ಯ ಅಥವಾ ಕೊರಿಯಾದ ಚರ್ಮ ರಕ್ಷಣೆ. ಇದರ ಬಗ್ಗೆ ಮಾನಿನಿಯರು ಅಂತರ್ಜಾಲದಲ್ಲಿ ಹುಡುಕಾಟ ಪ್ರಾರಂಭಿಸಿದ್ದಾರೆ. ಸೌಂದರ್ಯ ಭಿನ್ನತೆಗಳಿಂದ ಹಿಡಿದ ಮೇಕಪ್ ಪ್ರವೃತ್ತಿಯವರೆಗೂ ಇಡೀ ಜಗತ್ತಿನ ದೃಷ್ಟಿ ನೆಟ್ಟಿದ್ದು, ಇದರ ಆಧಾರದ ಮೇಲೆಯೇ ಕೊರಿಯನ್ ಮೇಕಪ್ ಕೂಡ ಒಂದು ಹೊಸ ಟ್ರೆಂಡ್ ಸೃಷ್ಟಿಸಿದೆ.


ನಮ್ಮ ಪಾಶ್ಚಾತ್ಯ ಮಂದಿ ತಮ್ಮ ವಯಸ್ಸನ್ನು ಮರೆಮಾಚಲು ಬಸವನ ಲೋಳೆ ಕ್ರೀಮ್‍ಗಳನ್ನು ಪ್ರಯತ್ನಿಸುವುದರಲ್ಲಿ ನಿರತರಾಗಿದ್ದರೆ, ಭಾರತೀಯ ಮಹಿಳೆಯರು ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲ ಕೊರಿಯನ್ ಬ್ಯೂಟಿ ಹ್ಯಾಕ್‍ಗಳನ್ನು ಪ್ರಯತ್ನಿಸುತ್ತಿದ್ದಾರೆ. ಇದೀಗ ಬಹುತೇಕ ವೈರಲ್ ಆಗಿರುವ ಒಂದು ಕೊರಿಯನ್ ಬ್ಯೂಟಿ ಹ್ಯಾಕ್ 'ಜಮ್ಸು' ಬ್ಯೂಟಿ ಹ್ಯಾಕ್. ಬ್ಯೂಟಿ ಹ್ಯಾಕ್ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಏನು?



ಏನಿದು 'ಜಮ್ಸು' ಬ್ಯೂಟಿ ಹ್ಯಾಕ್?


ಜಮ್ಸು ಮುಖ್ಯವಾಗಿ ಇದೊಂದು ಕೊರಿಯನ್ ಪದ. ಇದು ಸಬ್‍ಮರ್ಜಿಂಗ್ ಎಂಬ ಅರ್ಥವನ್ನು ನೀಡುತ್ತದೆ. ಇದರಲ್ಲಿ ಮುಖವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಈ ತಂತ್ರವನ್ನೇ ಜಮ್ಸು ಬ್ಯೂಟಿ ಹ್ಯಾಕ್ ಎನ್ನಲಾಗುತ್ತದೆ.


ಇದು ಹೇಗೆ ಕೆಲಸ ಮಾಡುತ್ತದೆ?


ಮೊದಲು ಮುಖಕ್ಕೆ ಮೇಕಪ್ ಮಾಡಿಕೊಳ್ಳಬೇಕು. ನಂತರ ಮೇಕಪ್ ಮಾಡಿದ ಮುಖವನ್ನು ಐಸ್ ನೀರಿನಲ್ಲಿ ಮುಳುಗಿಸಿಡಬೇಕು. ಮೇಕಪ್ ಮುಖಕ್ಕೆ ಹೊಂದಿಕೊಳ್ಳುವವರೆಗೆ ಇಡಬೇಕು. ಈ ನೀರು ನಿಮ್ಮ ಮುಖಕ್ಕೆ ಹೆಚ್ಚು ಫೌಂಡೇಶನ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚು ನೈಸರ್ಗಿಕ ನೋಟವನ್ನು ನೀಡುತ್ತದೆ.


ಚರ್ಮಕ್ಕೆ ಹೇಗೆ ಅನುಕೂಲ?

ಇದು ಹೈಡ್ರೇಟ್ ಒಣ ಚರ್ಮಕ್ಕೆ ತುಂಬಾ ಒಳ್ಳೆಯ ಹ್ಯಾಕ್. ಬಳಸುವ ತಣ್ಣೀರು ಮೊಗದಲ್ಲಿನ ತೆರೆದ ರಂಧ್ರಗಳನ್ನು ಮುಚ್ಚುವುದರಿಂದ ಮೊಡವೆಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.


ಬಾಲಿವುಡ್‍ನಲ್ಲಿ ಬೇಡಿಕೆ


ಬಾಲಿವುಡ್‍ನ ಸಾಕಷ್ಟು ಮಂದಿ ಈ ಜಮ್ಸು ಬ್ಯೂಟಿ ಹ್ಯಾಕ್‍ಗೆ ಮಾರು ಹೋಗಿದ್ದಾರೆ. ನಂಬಲು ಅಸಾಧ್ಯವಾದರೂ ನಂಬಲೇ ಬೇಕು. ಕೆಲವು ತಿಂಗಳ ಹಿಂದೆ ಬಾಲಿವುಡ್‍ನ ನಟಿ ಕತ್ರಿನಾ ಕೈಫ್ ತಮ್ಮ ಮುಖವನ್ನು ನೀರಿನಲ್ಲಿ ಮುಳುಗಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಹೌದು ಇದು ಅವರ ಬೆಳಿಗ್ಗೆಯ ನಿರಂತರ ಅಭ್ಯಾಸ. ಕತ್ರೀನಾ ಐಸ್ ನೀರಿನಲ್ಲಿ 3 ಬಾರಿ ಮುಖವನ್ನು ಮುಳುಗಿಸುತ್ತಾರೆ. ನಂತರ ತಮ್ಮ ಮುಖ ನೀರಿಗೆ ಹೊಂದಾಣಿಕೆಯಾಗುವಂತೆ ನೋಡಿಕೊಳ್ಳುತ್ತಾರೆ.


ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದ, ಮೊಗದ ಸೌಂದರ್ಯ ಹೆಚ್ಚಿಸಿಕೊಳ್ಳುವ ಅತ್ಯುತ್ತಮ ವಿಧಾನ. ಇದನ್ನು ಸುಲಭವಾಗಿ ಮನೆಯಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬಹುದು.


First published: June 25, 2021, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories